ಈಗ ವರ್ಷದ ಅಂತ್ಯ ಸಮೀಪಿಸುತ್ತಿದೆ. ಈ ನಡುವೆ 2023ರಲ್ಲಿ ನಡೆದ ವಸತಿ ಮಾರಾಟದ ಕುರಿತಾಗಿ ಅನಾರಾಕ್ ವರದಿಯನ್ನು ನೀಡಿದೆ. ಅನಾರಾಕ್ ಪ್ರಕಾರ ವಸತಿ ಮಾರಾಟವು ಈ ವರ್ಷ ಶೇಕಡ 31 ರಷ್ಟು ಏರಿಕೆಯಾಗಿದ್ದು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ. ಏಳು ಪ್ರಮುಖ ನಗರಗಳಲ್ಲಿ ಸುಮಾರು 4.77 ಲಕ್ಷ ಯುನಿಟ್‌ಗಳ ಮಾರಾಟವಾಗಿದೆ.
ವಸತಿ ಬೆಲೆಯು ಈ ವರ್ಷ ಸರಾಸರಿ ಶೇಕಡ 15 ರಷ್ಟು ಏರಿಕೆಯಾಗಿದೆ. ಹಾಗೆಯೇ ಸಾಲದ ಬಡ್ಡಿದರವು ಕೂಡಾ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಎಲ್ಲವುದರ ನಡುವೆಯೂ ಪ್ರಮುಖವಾಗಿ ಏಳು ನಗರಗಳಲ್ಲಿ ವಸತಿ ಮಾರಾಟವು ಶೇಕಡ 31 ರಷ್ಟು ಜಿಗಿತ ಕಂಡಿದೆ.

ರಿಯಲ್ ಎಸ್ಟೇಟ್ ಸಲಹೆಗಾರ ಅನರಾಕ್ ಗುರುವಾರ ಏಳು ಪ್ರಮುಖ ಪ್ರಾಥಮಿಕ ವಸತಿ ಮಾರುಕಟ್ಟೆಯ ವಾರ್ಷಿಕ ಡೇಟಾವನ್ನು ಬಿಡುಗಡೆ ಮಾಡಿದೆ. 2022 ರ ಕ್ಯಾಲೆಂಡರ್ ವರ್ಷದಲ್ಲಿ 3,64,870 ಯುನಿಟ್‌ಗಳು ಮಾರಾಟವಾಗಿದೆ. ಆದರೆ 2023ರ ವರ್ಷದಲ್ಲಿ ವಸತಿ ಮಾರಾಟವು 4,76,530 ಯುನಿಟ್‌ಗಳಿಗೆ ಹೆಚ್ಚಾಗಿದೆ ಎಂದು ವರದಿ ಹೇಳಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅನಾರಾಕ್ ಅಧ್ಯಕ್ಷ ಅನುಜ್ ಪುರಿ, "ಈ ವರ್ಷದ ಮೊದಲಾರ್ಧದಲ್ಲಿ ಜಾಗತಿಕ ಬದಲಾವಣೆಗಳು, ಹೆಚ್ಚುತ್ತಿರುವ ದೇಶೀಯ ಆಸ್ತಿ ಬೆಲೆಗಳು ಮತ್ತು ಬಡ್ಡಿದರ ಏರಿಕೆಗಳ ಹೊರತಾಗಿಯೂ ಭಾರತೀಯ ವಸತಿ ವಲಯಕ್ಕೆ 2023 ಅದ್ಭುತವಾಗಿದೆ," ಎಂದು ತಿಳಿಸಿದ್ದಾರೆ. ಟಾಪ್ 7 ನಗರಗಳಲ್ಲಿನ ವಸತಿ ಮಾರಾಟವು 2022 ರ ಹಿಂದಿನ ಗರಿಷ್ಠ ಮಟ್ಟವನ್ನು ದಾಟಿದೆ ಎಂದರು.
