ಇತ್ತೀಚೆಗೆ ನಟಿ ರನ್ಯಾ ರಾವ್ 14.2 ಕೆಜಿ ಚಿನ್ನ ಕಳ್ಳಸಾಗಣೆ ಮಾಡಿದ್ದ ಪ್ರಕರಣದಲ್ಲಿ, ಬಂಧನವಾಗಿದ್ದು ಎಲ್ಲರಿಗೂ ತಿಳಿದೆ ಇದೆ. ಹಾಗೇನೆ ಈ ಚಿನ್ನ ಸಾಗಣೆ ದುಬೈ ಮತ್ತು ಭಾರತದ ನಡುವೆ ನಡೆದಿದೆ ಎಂತಲೂ ಮಾತುಗಳಿವೆ. ಅದರ ಬಗ್ಗೆಯೂ ಈಗಾಗಲೇ ಕಾನೂನು ತನಿಖೆ ನಡೆಯುತ್ತಿದೆ. ಆದರೆ ಈ ಒಂದು ಘಟನೆಯಿಂದ ಎಲ್ಲರಿಗೂ ಒಂದು ಕುತೂಹಲ ಮೂಡಿರುತ್ತದೆ. ಅದೇನೆಂದ್ರೆ ದುಬೈನಿಂದ ಎಷ್ಟು ಚಿನ್ನ ತರಬಹುದು. ಅದಕ್ಕೆ ಏನೆಲ್ಲಾ ನಿಯಮಗಳಿವೆ ಎಂದು.. ಇದರ ಬಗ್ಗೆ ಗುಡ್‌ರಿಟರ್ನ್ಸ್ ಕನ್ನಡದಲ್ಲಿದೆ ಸಂಪೂರ್ಣ ಮಾಹಿತಿ.

ಹೌದು, ಭಾರತಕ್ಕೆ ಹೋಲಿಸಿದರೆ ದುಬೈನಲ್ಲಿ ಚಿನ್ನದ ಬೆಲೆ ತುಂಬಾ ಕಡಿಮೆ. ಅಲ್ಲಿ ಚಿನ್ನ ಖರೀದಿ ಮಾಡಿ ಭಾರತಕ್ಕೆ ತರುವುದು ಕೆಲವರ ಆಸಕ್ತಿಯೂ ಆಗಿರುತ್ತದೆ. ಆದರೆ ಭಾರತ ಸರ್ಕಾರ ಚಿನ್ನದ ಆಮದುಗೆ ನಿರ್ದಿಷ್ಟ ಮಿತಿಗಳನ್ನು ವಿಧಿಸಿದೆ, ಹಾಗೂ ಕಾನೂನು ಬಾಹಿರವಾಗಿ ಚಿನ್ನ ತರಲು ಕಠಿಣ ಶಿಕ್ಷೆಗಳಿವೆ. ದುಬೈನಿಂದ ಭಾರತಕ್ಕೆ ಚಿನ್ನ ತರಲು ಇರುವ ನಿಯಮಗಳು ಮತ್ತು ಅದರ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ.
1. ದುಬೈನಿಂದ ಚಿನ್ನ ತರಲು ಇರುವ ನಿಯಮಗಳು:
ಪುರುಷ ಪ್ರಯಾಣಿಕರಿಗೆ:
ಪುರುಷ ಪ್ರಯಾಣಿಕರು ದುಬೈನಿಂದ ಚಿನ್ನ ತರಬೇಕೆಂದರೆ, ಗರಿಷ್ಠ 20 ಗ್ರಾಂ ಅಥವಾ ₹50,000 ಮೌಲ್ಯದ ಚಿನ್ನ ಸುಂಕ ರಹಿತವಾಗಿ ತರಬಹುದು. ಈ ಮಿತಿಯನ್ನು ಮೀರಿದರೆ ಕಸ್ಟಮ್ಸ್ ಸುಂಕವನ್ನು ಪಾವತಿಸಬೇಕು.
ಮಹಿಳಾ ಪ್ರಯಾಣಿಕರಿಗೆ:
ಮಹಿಳೆಯರು ದುಬೈನಿಂದ ಚಿನ್ನ ತರಬೇಕೆಂದರೆ, ಗರಿಷ್ಠ 40 ಗ್ರಾಂ ಅಥವಾ ₹1 ಲಕ್ಷ ಮೌಲ್ಯದ ಚಿನ್ನ ಸುಂಕ ರಹಿತವಾಗಿ ತರಲು ಅವಕಾಶವಿದೆ.
15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ:
15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಚಿನ್ನ ತರಬೇಕೆಂದರೆ, ಗರಿಷ್ಠ 40 ಗ್ರಾಂ ಉಡುಗೊರೆಯಾಗಿ ಅಥವಾ ವೈಯಕ್ತಿಕ ಬಳಕೆಗಾಗಿ ತರಬಹುದು. ಆದರೆ ಅವುಗಳಿಗೆ ಸರಿಯಾದ ದಾಖಲೆಗಳಿರಬೇಕು.
6 ತಿಂಗಳಿಗಿಂತ ಹೆಚ್ಚು ಕಾಲ ವಿದೇಶದಲ್ಲಿದ್ದವರಿಗೆ:
ಆರು ತಿಂಗಳಿಗಿಂತ ಹೆಚ್ಚು ಕಾಲ ದುಬೈನಲ್ಲಿದ್ದ ಪ್ರಯಾಣಿಕರಿಗೆ ವಿಶೇಷ ನಿಯಮವಿದೆ. ಅಂದರೆ ಅವರು 1 ಕೆಜಿ ಚಿನ್ನವನ್ನು ತರಲು ಅನುಮತಿಸಲಾಗುತ್ತದೆ. ಆದರೆ ಅವರು 12.5% ಕಸ್ಟಮ್ಸ್ ಸುಂಕ ಜೊತೆಗೆ, 1.25% ಸಾಮಾಜಿಕ ಕಲ್ಯಾಣ ಸುಂಕ ಪಾವತಿಸಬೇಕು.
2. ಭಾರತದಲ್ಲಿ ಕಸ್ಟಮ್ಸ್ ಸುಂಕ ಹೇಗೆ ಲೆಕ್ಕ ಹಾಕಲಾಗುತ್ತದೆ?
ಬೇರೆ ದೇಶದಿಂದ ಆಮದು ಮಾಡಿಕೊಳ್ಳುವ 24 ಕ್ಯಾರಟ್ ಚಿನ್ನದ ಬೆಲೆಯನ್ನು ಆಧರಿಸಿ, ಸುಂಕದ ಲೆಕ್ಕ ಹಾಕಲಾಗುತ್ತದೆ. ಕಸ್ಟಮ್ಸ್ ಅಧಿಕಾರಿಗಳು ಸರಿಯಾದ ಇನ್‌ವಾಯ್ಸ್, ಶುದ್ಧತೆ ಪ್ರಮಾಣಪತ್ರ, ತೂಕದ ದಾಖಲೆಗಳನ್ನು ಪರಿಶೀಲಿಸುತ್ತಾರೆ. ಚಿನ್ನವನ್ನು ಘೋಷಣೆ ಮಾಡದೇ ತಂದರೆ, ಅದನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು ಅಥವಾ ದಂಡ ವಿಧಿಸಬಹುದು.
3. ಭಾರತೀಯ ವಿಮಾನ ನಿಲ್ದಾಣಗಳಲ್ಲಿ ಘೋಷಣೆ ಪ್ರಕ್ರಿಯೆ:
ಸುಂಕ ರಹಿತ ಮಿತಿಯ ಮೇಲೆ ಚಿನ್ನವನ್ನು ತರುವುದಾದರೆ, ಅದನ್ನು ಕಸ್ಟಮ್ಸ್ ಅಧಿಕಾರದಡಿ ಘೋಷಿಸಬೇಕು. ಚಿನ್ನವನ್ನು ರೆಡ್ ಚಾನೆಲ್‌ನಲ್ಲಿ ಘೋಷಣೆ ಮಾಡದೆ ತಂದರೆ, ಅದು ಕಾನೂನು ನಿಯಮವನ್ನು ಮುರಿದಂತೆ ಅರ್ಥ. 1962ರ ಕಸ್ಟಮ್ಸ್ ಕಾಯ್ದೆಯ ಪ್ರಕಾರ, ಅಕ್ರಮವಾಗಿ ಚಿನ್ನ ಸಾಗಿಸಿದರೆ ಮಟ್ಟುಗೋಲು, ದಂಡ ಮತ್ತು ಕಾನೂನು ಕ್ರಮ ಎದುರಿಸಬೇಕಾಗುತ್ತದೆ.
ಇನ್ನು ದುಬೈನಿಂದ ಚಿನ್ನ ತರಲು ಈ ಮೇಲಿನ ಎಲ್ಲಾ ನಿಯಮಗಳು ಕಡ್ಡಾಯವಾಗಿರುತ್ತವೆ. ಈ ನಿಯಮಗಳನ್ನು ಉಲ್ಲಂಘಿಸಿದ್ದೇ ಆದರೆ, ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಅನಗತ್ಯ ತೊಂದರೆ ತಪ್ಪಿಸಿಕೊಳ್ಳಲು, ಕಡ್ಡಾಯವಾಗಿ ಕಸ್ಟಮ್ಸ್ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಹೀಗಾಗಿ ಚಿನ್ನ ಖರೀದಿಸಿ ಭಾರತಕ್ಕೆ ತರುವ ಮುನ್ನ, ಈ ನಿಯಮಗಳನ್ನು ಚೆನ್ನಾಗಿ ತಿಳಿದುಕೊಳ್ಳಬೇಕಾಗುತ್ತದೆ. ಕಾನೂನು ಅನುಸಾರವಾಗಿ ನಡೆಯುವುದರಿಂದ ನಿಮ್ಮ ಪ್ರಯಾಣ ಸುರಕ್ಷಿತವಾಗಿರುತ್ತದೆ ಮತ್ತು ಅನಗತ್ಯ ಕಾನೂನು ತೊಂದರೆ ತಪ್ಪಿಸಲು ಸಹಾಯ ಮಾಡುತ್ತದೆ.
More From GoodReturns

Gold Rate Today: ವಾರದ ಆರಂಭದಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ; ದಿಢೀರ್ 1,960 ರೂ. ಕುಸಿತ

Gold Rate Bengaluru: ಮಹಿಳಾ ದಿನಾಚರಣೆಯಂದೇ ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ಗೊತ್ತಾ ಬೆಲೆ?

Gold Price Bengaluru: ಚಿನ್ನಪ್ರಿಯರಿಗೆ ಇಂದು ‘ಶುಕ್ರದೆಸೆ’…ಬಂಗಾರದ ದರದಲ್ಲಿ 7,700 ರೂ. ಕುಸಿತ!

Gold Rate: ಚಿನ್ನ ಕೊಳ್ಳುವವರಿಗೆ ‘ಗುರುದೆಸೆ’…ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ 9,800 ರೂ. ಕುಸಿತ!

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Gold Rate Today: ಶುಕ್ರವಾರ ಚಿನ್ನ ಪ್ರಿಯರಿಗೆ ಒಲಿದ ಲಕ್ಷ್ಮಿ! 7,000 ರೂ. ಇಳಿಕೆ

Gold Rate Today: ಭಾರತದಲ್ಲಿ ಚಿನ್ನದ ಬೆಲೆ ಭರ್ಜರಿ ಕುಸಿತ! ದಿಢೀರ್ 9,800 ರೂ. ಇಳಿಕೆ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Gold Rate Down: ಚಿನ್ನ ಪ್ರಿಯರಿಗೆ ಜಾಕ್ಪಾಟ್! ದಿಢೀರ್ 3,110 ರೂ. ಇಳಿಕೆ

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?



Click it and Unblock the Notifications