2024ರ ಜೂನ್‌ನಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು, ಕರ್ನಾಟಕ ರಾಜಧಾನಿಯಾದ ಬೆಂಗಳೂರು ಸಮೀಪದಲ್ಲಿರುವ ಹೊಸೂರಿನಲ್ಲಿ, ವಿಮಾನ ನಿಲ್ದಾಣವನ್ನು ನಿರ್ಮಿಸುವ ಬಗ್ಗೆ ತಿಳಿಸಿದ್ದರು. ಅದರಂತೆ ತಮಿಳುನಾಡು ಸರ್ಕಾರ ಹೊಸೂರು ವಿಮಾನ ನಿಲ್ದಾಣ ಯೋಜನೆಯನ್ನು ಅತ್ಯಂತ ಭರದಿಂದ ಸಾಗಿಸುತ್ತಿದೆ. ಈ ವಿಮಾನ ನಿಲ್ದಾಣ ಯೋಜನೆಯಿಂದ ಕರ್ನಾಟಕ ಮತ್ತು ತಮಿಳುನಾಡು ನಡುವಿನ ವಾಣಿಜ್ಯ ಪ್ರಗತಿ, ಪ್ರವಾಸೋದ್ಯಮ ಮತ್ತು ಎರಡೂ ರಾಜ್ಯಗಳ ನಡುವಿನ ನಂಟನ್ನು ಸುಧಾರಿಸಲು ಸಹಾಕವಾಗಿದೆ. ಇದಲ್ಲದೇ ಕೈಗಾರಿಕಾ ಬೆಳವಣಿಗೆಗೆ, ಹೂಡಿಕೆಗೆ ಪ್ರೋತ್ಸಾಹವನ್ನೂ ನೀಡುತ್ತದೆ. ಅಂದರೆ ಸ್ಥಳೀಯ ಕೈಗಾರಿಕೆಗಳ ಅಭಿವೃದ್ಧಿಗೆ ಉತ್ತೇಜನ ನೀಡುವುದಲ್ಲದೇ, ಪ್ರದೇಶದ ಸಂಪರ್ಕವನ್ನು ಸುಧಾರಿಸಲು ಸಹಾಯವಾಗುತ್ತದೆ ಎಂದು ತಮಿಳು ಸರ್ಕಾರ ತಿಳಿಸಿದೆ.
ಇನ್ನು ಹೊಸೂರು ಪ್ರಸಿದ್ಧವಾಗಿರುವುದೇ ಸಕ್ರಿಯವಾಗಿ ಮುನ್ನುಗ್ಗುತ್ತಿರುವ ಕೈಗಾರಿಕಾ ವಲಯದಿಂದ. ಹೀಗಿರುವಾಗ ವಿಮಾನ ನಿಲ್ದಾಣ ನಿರ್ಮಾಣವಾದರೆ ವಾಣಿಜ್ಯ ಮತ್ತು ಲಾಜಿಸ್ಟಿಕ್ ಸೇವೆಗಳು ಮತ್ತಷ್ಟು ಸುಗಮವಾಗಲಿವೆ. ಇದರಿಂದ ಹೊಸ ಹೊಸ ಉದ್ಯೋಗಗಳೂ ಸೃಷ್ಟಿಯಾಗುತ್ತವೆ. ಈ ಯೋಜನೆಯ ಯಶಸ್ಸು, ಪ್ರದೇಶದ ಆರ್ಥಿಕ ಬೆಳವಣಿಗೆಗೆ ದೊಡ್ಡ ಮೈಲಿಗಲ್ಲಾಗಲಿದೆ. ಕೈಗಾರಿಕಾ ವಲಯವಕ್ಕೆ ಹೆಸರುವಾಸಿಯಾಗಿರುವ ಗಡಿಪ್ರದೇಶ ಹೊಸೂರಿನಲ್ಲಿ, ಅಭಿವೃದ್ಧಿಯ ಅಂಗಳ ಎದ್ದು ಕಾಣುತ್ತಿದೆ.

ಟಿಆರ್‌ಬಿ ರಾಜಾ ಹೇಳುವುದೇನು?
ಇತ್ತೀಚೆಗೆ ಟ್ರೆಂಡ್‌ನಲ್ಲಿ ಇರುವುದು ಎಲೆಕ್ಟ್ರಿಕಲ್ ವಾಹನಗಳು.. ಹೀಗಾಗಿ ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕ್ ವಾಹನಗಳಂತಹ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವುದರಿಂದ, ಮುಂಬರುವ ಐದು ವರ್ಷಗಳಲ್ಲಿ ಗಮನಾರ್ಹ ಬೆಳವಣಿಗೆ ಸಾಧಿಸಬಹುದು ಎಂದು, ಕೈಗಾರಿಕಾ ಸಚಿವ ಟಿಆರ್‌ಬಿ ರಾಜಾ ಭರವಸೆ ವ್ಯಕ್ತಪಡಿಸಿದ್ದಾರೆ.
ವಿಮಾನ ನಿಲ್ದಾಣಕ್ಕಾಗಿ ಹೊಸೂರಿನಲ್ಲಿ ಸೂಕ್ತ ಸ್ಥಳ ಆಯ್ಕೆ ಮಾಡುವ ಪ್ರಕ್ರಿಯೆ ಮುಂದುವರೆದಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಸದ್ಯ ಥಲ್ಲಿ ರಸ್ತೆಯ ಬೆಳಗೊಂಡಪಲ್ಲಿ ಗ್ರಾಮದ ಬಳಿ ಇರುವ ಸ್ಥಳಗಳನ್ನು ಶಾರ್ಟ್ ಲಿಸ್ಟ್ ಮಾಡಿದೆ. ಅಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸುವ ಕಾರ್ಯಸಾಧ್ಯತೆಯ ಕುರಿತು, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಅಂತಿಮ ವರದಿಯನ್ನು ಸಲ್ಲಿಸಬೇಕಾಗಿದೆ. ನಂತರವಷ್ಟೇ ಸ್ಥಳದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿಕೆ ನೀಡಿದ್ದಾರೆ.
ಇನ್ನು ಕಳೆದ ತಿಂಗಳು ಹೊಸೂರು ಕೈಗಾರಿಕೆಗಳ ಸಂಘ ಹಾಗೂ ಹೊಸೂರು ಸಣ್ಣ ಕೈಗಾರಿಕೆಗಳ ಸಂಘ ಸೇರಿದಂತೆ, ಹಲವು ಕೈಗಾರಿಕಾ ಸಂಸ್ಥೆಗಳು ಹಸಿರು ಮೈದಾನದ ವಿಮಾನ ನಿಲ್ದಾಣ ಅಗತ್ಯವಿದೆ ಎಂದು ಒತ್ತಿ ಹೇಳಿದ್ದಾರೆ. ಏಕೆಂದರೆ ಹೊಸೂರು ಪ್ರದೇಶದ ಕೈಗಾರಿಕಾ ಬೆಳವಳಿಗೆಗಳನ್ನು ಬೆಂಬಲಿಸಲು ಅದರ ಅಗತ್ಯತೆ ಇದೆ. ಈ ಹೊಸ ಸೌಲಭ್ಯಕ್ಕೆ ಸೂಕ್ತವಾದ ಸ್ಥಳಗಳಿಗಾಗಿ ಖಾಸಗಿ ಒಡೆತನದ ತನೇಜಾ ಏರೋಸ್ಪೇಸ್ ಮತ್ತು ವಿಮಾನಯಾನ ವಿಮಾನ ನಿಲ್ದಾಣದ ಬಳಿ ಇರುವ ಸ್ಥಳಗಳನ್ನೂ ಶಿಫಾರಸ್ಸು ಮಾಡಲಾಗಿದೆ.
ಹೊಸೂರು ವಿಮಾನ ನಿಲ್ದಾಣದ ಯೋಜನೆ ಪ್ರಗತಿಯಲ್ಲಿದೆ:
ಇನ್ನು ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಲು ಯೋಜನೆ ಇದೆ. ಹೀಗಿರುವಾಗ ಹೊಸೂರು ಇಂಡಸ್ಟ್ರೀಸ್ ಅಸೋಸಿಯೇಷನ್ (HIA), ಹೊಸೂರು ವಿಮಾನ ನಿಲ್ದಾಣದ ಅಗತ್ಯವನ್ನೇ ಒತ್ತಿ ಹೇಳುತ್ತಿದೆ. ಅಂದರೆ ಹೊಸೂರು ಭಾಗದಲ್ಲಿ ದೊಡ್ಡ ಮಟ್ಟದ ಸರಕು ಸಾಗಣೆ ನಡೆಯುತ್ತಿದೆ. ಮತ್ತು ಇಂತಹ ಯೋಜನೆಗಳು ದೀರ್ಘಾವಧಿ ಯೋಜನೆಗಳಾಗಿರುವುದರಿಂದ, ಆದಷ್ಟು ಬೇಗ ತಮಿಳುನಾಡು ತ್ವರಿತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳುತ್ತಿವೆ.
ಎಎಐ (Airports Authority of India) ಸಂಸ್ಥೆಯ ಕಾರ್ಯಸಾಧ್ಯತಾ ವರದಿ ಪ್ರಕಾರ, ವಿಮಾನ ನಿಲ್ದಾಣದ ಸ್ಥಳದ ಅಂತಿಮ ನಿರ್ಧಾರಕ್ಕೆ ಮಾರ್ಗದರ್ಶನ ನೀಡಲಿದೆ. ಹೊಸೂರಿನಲ್ಲಿ ವಿಮಾನ ನಿಲ್ದಾಣದ ಅಗತ್ಯತೆಯ ಬಗ್ಗೆ ಯಾವುದೇ ಸಂಶಯವಿಲ್ಲ. ಅಲ್ಲದೆ, ಇಲ್ಲಿ ಸಾಗುವ ದೊಡ್ಡ ಪ್ರಮಾಣದ ಸರಕು ಸಾಗಣೆಯನ್ನೂ ಗಮನದಲ್ಲಿಡಬೇಕು ಎಂದು LKM ಅಧಿ ಹೇಳಿದ್ದಾರೆ.


Click it and Unblock the Notifications