ಇಂದು ಧನ್ತೇರಸ್ ಹಬ್ಬ (Dhanteras Festival). ದೇಶದೆಲ್ಲೆಡೆ ಈ ಹಬ್ಬಕ್ಕೆ ವಿಶೇಷ ಮಹತ್ವದೊಂದಿಗೆ ಈ ಹಬ್ಬವನ್ನು ಆಚರಿಸಲಾಗುತ್ತದೆ. ಬಂಗಾರದಲ್ಲಿ ಹೂಡಿಕೆ (Gold Invest) ಮಾಡಿದ್ರೆ ಹೆಚ್ಚು ಲಾಭ ಸಿಗುತ್ತೆ ಎಂದು ಹೇಳಲಾಗುತ್ತದೆ. ಆದರೆ ಬೆಳ್ಳಿಯಲ್ಲಿ ಹೂಡಿಕೆ ಮಾಡುವುದರಿಂದ ಎಷ್ಟೆಲ್ಲಾ ಲಾಭ ಸಿಗುತ್ತೆ ಎಂದು ನಿಮಗೆ ಗೊತ್ತಾ? ಇಂದು ನೀವು ಬೆಳ್ಳಿ ಮೇಲೆ ಬಂಡವಾಳ (Silver Prediction) ಹೂಡಿದರೆ, 2050ರ ವೇಳೆಗೆ ಅದು ಎಷ್ಟರ ಮಟ್ಟಿಗೆ ಲಾಭ ನೀಡಬಹುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಬಂಗಾರ ಮತ್ತು ಬೆಳ್ಳಿ ಎರಡೂ ಹೂಡಿಕೆದಾರರಿಗೆ ಸದಾ ಹೈಪ್ರಾಫಿಟ್ ನೀಡುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಹಿಂದೆಂದಿಗಿಂತಲೂ ಈ ಬಾರಿ ಬೆಳ್ಳಿ ಬೆಲೆಗಳು ತೀವ್ರವಾಗಿ ಏರಿಕೆ ಕಂಡಿದ್ದು, ಹೂಡಿಕೆದಾರರಿಗೆ ಉತ್ತಮ ಲಾಭ ತಂದುಕೊಡಬಹುದು ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಒಂದು ಕೆಜಿ ಬೆಳ್ಳಿಯ ಬೆಲೆ ಸುಮಾರು ₹1,72,000 ಆಗಿದೆ.
ಹೂಡಿಕೆಗೆ ಇದೇ ಬೆಸ್ಟ್ ಟೈಮ್!
ವರದಿಗಳ ಪ್ರಕಾರ, 2025ರ ಆಗಸ್ಟ್‌ನಲ್ಲಿ ಬೆಳ್ಳಿ ಬೆಲೆಗಳು ತೀವ್ರವಾಗಿ ಹೆಚ್ಚಳ ಕಂಡಿದ್ದು, ಈ ಸಮಯದಲ್ಲಿ ಒಟ್ಟಾರೆಯಾಗಿ 10% ರಷ್ಟು ಏರಿಕೆಯನ್ನು ಕಂಡಿದೆ. ಇನ್ನು ಭವಿಷ್ಯದಲ್ಲಿ ಬೆಳ್ಳಿ ಬೆಲೆಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿದೆ ಎನ್ನಲಾಗಿದೆ. ಇದರಿಂದ ಬೆಳ್ಳಿಯಲ್ಲಿ ಹೂಡಿಕೆ ಮಾಡಲು ಇಚ್ಛಿಸುವವರಿಗೆ ಇದೇ ಸೂಕ್ತ ಸಮಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಏರಿಕೆಯಿಂದಾಗಿ, ಹೂಡಿಕೆದಾರರು ಇನ್ನಷ್ಟು ಲಾಭ ಪಡೆಯಬಹುದು.
ಬೆಳ್ಳಿ ದರ ಏರಿಕೆ ಕಾರಣಗಳು:
ಬೆಳ್ಳಿ ಬೆಲೆ ಏರಿಕೆಗೆ ಹಲವು ಕಾರಣಗಳಿವೆ. ಇತ್ತೀಚೆಗೆ ಬೆಳ್ಳಿಯ ಮೇಲೂ ಬೇಡಿಕೆ ಹೆಚ್ಚಾಗುತ್ತಿದೆ ಮತ್ತು ಸೀಮಿತ ಪೂರೈಕೆಯೇ ಬೆಲೆ ಏರಿಕೆಗೆ ಕಾರಣ. ಇನ್ನು ಕೈಗಾರಿಕಾ ಉತ್ಪನ್ನಗಳಲ್ಲಿ ಬಳಕೆ, ಆಮದು ಬೇಡಿಕೆ ಹಾಗೂ ಕರೆನ್ಸಿ ವಿನಿಮಯ ದರಗಳು ಸಹ ಬೆಳ್ಳಿ ಬೆಲೆ ಏರಿಕೆ ಹಿಂದಿರುವ ಕಾರಣಗಳು. ಸರ್ಕಾರದ ನೀತಿಗಳು ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಆಗುತ್ತಿರುವ ಬದಲಾವಣೆಗಳೂ ಸಹ ಬೆಲೆ ಏರಿಕೆಯಲ್ಲಿ ಮಹತ್ವದ ಪಾತ್ರವಹಿಸುತ್ತವೆ.
