ವಿಶ್ವ ಚೆಸ್ ಚಾಂಪಿಯನ್ ಡಿ. ಗುಕೇಶ್ ಸಂಪತ್ತೆಷ್ಟು? 14 ದಿನದ ಆಟದಲ್ಲಿ ಕೋಟಿಗಟ್ಟಲೆ ಗಳಿಸಿದ ಚದುರಂಗ ಚತುರ

ಭಾರತದ ಯುವ ಗ್ರ್ಯಾಂಡ್ ಮಾಸ್ಟರ್ ಡಿ. ಗುಕೇಶ್, ವಿಶ್ವ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಚೆಸ್ ಇತಿಹಾಸದಲ್ಲಿ ಐತಿಹಾಸಿಕ ಸಾಧನೆಯ ಮೂಲಕ ಇಡೀ ಭಾರತವೇ ಹೆಮ್ಮೆಪಡುವಂತೆ ಮಾಡಿದ್ದಾರೆ. ಡಿ ಗುಕೇಶ್ ಅವರನ್ನು ಇಂದು ಭಾರತ ಮಾತ್ರವಲ್ಲ, ವಿಶ್ವವೇ ಕೊಂಡಾಡುತ್ತಿದೆ. ವಿಶ್ವನಾಥನ್ ಆನಂದ್ ಅವರ ನಂತರ ಜಾಗತಿಕ ಪ್ರಶಸ್ತಿ ಗೆದ್ದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೂ ಗುಕೇಶ್ ಪಾತ್ರರಾಗಿದ್ದಾರೆ. ಕೇವಲ 18 ವರ್ಷ ವಯಸ್ಸಿನ ಗುಕೇಶ್ ಅವರು ಗುರುವಾರ ನಡೆದ 14ನೇ ಹಾಗೂ ಅಂತಿಮ ಸುತ್ತಿನ ವಿಶ್ವ ಚೆಸ್ ಚಾಂಪಿಯನ್ ಶಿಪ್ ಹಣಾಹಣಿಯಲ್ಲಿ ಎದುರಾಳಿ ಚೀನಾದ ಹಾಲಿ ಚಾಂಪಿಯನ್ ಡಿಂಗ್ ಲಿರೆನ್ ಅವರನ್ನು ಸೋಲಿಸುವ ಮೂಲಕ ಚಾಂಪಿಯನ್ ಪಟ್ಟಕ್ಕೆ ಏರಿದ್ದಾರೆ.

ಗುಕೇಶ್ ಅವರ ಹಿನ್ನಲೆ:

ಗುಕೇಶ್ ಅವರ ಪೂರ್ಣ ಹೆಸರು ದೊಮ್ಮರಾಜು ಗುಕೇಶ್. ತಮಿಳುನಾಡಿನ ಮೂಲದವರಾಗಿರುವ ಗುಕೇಶ್ ತಂದೆ ಡಾ.ರಜನಿಕಾಂತ್ ವೈದ್ಯರಾಗಿದ್ದು( ಇಎನ್‌ಟಿ )ತಾಯಿ ಡಾ. ಪದ್ಮಕುಮಾರಿ ವೃತ್ತಿಯಲ್ಲಿ ಮೈಕ್ರೋಬಯಾಲಜಿಸ್ಟ್ ಆಗಿದ್ದಾರೆ. ಗುಕೇಶ್ ಮೇ 29, 2006 ರಂದು ಚೆನ್ನೈಯಲ್ಲಿ ಜನಿಸಿದ್ದು ಇವರು ತಮ್ಮ ಆರಂಭಿಕ ಓದು ಅಯನಂಬಾಕಂ ವೆಲಮ್ಮಾಳ ವಿದ್ಯಾಲಯದಲ್ಲಿ ಅಭ್ಯಾಸ ಮಾಡಿದ್ದಾರೆ. ತನ್ನ ಏಳನೇ ವಯಸ್ಸಿನಲ್ಲಿ ಚೆಸ್ ಆಡಲು ಪ್ರಾರಂಭಿಸಿದ ಗುಕೇಶ್ ಅವರಿಗೆ ಆರಂಭದಲ್ಲಿ ಭಾಸ್ಕರ್ ತರಬೇತಿ ನೀಡುತ್ತಿದ್ದರು. ಇದಾದ ನಂತರ ಐದು ಬಾರಿಯ ವಿಶ್ವ ಚೆಸ್ ಚಾಂಪಿಯನ್‌ ವಿಶ್ವನಾಥನ್ ಆನಂದ್, ಗುಕೇಶ್ ಅವರಿಗೆ ತರಬೇತಿ ನೀಡಿದ್ದರು. ಸ್ಥಳೀಯವಾಗಿ ಯಾವುದೇ ಸ್ಪರ್ಧೆ ಇದ್ದರೂ ಅತ್ಯತ್ತಮ ಸಾಧನೆ ಮಾಡುತ್ತಿದ್ದ ಗುಕೇಶ್ ಶಿಸ್ತುಬದ್ದ ಆಟದ ಮೂಲಕ ಹಂತಹಂತವಾಗಿ ಮೇಲೇರಿದರು.

ಚದುರಂಗ ಚತುರ ಡಿ. ಗುಕೇಶ್ ಸಂಪತ್ತೆಷ್ಟು?