ಜಾಗತಿಕ ಮಾರುಕಟ್ಟೆಯ ಅನಿಶ್ಚಿತತೆಗಳ ಜೊತೆಗೆ ಹೆಚ್ಚುತ್ತಿರುವ ಪ್ರಾಪರ್ಟಿ ಬೆಲೆಗಳು ಮತ್ತು ಬಡ್ಡಿದರಗಳು ವಸತಿ ಮಾರಾಟದ ಮೇಲೆ ಪರಿಣಾಮ ಬೀರುತ್ತವೆ ಎಂದು ವ್ಯಾಪಕವಾಗಿ ನಿರೀಕ್ಷಿಸಲಾಗಿದೆ. ಆದರೆ ಬೇಡಿಕೆ ಹೆಚ್ಚಳ ನಿರಂತರವಾಗಿದೆ ಎಂದು ಪುರಿ ಹೇಳಿದರು.
ಅಂಕಿಅಂಶಗಳು ಏನು ಹೇಳುತ್ತದೆ, ಬೆಂಗಳೂರಿನಲ್ಲೆಷ್ಟು?
ಅಂಕಿಅಂಶಗಳ ಪ್ರಕಾರ, ಮುಂಬೈ ಮೆಟ್ರೋಪಾಲಿಟನ್ ಪ್ರದೇಶ (ಎಂಎಂಆರ್) ಅಗ್ರ ಏಳು ನಗರಗಳಲ್ಲಿ ಅತಿ ಹೆಚ್ಚು ಮಾರಾಟವನ್ನು ಕಂಡಿದೆ. ನಂತರದ ಸ್ಥಾನದಲ್ಲಿ ಪುಣೆ ಇದೆ. ಎಂಎಂಆರ್‌ನಲ್ಲಿ ವಸತಿ ಮಾರಾಟವು ಹಿಂದಿನ ವರ್ಷದಲ್ಲಿ 1,09,730 ಯುನಿಟ್‌ಗಳಾಗಿದ್ದು ಈ ವರ್ಷ 1,53,870 ಯುನಿಟ್‌ಗಳಿಗೆ ಅಂದರೆ ಶೇಕಡ 40 ರಷ್ಟು ಏರಿಕೆಯಾಗಿದೆ.
ಪುಣೆಯಲ್ಲಿ ವಸತಿ ಮಾರಾಟವು 57,145 ಯುನಿಟ್‌ಗಳಿಂದ 86,680 ಯುನಿಟ್‌ಗಳಿಗೆ ಅಂದರೆ ಶೇಕಡ 52ರಷ್ಟು ಹೆಚ್ಚಳವಾಗಿದೆ. ದೆಹಲಿ-ಎನ್‌ಸಿಆರ್‌ನಲ್ಲಿ, ಮಾರಾಟವು 63,710 ಯುನಿಟ್‌ಗಳಿಂದ 65,625 ಯುನಿಟ್‌ಗಳಿಗೆ ಅಂದರೆ ಕೇವಲ ಶೇಕಡ 3 ರಷ್ಟು ಬೆಳವಣಿಗೆ ಕಂಡಿದೆ. ಈ ನಡುವೆ ನಮ್ಮ ಬೆಂಗಳೂರಿನಲ್ಲಿ ವಸತಿ ಮಾರಾಟವು 49,480 ಯುನಿಟ್‌ಗಳಿಂದ 63,980 ಯುನಿಟ್‌ಗಳಿಗೆ ಅಂದರೆ ಶೇಕಡ 29 ರಷ್ಟು ಏರಿಕೆಯಾಗಿದೆ.
ಹೈದರಾಬಾದ್ 47,485 ಯುನಿಟ್‌ಗಳಿಂದ 61,715 ಯುನಿಟ್‌ಗಳಿಗೆ ಮಾರಾಟ ಪ್ರಮಾಣ ತಲುಪಿದ್ದು ಶೇಕಡ 30 ರಷ್ಟು ಬೆಳವಣಿಗೆಯನ್ನು ಕಂಡಿದೆ. ಕೋಲ್ಕತ್ತಾದಲ್ಲಿ ಮಾರಾಟವು 21,220 ಯುನಿಟ್‌ಗಳಿಂದ 23,030 ಯುನಿಟ್‌ಗಳಿಗೆ ಶೇಕಡ 9 ರಷ್ಟು ಏರಿಕೆಯಾಗಿದೆ.
