ನವದೆಹಲಿ, ಸೆಪ್ಟೆಂಬರ್ 22: ಆಮ್ ಆದ್ಮಿ ಪಕ್ಷದ(ಎಎಪಿ) ನಾಯಕಿ ಅತಿಶಿ ಶನಿವಾರ ಮರ್ಲೆನಾ ಪ್ರಮಾಣ ವಚನ ಸ್ವೀಕರಿಸುವ ಮೂಲಕ ರಾಷ್ಟ್ರ ರಾಜಧಾನಿ ನವದೆಹಲಿಯ ನೂತನ ಮುಖ್ಯಮಂತ್ರಿಯಾಗಿದ್ದಾರೆ. ದಿ. ಸುಷ್ಮಾ ಸ್ವರಾಜ್ ಮತ್ತು ದಿ. ಶೀಲಾ ದೀಕ್ಷಿತ್ ಅವರ ನಂತರ ಅತಿಶಿ ದೆಹಲಿಯ ಮೂರನೇ ಮಹಿಳಾ ಮುಖ್ಯಮಂತ್ರಿಯಾಗಿದ್ದು, ದೆಹಲಿಯ ಅತಿ ಕಿರಿಯ ವಯಸ್ಸಿನ ಸಿಎಂ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಅವರ ಬಳಿಕ ಪ್ರಸ್ತುತ ಭಾರತದಲ್ಲಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿರುವ ಎರಡನೇ ಮಹಿಳೆ ಅತಿಶಿಯಾಗಿದ್ದಾರೆ.
ಶೀಲಾ ದೀಕ್ಷಿತ್ ಅವರು ದೆಹಲಿಯ ಮುಖ್ಯಮಂತ್ರಿಯಾದಾಗ 60 ವರ್ಷ ವಯಸ್ಸಿನವರಾಗಿದ್ದರೆ, ಸುಷ್ಮಾ ಸ್ವರಾಜ್ ಅವರು 46 ನೇ ವಯಸ್ಸಿನಲ್ಲಿ ಈ ಹುದ್ದೆಯನ್ನು ಅಲಂಕರಿಸಿದ್ದರು. ಆದರೆ ಈ ದಾಖಲೆಯನ್ನು ಮುರಿದ ಅತಿಶಿ ತಮ್ಮ 43ನೇ ವಯಸ್ಸಿನಲ್ಲೇ ಮುಖ್ಯಮಂತ್ರಿ ಹುದ್ದೆಗೇರುವ ಅವಕಾಶವನ್ನು ಪಡೆದುಕೊಂಡಿದ್ದಾರೆ.

ಅತಿಶಿ ಇದಕ್ಕೂ ಮೊದಲು ದೆಹಲಿ ಕ್ಯಾಬಿನೆಟ್‌ನಲ್ಲಿ ಹೆಚ್ಚಿನ ಸಂಖ್ಯೆಯ ಖಾತೆಗಳನ್ನು ಹೊಂದಿದ್ದು ಹಣಕಾಸು, ನೀರು, ಶಿಕ್ಷಣ, ಸಾರ್ವಜನಿಕ ಕಾರ್ಯಗಳು, ವಿದ್ಯುತ್, ಕಂದಾಯ, ಯೋಜನೆ, ಸೇವೆಗಳು, ಕಾನೂನು, ವಿಜಿಲೆನ್ಸ್ ಮತ್ತು ಇತರ ಪ್ರಮುಖ ಇಲಾಖೆಗಳ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದರು.
ಆಮ್ ಆದ್ಮಿ ಪಕ್ಷದ ಪ್ರಬಲ ಮಹಿಳಾ ಅಭ್ಯರ್ಥಿಗಳಲ್ಲಿ ಅತಿಶಿ ಕೂಡ ಒಬ್ಬರು. ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ಸಿಎಂ ಆಗಿದ್ದ ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಜೈಲಿನಲ್ಲಿದ್ದಾಗ, ಅತಿಶಿ ಪಕ್ಷದ ಕಾರ್ಯಕರ್ತರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿದ ಮತ್ತು ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸಿ ಸೈ ಎಣಿಸಿಕೊಂಡವರು.
ಸಿಎಂ ಅತಿಶಿ ನಿವ್ವಳ ಮೌಲ್ಯ:
ವರದಿಯ ಪ್ರಕಾರ, ದೆಹಲಿಯ ಹೊಸ ಸಿಎಂ 50,000 ನಗದನ್ನು ಹೊಂದಿದ್ದು, ಅವರ ಆಸ್ತಿ ಮೌಲ್ಯ 1.41 ಕೋಟಿ ರೂ.ಗಳಾಗಿದ್ದು, ಯಾವುದೇ ಸಾಲದ ಹೊಣೆಗಾರಿಕೆಯನ್ನು ಅವರು ಹೊಂದಿಲ್ಲ. ಅವರ ಅಫಿಡವಿಟ್ ಪ್ರಕಾರ ಆಸ್ತಿಯ ಒಟ್ಟು ಮೌಲ್ಯ 1,20,12,824 ರೂ. ಆಗಿದೆ.
