2023 ರ ಮೂರನೇ ತ್ರೈಮಾಸಿಕದಲ್ಲಿ ಭಾರತದಲ್ಲಿ ವಸತಿ ಆಸ್ತಿ ಮಾರುಕಟ್ಟೆಯಲ್ಲಿ ವಸತಿ ಮಾರಾಟವು ಸಾರ್ವಕಾಲಿಕ ಏರಿಕೆಯನ್ನು ಕಂಡಿದೆ ಎಂದು ರಿಯಲ್ ಎಸ್ಟೇಟ್ ಸಲಹೆ ನೀಡುವ ಸಂಸ್ಥೆಯಾದ ಅನರಾಕ್ (ANAROCK) ಹೇಳಿದೆ. ಮಾನ್ಸೂನ್ ಋತು ವಿಳಂಬವಾದರೂ ಕೂಡಾ ಭಾರತದ ಅಗ್ರ ಏಳು ನಗರಗಳಲ್ಲಿ ವಸತಿ ಮಾರಾಟ ಭರದಿಂದ ಸಾಗಿದೆ.
ಕೇಂದ್ರ ಬ್ಯಾಂಕ್ ರೆಪೋ ದರ ಸ್ಥಿರವಾಗಿರಿಸುವುದೇ ಇದಕ್ಕೆ ಕಾರಣ ಎಂದು ವರದಿ ಹೇಳಿದೆ. ಈ ಪ್ರಮುಖ ಏಳು ನಗರಗಳಲ್ಲಿನ ಮನೆ ಮಾರಾಟವು 120,280 ಯುನಿಟ್‌ಗಳನ್ನು ತಲುಪಿದೆ. 2022 ರಲ್ಲಿ ಅದೇ ತಿಂಗಳುಗಳಲ್ಲಿ ಮಾರಾಟವಾದ 88,230 ಯುನಿಟ್‌ಗಳಿಗೆ ನಾವು ಹೋಲಿಕೆ ಮಾಡಿದಾಗ ಗಮನಾರ್ಹ ಏರಿಕೆ ಕಂಡು ಬಂದಿದೆ. ಸರಿಸುಮಾರು ಶೇಕಡ 35 ರಷ್ಟು ಹೆಚ್ಚಳವಾಗಿದೆ.

ಅಂಕಿಅಂಶಗಳನ್ನು ಬಿಡುಗಡೆ ಮಾಡಿದ ರಿಯಲ್ ಎಸ್ಟೇಟ್ ಸಲಹೆಗಾರ ಸಂಸ್ಥೆ ಅನರಾಕ್, ಈ ವರ್ಷದ ಜುಲೈ- ಸೆಪ್ಟೆಂಬರ್ ಅವಧಿಯಲ್ಲಿ ಏಳು ನಗರಗಳ ಸರಾಸರಿ ವಸತಿ ಬೆಲೆಗಳು ವಾರ್ಷಿಕವಾಗಿ ಶೇಕಡ 11 ರಷ್ಟು ಏರಿಕೆಯಾಗಿದೆ ಎಂದು ಹೇಳಿದೆ. ಯಾವ ನರಗದಲ್ಲಿ ಎಷ್ಟು ವಸತಿ ಮಾರಾಟ ಹೆಚ್ಚಾಗಿದೆ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...
ಯಾವ ನಗರದಲ್ಲಿ ಅಧಿಕ ಮಾರಾಟ?
ಸುಮಾರು 38,500 ಯುನಿಟ್‌ಗಳ ಮಾರಾಟದೊಂದಿಗೆ ಮುಂಬೈ ಮಹಾನಗರ ಪಾಲಿಕೆವು (ಎಂಎಂಆರ್) ಮೊದಲ ಸ್ಥಾನದಲ್ಲಿದೆ. ಸುಮಾರು 22,885 ಯುನಿಟ್‌ಗಳು ಮಾರಾಟವಾದ ಪುಣೆ ನಂತರದ ಸ್ಥಾನದಲ್ಲಿದೆ. ಒಟ್ಟಾಗಿ, ಈ ನಗರಗಳು 2023ರ ಮೂರನೇ ತ್ರೈಮಾಸಿಕದಲ್ಲಿ ಒಟ್ಟು ವಸತಿ ಮಾರಾಟಕ್ಕೆ ಶೇಕಡ 51 ರಷ್ಟು ಕೊಡುಗೆಯನ್ನು ನೀಡಿದೆ.
ಮುಂಬೈ ಮಹಾನಗರ ಪಾಲಿಕೆಯಲ್ಲಿ ವಸತಿ ಮಾರಾಟದಲ್ಲಿ ಶೇಕಡ 46 ರಷ್ಟು ವಾರ್ಷಿಕ ಏರಿಕೆ ಕಂಡು ಬಂದಿದೆ. ಪುಣೆಯಲ್ಲಿ ಶೇಕಡ 63ರಷ್ಟು ವಾರ್ಷಿಕವಾಗಿ ವಸತಿ ಮಾರಾಟ ಅಧಿಕವಾಗಿದೆ. ಹೊಸ ಆಸ್ತಿ ಪೂರೈಕೆಯ ವಿಷಯದಲ್ಲಿ, ಅಗ್ರ ಏಳು ನಗರಗಳು 1.16 ಲಕ್ಷ ಯೂನಿಟ್‌ಗಳ ಹೆಚ್ಚಳ ದಾಖಲಾಗಿದೆ. ಅಂದರೆ ಶೇಕಡ 24 ರಷ್ಟು ವಾರ್ಷಿಕ ಬೆಳವಣಿಗೆ ಕಂಡುಬಂದಿದೆ.
2023ರ ಮೂರನೇ ತ್ರೈಮಾಸಿಕದಲ್ಲಿ ಸುಮಾರು 36,250 ಯೂನಿಟ್ ಹೊಸ ಆಸ್ತಿ ಪೂರೈಕೆ ಮಾಡುವ ಮೂಲಕ ಮುಂಬೈ ಮತ್ತೆ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಆದರೆ ಶೇಕಡ 1 ರಷ್ಟು ಮಾತ್ರ ವಾರ್ಷಿಕವಾಗಿ ಬೆಳವಣಿಗೆ ಕಂಡು ಬಂದಿದೆ. ಮತ್ತೊಂದೆಡೆ, ಹೈದರಾಬಾದ್‌ನಲ್ಲಿ ವಾರ್ಷಿಕವಾಗಿ ಶೇಕಡ 60ರಷ್ಟು ಬೆಳವಣಿಗೆ ಕಂಡುಬಂದಿದೆ. ಸರಿಸುಮಾರು 24,900 ಯೂನಿಟ್ ಹೊಸ ಆಸ್ತಿ ಪೂರೈಕೆ ಮಾಡಲಾಗಿದೆ.
ಐಷಾರಾಮಿ ವಸತಿಗೆ ಹೆಚ್ಚಿದ ಬೇಡಿಕೆ
ಮಾರುಕಟ್ಟೆಯಲ್ಲಿ ಐಷಾರಾಮಿ ವಸತಿಗೆ ಬೇಡಿಕೆ ಅಧಿಕವಾಗಿದೆ. 1.5 ಕೋಟಿ ರೂಪಾಯಿಗಿಂತ ಅಧಿಕ ಬೆಲೆಯ ಐಷಾರಾಮಿ ವಸತಿಗಳ ಬೇಡಿಕೆ ಅಧಿಕವಾಗಿದೆ. ಒಟ್ಟು ವಸತಿ ಮಾರಾಟದಲ್ಲಿ ಸುಮಾರು ಶೇಕಡ 27 ರಷ್ಟು ಐಷಾರಾಮಿ ವಸತಿಯಾಗಿದೆ. ಇದು ಕಳೆದ ಐದು ವರ್ಷಗಳಲ್ಲಿ ಅತ್ಯಧಿಕ ತ್ರೈಮಾಸಿಕ ಪಾಲನ್ನು ಹೊಂದಿದೆ.
ಹೊಸ ವಸತಿ ಪೂರೈಕೆ ಹೆಚ್ಚಳವಾಗಿದ್ದರೂ ಕೂಡಾ ಅಗ್ರ ಏಳು ನಗರಗಳಲ್ಲಿ ಅಸ್ತಿತ್ವದಲ್ಲಿರುವ ವಸತಿ ವಾರ್ಷಿಕವಾಗಿ ಶೇಕಡ 3 ರಷ್ಟು ಕುಸಿತ ಕಂಡಿದೆ. Q3 2022 ರಲ್ಲಿ ಸರಿಸುಮಾರು 6.30 ಲಕ್ಷ ಯುನಿಟ್‌ಗಳಿಂದ Q3 2023 ರಲ್ಲಿ ಸುಮಾರು 6.10 ಲಕ್ಷ ಯುನಿಟ್‌ಗಳಿಗೆ ಇಳಿಕೆಯಾಗಿದೆ.
ಹಿಂದಿನ ವರ್ಷದ ಅದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಅಗ್ರ ಏಳು ನಗರಗಳಲ್ಲಿನ ಸರಾಸರಿ ವಸತಿ ಬೆಲೆಗಳು ಒಟ್ಟಾರೆಯಾಗಿ Q3 2023 ರಲ್ಲಿ ಶೇಕಡ 11 ರಷ್ಟು ಏರಿಕೆ ಕಂಡಿದೆ. ಹೈದರಾಬಾದ್‌ನಲ್ಲಿ ಬೆಲೆ ಶೇಕಡ 14 ರಷ್ಟು ಹೆಚ್ಚಳವಾಗಿ ಬೆಲೆಯ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಬೆಂಗಳೂರು ಇದೆ.


Click it and Unblock the Notifications