ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಾ ಮಾರ್ಗದ ಪ್ರಯಾಣಿಕರಿಗೂ ಸೂಕ್ತವಾಗಿಲ್ಲ. ಬೆಂಗಳೂರು ಟ್ರಾಫಿಕ್ ಹಬ್ ಆಗಿರುವ ಕಾರಣ ಒಂದಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಎಲ್ಲಾ ಮಾರ್ಗದ ಪ್ರಯಾಣಿಕರೂ ಸುಗಮವಾಗಿ ಏರ್‌ಪೋರ್ಟ್ ತಲುಪಲು ಆಗುವುದಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ಎರಡನೇ ಏರ್‌ಪೋರ್ಟ್ ನಿರ್ಮಾಣ ಮಾಡಬೇಕೆಂದು ಹಲವು ತಿಂಗಳುಗಳಿಂದ ಚರ್ಚೆ ನಡೆಯುತ್ತಿದೆ. ಹೀಗಾಗಿ ಏರ್‌ಪೋರ್ಟ್ ನಿರ್ಮಿಸಲು ಸೂಕ್ತ ಜಾಗವನ್ನು ಕೂಡ ಗುರುತು ಮಾಡಬೇಕಿದೆ. ಸದ್ಯ ಎರಡನೇ ಏರ್‌ಪೋರ್ಟ್‌ಗಾಗಿ ಸರ್ಕಾರ ತುಮಕೂರು, ನೆಲಮಂಗಲ, ಡಾಬಸ್‌ಪೇಟೆಯಲ್ಲಿ, ಬಿಡದಿಯಲ್ಲಿ ಸ್ಥಳ ಹುಡುಕುತ್ತಿದೆ. ಅಲ್ಲದೇ ಸಮೀಕ್ಷೆ ಕೂಡ ನಡೆಸುತ್ತಿದ್ದು, ಸೆಕೆಂಡ್ ಏರ್‌ಪೋರ್ಟ್‌ಗೆ ಬಿಡದಿ ಸೂಕ್ತ ಎನ್ನಲಾಗುತ್ತಿದೆ.

ಹೊಸೂರು ರಸ್ತೆಯಾದ ಸರ್ಜಾಪುರ ಮತ್ತು ಮೈಸೂರು ರಸ್ತೆಗಳು ಭವಿಷ್ಯದಲ್ಲಿ ಮತ್ತಷ್ಟು ವಿಸ್ತಾರಗೊಳ್ಳಲಿದ್ದು, ಈ ಪ್ರದೇಶದ ಜನರಿಗೆ ಕೆಂಪೇಗೌಡ ವಿಮಾನ ನಿಲ್ದಾಣ ಅತಿ ದೂರ ಆಗುತ್ತದೆ. ಹೀಗಾಗಿ ಈ ಎಲ್ಲಾ ಪ್ರದೇಶಗಳಿಗೂ ಸುಗಮ ಎಂದರೆ ಬಿಡದಿ ಪ್ರದೇಶ. ಇಂದು ಬೆಂಗಳೂರಿನಿಂದ 32 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಮಾಡಿದರೆ ನಗರ ನಿವಾಸಿಗಳಿಗೆ ಕೊಂಚ ರಿಲೀಫ್ ಆಗುವ ಸಾಧ್ಯತೆ ಇದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದೂರದಲ್ಲಿರುವ ಉತ್ತರ ಪೂರ್ವದಲ್ಲಿದೆ. ಹೀಗಾಗಿ ನಗರದಲ್ಲಿ ಬಹುತೇಕ ನಿವಾಸಿಗಳು ಮತ್ತು ಉದ್ಯಮಿಗಳಿಗೆ ಅನುವುಮಾಡಿಕೊಳ್ಳಲು ಕೊಂಚ ಕಷ್ಟಕರ ಸಂಗತಿ. ಅದರಲ್ಲೂ ದಕ್ಷಿಣ ಉಪನಗರಗಳಲ್ಲಿ ಇರುವವರಿಗಂತೂ ಮತ್ತಷ್ಟು ಅನಾನುಕೂಲವಾಗಿರುತ್ತದೆ.
