ಮಂಗಳೂರಿನ (Mangaluru) ಆಚರಣೆ, ಕರ್ನಾಟಕದ ಸಂಸ್ಕೃತಿಯನ್ನು ಬಿಂಬಿಸುವ "ಕಾಂತಾರ"ದ ಅಬ್ಬರ ಇನ್ನೂ ನಿಲ್ಲುತ್ತಿಲ್ಲ. ರಿಷಬ್ ಶೆಟ್ಟಿ (Rishab Shetty) ನಿರ್ದೇಶಿಸಿ, ಅಭಿನಯಿಸಿರುವ "ಕಾಂತಾರ:ಚಾಪ್ಟರ್ 1" (Kantara: Chapter 1) ಚಿತ್ರ ಬಿಡುಗಡೆಯಾಗಿ ಒಂದು ತಿಂಗಳು ಕಳೆದಿದೆ. ಸಿನಿಮಾ ರಿಲೀಸ್ ಆದಾಗಿನಿಂದ ಮೆಚ್ಚುಗೆಯ ಸುರಿಮಳೆಯನ್ನೇ ಕೇಳುತ್ತಿರುವ ಚಿತ್ರತಂಡ, ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲೂ (Box Office Collection) ಉಡೀಸ್ ಮಾಡಿದೆ. ಇನ್ನು ಈ ಸಿನಿಮಾದ ಜೊತೆಗೆ 'ಬಾಹುಬಲಿ: ದಿ ಎಪಿಕ್', 'ತಮ್ಮಾ', 'ಏಕ್ ದಿವಾನೆ ಕಿ ದಿವಾನಿಯತ್', ಮತ್ತು 'ದಿ ತಾಜ್ ಸ್ಟೋರಿ'ಯಂತಹ ದೊಡ್ಡ ಚಿತ್ರಗಳು ರಿಲೀಸ್ ಆದರೂ ಕಾಂತಾರ ನೋಡಲು ಸಿನಿಪ್ರೇಕ್ಷಕರು ಥಿಯೇಟರ್‌ನತ್ತ ಬರುತ್ತಲೇ ಇದ್ದಾರೆ.

ಅಕ್ಟೋಬರ್ 31 ಅಮೆಜಾನ್ ಪ್ರೈಮ್‌ನ ಒಟಿಟಿಯಲ್ಲೂ ಕಾಂತಾರ: ಚಾಪ್ಟರ್ 1 ಬಿಡುಗಡೆಯಾಗಿದ್ದು, ಚಿತ್ರಮಂದಿರಗಳಲ್ಲಿ ಇನ್ನೂ ತನ್ನ ಅಬ್ಬರವನ್ನು ಮುಂದುವರೆಸಿದೆ. ಇದು ಡಿಜಿಟಲ್ ಯುಗ, ಎಲ್ಲರೂ, ಎಲ್ಲವನ್ನೂ ಒಟಿಟಿಯಲ್ಲೇ ನೋಡಲು ಬಯಸುತ್ತಾರೆ. ಅಂತಹದರಲ್ಲಿ ಕಾಂತಾರ ಸಿನಿಮಾವೊಂದು ಒಟಿಟಿಗೆ ಬಂದರೂ, ಥಿಯೇಟರ್‌ನಲ್ಲೂ ಕಲೆಕ್ಷನ್ ಮಾಡುತ್ತಿದೆ ಎಂದರೆ ಆಶ್ಚರ್ಯದ ಸಂಗತಿ.
ಕೆಲವು ದಿನಗಳ ಹಿಂದಷ್ಟೇ, ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರ ವಿಕ್ಕಿ ಕೌಶಲ್ ಅವರ 'ಛಾವಾ' ಚಿತ್ರವನ್ನು ದೇಶೀಯ ಗಲ್ಲಾ ಪೆಟ್ಟಿಗೆಯಲ್ಲಿ ಮಾತ್ರವಲ್ಲದೆ ಜಾಗತಿಕ ಗಳಿಕೆಯಲ್ಲೂ ಹಿಂದಿಕ್ಕಿ, ದಾಖಲೆ ಬರೆದಿತ್ತು.
ಅತೀ ಹೆಚ್ಚು ಗಳಿಕೆ ಮಾಡಿದ ಸಿನಿಮಾ!
ಬಿಡುಗಡೆಯಾದ 33 ದಿನಗಳಲ್ಲಿ ಕಾಂತಾರ: ಚಾಪ್ಟರ್ 1 ಸಿನಿಮಾ ವಿಶ್ವಾದ್ಯಂತ ₹832.42 ಕೋಟಿ ಗಳಿಸಿದ್ದು, ಇದರಲ್ಲಿ ವಿದೇಶಿ ಮಾರುಕಟ್ಟೆಗಳಿಂದ ₹110.50 ಕೋಟಿ ಸೇರಿದೆ. ದಾಖಲೆ ಮಟ್ಟದಲ್ಲಿ ಕಲೆಕ್ಷನ್ ಮಾಡುವ ಮೂಲಕ ಕಾಂತಾರ:ಚಾಪ್ಟರ್ 1 ಸಿನಿಮಾ 2025 ರಲ್ಲಿ ಜಾಗತಿಕವಾಗಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರವಾಗಿ ದಾಖಲೆ ನಿರ್ಮಿಸಿದೆ.
ಕೆಜಿಎಫ್ ನಂತರ ಕಾಂತಾರ:
ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್: ಚಾಪ್ಟರ್ 2' ನಂತರ, ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
5ನೇ ವಾರದಲಿ "ಕಾಂತಾರ"ದ ಅಬ್ಬರ!
ದೇಶೀಯ ಮಾರುಕಟ್ಟೆಯಲ್ಲಿ ಕಾಂತಾರ ಚಿತ್ರವು ಐದನೇ ವಾರದಲ್ಲಿಯೂ ತನ್ನ ಆರ್ಭಟವನ್ನು ಮುಂದುವರೆಸಿದೆ. ಶುಕ್ರವಾರ ₹1.85 ಕೋಟಿ, ಶನಿವಾರ ₹3.6 ಕೋಟಿ ಮತ್ತು ಭಾನುವಾರ ₹3.65 ಕೋಟಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಇನ್ನು ಐದನೇ ಸೋಮವಾರ ಸುಮಾರು ₹1 ಕೋಟಿ, ಮಂಗಳವಾರ ಮತ್ತು ಬುಧವಾರ ತಲಾ ₹1.15 ಕೋಟಿ ಗಳಿಸಿದೆ ಎಂದು ಹೇಳಲಾಗಿದೆ.
ಇನ್ನು ಕಾಂತಾರ ರಿಲೀಸ್ ಆದ ನಾಲ್ಕನೇ ವಾರ ₹37.6 ಕೋಟಿ ಗಳಿಕೆಯೊಂದಿಗೆ ಮುಕ್ತಾಯಗೊಂಡಿತು. ಇದು ಹಿಂದಿನ ವಾರಕ್ಕಿಂತ ಶೇಕಡಾ 52 ರಷ್ಟು ಕುಸಿತ ಕಂಡರೂ, ನಾಲ್ಕನೇ ವಾರಾಂತ್ಯದಲ್ಲಿ ಚಿತ್ರವೊಂದು ಇಷ್ಟು ಮಟ್ಟದಲ್ಲಿ ಗಳಿಸಿದ್ದು ವಿಶೇಷ ಅಂತಾನೇ ಹೇಳಬಹುದು. ಐದನೇ ವಾರಾಂತ್ಯದಲ್ಲಿ 'ಕಾಂತಾರ: ಚಾಪ್ಟರ್ 1' ಹೆಚ್ಚುವರಿಯಾಗಿ ₹7 ಕೋಟಿ ಗಳಿಸಿದೆ. ನಂತರ ನಿಧಾನಗತಿಯ ಕುಸಿತ ಕಂಡಿದ್ದು, 32 ನೇ ದಿನ (ಸೋಮವಾರ) ₹1 ಕೋಟಿ, ಮಂಗಳವಾರ ₹1.3 ಕೋಟಿ, 35 ನೇ ದಿನ (ಬುಧವಾರ) ₹1.25 ಕೋಟಿ, ಮತ್ತು ಕೊನೆಯದಾಗಿ ಗುರುವಾರ ₹0.65 ಕೋಟಿ ಗಳಿಸಿದೆ. ಇನ್ನು ಈಗಾಗಲೇ ಓಟಿಟಿಯಲ್ಲೂ ಕಾಂತಾರ: ಚಾಪ್ಟರ್ 1 ಸಿನಿಮಾ ರಿಲೀಸ್ ಆಗಿದ್ದು, ಇದೂ ಒಂದು ಕುಸಿತಕ್ಕೆ ಕಾರಣವಾಗಿರಬಹುದು ಎನ್ನಲಾಗಿದೆ.
Sacnilk ವರದಿಯ ಪ್ರಕಾರ, ಕಾಂತಾರ: ಚಾಪ್ಟರ್ 1 ರ ದೇಶೀಯ ಮಾರುಕಟ್ಟೆಯಲ್ಲಿ ಒಟ್ಟು ಗಳಿಕೆ ₹615 ಕೋಟಿಗೆ ತಲುಪಿದೆ. ಈ ಮೂಲಕ 'ಛಾವಾ' (₹601 ಕೋಟಿ) ಚಿತ್ರವನ್ನು ಕಲೆಕ್ಷನ್‌ನಲ್ಲಿ ಬೀಟ್ ಮಾಡಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications