India Global Trade: ಅಮೆರಿಕದ ಸುಂಕದ ತಲೆಬಿಸಿ ಭಾರತಕ್ಕೆ ಹೆಚ್ಚು ತಟ್ಟಲ್ಲ!ಯಾಕೆ ಗೊತ್ತಾ..ಮೂಡೀಸ್ ವರದಿ ಹೇಳಿದ್ದೇನು?

ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸುಂಕ ವಿಧಿಸಿದಾಗ ಭಾರತ ಸೇರಿ ವಿಶ್ವದ ಬೇರೆ ಬೇರೆ ರಾಷ್ಟ್ರಗಳಿಗೂ ದೊಡ್ಡ ತಲೆನೋವು ಎದುರಾಗಿತ್ತು. ಆದರೆ ಈ ತೀವ್ರತೆಯಾದ ಯುದ್ಧದ ನಡುವೆಯೂ ಭಾರತಕ್ಕೆ ಒಂದು ವಿಶೇಷ ಅವಕಾಶ ಹಾಗೂ ದೊಡ್ಡ ಲಾಭವೂ ಇದೆ ಎಂದು, ಪ್ರಸಿದ್ಧ ಕ್ರೆಡಿಟ್ ರೇಟಿಂಗ್ ಸಂಸ್ಥೆಯಾದ ಮೂಡೀಸ್ ಅಭಿಪ್ರಾಯಪಟ್ಟಿದೆ.

ಅಮೆರಿಕದ ಸುಂಕದ ತಲೆಬಿಸಿ ಭಾರತಕ್ಕೆ ಹೆಚ್ಚು ತಟ್ಟಲ್ಲ..ಯಾಕೆ ಗೊತ್ತಾ?

ಹೌದು, ಮೂಡೀಸ್ ನೀಡಿರುವ ವರದಿಯ ಪ್ರಕಾರ, ಏಷ್ಯಾ-ಪೆಸಿಫಿಕ್ ಪ್ರದೇಶದ ಇತರೆ ರಾಷ್ಟ್ರಗಳಿಗಿಂತ ಭಾರತವು ಅಮೆರಿಕದ ಸುಂಕಗಳ ಅಡಚಣೆಯನ್ನು, ಸ್ವಲ್ಪ ಕಡಿಮೆ ಮಟ್ಟದಲ್ಲಿ ಅನುಭವಿಸುವ ದೇಶವಾಗಿದೆ. ಅಲ್ಲದೇ ಇದು ನಮ್ಮ ದೇಶಕ್ಕೆ ವಿದೇಶಿ ಹೂಡಿಕೆಗಳನ್ನು ಆಕರ್ಷಿಸಲು ಮತ್ತು ಜಾಗತಿಕ ಮಟ್ಟದಲ್ಲಿ ಉತ್ಪಾದನಾ ಶಕ್ತಿಯಾಗಿ ಬೆಳೆದುಬರಲು ಸಹಾಯ ಮಾಡಬಹುದು.

ಏಷ್ಯಾ ರಾಷ್ಟ್ರಗಳ ಮೇಲೆ ಅಮೆರಿಕದ ಸುಂಕಗಳ ಬಿರುಕು:

ಇನ್ನು ಅಮೆರಿಕವು ಏಪ್ರಿಲ್‌ನಲ್ಲಿ ವಿಧಿಸಿದ್ದ ಸುಂಕಗಳು ಎಷ್ಟು ದೊಡ್ಡ ವಿಚಾರವಾಗಿ ಹೊರ ಹೊಮ್ಮಿತ್ತು ಎಂಬುದು ಎಲ್ಲರಿಗೂ ತಿಳಿದೇ ಇದೆ. ಕೆಲವು ಮಹತ್ವಪೂರ್ಣ ಉತ್ಪನ್ನಗಳ ಮೇಲೆ ವಿಧಿಸಿದ್ದ ಸುಂಕಗಳು, ವಿಯೆಟ್ನಾಂ, ಕಾಂಬೋಡಿಯಾ ಮತ್ತು ಇತರ ರಫ್ತು ಆಧಾರಿತ ರಾಷ್ಟ್ರಗಳಿಗೆ ದೊಡ್ಡ ತಲೆನೋವಾಗಿತ್ತು. ಅಲ್ಲದೇ ಆರ್ಥಿಕತೆ ಮೇಲೂ ತೀವ್ರ ಹೊಡೆತ ಬಿದ್ದಿದೆ. ಈ ದೇಶಗಳು ಹಿಂದಿನ ವರ್ಷಗಳಲ್ಲಿ ಚೀನಾದ ಪರ್ಯಾಯ ಪೂರೈಕೆ ತಾಣಗಳಾಗಿ ಬೆಳೆದು ಬಂದಿದ್ದರೂ, ಈಗ ಸುಂಕದ ಕಾರಣದಿಂದಾಗಿ ತಮ್ಮ ಹಳೆಯ ವೆಚ್ಚದ ಲಾಭವನ್ನು ಕಳೆದುಕೊಳ್ಳುತ್ತಿರುವ ಸ್ಥಿತಿಯಲ್ಲಿವೆ.

ಆದರೆ ಇತ್ತ, ಇದೇ ಸಂದರ್ಭದಲ್ಲಿ ಭಾರತವು ಸುಂಕದ ಅಡಚಣೆಗಳಿಲ್ಲದೆ ಅಥವಾ ಹೆಚ್ಚು ತೊಂದರೆಯಿಲ್ಲದೆ ಮುಂದುವರಿಯುವ ಸಾಧ್ಯತೆಯಿದೆ ಎಂಬುದನ್ನು ಮೂಡೀಸ್ ತನ್ನ ವರದಿಯಲ್ಲಿ ಸ್ಪಷ್ಟಪಡಿಸಿದೆ.

ಭಾರತಕ್ಕೆ ಹೂಡಿಕೆದಾರರಿಂದ ಆಸಕ್ತಿ ಏಕೆ?

ಭಾರತವು ಹೆಚ್ಚು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳ ಪೈಕಿ ಪ್ರಮುಖವಾಗಿದೆ. ಕಾರ್ಮಿಕ ತೀವ್ರತೆ ಇರುವ ಉತ್ಪಾದನಾ ಕ್ಷೇತ್ರಗಳಲ್ಲಿ ಭಾರತವು ಇನ್ನೂ ತಗ್ಗಿದ ವೆಚ್ಚದಲ್ಲಿ ವ್ಯಾಪಾರ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೇ, ಚೀನಾ ಮೇಲೆ ಹೆಚ್ಚು ಅವಲಂಬಿತವಾಗಿದ್ದ ಜಾಗತಿಕ ಸರಪಳಿಗಳು ಈಗ ಭಾರತವತ್ತಿ ತಿರುಗುವ ಪ್ರಯತ್ನದಲ್ಲಿವೆ.

ಮೂಡೀಸ್ ಪ್ರಕಾರ, "ಹೆಚ್ಚುವರಿ ಸುಂಕದ ನಡುವೆಯೂ ಭಾರತವು ಹೂಡಿಕೆ ಹಾಗೂ ವ್ಯಾಪಾರ ಹರಿವಿನ ಪ್ರಮುಖ ಲಾಭಾಂಶಗಳನ್ನು ಪಡೆಯಬಲ್ಲದು. ಭಾರತ ಎಪಿಎಸಿಯಲ್ಲಿ ಇತರ ದೇಶಗಳಿಗಿಂತ ಕಡಿಮೆ ಸುಂಕದ ಅಡಚಣೆಗೆ ಒಳಪಡಬಹುದು" ಎಂಬ ಅಂಶ ಬಹುಮುಖ್ಯವಾಗಿದೆ.

ಮುಕ್ತ ವ್ಯಾಪಾರದ ಒಪ್ಪಂದಗಳು ಭಾರತಕ್ಕೆ ಶಕ್ತಿ:

ಭಾರತವು ಇತ್ತೀಚೆಗೆ ಬ್ರಿಟನ್‌ನೊಂದಿಗೆ ಮುಕ್ತ ವ್ಯಾಪಾರದ ಒಪ್ಪಂದದ ಚರ್ಚೆಗಳನ್ನು ಮುಕ್ತಾಯದ ಹಂತಕ್ಕೆ ತಂದುಕೊಂಡಿದ್ದು, ಯುರೋಪಿಯನ್ ಒಕ್ಕೂಟದೊಂದಿಗೆ ಸಹ ಚರ್ಚೆ ನಡೆಯುತ್ತಿದೆ. ಈ ಒಪ್ಪಂದಗಳು ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಚೀನಾದ ಪರ್ಯಾಯ ಉತ್ಪಾದನಾ ತಾಣವಾಗಿ ಗುರುತಿಸಿಕೊಳ್ಳಲು ನೆರವಾಗುತ್ತವೆ.

