ಭಾರತದಲ್ಲಿ ಎಷ್ಟು ಜನ ಕರೋಡ್‌ಪತಿಗಳು? ಅಚ್ಚರಿಯ ಅಂಕಿಅಂಶ

ಬೆಂಗಳೂರು, ಮುಂಬೈ, ದೆಹಲಿಯಂತಹ ನಗರದಲ್ಲಿಐಷಾರಾಮಿ ಮನೆಗಳು, ದೊಡ್ಡ - ದೊಡ್ಡ ಕಾರು , ಲಕ್ಸುರಿ ಜೀವನ ನಡೆಸುವ ಸಿರಿವಂತ ಜನರನ್ನು ನೋಡಿರಬಹುದು. ಉದ್ಯಮಿಗಳಿಂದ ಹಿಡಿದು, ವೈಟ್ ಕಾಲರ್ ಜಾಬ್ ಮಾಡೋವರೆಗೆ ದೇಶದಲ್ಲಿ ಹೇರಳವಾಗಿದ್ದಾರೆ. ಇಂತಹ ಜನರನ್ನು ನೋಡಿದಾಗ, ದೇಶದ ಸುಮಾರು 1.4 ಶತಕೋಟಿ ಜನಸಂಖ್ಯೆಯಲ್ಲಿ, ಕೆಲವು ಮಿಲಿಯನ್ ಗಳಿಗಿಂತಲೂ ಹೆಚ್ಚು ಜನ ಪ್ರತಿ ವರ್ಷ ಒಂದು ಕೋಟಿ ರೂಪಾಯಿಗಳಿಗಿಂತ ಹೆಚ್ಚು ಸಂಪಾದಿಸುತ್ತಿದ್ದಾರೆ ಎಂದು ಎಂದು ಅಂದಾಜಿಸಬಹುದಾಗಿದೆ. ಆದರೆ, ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಆದಾಯ ತೆರಿಗೆ ರಿಟರ್ನ್ ಅಂಕಿಅಂಶಗಳು ಬೇರೆಯದೇ ಕಥೆಯನ್ನು ಹೇಳುತ್ತವೆ.

ಎಷ್ಟು ಜನಕ್ಕಿದೆ ಭಾರತದಲ್ಲಿ 1 ಕೋಟಿ ಆದಾಯ?

ಆದಾಯ ತೆರಿಗೆ ಇಲಾಖೆಯ ಇತ್ತೀಚಿನ ವರದಿಗಳ ಪ್ರಕಾರ, 2025ರ ಮಾರ್ಚ್ 31ರವರೆಗೆ ಒಂದು ಕೋಟಿ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯವನ್ನು ಹೊಂದಿರುವ 3.24 ಲಕ್ಷ ಜನರು ಮಾತ್ರ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದ್ದಾರೆ. ಅಂದರೆ, ಇಷ್ಟು ಮಂದಿ ಮಾತ್ರ ತಮ್ಮ ವಾರ್ಷಿಕ ಆದಾಯ ಕೋಟಿ ರೂಪಾಯಿ ಮೀರಿದೆ ಎಂದು ಘೋಷಿಸಿಕೊಂಡಿದ್ದಾರೆ. ಅಂದರೆ ಕೇವಲ 3.24 ಲಕ್ಷ ಜನ ಮಾತ್ರ ಕೋಟಿ ರೂ. ಆದಾಯವನ್ನು ಮೀರಿದವರಂತೆ.!

ಇನ್ನು ಕಂಪನಿಗಳು, ಸಂಸ್ಥೆಗಳು, ಟ್ರಸ್ಟ್‌ಗಳು, ಹಿಂದೂ ಅವಿಭಜಿತ ಕುಟುಂಬಗಳು(HUFಗಳು), ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳನ್ನು ಸೇರಿಸಿದರೆ, ಈ ಸಂಖ್ಯೆ 4.68 ಲಕ್ಷ ತಲುಪುತ್ತದೆ. 2025 ರ ಮಾರ್ಚ್ 31ರ ಹೊತ್ತಿಗೆ ಒಟ್ಟು 9.19 ಕೋಟಿ ಐಟಿಆರ್‌ಗಳು ಸಲ್ಲಿಕೆಯಾಗಿದ್ದು ಅದರಲ್ಲಿ 8.64 ಕೋಟಿ ರಿಟರ್ನ್‌ಗಳನ್ನು ಇ-ಪರಿಶೀಲಿಸಲಾಗಿದೆ.

