For Quick Alerts
ALLOW NOTIFICATIONS  
For Daily Alerts

ಉತ್ತಮ ಸಾಲ ಸೌಲಭ್ಯ, ಹೂಡಿಕೆ, ಖಾತೆ ಕುರಿತು ಮಾಹಿತಿಗೆ ಅಕೌಂಟ್ ಅಗ್ರಿಗೇಟರ್ ವ್ಯವಸ್ಥೆ

|

ಭಾರತದಲ್ಲಿ ಪ್ರಚಲಿತದಲ್ಲಿರುವ ಎಂಟು ಪ್ರಮುಖ ಬ್ಯಾಂಕ್‌ಗಳು ಅಕೌಂಟ್ ಅಗ್ರಿಗೇಟರ್ ಎಂಬ ಹೊಸ ವ್ಯವಸ್ಥೆಗೆ ತೆರೆದುಕೊಂಡಿವೆ. ಗ್ರಾಹಕರಿಗೆ ಉತ್ತಮ ಸಾಲ ವ್ಯವಸ್ಥೆ, ಹೊಸ ಖಾತೆ ತೆರೆಯುವುದು, ಖಾತೆ ಕುರಿತು ಮಾಹಿತಿ ಹಾಗೂ ಹೂಡಿಕೆಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸಲು ಈ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.

ಭಾರತೀಯ ಸ್ಟೇಟ್ ಬ್ಯಾಂಕ್, ಹೆಚ್ ಡಿಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೊಟಕ್ ಮಹೀಂದ್ರಾ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಇಂಡಸ್ ಇಂಡಿಯಾ ಫೆಡರಲ್ ಬ್ಯಾಂಕ್, ಐಡಿಎಫ್ ಸಿ ಫಸ್ಟ್ ಬ್ಯಾಂಕ್‌ಗಳು ಈ ಅಕೌಂಟ್ ಅಗ್ರಿಗೇಟರ್ ಎಂಬ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದಕ್ಕೆ ಮುಂದಾಗಿವೆ.

ಈ ಬ್ಯಾಂಕ್‌ಗಳು 1 ವರ್ಷಕ್ಕೆ ಶೇ. 6.75ರಷ್ಟು ರಿಟರ್ನ್ ನೀಡುತ್ತವೆ!ಈ ಬ್ಯಾಂಕ್‌ಗಳು 1 ವರ್ಷಕ್ಕೆ ಶೇ. 6.75ರಷ್ಟು ರಿಟರ್ನ್ ನೀಡುತ್ತವೆ!

ದೇಶದ ಪ್ರಮುಖ ಎಂಟು ಬ್ಯಾಂಕುಗಳು ಅಳವಡಿಸಿಕೊಳ್ಳುತ್ತಿರುವ ಅಕೌಂಟ್ ಅಗ್ರಿಗೇಟರ್ ಎಂದರೇನು?, ಅಕೌಂಟ್ ಅಗ್ರಿಗೇಟರ್ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ?, ಅಕೌಂಟ್ ಅಗ್ರಿಗೇಟರ್ ವ್ಯವಸ್ಥೆಯಿಂದ ಗ್ರಾಹಕರಿಗೆ ಹೇಗೆ ಉಪಯೋಗವಾಗಲಿದೆ ಎಂಬುದರ ಕುರಿತು ಮಾಹಿತಿಗಾಗಿ ಮುಂದೆ ಓದಿ.

