ಬೆಂಗಳೂರು 'ನಮ್ಮ ಮೆಟ್ರೋ'ವನ್ನು ತುಮಕೂರಿನವರೆಗೂ ವಿಸ್ತರಿಸುವ ಕುರಿತು ಈಗಾಗಲೇ, ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ಇತಿಹಾಸದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಅಂತರ್ ಜಿಲ್ಲೆಗಳ ನಡುವೆ ಮೆಟ್ರೋ ಸಂಪರ್ಕ ಒದಗಿಸಲು BMRCL ಮುಂದಾಗದೆ. ಕೇಂದ್ರ ಸರ್ಕಾರದ ಅನುಮೋದನೆ ಸಿಕ್ಕರೆ, ಈ ಮಹತ್ವಾಕಾಂಕ್ಷಿ ಯೋಜನೆಯು ಸಾವಿರಾರು ಕೋಟಿ ಬಂಡವಾಳದ ಮೂಲಕ ಹೊರಹೊಮ್ಮಲಿದೆ. ಸದ್ಯ ಇದಕ್ಕೆ ಕೇಂದ್ರ ಸರ್ಕಾರದ ಅನುಮೋದನೆಯೊಂದೇ ಬಾಕಿ ಇದೆ.

ಒಂದು ವೇಳೆ ಈ ಮೆಟ್ರೋ ಸಂಪರ್ಕಕ್ಕೆ ಕೇಂದ್ರ ಸರ್ಕಾರದ ಅನುಮೋದನೆ ಸಿಕ್ಕರೆ, ಇದು ಸಾರಿಗೆ ವಲಯದಲ್ಲಿ ಮಾತ್ರ ಮೈಲಿಗಲ್ಲು ಸೃಷ್ಟಿಸುವುದಿಲ್ಲ. ಬದಲಾಗಿ ಇದು ಪೂರ್ವಭಾವಿ ಕೈಗಾರಿಕರಣ ಮತ್ತು ಸಮಗ್ರ ನಗರ ಅಭಿವೃದ್ಧಿಗೆ ಮಾರ್ಗಸೂಚಿಯಾಗಲಿದೆ. ಅಂದರೆ ಈ ಯೋಜನೆಯ ಮೂಲಕ ಕೈಗಾರಿಕಾ ವಲಯ ಅಭಿವೃದ್ಧಿ ಕಾಣಬಹುದಾಗಿದೆ. ಕೈಗಾರಿಕಾ ಬೆಳವಣಿಗೆಗೆ ಹೇಗೆ ಉತ್ತೇಜನ ಸಿಗುತ್ತದೆ ಎಂಬುದಕ್ಕೂ ಮೊದಲು, ಈ ಯೋಜನೆ ಪ್ರಮುಖ ಅಂಶಗಳನ್ನು ಈ ಲೇಖನದಲ್ಲಿ ತಿಳಿಯಬಹುದಾಗಿದೆ.
ಯೋಜನೆಯ ಪ್ರಮುಖ ಅಂಶಗಳು:
ಇನ್ನು ಈ ತುಮಕೂರು ಮೆಟ್ರೋ ಯೋಜನೆಗೆ ಅನುಮೋದನೆ ಸಿಕ್ಕರೆ, ಇದು ಸುಮಾರು 52.45 ಕಿಲೋಮೀಟರ್ ಉದ್ದದ ಮೆಟ್ರೋ ಮಾರ್ಗವಾಗುತ್ತದೆ. ಈ ಮೆಟ್ರೋ ಮಾರ್ಗದಲ್ಲಿ 19 ನಿಲ್ದಾಣಗಳ ಜೊತೆಗೆ, ಈ ಮಾರ್ಗವು ನೆಲಮಂಗಲ, ಕುದೂರು, ದಾಬಸ್‌ಪೇಟೆ ಮುಂತಾದ ಪ್ರಮುಖ ಕೈಗಾರಿಕಾ ವಲಯಗಳನ್ನು ಸಂಪರ್ಕಿಸುವ ಮೂಲಕ ಕೈಗಾರಿಕೆ, ವ್ಯವಹಾರ ಮತ್ತು ವಸತಿ ಪ್ರದೇಶಗಳ ಮಧ್ಯೆ ನೇರ ಸಂಪರ್ಕ ಒದಗಿಸುವುದೇ ಈ ಯೋಜನೆಯ ಪ್ರಮುಖ ಗುರಿಯಾಗಿದೆ.