ಒಂದು ಕೋಟಿ ರೂಪಾಯಿಗಿಂತ ಹೆಚ್ಚಿನ ಆದಾಯವನ್ನು ಘೋಷಿಸಿದ 3.24 ಲಕ್ಷ ಜನರ ಪೈಕಿ, ಬಹುಪಾಲು ಮಂದಿ, ಅಂದರೆ 2.97 ಲಕ್ಷ ಜನರು, 1 ಕೋಟಿಯಿಂದ 5 ಕೋಟಿ ರೂಪಾಯಿಗಳ ನಡುವಿನ ಆದಾಯ ವ್ಯಾಪ್ತಿಯಲ್ಲಿದ್ದಾರೆ. ಆದಾಯದ ಪ್ರಮಾಣ ಹೆಚ್ಚಾದಂತೆ, ತೆರಿಗೆ ರಿಟರ್ನ್ ಸಲ್ಲಿಸಿದವರ ಸಂಖ್ಯೆ ಕಡಿಮೆಯಾಗುತ್ತಾ ಹೋಗುತ್ತದೆ. 5 ಕೋಟಿಯಿಂದ 10 ಕೋಟಿ ರೂಪಾಯಿಗಳ ನಡುವಿನ ಆದಾಯವನ್ನು ಹೊಂದಿರುವವರ ಸಂಖ್ಯೆ 16,797 ಆಗಿದ್ದರೆ, 10 ಕೋಟಿ ರೂಪಾಯಿಗಿಂತ ಹೆಚ್ಚಿನ ಆದಾಯವನ್ನು ಹೊಂದಿರುವವರ ಸಂಖ್ಯೆ 10,184 ಎಂದು ದಾಖಲಾಗಿದೆ.

ಕಂಪನಿಗಳು, ಸಂಸ್ಥೆಗಳು, ಟ್ರಸ್ಟ್‌ಗಳು, HUFಗಳು, ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ಸೇರಿದಂತೆ, ವಾರ್ಷಿಕವಾಗಿ 1 ಕೋಟಿ ರೂ. ಗಿಂತ ಹೆಚ್ಚು ಆದಾಯ ಗಳಿಸುವವರ ಒಟ್ಟು ಸಂಖ್ಯೆ 4.68 ಲಕ್ಷಕ್ಕೆ ಏರುತ್ತದೆ. ಈ ಪೈಕಿ, 3.89 ಲಕ್ಷ ಜನರು 1 ರಿಂದ 5 ಕೋಟಿ ರೂ. ಆದಾಯದ ವ್ಯಾಪ್ತಿಯಲ್ಲಿದ್ದಾರೆ. 36,000 ಕ್ಕೂ ಹೆಚ್ಚು ಜನರು 5 ರಿಂದ 10 ಕೋಟಿ ರೂ.ಗಳ ನಡುವೆ ಆದಾಯ ಗಳಿಸಿದರೆ, 43,000 ಕ್ಕೂ ಹೆಚ್ಚು ರಿಟರ್ನ್ ಫೈಲ್ ಮಾಡುವವರು 10 ಕೋಟಿ ರೂ. ಗಳಿಗಿಂತ ಹೆಚ್ಚು ಆದಾಯವನ್ನು ಹೊಂದಿದ್ದಾರೆ.

ರಾಜ್ಯವಾರು ನೋಡಿದಾಗ, ಫೆ. 28 ರವರೆಗೆ ಮಹಾರಾಷ್ಟ್ರದಿಂದ ತೆರಿಗೆ ಸಲ್ಲಿಸುವವರ ಸಂಖ್ಯೆ 1.38 ಕೋಟಿಯಷ್ಟಿತ್ತು. ಗುಜರಾತ್‌ಗೆ ಅನುಗುಣವಾದ ಅಂಕಿ ಅಂಶವು 87.90 ಲಕ್ಷ ಮತ್ತು ಉತ್ತರ ಪ್ರದೇಶಕ್ಕೆ ಇದು 90.68 ಲಕ್ಷವಾಗಿತ್ತು. ದೆಹಲಿಯಲ್ಲಿ ಇದೇ ಸಂಖ್ಯೆ 44.45 ಲಕ್ಷ ಮತ್ತು ಆಂಧ್ರಪ್ರದೇಶದಲ್ಲಿ 30.76 ಲಕ್ಷ ಇದ್ದರೆ, ಪಂಜಾಬ್‌ನಲ್ಲಿ 43.79 ಲಕ್ಷ ತೆರಿಗೆದಾರರು ಇದ್ದಾರೆ. ಇನ್ನು ಕಳೆದ ವರ್ಷಕ್ಕೆ ಹೋಲಿಸಿದರೆ ಆದಾಯ ತೆರಿಗೆ ನಮೂನೆಗಳಲ್ಲಿ ತೆರಿಗೆ ಸಲ್ಲಿಕೆಯಲ್ಲಿ ಗಣನೀಯ ಬೆಳವಣಿಗೆ ಕಂಡುಬಂದಿದೆ ಎಂದು ವರದಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+