ಕಂಪನಿ, ಗ್ರಾಹಕರು ಮತ್ತು ಬ್ಯಾಂಕ್ ನಡುವೆ ಮಧ್ಯವರ್ತಿ

ಕಂಪನಿ, ಗ್ರಾಹಕರು ಮತ್ತು ಬ್ಯಾಂಕ್ ನಡುವೆ ಮಧ್ಯವರ್ತಿ

ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಪರವಾನಗಿ ಪಡೆದಿರುವ ಅಕೌಂಟ್ ಅಗ್ರಿಗೇಟರ್ ಬ್ಯಾಂಕುಗಳು ಮತ್ತು ಸಂಸ್ಥೆಗಳ ನಡುವಿನ ವಿನಿಮಯ ವೇದಿಕೆ ಅಥವಾ ಮಧ್ಯವರ್ತಿಯಂತೆ ಕೆಲಸ ಮಾಡುತ್ತದೆ. ಆ ಮೂಲಕ ಸಂಗ್ರಹಿಸಿದ ದತ್ತಾಂಶ ಹಂಚಿಕೊಳ್ಳುವುದು ಮತ್ತು ಬಳಸಿಕೊಳ್ಳುತ್ತದೆ. ಎಲ್ಲಾ ಹಣಕಾಸು ಡೇಟಾವನ್ನು ಒಂದೇ ಸ್ಥಳದಲ್ಲಿ ಕ್ರೂಢೀಕರಿಸುವುದು ಮತ್ತು ಗ್ರಾಹಕರಿಗೆ ಮಾಹಿತಿ ಸಂರಕ್ಷಕರಾಗಿ ಕಾರ್ಯನಿರ್ವಹಿಸುವುದು ವೇದಿಕೆಯ ಕೆಲಸವಾಗಿದೆ.

ಉದಾಹರಣೆ: ಯಾವುದೇ ಬ್ಯಾಂಕ್, ವಿಮಾ ಕಂಪನಿ ಅಥವಾ ಮ್ಯೂಚುವಲ್ ಫಂಡ್ ಡೇಟಾವನ್ನು ಅಕೌಂಟ್ ಅಗ್ರಿಗೇಟರ್ ಯೊಂದಿಗೆ ಹಂಚಿಕೊಳ್ಳುವುದರಿಂದ ಸಿಸ್ಟಂನಿಂದ ಡೇಟಾವನ್ನು ನಮೂದಿಸುವುದಕ್ಕೆ ಮಾತ್ರ ಅನುಮತಿಸಲಾಗುತ್ತದೆ. ಆದ್ದರಿಂದ ನಿಮ್ಮ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಯು ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕೌಂಟ್ ಅಗ್ರಿಗೇಟರ್ ಒಂದಾಗಿ ಭಾಗವಹಿಸುವವರಾಗಿರಬೇಕು.

 

ಕಾಗದ ಮುಕ್ತ ಹಾಗೂ ಕೆವೈಸಿ ಅಗತ್ಯ ಇರುವುದಿಲ್ಲ
 

ಕಾಗದ ಮುಕ್ತ ಹಾಗೂ ಕೆವೈಸಿ ಅಗತ್ಯ ಇರುವುದಿಲ್ಲ

ನಿಮ್ಮ ಬ್ಯಾಂಕ್ ಅಥವಾ ಸಂಸ್ಥೆಯು ಒಂದು ಬಾರಿ ನೋಂದಾಯಿಸಿಕೊಂಡ ನಂತರ ಡೇಟಾವನ್ನು ಹಂಚಿಕೊಳ್ಳುವ ಪ್ರಕ್ರಿಯೆಯು ಸುಲಭವಾಗುತ್ತದೆ. ಏಕೆಂದರೆ ಸಂಸ್ಥೆಯು API ಮೂಲಕ AA ವ್ಯವಸ್ಥೆಯೊಂದಿಗೆ ಸಂಪರ್ಕ ಹೊಂದಿರುತ್ತದೆ.

ಉದಾಹರಣೆ: ನಿಮಗೆ ಹೊಸ ಸಾಲದ ಅಗತ್ಯವಿದ್ದರೆ ಅಥವಾ ವಿಮಾ ಪಾಲಿಸಿಯನ್ನು ಖರೀದಿಸಲು ಅಥವಾ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಲು ಬಯಸಿದರೆ, ನೀವು ಕೆವೈಸಿಗಾಗಿ ಯಾವುದೇ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ. ಬ್ಯಾಂಕುಗಳು ಮತ್ತು ಸಂಸ್ಥೆಗಳೊಂದಿಗೆ ನಿಮ್ಮ ಡೇಟಾವನ್ನು ಹಂಚಿಕೊಳ್ಳಲು ನೀವು ಅಕೌಂಟ್ ಅಗ್ರಿಗೇಟರ್ ಗೆ ಒಪ್ಪಿಗೆಯನ್ನು ನೀಡಬೇಕಾಗುತ್ತದೆ. ಅಕೌಂಟ್ ಅಗ್ರಿಗೇಟರ್ ನಿಮ್ಮ ಬ್ಯಾಂಕ್‌ನಿಂದ ಡೇಟಾವನ್ನು ಡಿಜಿಟಲ್ ಆಗಿ ತೆಗೆದುಕೊಳ್ಳುತ್ತದೆ ಹಾಗೂ ನೀವು ಹೊಸ ಸಾಲ ಅಥವಾ ಹೂಡಿಕೆಗೆ ಅರ್ಜಿ ಸಲ್ಲಿಸುತ್ತಿರುವ ಬ್ಯಾಂಕ್ ಅಥವಾ ಸಂಸ್ಥೆಗೆ ಒದಗಿಸುತ್ತದೆ.

 

ಇದೊಂದು ಸುರಕ್ಷಿತ ವ್ಯವಸ್ಥೆ

ಇದೊಂದು ಸುರಕ್ಷಿತ ವ್ಯವಸ್ಥೆ

ನಿಮ್ಮ ಬ್ಯಾಂಕ್ ಖಾತೆ ಅಥವಾ ದಾಖಲೆಗಳು ಬೇರೆಯವರಿಗೆ ಬಳಕೆಯಾಗುವ ಬಗ್ಗೆ ಅಥವಾ ದುರುಪಯೋಗವಾಗುವ ಬಗ್ಗೆ ಯಾವುದೇ ರೀತಿ ಆತಂಕಪಡುವ ಅಗತ್ಯವಿಲ್ಲ. ಏಕೆಂದರೆ ಅಕೌಂಟ್ ಅಗ್ರಿಗೇಟರ್

ಫ್ರೇಮ್‌ವರ್ಕ್ ಅತ್ಯಂತ ಕಠಿಣವಾದ ಡೇಟಾ ಗೌಪ್ಯತೆಯ ಮಾರ್ಗಸೂಚಿಗಳನ್ನು ಹೊಂದಿರುತ್ತದೆ. ಅಕೌಂಟ್ ಅಗ್ರಿಗೇಟರ್ ಹಂಚಿಕೊಂಡ ಡೇಟಾವನ್ನು ನಿಮ್ಮ ಬ್ಯಾಂಕ್‌ನಿಂದ ನೀವು ಹೊಸ ಸಾಲಕ್ಕಾಗಿ ಅಥವಾ ಹಣಕಾಸು ಉತ್ಪನ್ನಕ್ಕಾಗಿ ಯಾವುದೇ ಇತರ ಸಂಸ್ಥೆಗೆ ಸಂಪೂರ್ಣವಾಗಿ ಎನ್‌ಕ್ರಿಪ್ಟ್ ಮಾಡಲಾಗುತ್ತದೆ.

 

ಡೇಟಾ ವಿನಿಮಯದ ಮೇಲೆ ನಿಮ್ಮ ನಿಯಂತ್ರಣ

ಡೇಟಾ ವಿನಿಮಯದ ಮೇಲೆ ನಿಮ್ಮ ನಿಯಂತ್ರಣ

ಒಬ್ಬ ಗ್ರಾಹಕರಾಗಿ ನೀವು ಅಕೌಂಟ್ ಅಗ್ರಿಗೇಟರ್ ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಳ್ಳಲು ಬಯಸುವ ಡೇಟಾದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿರುತ್ತೀರಿ. ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯು ಸಿಸ್ಟಮ್‌ನಿಂದ ಹೊರತೆಗೆಯಲು ಡೇಟಾ ಹಂಚಿಕೆಯನ್ನು ಹಾಗೂ ತೆರೆಯುವ ಸಮಯದ ಚೌಕಟ್ಟನ್ನು ನೀವೇ ನಿರ್ಧರಿಸುತ್ತೀರಿ. ನೀವು ಕ್ರೆಡಿಟ್ ಕಾರ್ಡ್ ವಿವರ ಸೇರಿದಂತೆ ಇತರೆ ಮಾಹಿತಿಯನ್ನು ಹೊರತುಪಡಿಸಿ ಕೇವಲ ಸಾಲದ ವಿವರಗಳನ್ನು ಮಾತ್ರ ಹಂಚಿಕೊಳ್ಳಲು ನಿರ್ಧರಿಸಬಹುದು. ನಿಮಗೆ ಸಾಲ ನೀಡುವ ಸಂಸ್ಥೆಯು, ನಿಮ್ಮ ಬಗ್ಗೆ ಹೆಚ್ಚುವರಿ ಮಾಹಿತಿ ಪಡೆಯಲು ಕ್ರೆಡಿಟ್ ಬ್ಯೂರೋದಂತಹ ಇತರ ಮಾಹಿತಿ ಮಧ್ಯವರ್ತಿಗಳನ್ನು ಹೊಂದಿರುತ್ತದೆ.

English summary

How Account Aggregators can help you get the best loan, insurance or investment deals in Kannada

Here we explained on How Account Aggregators can help you get the best loan, insurance or investment deals in Kannada. Read on.
Story first published: Monday, October 18, 2021, 15:18 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X