ಚೆನ್ನೈನಲ್ಲಿ, ಕಳೆದ ಕ್ಯಾಲೆಂಡರ್ ವರ್ಷದಲ್ಲಿ ಮಾರಾಟವು 16,100 ಯುನಿಟ್‌ಗಳಿಂದ 21,630 ಯುನಿಟ್‌ಗಳಿಗೆ ಈ ವರ್ಷ ಶೇಕಡ 34 ರಷ್ಟು ಹೆಚ್ಚಾಗಿದೆ. 2014 ರ ನಂತರ 2022 ರಲ್ಲಿ ದಶಕದಲ್ಲಿ ಸಾರ್ವಕಾಲಿಕ ಏರಿಕೆಯಾಗಿತ್ತು. ಈ ಏಳು ನಗರಗಳಲ್ಲಿ 3.43 ಲಕ್ಷ ಯುನಿಟ್‌ಗಳು ಮಾರಾಟವಾದವು.
ಹೊಸ ಪೂರೈಕೆಯ ಲೆಕ್ಕಾಚಾರ
ಪೂರೈಕೆಯ ಲೆಕ್ಕಾಚಾರದಲ್ಲಿ ನೋಡಿದಾಗ 2022 ರಲ್ಲಿ 3,57,640 ಯುನಿಟ್‌ಗಳು ಹೊಸದಾಗಿ ಪೂರೈಕೆಯಾಗಿದ್ದು, 2023 ರಲ್ಲಿ 4,45,770 ಯುನಿಟ್‌ಗಳಿಗೆ ಅಂದರೆ ಶೇಕಡ 25 ರಷ್ಟು ಉನ್ನತ ಏಳು ನಗರಗಳಲ್ಲಿ ಏರಿಕೆಯಾಗಿದೆ ಎಂದು ಅನಾರಾಕ್ ಹೇಳುತ್ತದೆ. ಹೊಸ ಪೂರೈಕೆಯಲ್ಲಿಯೂ ಎಂಎಂಆರ್ ಮುನ್ನಡೆ ಸಾಧಿಸಿದೆ. ಎಂಎಂಆರ್‌ನಲ್ಲಿ ಹೊಸ ಪೂರೈಕೆ ಕಳೆದ ವರ್ಷ 1,24,650 ಯುನಿಟ್‌ಗಳಿಂದ ಈ ವರ್ಷ ಶೇಕಡ 27ರಷ್ಟು ಏರಿಕೆಯಾಗಿ 1,57,700 ಯುನಿಟ್‌ಗಳಿಗೆ ತಲುಪಿದೆ.
ಬೆಲೆ ಏರಿಕೆ ಎಷ್ಟಾಗಿದೆ?
ವಸತಿ ಬೆಲೆಗಳು ಕಳೆದ ವರ್ಷ ಚದರ ಅಡಿಗೆ 6,150 ರೂಪಾಯಿಗಳಿಂದ ಪ್ರತಿ ಚದರ ಅಡಿಗೆ 7,080 ರೂಪಾಯಿಗೆ ತಲುಪಿದೆ. ಈ ಏಳು ನಗರಗಳಾದ್ಯಂತ, ಮುಖ್ಯವಾಗಿ ವೆಚ್ಚ ಅಧಿಕ ಮತ್ತು ಬೇಡಿಕೆ ಅಧಿಕವಾದ ಕಾರಣ ವಸತಿ ಬೆಲೆಗಳು ಶೇಕಡ 10-24 ರಷ್ಟು ಏರಿಕೆಯಾಗಿದೆ ಎಂದು ಸಲಹೆಗಾರರು ಹೇಳಿದ್ದಾರೆ. ಹೈದರಾಬಾದ್‌ನಲ್ಲಿ ಕಳೆದ ವರ್ಷ ಪ್ರತಿ ಚದರ ಅಡಿಗೆ 4,620 ರೂಪಾಯಿ ಆಗಿದ್ದು, 2023 ರಲ್ಲಿ ಪ್ರತಿ ಚದರ ಅಡಿಗೆ ಸುಮಾರು 5,750 ರೂಪಾಯಿ ಆಗಿದೆ. ಅಂದರೆ ಶೇಕಡ 24 ರಷ್ಟು ಏರಿಕೆ ದಾಖಲಿಸಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications