ಬೆಂಗಳೂರು, ಆಗಸ್ಟ್ 5: ದೊಡ್ಡ ದೊಡ್ಡ ಸಿಟಿಯಲ್ಲಿ ಮನೆ ಕೊಳ್ಳುವ ಪ್ಲ್ಯಾನ್ ಇದ್ದರೆ ಓನರ್ಶಿಪ್ ರೈಟ್ಸ್ ಬಗ್ಗೆ ಗಮನ ಇರಲೇಬೇಕು. ಕೆಲವೊಂದು ಬಾರಿ ಫ್ಲಾಟ್ಗಳನ್ನು ಹಸ್ತಾಂತರ ಮಾಡಿದ್ದರೂ ಓನರ್ಶಿಪ್ ರೈಟ್ಸ್ ಸುಲಭಕ್ಕೆ ಸಿಕ್ಕಿರುವುದಿಲ್ಲ. ಈ ದಾಖಲೆ ಪಡೆದುಕೊಳ್ಳದೆ ಮನೆ ಖರೀದಿಸಿರುವ ಅನೇಕ ಜನರಿದ್ದಾರೆ ಫ್ಲಾಟ್ ಸಿಕ್ಕಿದೆ, ಆದರೆ ಓನರ್ ಶಿಪ್ ರೈಟ್ಸ್ ಸಿಕ್ಕಿಲ್ಲ ಎನ್ನುತ್ತಾರೆ. ಯಾಕೆ ಹೀಗಾಗುತ್ತದೆ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು.
ನೋಂದಣಿ ಇಲ್ಲದೇ, ನಿವಾಸಿಗಳು ಅಂದರೆ ಆ ಮನೆಯ ಮಾಲೀಕರಿಗೆ ಒಡೆತನದ ಹಕ್ಕುಗಳು ಸಿಗುವುದಿಲ್ಲ. ಪೂರ್ಣ ಹಣ ಪಾವತಿಸಿದ್ದರೂ ಅವರು ತಮ್ಮ ಸ್ವಂತ ಫ್ಲಾಟ್ ಅಂತ ಹಕ್ಕು ಚಲಾಯಿಸಲು ಸಾಧ್ಯವಾಗುವುದಿಲ್ಲ. ಯಾವುದೇ ಅನಿರೀಕ್ಷಿತ ಅಪಾಯ ಎದುರಾದರೆ ಅವರು ಕಾಂಪೆನ್ಸೇಷನ್ಗೆ ಅಂದರೆ ಯಾವುದೇ ರೀತಿಯ ಪರಿಹಾರಕ್ಕೆ ಅರ್ಹರಾಗುವುದಿಲ್ಲ. ಹೀಗಾಗಿ ಅವರಿಗೆ ಸರ್ಕಾರದ ನೆರವು ಕೂಡ ಸಿಗುವುದಿಲ್ಲ. ಒಡೆತನದ ಹಕ್ಕು ನಿರಾಕರಣೆ ಅಲ್ಲದೇ ಗೃಹ ಖರೀದಿದಾರರು ಎದುರಿಸಬಹುದಾದ ಇತರ ಸಮಸ್ಯೆಗಳೇನು ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು.

ಒಂದು ಉದಾಹರಣೆ ಮೂಲಕ ಇದನ್ನು ಅರ್ಥ ಮಾಡಿಕೊಳ್ಳೋಣ. 2012 ರಲ್ಲಿ ಫ್ಲಾಟ್ ಬುಕ್ ಮಾಡಿದ್ದ ವ್ಯಕ್ತಿಗೆ ಎಲ್ಲಾ ಕಾನೂನು ಹೋರಾಟದ ನಂತರ 2024 ರ ಆರಂಭದಲ್ಲಿ ಫ್ಲಾಟ್ ಹಸ್ತಾಂತರಿಸಲಾಗುತ್ತದೆ. ಆದರೆ ಇನ್ನು ನೋಂದಣಿ ಆಗಿಲ್ಲ. ಅವರಿಗೆ ಈಗ ಹಣದ ಅವಶ್ಯಕತೆ ಇದೆ. ಅದಕ್ಕೆ ಅವರು ಆ ಫ್ಲಾಟ್ ಮಾರಬೇಕು ಎಂದುಕೊಂಡಿದ್ದಾರೆ. ಆದರೆ ಅವರಿಗೆ ತಮ್ಮ ಫ್ಲಾಟ್ಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಮೂರು ಕೊಠಡಿಗಳ ಫ್ಲಾಟ್ಗೆ 35 ಲಕ್ಷ ರೂಪಾಯಿಗಷ್ಟೇ ಅವರಿಗೆ ಆಫರ್ ಬರುತ್ತಿದೆ. ಆದರೆ ಅಷ್ಟೇ ಅಳತೆಯ ಹಳೆಯ ಫ್ಲಾಟ್ಗಳ ಬೆಲೆ 40 ರಿಂದ 42 ಲಕ್ಷ ರೂಪಾಯಿ ಇದೆ. ಏಕೆಂದರೆ ಅವು ನೋಂದಣಿ (ರಿಜಿಸ್ಟರ್) ಆಗಿದೆ. ಸುಮಾರು ದಿನಗಳ ಕಾಲ ಮನೆ ಮಾರಾಟಕ್ಕೆ ಹುಡುಕಿದರೂ ಖರೀದಿದಾರರು ಸಿಗಲಿಲ್ಲ. ಈ ಫ್ಲಾಟ್ ನೋಂದಣಿ ಆಗದೇ ಇರುವುದರಿಂದ ಬ್ಯಾಂಕ್ಗಳು ಸಾಲ ಕೊಡುವುದಿಲ್ಲ. ಇಂಥದ್ದೇ ಪರಿಸ್ಥಿತಿ ನಿಮ್ಮನ್ನು ಕಾಡಬಹುದು.
ಇನ್ನೊಂದು ಉದಾಹರಣೆ ನೋಡೋಣ. ಇಲ್ಲಿಯೂ ಇಂಥದ್ಧೇ ಸ್ಥಿತಿ ಬರುತ್ತದೆ. 2021 ರಲ್ಲಿ ರೀಸೇಲ್ನಲ್ಲಿ ಫ್ಲಾಟ್ ಒಂದನ್ನು ವ್ಯಕ್ತಿಯೊಬ್ಬರು ಖರೀದಿ ಮಾಡುತ್ತಾರೆ. ಅದು ಟ್ರಾನ್ಸ್ಫರ್ ಕೇಸ್ ಆಗಿತ್ತು. ಅಂದರೆ ಅದು ರಿಜಿಸ್ಟರ್ ಆಗಿರಲಿಲ್ಲ.. ಬಿಲ್ಡರ್ ಯಾರಿಗೆ ಪೊಸೆಷನ್ ಕೊಟ್ಟಿದ್ದರೋ ಅವರು ಖರೀದಿ ಮಾಡಿದವರಿಗೆ ನೀಡಿದ್ದರು. ಆ ಫ್ಲಾಟ್ ರಿಜಿಸ್ಟರ್ ಆಗಿರಲಿಲ್ಲ.. ಆ ಫ್ಲಾಟ್ ರಿಜಿಸ್ಟರ್ ಆಗಿರದ ಕಾರಣ ಮನೆ ಸಾಲದ ಮೇಲೆ ಪೂರ್ಣ EMI ಬದಲು Pre EMI ಕೂಡ ಪಾವತಿಸಬೇಕಾಗಿ ಬಂತು. ಅಂದರೆ ಸುಮಾರು ಒಂದೂವರೆ ವರ್ಷಗಳವರೆಗೆ ಅವರು ಸಾಲದ ಮೇಲೆ ಕೇವಲ ಬಡ್ಡಿ ಮಾತ್ರ ಪಾವತಿಸಬೇಕಾಯ್ತು ಅವರ EMIನಲ್ಲಿ ಪ್ರಿನ್ಸಿಪಲ್ ಹಣ ಕಡಿಮೆ ಆಗಲಿಲ್ಲ. ಇಂಥ ಸಂದರ್ಭಗಳು ಎದುರಾಗದಂತೆ ನೋಡಿಕೊಳ್ಳಲು ಖರೀದಿ ಮಾಡುತ್ತಿರುವ ಫ್ಲಾಟ್ ನೋಂದಂಣಿಯಾಗಿರುವುದು ಮುಖ್ಯವಾಗುತ್ತದೆ.
ಮನೆ ಖರೀದಿ ಕೇವಲ ಭಾವನಾತ್ಮಕ ನಿರ್ಧಾರ ಅಲ್ಲ. ಅದು ಅತಿದೊಡ್ಡ ಹಣಕಾಸು ನಿರ್ಧಾರ ಕೂಡ ಆಗಿದೆ. ಬ್ರೋಕರ್ ಅಥವಾ ನಿಮಗೆ ಪರಿಚಯ ಇರುವ ಯಾರೇ ಆಗಲಿ ನೋಂದಣಿ ಆಗದೇ ಇರೋ ಫ್ಲಾಟ್ ಅನ್ನು ಖರೀದಿಸಲು ನಿಮಗೆ ಸಲಹೆ ಕೊಟ್ಟರೆ ನೀವು ಜಾಗೃತರಾಗಿರಬೇಕು.


Click it and Unblock the Notifications