ಭಾರತ-ಅಮೆರಿಕ ವ್ಯಾಪಾರ ಸಂವಾದ:

ಭಾರತ ಮತ್ತು ಅಮೆರಿಕ ಮಧ್ಯೆ ಪ್ರಸ್ತುತ ಚರ್ಚೆಯಲ್ಲಿರುವ ಸಣ್ಣ ವ್ಯಾಪಾರ ಒಪ್ಪಂದವು ಮುಂದಿನ ದಿನಗಳಲ್ಲಿ ಬಹುಮುಖ್ಯವಾಗಿ ಪರಿಣಮಿಸಲಿದೆ. ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಉತ್ಪನ್ನಗಳ ಮೇಲಿನ 26% ಹೆಚ್ಚುವರಿ ಸುಂಕದ ಅಮಾನತು ಜುಲೈ ೯ರಂದು ಕೊನೆಗೊಳ್ಳಲಿದೆ. ಅದಕ್ಕಿಂತ ಮೊದಲು, ಎರಡೂ ದೇಶಗಳು ನವೀನ ಒಪ್ಪಂದಕ್ಕೆ ಬರಲು ಪ್ರಯತ್ನಿಸುತ್ತಿವೆ.

ಭಾರತ ತನ್ನ ಕಾರ್ಮಿಕ ತೀವ್ರ ಉತ್ಪನ್ನಗಳಿಗೆ ಹೆಚ್ಚಿನ ಪ್ರವೇಶವನ್ನು ಅಮೆರಿಕದ ಮಾರುಕಟ್ಟೆಯಲ್ಲಿ ಬಯಸುತ್ತದೆ. ಅದೇ ವೇಳೆ ಅಮೆರಿಕವು ಭಾರತದಿಂದ ತಾವು ಪಡೆಯುವ ಕೃಷಿ ಉತ್ಪನ್ನಗಳ ಮೇಲೆ ರಿಯಾಯಿತಿಯನ್ನು ಇಚ್ಛಿಸುತ್ತದೆ. ಈ ಸಂವಾದಗಳ ಫಲಿತಾಂಶ ಭಾರತಕ್ಕೆ ಹೊಸ ತಾಣವನ್ನು ತಂದುಕೊಡಬಹುದಾಗಿದೆ.

ಮೂಡೀಸ್ ವರದಿಯಲ್ಲಿ ಭಾರತಕ್ಕೆ ಶ್ಲಾಘನೆಯ ಜೊತೆಗೆ ಎಚ್ಚರಿಕೆಯೂ ನೀಡಲಾಗಿದೆ. ಅಮೆರಿಕವು ತನ್ನ ಉತ್ಪಾದನಾ ಘಟಕಗಳನ್ನು ಮತ್ತೆ ತನ್ನ ದೇಶದಲ್ಲಿ ಸ್ಥಾಪಿಸಲು ನೀಡುತ್ತಿರುವ ಒತ್ತಡ, ಅಂದರೆ "ಮರುಸ್ಥಾಪನೆ ನೀತಿ", ಭಾರತದ ಲಾಭಕ್ಕೆ ಅಡ್ಡಿಯಾಗಬಹುದು.

ಮೂಡೀಸ್ ವಿಶ್ಲೇಷಣೆಯ ಪ್ರಕಾರ, 2025ರ ಎರಡನೇಾರ್ಧದಲ್ಲಿ ಜಾಗತಿಕ ಬಡ್ಡಿದರ ಪರಿಸ್ಥಿತಿ ತಗ್ಗುಮುಖವಾಗಬಹುದು. ಇದು ಹೂಡಿಕೆದಾರರಿಗೆ ಹೆಚ್ಚು ಅನುಕೂಲಕರ ವಾತಾವರಣವನ್ನು ತಂದುಕೊಡಬಹುದು. ಅದೃಷ್ಟವಶಾತ್, ಭಾರತ ಈ ಕಾಲಘಟ್ಟದಲ್ಲಿ ತನ್ನ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ, ದೇಶವನ್ನು ಜಾಗತಿಕ ಉತ್ಪಾದನಾ ತಾಣವಾಗಿ ಸ್ಥಾಪಿಸಲು ಸಾಧ್ಯ.

ಚೀನಾದ ಪರ್ಯಾಯವಾಗಿ ಭಾರತವು ಹೆಜ್ಜೆ ಹಾಕುತ್ತಿದ್ದು, ಈಗಾಗಲೇ ವೈದಿಶಿಕ ಹೂಡಿಕೆಗೆ ಬಾಗಿಲುತೆರೆದಿರುವ ಈ ಸಮಯದಲ್ಲಿ ಸುಂಕ ನಿಬಂಧನೆಗಳು ಕಡಿಮೆ ಇರುವ ದೇಶ ಎಂಬ ಅಂಶ ನಮ್ಮ ಪರಿಸ್ಥಿತಿಗೆ ಮತ್ತಷ್ಟು ಪೂರಕವಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+