₹20,650 ಕೋಟಿ ಯೋಜನೆ..ಉದ್ಯಮ ವಲಯಕ್ಕೆ ಹೊಸ ಪುಷ್ಠಿ:
ಇನ್ನು ಈ ಮೆಟ್ರೋ ಯೋಜನೆಯು ಸುಮಾರು ₹20,650 ಕೋಟಿ ವೆಚ್ಚದ್ದಾಗಿದೆ. ಪಬ್ಲಿಕ್-ಪ್ರೈವೆಟ್ ಪಾರ್ಟ್ನರ್‌ಶಿಪ್ ಮಾದರಿಯಲ್ಲಿ ಭೂಮಿಯ ಮಿಶ್ರ ಬಳಕೆಯನ್ನು ಉತ್ತೇಜಿಸಲು 250 ಎಕರೆ ಭೂಮಿಯನ್ನು ಮೀಸಲಿಡಲಾಗಿದೆ. ಇದರಿಂದ ಖಾಸಗಿ ಹೂಡಿಕೆದಾರರು ವಾಣಿಜ್ಯ, ವಸತಿ, ಹೋಟೆಲ್ ಮತ್ತು ಆಫೀಸ್ ಉಪಯೋಗಕ್ಕಾಗಿ ಭೂಮಿ ಅಭಿವೃದ್ಧಿಪಡಿಸಲು ಅವಕಾಶ ಪಡೆಯುತ್ತಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಮ್ಮಿಶ್ರ ಹೂಡಿಕೆಯಿಂದ ಈ ಮಾದರಿ ಹೆಚ್ಚು ನಂಬಿಗಸ್ತ ವ್ಯವಹಾರಿಕ ಮಾದರಿಯಾಗಿದ್ದು, ಯೋಜನೆಯ ಸ್ಥಿರತೆಯನ್ನು ಹೆಚ್ಚಿಸುತ್ತದೆ.
ಕೈಗಾರಿಕೆ ಮತ್ತು ಉದ್ಯೋಗ:
ಇನ್ನು ತುಮಕೂರು ಈಗಾಗಲೇ ಬೆಳವಣಿಗೆಯನ್ನು ನೋಡಿರುವ ನಗರ. ಸಣ್ಣ ಪುಟ್ಟ ಕಂಪನಿಗಳು, ಮಳಿಗೆಗಳು, ಥಿಯೇಟರ್‍ಗಳು ಕೂಡ ಇಲ್ಲಿವೆ. ಹೀಗಾಗಿ ಈ ನಗರಕ್ಕೆ ಮೆಟ್ರೋ ಬಂದರೆ ಸುತ್ತ-ಮುತ್ತಲಿನ ಕೈಗಾರಿಕಾ ವಲಯದಲ್ಲಿ ಈಗಾಗಲೇ ಸ್ಥಾಪನೆಯಾಗಿರುವ ಕಾರ್ಖಾನೆಗಳನ್ನೂ ಬೆಳೆಸುತ್ತಿದೆ. ಅಲ್ಲದೇ ಅವುಗಳಿಗೆ ಬಲವಾದ ಲಾಜಿಸ್ಟಿಕ್ ಬೆಂಬಲ ನೀಡುವುದು ಈ ಯೋಜನೆಯ ಒಂದು ಪ್ರಮುಖ ಉದ್ದೇಶ ಎನ್ನಬಹುದು. ನಿರ್ಮಾಣ ಹಂತದಲ್ಲೇ ಈ ಯೋಜನೆಯಿಂದ 25,000ಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಅಂದಾಜಿಸಲಾಗಿದೆ. ಬದಲಾವಣೆಯ ನಂತರ, ನಿರ್ವಹಣೆ, ತಾಂತ್ರಿಕ, ಸುರಕ್ಷತಾ ಕ್ಷೇತ್ರಗಳಲ್ಲಿ ಸ್ಥಿರ ಉದ್ಯೋಗಗಳು ಹೆಚ್ಚಾಗಲಿವೆ.
ಹೂಡಿಕೆದಾರರಿಗೆ ಅವಕಾಶಗಳು:
ಇನ್ನು ಮೆಟ್ರೋ ಯೋಜನೆ ಸಿದ್ಧವಾದರೆ ನೇರವಾಗಿ ಬಂಡವಾಳ ಹೂಡಿಕೆ ಮಾಡಬೇಕಾದ ಕಂಪನಿಗಳು ಮುಂದೆ ಬರುತ್ತವೆ. ವಾಣಿಜ್ಯ ಮತ್ತು ವಸತಿ ವಲಯಗಳಲ್ಲಿ ನೂತನ ಬಂಡವಾಳ ಹೂಡಿಕೆದಾರರಿಗೆ ವಿಶೇಷ ಅವಕಾಶಗಳು ಸಿಗುತ್ತವೆ. ಜಾಗತಿಕ ಇನ್ವೆಸ್ಟ್‌ಮೆಂಟ್ ಫಂಡುಗಳು PPP ಮಾದರಿಯಲ್ಲಿ ಪಾಲ್ಗೊಳ್ಳಲು ಸಾಧ್ಯತೆ ಇದೆ. ಬ್ರ್ಯಾಂಡ್ ಶಾಪಿಂಗ್ ಮಾಲ್‌ಗಳು, ಹೋಟೆಲ್ ಸರಪಣಿ ಸಂಸ್ಥೆಗಳು ನಿಲ್ದಾಣಗಳ ಸುತ್ತ ನೂತನ ಶಾಖೆಗಳನ್ನು ಸ್ಥಾಪಿಸುವ ಹಂಬಲ ಸೃಷ್ಟಿಯಾಗುತ್ತದೆ.
ಸಾಮಾಜಿಕ ಮತ್ತು ಆರ್ಥಿಕ ಪ್ರಭಾವ:
ಉದ್ಯೋಗ ಸೃಷ್ಟಿಯ ಜೊತೆಗೆ, ಕಡಿಮೆ ಆದಾಯ ಹೊಂದಿರುವ ವರ್ಗಗಳಿಗೆ ತಕ್ಕಮಟ್ಟಿಗೆ ಅಗ್ಗದ ವಸತಿ ಯೋಜನೆಗಳು ರೂಪುಗೊಳ್ಳುವ ಮೂಲಕ ಸಾಮಾಜಿಕ ಸಮತೋಲನ ಸಾಧನೆ ಸಾಧ್ಯ. ಪ್ರವಾಸಿಗರ ಸಂಚಾರ ಸುಗಮಗೊಳಿಸುವುದು, ವ್ಯಾಪಾರದ ಚಟುವಟಿಕೆಗಳು ಹೆಚ್ಚಳ ಮತ್ತು ಜೀವನಮಟ್ಟದ ಏರಿಕೆಯನ್ನು ತರಲಿದೆ.
ತುಮಕೂರು ಮೆಟ್ರೋ ವಿಸ್ತರಣೆ ಯೋಜನೆ ಕೇವಲ ಭೌತಿಕ ಸಂಪರ್ಕಕ್ಕೆ ಮೀರಿದ, ಸಮಗ್ರ ಆರ್ಥಿಕ ಮತ್ತು ಸಾಂಸ್ಕೃತಿಕ ಪರಿವರ್ತನೆಯ ತಿರುವು. ಇದು ಬೆಂಗಳೂರು-ತುಮಕೂರು ವಲಯದ ಕೈಗಾರಿಕಾ, ವಸತಿ, ವ್ಯಾಪಾರ, ಮತ್ತು ಪರಿಸರಾತ್ಮಕ ಮೌಲ್ಯಗಳನ್ನು ಸಮನ್ವಯಗೊಳಿಸಿ, ಕರ್ನಾಟಕದ ಭವಿಷ್ಯದ ಸುಸ್ಥಿರ ನಗರಾಭಿವೃದ್ಧಿಗೆ ಮಾದರಿಯಾಗಲಿದೆ. ಈ ಯೋಜನೆ ಮೂಲಕ ಹೂಡಿಕೆದಾರರು, ಉದ್ಯಮಿಗಳು, ಸಾಮಾನ್ಯ ಪ್ರಜೆಗಳು ಮತ್ತು ಸರ್ಕಾರಗಳು ಎಲ್ಲರೂ ಲಾಭ ಪಡೆಯುವಂತೆ ಸುಳಿವು ನೀಡುತ್ತಿದ್ದು, ಕರ್ನಾಟಕದ ಅಭಿವೃದ್ಧಿ ಹಾದಿಯಲ್ಲಿ ಹೊಸ ಆಯಾಮಗಳನ್ನು ಸೇರಿಸಲಿದೆ.


Click it and Unblock the Notifications