ಇತ್ತ ಹೊಸೂರು ಬಳಿ ಏರ್‌ಪೋರ್ಟ್ ನಿರ್ಮಾಣ ಮಾಡಿದರೆ, ಅದು ರಾಜ್ಯದ ಗಡಿ ದಾಟಿಬಿಟ್ಟಿದೆ. ಹೀಗಾಗಿ ಕರ್ನಾಟಕ ರಾಜ್ಯದ ದೃಷ್ಟಿಯಲ್ಲಿ ನೋಡಿದರೆ ಅದೊಂದು ಹಾನಿಕಾರಕ ಸಂಗತಿ. ಏಕೆಂದರೆ ಬಹುಶಃ ಇದು ಎಷ್ಟೇ ಅಭಿವೃದ್ಧಿ ಹೊಂದಿದರೂ ಗಡಿ ಪ್ರದೇಶವಾದ ಕಾರಣ, ತನ್ನೆಲ್ಲ ಅಭಿವೃದ್ಧಿ ತಮಿಳುನಾಡಿನತ್ತ ಹರಿಸುವ ಸಾಧ್ಯತೆ ಇದೆ. ಇದು ನಮ್ಮ ರಾಜ್ಯದ ವ್ಯಾಪ್ತಿಗೆ ಒಳಪಡದೇ ಇರಬಹುದು ಕೂಡ. ವಾಸ್ತವವಾಗಿ ಈ ಎಲ್ಲಾ ಸಮಸ್ಯೆಗಳನ್ನು ಪರಿಗಣಿಸಿದಾಗ ಬಿಡದಿ ಸೂಕ್ತವೆನಿಸುತ್ತದೆ. ಪೂರ್ವ, ಉತ್ತರ ಮತ್ತು ದಕ್ಷಿಣ ಭಾಗಗಳು ವೇಗವಾಗಿ ಅಭಿವೃದ್ಧಿಯತ್ತ ಸಾಗುತ್ತಿದ್ದರೆ, ಪಶ್ಚಿಮ ಮತ್ತು ದಕ್ಷಿಣ ಪಶ್ಚಿಮ ಭಾಗಗಳು ಅಭಿವೃದ್ಧಿಯಲ್ಲಿ ಹಿಂದಿವೆ. ಹೀಗಾಗಿ ಇದರಿಂದ ಆರ್ಥಿಕ ಅವಕಾಶಗಳು ಮತ್ತು ಮೂಲಸೌಕರ್ಯಗಳಲ್ಲಿ ಭೌತಿಕ ವೈಷಮ್ಯ ಕೂಡ ಉಂಟಾಹುವ ಸಾಧ್ಯತೆ ಇದೆ.
ಇನ್ನು ಕಳೆದ ಎರಡು ದಶಕಗಳಲ್ಲಿ ಬಿಡದಿ ಸುತ್ತ ಸರ್ಕಾರ ದೊಡ್ಡ ಮಟ್ಟದ ಅಭಿವೃದ್ಧಿಯನ್ನೇ ಘೋಷಣೆ ಮಾಡಿದೆ. ಅದರ ಸಮೀಪದಲ್ಲೇ ನಾಡಪ್ರಭು ಕೆಂಪೇಗೌಡ ಲೇಔಟ್ ಇದೆ. ಅಲ್ಲದೇ ಇತ್ತೀಚೆಗೆ ಹರೋಹಳ್ಳಿ ಬಳಿ ಹೊಸ ಟೌನ್‌ಶಿಪ್‌ಗೆ ಚಾಲನೆ ಕೂಡ ನೀಡಲಾಗಿದೆ. ಸೋಲೂರು ಸಮೀಪದಲ್ಲೂ ಒಂದು ಸ್ಯಾಟಲೈಟ್ ಟೌನ್‌ಶಿಪ್ ಪ್ರಸ್ತಾಪಗೊಂಡಿದೆ. ಜೊತೆಗೆ ನೈಸ್ ಕಾರಿಡಾರ್‌ನ ಉದ್ದಕ್ಕೂ ನೂತನ ಟೌನ್‌ಶಿಪ್‌ಗಳನ್ನು ಅಭಿವೃದ್ಧಿಗೊಳಿಸಲು, ವ್ಯಾಪಕವಾದ ಒಂದು ಭೂಪ್ರದೇಶವನ್ನ ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಎಲ್ಲಾ ಬೆಳವಣಿಗೆಗಳು ಮೂರು ಮಿಲಿಯನ್ ನಿವಾಸಿಗಳಿಗೆ ನೆಲೆ ಹೂರಬಹುದಾದ ತಾಣವಾಗಿವೆ. ಆದರೆ ಬೇಸರದ ಸಂಗತಿ ಏನೆಂದರೆ ಈ ಯೋಜನೆಗಳು ನಿಧಾನಗತಿಯಲ್ಲಿ ಸಾಗುತ್ತಿವೆ.
ಇನ್ನು ನೂತನ ವಿಮಾನ ನಿಲ್ದಾಣವು ಮೈಸೂರು ಎಕ್ಸ್‌ಪ್ರೆಸ್‌ವೇ, ನೈಸ್ ರಸ್ತೆ ಮತ್ತು STRRಗೆ ಸಂಪರ್ಕ ಹೊಂದಿರಬೇಕಾಗಿದೆ. ಸದ್ಯ ಈ ಯೋಜನೆಯ ಹೊರೆ BDA, BWSSB, BMRDA, BMLTA ಮತ್ತು ಇತರ ಸಂಸ್ಥೆಗಳ ಮೇಲಿದೆ. ಒಟ್ಟಿನಲ್ಲಿ ಬೆಂಗಳೂರಿನಲ್ಲಿ ಎರಡನೇ ಏರ್‌ಪೋರ್ಟ್ ನಿರ್ಮಾಣಕ್ಕೆ ಹಲವು ಕಸರತ್ತುಗಳು ನಡೆಯುತ್ತಿವೆ. ತುಮಕೂರು, ನೆಲಮಂಗಲ, ಡಾಬಸ್‌ಪೇಟೆಯಲ್ಲಿ, ಬಿಡದಿಯಲ್ಲಿ ಸ್ಥಳ ಹುಡುಕುತ್ತಿದ್ದು ಶೀಘ್ರದಲ್ಲೇ ಸ್ಥಳ ಅಂತಿಮಗೊಳ್ಳಲಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications