ಆದಾಯ ತೆರಿಗೆ ಪಾವತಿಸುವು ಬಹುತೇಕ ಎಲ್ಲಾ ದೇಶಗಳಲ್ಲೂ ಇರುವ ಕಡ್ಡಾಯ ನೀತಿಯಾಗಿದೆ. ಜನತೆ ಪಾವತಿಸುವ ತೆರಿಗೆಯೇ ಕೊನೆಗೆ ನಮಗೆ ಸೌಕರ್ಯಗಳ ಮೂಲಕ ಲಭಿಸುತ್ತದೆ. ಜನತೆ ಪಾವತಿಸುವ ತೆರಿಗೆಯಿಂದಲೇ ಸರ್ಕಾರವು ತಮ್ಮ ಬಜೆಟ್ ಸೇರಿದಂತೆ ಹಲವು ಯೋಜನೆಗಳನ್ನು ಕೂಡ ಪ್ರಕಟಿಸುತ್ತದೆ. ಹಾಗಾಗಿ ದೇಶದ ಪ್ರತಿಯೊಬ್ಬ ನಾಗರಿಕನು ಕೂಡ ಒಂದಿಲ್ಲೊಂದು ರೀತಿಯಲ್ಲಿ ತೆರಿಗೆ ಪಾವತಿಸುತ್ತಾನೆ. ಇನ್ನು ಆದಾಯ ತೆರಿಗೆ ವಿಚಾರಕ್ಕೆ ಬಂದರೆ ಸರ್ಕಾರ ನಿಗದಿಪಡಿಸಿದ ನೀತಿಯನ್ವಯ ಆದಾಯ ತೆರಿಗೆ ಇರುತ್ತದೆ. ಭಾರತದ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಆದಾಯ ತೆರಿಗೆ ನೀತಿ ಚಾಲ್ತಿಯಲ್ಲಿದೆ.
ಆದರೆ ಇಲ್ಲಿ ಬಹುತೇಕ ಹೇಳಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಸಿಕ್ಕಿಂ ಹೊರತುಪಡಿಸಿ ಎಲ್ಲಾ ರಾಜ್ಯಗಳಲ್ಲೂ ಆದಾಯ ತೆರಿಗೆ ನೀತಿ ಜಾರಿಯಲ್ಲಿದೆ. ಅಂದರೆ ಭಾರತೀಯ ಸಂವಿಧಾನದ ಆರ್ಟಿಕಲ್ 371(ಎಫ್) ರ ಪ್ರಕಾರ ಸಿಕ್ಕಿಂ ಜನತೆಗೆ ಆದಾಯ ತೆರಿಗೆ ಪಾವತಿಸುವುದರಿಂದ ವಿನಾಯಿತಿ ನೀಡಲಾಗಿದೆ. 1975 ರಲ್ಲಿ ಸಿಕ್ಕಿಂ ರಾಜ್ಯವು ಭಾರತದೊಂದಿಗೆ ವಿಲೀನಗೊಂಡಾಗ ಈ ವಿಶೇಷ ಸವಲತ್ತನ್ನು ಸ್ಥಾಪಿಸಲಾಗಿತ್ತು.

ಅಂದರೆ ಆ ಸಮಯದಲ್ಲಿ ಸಿಕ್ಕಿಂ ಸ್ವತಂತ್ರ ಭಾಗವಾಗಿ ಗುರುತಿಸಿಕೊಂಡಿದ್ದು, ರಾಜಾಡಳಿತವನ್ನು ಹೊಂದಿತ್ತು. ಬಳಿಕ 1975 ರಲ್ಲಿ ಭಾರತದ ಜೊತೆ ವಿಲೀನವಾಗುವ ಸಮಯದಲ್ಲಿ ಆ ರಾಜ್ಯಕ್ಕೆ ತೆರಿಗೆ ವಿನಾಯಿತಿ ನೀಡಿ, ಅಲ್ಲಿನ ನಾಗರಿಕರಿಗೆ ಭಾರತೀಯ ಸರ್ಕಾರದ ಬಗ್ಗೆ ಉತ್ತಮ ಅಭಿಪ್ರಾಯ ಮೂಡುವಂತೆ ಮಾಡಲಾಗಿತ್ತು. ಸದ್ಯ ಆ ವೇಳೆ ಆರಂಭವಾದ ಅಲ್ಲಿನ ತೆರಿಗೆ ವಿನಾಯಿತಿ ಪ್ರವೃತ್ತಿ ಸದ್ಯ ಈಗಲೂ ಮುಂದುವರೆಯುತ್ತಿದೆ. ಹಾಗಾಗಿ ಆ ರಾಜ್ಯದ ನಾಗರಿಕರಿಗೆ ಗಮನಾರ್ಹ ಆರ್ಥಿಕ ಪರಿಹಾರವನ್ನು ನೀಡಲಾಯಿತು. ಇಷ್ಟೆಲ್ಲಾ ಹೇಳಿದ ಮೇಲೆ ಆದಾಯ ತೆರಿಗೆ ವಿಚಾರದಲ್ಲಿ ವಿನಾಯಿತಿ ಪಡೆದಿರುವ ಸಿಕ್ಕಿಂ ರಾಜ್ಯದ ಬಗ್ಗೆ ನಾವು ತಿಳಿದುಕೊಳ್ಳಲೇ ಬೇಕಿದೆ.
ಏನಿದು ತೆರಿಗೆ ವಿನಾಯಿತಿ?
ಸಿಕ್ಕಿಂ ರಾಜ್ಯದ ತೆರಿಗೆ-ಮುಕ್ತ ಸ್ಥಿತಿಯ ಕಾನೂನು ಅಡಿಪಾಯವು ಆದಾಯ ತೆರಿಗೆ ಕಾಯಿದೆ 1961 ರ ಆರ್ಟಿಕಲ್ 371(ಎಫ್) ಮತ್ತು ಸೆಕ್ಷನ್ 10(26ಎಎಎ) ನಲ್ಲಿದೆ. ಈ ನಿಬಂಧನೆಗ ಪ್ರಕಾರ ಸಿಕ್ಕಿಂ ವಿಷಯಗಳ ನಿಯಂತ್ರಣ 1961 ರ ಅಡಿಯಲ್ಲಿ ಸಿಕ್ಕಿಂ ನಿವಾಸಿಗಳು ಎಂದು ಗುರುತಿಸಲ್ಪಟ್ಟ ವ್ಯಕ್ತಿಗಳು ಭದ್ರತೆಗಳು ಮತ್ತು ಲಾಭಾಂಶಗಳ ಮೇಲಿನ ಬಡ್ಡಿಯಂತಹ ಮೂಲಗಳನ್ನು ಒಳಗೊಂಡಂತೆ ಆದಾಯ ತೆರಿಗೆ ವಿನಾಯಿತಿ ಪಡೆದಿದ್ದಾರೆ.
ಇನ್ನು ನಮಗೆಲ್ಲಾ ತಿಳಿದಿರುವಂತೆ ಭಾರತದಾದ್ಯಂತದ ನಾಗರಿಕರು ಕೆಲವು ಮಿತಿಗಳಿಗಿಂತ ಹೆಚ್ಚಿನ ಆಸ್ತಿಯನ್ನು ಹೊಂದಿದ್ದರೆ ಆದಾಯ ತೆರಿಗೆಯನ್ನು ಪಾವತಿಸಬೇಕು, ಅದೂ ಅಲ್ಲದೆ ವಾರ್ಷಿಕ ರಿಟರ್ನ್ಸ್ ಸಲ್ಲಿಸಬೇಕು. ಆದರೆ ಸಿಕ್ಕಿಮೀಸ್ ನಿವಾಸಿಗಳು ಈ ಹಣಕಾಸಿನ ಬಾಧ್ಯತೆಗಳಿಂದ ಮುಕ್ತರಾಗಿದ್ದಾರೆ, ಅವರ ಆದಾಯವು ಎಷ್ಟು ಹೆಚ್ಚಿರಬಹುದು-ಕೋಟಿಗಳಷ್ಟಿದ್ದರೂ ಕೂಡ ಈ ವಿನಾಯಿತಿಯು ಆದಾಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಇದರ ಪರಿಣಾಮ ಸ್ಥಳೀಯ ನಿವಾಸಿಗಳು ಹೆಚ್ಚು ಮುಕ್ತವಾಗಿ ಉಳಿಸಿಕೊಳ್ಳಲು ಮತ್ತು ಹೂಡಿಕೆ ಮಾಡಲು ಅನುವು ಮಾಡಿಕೊಡುತ್ತದೆ.
ತೆರಿಗೆಯಲ್ಲಿ ಉಳಿಸಿದ ಹಣ ಹೂಡಿಕೆಗೆ!
ಇನ್ನು ಆದಾಯ ತೆರಿಗೆ ಪಾವತಿ ವಿಚಾರದಲ್ಲಿ ವಿನಾಯಿತಿ ಪಡೆದುಕೊಂಡಿರುವ ಸಿಕ್ಕಿಂ ಜನತೆ ಸದ್ಯ ತೆರಿಗೆ ಪಾವತಿಸುವುದರಿಂದ ಉಳಿಕೆ ಮಾಡಿದ ಹಣವನ್ನು ಹೂಡಿಕೆ ಮಾಡುತ್ತಿದ್ದು, ಇದು ರಾಜ್ಯದಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಕೂಡ ಹೊಸ ಕಾರ್ಯಕಲ್ಪ ಕಲ್ಪಿಸಿದೆ. ತೆರಿಗೆ-ಮುಕ್ತ ಸ್ಥಿತಿಯು ಹೂಡಿಕೆಗಳನ್ನು ಆಕರ್ಷಿಸುವ ಮೂಲಕ ಮತ್ತು ಪ್ರವಾಸೋದ್ಯಮ, ಕೃಷಿ ಮತ್ತು ಸಣ್ಣ ವ್ಯವಹಾರಗಳಂತಹ ಉದ್ಯಮಗಳಲ್ಲಿ ಬೆಳವಣಿಗೆಯನ್ನು ಉತ್ತೇಜಿಸುವ ಮೂಲಕ ಸಿಕ್ಕಿಂನ ಆರ್ಥಿಕತೆಯನ್ನು ಹೆಚ್ಚಿಸಿದೆ.
ಅಲ್ಲಿನ ಹೆಚ್ಚಿನ ಜನತೆ ಪ್ರವಾಸೋದ್ಯಮಕ್ಕೆ ಅತೀ ಮುಖ್ಯವಾಗಿರುವ ಹೊಟೇಲ್, ರೆಸಾರ್ಟ್ ಸೇರಿದಂತೆ ಹಲವಾರು ಆರ್ಥಿಕ ಚಟುವಟಿಕೆಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಅಲ್ಲದೆ ಈ ಆರ್ಥಿಕ ಅನುಕೂಲಗಳು ಸಿಕ್ಕಿಂಗೆ ಇತರ ಭಾರತೀಯ ರಾಜ್ಯಗಳಿಗಿಂತ ಸ್ಪರ್ಧಾತ್ಮಕ ಮೇಲುಗೈ ಒದಗಿಸುತ್ತದೆ. ಸಿಕ್ಕಿಂ ಭಾಗಶಃ ತೆರಿಗೆ ವಿನಾಯಿತಿಯನ್ನು ಹೊಂದಿದ್ದರೂ, ಭಾರತದಾದ್ಯಂತ ಇತರ ನಿರ್ದಿಷ್ಟ ತೆರಿಗೆ ಪ್ರಯೋಜನಗಳಿವೆ, ಉದಾಹರಣೆಗೆ ಕೃಷಿ ಆದಾಯ, ವಿದ್ಯಾರ್ಥಿವೇತನಗಳು ಮತ್ತು ಅನಿವಾಸಿ ಬಾಹ್ಯ ಖಾತೆಗಳ ಮೇಲೆ ಗಳಿಸಿದ ಬಡ್ಡಿಯ ಮೇಲಿನ ವಿನಾಯಿತಿಗಳನ್ನು ನೀಡಲಾಗಿದೆ. ಇಷ್ಟೆಲ್ಲಾ ಇದ್ದರೂ ಸಿಕ್ಕಿಂನಲ್ಲಿ ಇರುವ ಆದಾಯ ತೆರಿಗೆ ವಿನಾಯಿತಿಗೆ ಮಾತ್ರ ಯಾವುದೂ ಸಾಟಿಯಿಲ್ಲ ಎನ್ನಬಹುದು. ಆ ವಿಚಾರದಲ್ಲಿ ಸಿಕ್ಕಿಂ ಎಲ್ಲರ ಫೆವರೇಟ್ ಎಂದರೆ ತಪ್ಪಾಗಲಾರದು.


Click it and Unblock the Notifications