Hosur Airport: ಹೊಸೂರು ಮತ್ತು ಬೆಂಗಳೂರು 2ನೇ ಏರ್ಪೋರ್ಟ್‌ ಬಗ್ಗೆ ಕೇಂದ್ರ ಸರ್ಕಾರದಿಂದ ಬಿಗ್ ಅಪ್ಡೇಟ್! ಏನದು ಎಂದು ತಿಳಿಯಿರಿ

ತಮಿಳುನಾಡಿನ ಹೊಸೂರು ಏರ್ಪೋರ್ಟ್ ಮತ್ತು ಬೆಂಗಳೂರಿನ ಎರಡನೇ ಏರ್ಪೋರ್‌ ಕುರಿತು ಕೇಂದ್ರದಿಂದ ಮಹತ್ವದ ಅಪ್ಡೇಟ್‌ ಸಿಕ್ಕಿದೆ. ಈಗಾಗಲೇ ಹೊಸೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆ ಇತ್ತೀಚೆಗೆ ಮಹತ್ವದ ಹಂತ ತಲುಪಿದ್ದು, ಇದರ ಹಿಂದೆ ಕೇಂದ್ರ ಸರ್ಕಾರದ ನೀತಿ ಸ್ಪಷ್ಟೀಕರಣ ಪ್ರಮುಖ ಪಾತ್ರವಹಿಸಿದೆ. ಇದೇ ಸಮಯದಲ್ಲಿ, ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಪ್ರಕ್ರಿಯೆ ಇನ್ನೂ ನಿಧಾನವಾಗಿಯೇ ಸಾಗುತ್ತಿದೆ. ಈ ಪರಿಸ್ಥಿತಿಯಲ್ಲಿ, ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಸ್ಪಷ್ಟ ಸಂದೇಶವೊಂದು ನೀಡಿದೆ. ಅಂದರೆ ಹೊಸೂರು ಮಾತ್ರವಲ್ಲ, ಬೆಂಗಳೂರು ನಗರದ ಬಗ್ಗೆಯೂ ಸಂದೇಶ ನೀಡಲಾಗಿದೆ..ಅದೇನು ಅಂತ ತಿಳಿಯಿರಿ..

ಹೊಸೂರು & ಬೆಂಗಳೂರು 2ನೇ ಏರ್ಪೋರ್ಟ್ ಬಗ್ಗೆ ಬಿಗ್ ಅಪ್ಡೇಟ್

ಹೌದು, ಬೆಂಗಳೂರಿನ ಎರಡನೇ ಏರ್ಪೋರ್ಟ್ ದೀರ್ಘಕಾಲಿಕ ಲಾಭವನ್ನು ತರುವಂತಿದೆ.‌ ಈವರೆಗೆ, ಎರಡು ವಿಮಾನ ನಿಲ್ದಾಣಗಳ ನಡುವೆ ಕನಿಷ್ಠ 150 ಕಿಲೋಮೀಟರ್ ವೈಮಾನಿಕ ದೂರ ಇರಬೇಕು ಎಂಬ ನಿಯಮ ಹೊಸ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ದೊಡ್ಡ ಅಡ್ಡಿಯಾಗಿತ್ತು. ವಿಶೇಷವಾಗಿ ಬೆಂಗಳೂರು-ಹೊಸೂರು ನಡುವಿನ ಅಂತರ ಈ ಮಿತಿಗೆ ಒಳಪಡುವುದರಿಂದ, ಹೊಸೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆ ಹಲವು ವರ್ಷಗಳಿಂದ ಗೊಂದಲದಲ್ಲೇ ಇತ್ತು. ಆದರೆ ಇತ್ತೀಚೆಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರು ಈ ನಿಯಮದ ಕುರಿತು ಸ್ಪಷ್ಟನೆ ನೀಡಿದ್ದು, ನಿಯಮದ ಅರ್ಥ ಮತ್ತು ಉದ್ದೇಶವನ್ನು ಸರಳವಾಗಿ ವಿವರಿಸಿದ್ದಾರೆ.

ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣವು ತನ್ನ ಗರಿಷ್ಠ ಸಾಮರ್ಥ್ಯವನ್ನು ತಲುಪಿದ ನಂತರ, ಅದರ ಸಮೀಪದಲ್ಲೇ ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸಲು 150 ಕಿಲೋಮೀಟರ್ ನಿಯಮ ಅಡ್ಡಿಯಾಗುವುದಿಲ್ಲ ಎಂದು ಸಚಿವಾಲಯ ತಿಳಿಸಿದೆ. ಈ ನಿಯಮವನ್ನು ಶಾಶ್ವತ ನಿರ್ಬಂಧವಾಗಿ ರೂಪಿಸಿಲ್ಲ ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ. ಆರಂಭಿಕ ಹಂತದಲ್ಲಿ ಹೊಸ ವಿಮಾನ ನಿಲ್ದಾಣಗಳು ಸುಗಮವಾಗಿ ಕಾರ್ಯನಿರ್ವಹಿಸಲು ಸಹಾಯವಾಗಲೆಂಬುದೇ ಈ ಮಾರ್ಗಸೂಚಿಯ ಮುಖ್ಯ ಉದ್ದೇಶವಾಗಿತ್ತು ಎಂದು ಸಚಿವರು ಹೇಳಿದ್ದಾರೆ.

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಈಗಾಗಲೇ ಸಾಮರ್ಥ್ಯ ಮೀರಿಯೇ ಕಾರ್ಯನಿರ್ವಹಿಸುತ್ತಿದೆ. 2024-25 ಆರ್ಥಿಕ ವರ್ಷದಲ್ಲಿ ಸುಮಾರು 4.1 ಕೋಟಿ ಪ್ರಯಾಣಿಕರನ್ನು ನಿರ್ವಹಿಸಿರುವ ಕೆಐಎ, ದೇಶದ ಅತ್ಯಂತ ಬ್ಯುಸಿ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ಪ್ರಯಾಣಿಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದರಿಂದ, ಒಂದೇ ವಿಮಾನ ನಿಲ್ದಾಣದ ಮೇಲೆ ಇರುವ ಒತ್ತಡ ದಿನೇದಿನೇ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ, ಹೊಸೂರು ವಿಮಾನ ನಿಲ್ದಾಣವು ಪರ್ಯಾಯ ಆಯ್ಕೆಯಾಗಿ ಹೊರಹೊಮ್ಮುತ್ತಿದೆ.

ಹೊಸೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾದಲ್ಲಿ, ಬೆಂಗಳೂರು, ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಗಡಿಭಾಗದ ಜನರಿಗೆ ಇದು ಬಹಳ ಅನುಕೂಲವಾಗಲಿದೆ. ಉದ್ಯಮ, ಐಟಿ, ಉತ್ಪಾದನಾ ಕ್ಷೇತ್ರಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ಹೊಸೂರು ಪ್ರದೇಶಕ್ಕೆ ವಿಮಾನ ಸಂಪರ್ಕ ದೊರೆತರೆ, ಆರ್ಥಿಕ ಚಟುವಟಿಕೆಗಳು ಇನ್ನಷ್ಟು ವೃದ್ಧಿಯಾಗುವ ಸಾಧ್ಯತೆಯಿದೆ. ಅಲ್ಲದೆ, ಕೆಐಎ ಮೇಲಿನ ಪ್ರಯಾಣಿಕರ ಒತ್ತಡವೂ ಗಣನೀಯವಾಗಿ ಕಡಿಮೆಯಾಗಲಿದೆ.

ಈ ನೀತಿ ಸ್ಪಷ್ಟೀಕರಣದಿಂದ ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಗೂ ಹೊಸ ಬಲ ಸಿಕ್ಕಿದೆ. ದೇವನಹಳ್ಳಿಯಲ್ಲಿರುವ ಕೆಐಎ ಸಮೀಪದಲ್ಲೇ ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸುವ ವಿಚಾರದಲ್ಲಿ ಇದುವರೆಗೆ ಹಲವು ಗೊಂದಲಗಳು ಮತ್ತು ಚರ್ಚೆಗಳು ನಡೆದಿದ್ದವು. 150 ಕಿಲೋಮೀಟರ್ ನಿಯಮದ ಕಾರಣದಿಂದ ಈ ಯೋಜನೆಯು ಸ್ಪಷ್ಟ ದಿಕ್ಕು ಪಡೆಯಲು ಸಾಧ್ಯವಾಗಿರಲಿಲ್ಲ. ಈಗ ನಿಯಮದ ಅರ್ಥ ಸ್ಪಷ್ಟವಾದ ನಂತರ, ರಾಜ್ಯ ಸರ್ಕಾರವು ಮುಂದಿನ ಹಂತದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಲಿದೆ.

ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಎರಡನೇ ವಿಮಾನ ನಿಲ್ದಾಣಗಳ ಅಗತ್ಯವಿದೆ ಎಂಬುದನ್ನು ಒಪ್ಪಿಕೊಂಡಿದೆ. ದೊಡ್ಡ ನಗರಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾದಾಗ, ಒಂದೇ ವಿಮಾನ ನಿಲ್ದಾಣ ಸಾಕಾಗುವುದಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ. ಈ ಕಾರಣದಿಂದ, ರಾಜ್ಯ ಸರ್ಕಾರಗಳಿಗೆ ಹೆಚ್ಚುವರಿ ವಿಮಾನ ನಿಲ್ದಾಣಗಳ ಯೋಜನೆ ರೂಪಿಸಲು ಕೇಂದ್ರ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ.

ಒಟ್ಟಾರೆ, 150 ಕಿಲೋಮೀಟರ್ ನಿಯಮದ ಕುರಿತು ನೀಡಿರುವ ಈ ಸ್ಪಷ್ಟೀಕರಣವು ಹೊಸೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಗೆ ಮಹತ್ವದ ವರದಾನವಾಗಿದೆ. ಅದೇ ರೀತಿ, ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೂ ಇದು ದಾರಿ ತೆರೆಯಲಿದೆ. ಮುಂದಿನ ದಿನಗಳಲ್ಲಿ ಈ ಎರಡು ಯೋಜನೆಗಳು ಸಾಕಾರಗೊಂಡರೆ, ದಕ್ಷಿಣ ಭಾರತದ ವಿಮಾನಯಾನ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಕಂಡುಬರುವ ಸಾಧ್ಯತೆ ಇದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+