ನವದೆಹಲಿ, ಆಗಸ್ಟ್ 18: ಭಾರತಕ್ಕಾಗಿ ಪದಕಗಳನ್ನು ಗೆಲ್ಲುವ ಮೂಲಕ ನೀರಜ್ ಚೋಪ್ರಾ ಮತ್ತು ಮನು ಭಾಕರ್ ಇಬ್ಬರೂ ದೇಶಕ್ಕೆ ಕೀರ್ತಿ ತಂದಿದ್ದು, ಕ್ರೀಡಾ ಲೋಕದಲ್ಲಿ ಹೊಸ ಸ್ಥಾನ ಗಳಿಸಿದ್ದಾರೆ. ದೇಶದ ಅಥ್ಲೀಟ್‌ಗಳಾದ ನೀರಜ್ ಚೋಪ್ರಾ ಮತ್ತು ಮನು ಭಾಕರ್ ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನದೊಂದಿಗೆ ಇತಿಹಾಸವನ್ನು ಸೃಷ್ಟಿಸಿದ್ದು ಮಾತ್ರವಲ್ಲದೇ ಭಾರತೀಯರ ಹೃದಯವನ್ನು ಗೆದ್ದಿದ್ದಾರೆ. ಇನ್ನು ಚಿನ್ನದ ಹುಡುಗ ನೀರಜ್ ಚೋಪ್ರಾ ಅವರನ್ನು ಕಳೆದ ನಾಲ್ಕೈದು ವರ್ಷಗಳಿಂದಲೇ ದೇಶದ ಜನತೆ ಕೊಂಡಾಡುತ್ತಿದ್ದಾರೆ. ಶೂಟಿಂಗ್ ಕ್ವೀನ್ ಮನು ಭಾಕರ್ ಅವರು ಈಗ ದೇಶದ ಹೊಸ ನ್ಯಾಷನಲ್ ಕ್ರಶ್ ಆಗಿದ್ದಾರೆ.
ನೀರಜ್ ಚೋಪ್ರಾ ಅವರು ಜಾವೆಲಿನ್ ಎಸೆತದಲ್ಲಿ ಬೆಳ್ಳಿ ಪದಕವನ್ನು ಗೆಲ್ಲುವ ಮೂಲಕ ಈ ಅವರು ಸತತ ಎರಡನೇ ಬಾರಿ ಒಲಿಂಪಿಕ್ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ನೀರಜ್ ಅವರು ಟೋಕಿಯೋ 2020 ರ ಒಲಿಂಪಿಕ್ಸ್‌ನಲ್ಲಿ ತಮ್ಮ ಚಿನ್ನದ ಪದಕ ಗೆದ್ದು, ನೀರಜ್ ಅದ್ಭುತ ಪ್ರದರ್ಶನ ನೀಡಿದ್ದರು. ಆದರೆ ಈ ಬಾರಿಯ ಒಲಿಪಿಂಕ್ಸ್ ನಲ್ಲಿ 89.45 ಮೀಟರ್‌ಗಳನ್ನು ಎಸೆದು ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದರು.

ಇನ್ನು, ಮನು ಭಾಕರ್ ಅವರು ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಪದಕ ಗೆಲ್ಲುವ ಮೂಲಕ ಭಾರತದ ಸ್ವಾತಂತ್ರ್ಯದ ನಂತರ ಒಲಿಂಪಿಕ್ಸ್ ಗೇಮ್ಸ್‌ನ ಒಂದೇ ಆವೃತ್ತಿಯಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಅವರು ಮೊದಲು ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಇದರೊಂದಿಗೆ ಒಲಿಂಪಿಕ್ ಪದಕವನ್ನು ಗಳಿಸಿದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ನಂತರ ಅವರು ಮಿಶ್ರ 10 ಮೀಟರ್ ಏರ್ ಪಿಸ್ತೂಲ್ ತಂಡ ಸ್ಪರ್ಧೆಯಲ್ಲಿ ಮತ್ತೊಂದು ಕಂಚು ಗೆಲ್ಲಲು ಸರಬ್ಜೋತ್ ಸಿಂಗ್ ಜೊತೆಗೂಡಿದರು.
ನೀರಜ್ ಚೋಪ್ರಾ ಜಾವೆಲಿನ್ ಬಗ್ಗೆ:
ಜಾವೆಲಿನ್ ಎಸೆತದಲ್ಲಿ ಸಾಧನೆ ಮಾಡಿರುವ ನೀರಜ್ ಅವರು ಬಳಸುವ ಈಟಿಯ ತೂಕ 800 ಗ್ರಾಂ ಮತ್ತು ಉದ್ದ 2.6 ರಿಂದ 2.7 ಮೀಟರ್ ಉದ್ದವಿದೆ. ಸಾಮಾನ್ಯವಾಗಿ ಜಾವೆಲಿನ್ ಬೆಲೆಯೂ ಅದರ ಗುಣಮಟ್ಟವನ್ನು ಅವಲಂಭಿಸಿ ಸುಮಾರು 900 ರಿಂದ 80,000 ರೂ. ವರೆಗೆ ಇರುತ್ತದೆ. 2021 ರಲ್ಲಿ, ನೀರಜ್ ಅವರು ಬಳಸಿದ್ದ ಜಾವೆಲಿನ್ ಹರಾಜಿನಲ್ಲಿ 1.5 ಕೋಟಿ ರೂ.ಗೆ ಮಾರಾಟವಾಗಿತ್ತು.
ಮನು ಬಾಕರ್ ಪಿಸ್ತೂಲ್ ಬಗ್ಗೆ :
ಮನು ಭಾಕರ್ ಅವರು ಮೋರಿನಿ CM 162EI ಪಿಸ್ತೂಲ್ ಅನ್ನು ಬಳಸುತ್ತಾರೆ, ಇದರ ಬೆಲೆ ಸುಮಾರು 1,60,000 ರೂ. ಆಗಿದೆ. ಇದನ್ನು ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ (NRAI) ಅಥವಾ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (IOA) ಅಂತರಾಷ್ಟ್ರೀಯ ಸ್ಪರ್ಧೆಗಳಿಗೆ ಕ್ರೀಡಾಪಟುಗಳಿಗೆ ನೀಡಲಾಗುತ್ತದೆ.
ಬ್ರ್ಯಾಂಡ್ ಮೌಲ್ಯ ಏರಿಕೆ:
ಮನು ಅವರ ಅವಳಿ ಪದಕ ಸಾಧನೆಯ ಬೆನ್ನಲ್ಲೇ ಅವರ ಬ್ರ್ಯಾಂಡ್ ಮೌಲ್ಯ ಏಕಾಏಕಿ ಏರಿಕೆ ಆಗಿದೆ. ಸುಮಾರು 40ಕ್ಕೂ ಅಧಿಕ ಬ್ರ್ಯಾಂಡ್‌ಗಳು ಜಾಹೀರಾತು ಅನುಮೋದನೆಗಾಗಿ ಮನು ಅವರನ್ನು ಸಂಪರ್ಕಿಸಿವೆ.ಈ ಒಲಿಂಪಿಕ್ಸ್‌ಗೂ ಮುನ್ನ ಪ್ರತೀ ಒಪ್ಪಂದಕ್ಕೆ ಸುಮಾರು 20-25 ಲಕ್ಷ ರೂ.ನಷ್ಟು ಪಡೆಯುತ್ತಿದ್ದ ಮನು ಭಾಕರ್, ಈಗ ಅದರ ಆರೇಳು ಪಟ್ಟು ಹೆಚ್ಚಿನ ಮೊತ್ತದ ಒಪ್ಪಂದಕ್ಕೆ ಸಹಿ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇನ್ನೊಂದೆಡೆ ನೀರಜ್ ಚೋಪ್ರಾ ಅವರ ಮೌಲ್ಯ ಮತ್ತೆ ಶೇ. 40-50ರಷ್ಟು ಏರಿಕೆಯಾಗಿದೆ. ನೀರಜ್ ಜತೆ ಹಲವು ಕಂಪನಿಗಳು ಈಗಾಗಲೇ ಮಾತುಕತೆ ನಡೆಸಿವೆ ಎನ್ನಲಾಗಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

FIFA World Cup 2026: ಅಮೆರಿಕ ನೇತೃತ್ವದ ಫಿಫಾ ವಿಶ್ವಕಪ್ನಲ್ಲಿ ಇರಾನ್ ಭಾಗವಹಿಸುತ್ತಾ? ಇಲ್ಲಿದೆ ಮಾಹಿತಿ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Bank Holidays: ಮಾರ್ಚ್ನಲ್ಲಿ ಬ್ಯಾಂಕ್ಗಳಿಗೆ 18 ದಿನ ರಜೆ! ಗ್ರಾಹಕರೇ ಇಲ್ಲಿ ಗಮನಿಸಿ

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ



Click it and Unblock the Notifications