ನಗದು: ರೂ 50,000 (ಸ್ವಯಂ) ಮತ್ತು ರೂ 15,000 (ಸಂಗಾತಿ), ಒಟ್ಟು ರೂ 65,000.
ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳಲ್ಲಿನ ಠೇವಣಿ: 1,00,87,323 ರೂ.
ಎನ್ಎಸ್ಎಸ್, ಅಂಚೆ ಉಳಿತಾಯ ಇತ್ಯಾದಿ: 18,60,500 ರೂ.
ಎಲ್ಐಸಿ ಅಥವಾ ಇತರ ವಿಮಾ ಪಾಲಿಸಿಗಳು: 5,00,000 ರೂ.
ಅತಿಶಿ ಮರ್ಲೆನಾ ಹೂಡಿಕೆಯ ಕಡೆಗೆ ಬಹಳ ಸಂಪ್ರದಾಯವಾದಿ ವಿಧಾನವನ್ನು ಅನುಸರಿಸುತ್ತಿದ್ದಾರೆ. ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಬದಲು ಸಾಂಪ್ರದಾಯಿಕ ಉಳಿತಾಯ ವಿಧಾನಗಳಾದ ಬ್ಯಾಂಕ್ ಖಾತೆಗಳು ಮತ್ತು ಸ್ಥಿರ ಠೇವಣಿಗಳಲ್ಲಿ ತನ್ನ ಆಸ್ತಿಯನ್ನು ಉಳಿಸಲು ಅವಳು ಇಷ್ಟಪಡುತ್ತಾರೆ ಎಂದು ವರದಿಗಳಿಂದ ತೋರುತ್ತದೆ. ಅತಿಶಿ 5 ಲಕ್ಷ ರೂಪಾಯಿ ಮೌಲ್ಯದ ಎಲ್‌ಐಸಿ ಆರೋಗ್ಯ ವಿಮಾ ಪಾಲಿಸಿಯನ್ನು ಹೊಂದಿದ್ದಾರೆ ಆದರೆ ಷೇರುಗಳು ಮತ್ತು ಬಾಂಡ್‌ಗಳಲ್ಲಿ ಹೂಡಿಕೆ ಮಾಡುವುದನ್ನು ದೂರವಿಟ್ಟಿದ್ದಾರೆ.
ಅತಿಶಿ ಶೈಕ್ಷಣಿಕ ಹಿನ್ನೆಲೆ
ಅತಿಶಿ ಜೂನ್ 8, 1981 ರಂದು ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ವಿಜಯ್ ಕುಮಾರ್ ಸಿಂಗ್ ಮತ್ತು ತ್ರಿಪ್ತಾ ವಾಹಿ ದಂಪತಿಗೆ ಜನಿಸಿದರು. ಅವರು ದೆಹಲಿಯ ಸ್ಪ್ರಿಂಗ್‌ಡೇಲ್ಸ್ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ಅತಿಶಿಯ ಅತ್ಯುತ್ತಮ ಶೈಕ್ಷಣಿಕ ಹಿನ್ನೆಲೆ ಉಳ್ಳವರು. ಅವರು ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ . ಹಿಸ್ಟರಿ ಅಧ್ಯಯನ ಮಾಡಿದ್ದು, ದೆಹಲಿ ವಿಶ್ವವಿದ್ಯಾಲಯದಲ್ಲಿ ಅಗ್ರಸ್ಥಾನ ಪಡೆದುಕೊಂಡವರಾಗಿದ್ದಾರೆ. ವಿದ್ಯಾರ್ಥಿವೇತನದ ಮೂಲಕ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, 2006 ರಲ್ಲಿ ರೋಡ್ಸ್ ವಿದ್ವಾಂಸರಾಗಿ ಆಕ್ಸ್‌ಫರ್ಡ್‌ನಿಂದ ಶೈಕ್ಷಣಿಕ ಸಂಶೋಧನೆಯಲ್ಲಿ ಎರಡನೇ ಸ್ನಾತಕೋತ್ತರ ಪದವಿಯನ್ನು ಪಡೆದರು.
ಅತಿಶಿ ಪತಿ ಯಾರು?
ಅತಿಶಿ ಅವರ ಪತಿ ಪ್ರವೀಣ್ ಸಿಂಗ್. ಇವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಅಹಮದಾಬಾದ್‌ನಿಂದ ಪದವಿ ಪಡೆದಿದ್ದಾರೆ. ರಾಜಕೀಯಕ್ಕೆ ಪ್ರವೇಶಿಸುವ ಮೊದಲು, ಅತಿಶಿ ಮತ್ತು ಅವರ ಪತಿ 2007 ರಲ್ಲಿ ಕಮ್ಯೂನ್ ಅನ್ನು ಸ್ಥಾಪಿಸಿದರು. ಅವರ ಗುರಿ "ಗ್ರಾಮ ಸ್ವರಾಜ್" (ಗ್ರಾಮ ಸ್ವ-ಆಡಳಿತ) ಮತ್ತು "ಮಾನವೀಯ ಶಿಕ್ಷಣ" ದ ಆದರ್ಶಗಳನ್ನು ಪ್ರತಿಪಾದಿಸುವುದಾಗಿತ್ತು.


Click it and Unblock the Notifications