ಕೆಲವು ವರದಿಗಳ ಪ್ರಕಾರ, ಭಾರತದಲ್ಲಿ ಇಂದು ಒಂದು ಗ್ರಾಂ ಬೆಳ್ಳಿಯ ಬೆಲೆ ಸುಮಾರು ₹172 ಮತ್ತು ಒಂದು ಕಿಲೋ ಬೆಳ್ಳಿಯ ಬೆಲೆ ₹1,72,000 ಆಗಿದೆ. ಆದರೆ ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆಗಳು ಬೇರೆ ಬೇರೆ ರೀತಿಯಲ್ಲಿರುತ್ತದೆ.
ಇಂದು ನೀವು 50 ಕಿಲೋ ಬೆಳ್ಳಿ ಖರೀದಿಸಿದರೆ, ಅದರ ಪ್ರಸ್ತುತ ಮೌಲ್ಯ ಸುಮಾರು 85 ಲಕ್ಷ ರೂಪಾಯಿ ಬಂಡವಾಳ ಹೂಡಬೇಕಾಗುತ್ತದೆ. ಆದರೆ, ಭವಿಷ್ಯದಲ್ಲಿ ಇದರ ಬೆಲೆ ಮತ್ತಷ್ಟು ಏರಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. KAG ಬೆಲೆ ಭವಿಷ್ಯದ ಅಂದಾಜಿನ ಪ್ರಕಾರ, 2040ರ ವೇಳೆಗೆ 5 ಕೆಜಿ ಬೆಳ್ಳಿಯ ಬೆಲೆ ಕೋಟಿ ಬೆಲೆಗೆ ತಲುಪಬಹುದು ಎಂದು ವರದಿಯಾಗಿದೆ.
ತಜ್ಞರ ಪ್ರಕಾರ, 2050ರ ವೇಳೆಗೆ ಬೆಳ್ಳಿ ಬೆಲೆಗಳು ಮತ್ತಷ್ಟು ಏರಿಕೆಯಾಗಿ ಹೂಡಿಕೆದಾರರಿಗೆ ದೊಡ್ಡ ಲಾಭವನ್ನು ತಂದುಕೊಡಬಹುದು ಎಂದು ವರದಿಯಾಗಿದೆ. ಇಂದು ಖರೀದಿಸಿದ ಇನ್ನೇನು 25 ವರ್ಷಗಳಲ್ಲಿ ಬೆಳ್ಳಿ ಬೆಲೆ ಕೋಟಿಯಲ್ಲಿ ಬೆಲೆಬಾಳಬಹುದು ಎಂದು ಹೇಳಲಾಗಿದೆ. ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿದರೆ, ಇನ್ನೇನು ಕೆಲವೇ ವರ್ಷಗಳಲ್ಲಿ ಕೋಟ್ಯಾಧಿಪತಿಗಳಾಗಬಹುದು.
ಬೆಳ್ಳಿಯಲ್ಲಿ ಹೂಡಿಕೆ ಮಾಡಲು ಇದಕ್ಕಿಂತ ಸೂಕ್ತ ಎನ್ನಲಾಗಿದೆ. ಪ್ರಸ್ತುತ ಬೆಳವಣಿಗೆಗಳನ್ನು ಮತ್ತು ಭವಿಷ್ಯದಲ್ಲಾಗುವ ಮಾರುಕಟ್ಟೆ ಬೆಳವಣಿಗೆಗಳನ್ನು ಗಮನಿಸಿ ಹೂಡಿಕೆ ಮಾಡುವವರು ದೀರ್ಘಾವಧಿಯಲ್ಲಿ ದೊಡ್ಡ ಲಾಭಕ್ಕೆ ಕಾರಣವಾಗಬಹುದು. ಆದರೆ, ಚಿನ್ನ, ಬೆಳ್ಳಿ ಅಥವಾ ಯಾವುದರ ಮೇಲೆ ಹೂಡಿಕೆ ಮಾಡುವವರು ಸರಿಯಾದ ಮಾಹಿತಿ ಮತ್ತು ಮಾರುಕಟ್ಟೆ ಸಂಶೋಧನೆಯ ಆಧಾರದ ಮೇಲೆ ಹೂಡಿಕೆ ಮಾಡುವುದು ಅತ್ಯಂತ ಸೇಫ್ ಎಂದು ಹೇಳಲಾಗಿದೆ. ಆದ್ದರಿಂದ ಇದಕ್ಕಾಗಿ ತಜ್ಞರ ಸಲಹೆ ಪಡೆಯುವುದು ಸೂಕ್ತ.


Click it and Unblock the Notifications