2015 ರಲ್ಲಿ ನಡೆದ ಏಷ್ಯನ್ ಸ್ಕೂಲ್ ಚೆಸ್ ಚಾಂಪಿಯನ್‌ಶಿಪ್‌ನ 9 ವರ್ಷದೊಳಗಿನವರ ವಿಭಾಗದಲ್ಲಿ ಮತ್ತು 2018 ರಲ್ಲಿ ನಡೆದ 12 ವರ್ಷದೊಳಗಿನವರ ವಿಭಾಗದಲ್ಲಿ ವಿಶ್ವ ಯೂತ್ ಚೆಸ್ ಚಾಂಪಿಯನ್‌ಶಿಪ್ ಗೆದ್ದುಕೊಂಡಿದ್ದರು. ತಮ್ಮ ಬಾಲ್ಯದಲ್ಲೇ ವಿಶ್ವ ಚೆಸ್ ಚಾಂಪಿಯನ್

ಗೆಲ್ಲಬೇಕು ಎನ್ನುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದರು. ಮೂರು ವರ್ಷಗಳ ನಂತರ, 2018 ರಲ್ಲಿ, ಅವರು ವಿಶ್ವ ಯೂತ್ ಚೆಸ್ ಚಾಂಪಿಯನ್‌ಶಿಪ್ ಅನ್ನು ಪಡೆದುಕೊಂಡ ಅವರು ಏಷ್ಯನ್ ಯೂತ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಐದು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಅಸಾಧಾರಣ ಸಾಧನೆ ಮಾಡಿದರು

2023 ರಲ್ಲಿ, ಅಂದರೆ ಅವರ 17 ನೇ ವಯಸ್ಸಿನಲ್ಲಿ, ಅವರು 2750 ಎಲೋ ರೇಟಿಂಗ್ ಅನ್ನು ಸಾಧಿಸಿದ ಅತ್ಯಂತ ಕಿರಿಯ ಆಟಗಾರರಾದರು, ವಿಶ್ವನಾಥನ್ ಆನಂದ್ ಅವರನ್ನು ಹಿಂದಿಕ್ಕಿ ಭಾರತದ ಅಗ್ರ ಶ್ರೇಯಾಂಕದ ಆಟಗಾರರಾದರು. ಅವರ ಶಿಸ್ತುಬದ್ಧ ವಿಧಾನ ಮತ್ತು ನಿರ್ಣಯವು ಚೆಸ್ ಜಗತ್ತಿನಲ್ಲಿ ಅವರ ಗಮನಾರ್ಹವಾಗಿ ಮೇಲಕ್ಕೇರಲು ದಾರಿ ಮಾಡಿಕೊಟ್ಟಿತು.

ಗುಕೇಶ್ ಅವರ ಸಂಪಾದನೆ, ನಿವ್ವಳ ಮೌಲ್ಯದ ವಿವರ:

ತಮ್ಮ ಕಿರಿಯ ವಯಸ್ಸಿನಲ್ಲಿ ವಿಶ್ವ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿರುವ ಗುಕೇಶ್ ಅವರ ನಿವ್ವಳ ಮೌಲ್ಯವು ವಿವಿಧ ಮಾಧ್ಯಮ ವರದಿಗಳ ಪ್ರಕಾರ, 2024 ರಲ್ಲಿ 8.26 ಕೋಟಿ ರೂ ($ 1.5 ಮಿಲಿಯನ್) ಆಗಿದೆ. ಸಾಮಾನ್ಯವಾಗಿ ಅವರ ಸಂಪಾದನೆಯ ಪ್ರಮುಖ ಭಾಗವು ಉನ್ನತ ಮಟ್ಟದ ಪಂದ್ಯಾವಳಿಗಳಲ್ಲಿ ಅವರ ಯಶಸ್ಸಿನಿಂದ ಉಂಟಾಗುತ್ತದೆ. ಇವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುತ್ತಾರೆ.

ಆದರೆ ವಿಶ್ವ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡ ನಂತರ ಅವರ ನಿವ್ವಳ ಮೌಲ್ಯವು ಅಪಾರವಾಗಿ ಹೆಚ್ಚಾಗಿದೆ. ಯಾಕೆಂದರೆ ಸಿಂಗಾಪುರದಲ್ಲಿ ನಡೆದ ಪಂದ್ಯಾವಳಿಯ ಆಡಿದ 17 ದಿನಗಳಲ್ಲಿ 11 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಗಳಿಸಿದ್ದಾರೆ. ವಿಶ್ವ ಚಾಂಪಿಯನ್ ಆದ ಮೇಲೆ ಡಿ ಗುಕೇಶ್ 11.45 ಕೋಟಿ ಬಹುಮಾನ ಪಡೆದರೆ, ಡಿಂಗ್ ಲಿರೆನ್ 9.75 ಕೋಟಿ ಬಹುಮಾನ ಪಡೆದರು. FIDE ನಿಯಮಗಳ ಪ್ರಕಾರ, ಫೈನಲ್ ಆಡುವ ಆಟಗಾರರು ಪ್ರತಿ ಪಂದ್ಯವನ್ನು ಗೆದ್ದಾಗಲೂ 1.69 ಕೋಟಿ ರೂಪಾಯಿಗಳನ್ನು ಪಡೆಯುತ್ತಾರೆ ಮತ್ತು ಉಳಿದ ಮೊತ್ತವನ್ನು ಇಬ್ಬರೂ ಆಟಗಾರರ ನಡುವೆ ಹಂಚಲಾಗುತ್ತದೆ.

ಇನ್ನು ವಿಶ್ವ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿದ ಬಳಿಕ ಹಲವಾರು ಬ್ರ್ಯಾಂಡ್ ಗಳು ಜಾಹೀರಾತುಗಾಗಿ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇರುವುದರಿಂದ ಅವರ ಸಂಪಾದನೆಯಲ್ಲಿ ಏಕಾಏಕಿ ಏರಿಕೆಯಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+