ಹರ್ಮನ್ ಪ್ರೀತ್ ಕೌರ್ (HarmanPreet Kaur) ಕ್ಯಾಪ್ಟನ್‌ಶಿಪ್‌ನಲ್ಲಿ ಮಹಿಳಾ ಭಾರತ ತಂಡ (Indian Women Team) ಕೊನೆಗೂ ಮೊದಲ ಏಕದಿನ ವಿಶ್ವಕಪ್ (ICC World Cup) ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಭಾನುವಾರ ದಕ್ಷಿಣ ಆಫ್ರಿಕಾ ಮತ್ತು ಭಾರತದ (India) ನಡುವೆ ನಡೆದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025ರ ಫೈನಲ್‌ನಲ್ಲಿ ಭಾರತದ ವನಿತೆಯರು ಅಭೂತಪೂರ್ವ ಪ್ರದರ್ಶನದಿಂದ ಸೌತ್ ಆಫ್ರಿಕಾ ತಂಡಕ್ಕೆ (South Africa) ಸೋಲುಣಿಸಿದರು. ಈ ಮೂಲಕ ತವರು ನೆಲದಲ್ಲೇ ಭಾರತೀಯ ವನಿತೆಯರು ವಿಶ್ವಕಪ್ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ನವಿ ಮುಂಬೈನಲ್ಲಿ ನಡೆದ ರೋಚಕ ಫೈನಲ್ ವಿಶ್ವಕಪ್ ಕದನದಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಭಾರತೀಯ ಮಹಿಳಾ ತಂಡ ಇತಿಹಾಸ ಬರೆದಿದೆ. ಹಾಗಿದ್ರೆ ವಿಜಯಶಾಲಿಯಾದ ಭಾರತ ತಂಡಕ್ಕೆ ವಿಶ್ವಕಪ್ ಕಿರೀಟದ ಜೊತೆಗೆ ಸಿಕ್ಕ ಬಹುಮಾನದ ಮೊತ್ತ ಎಷ್ಟು ಗೊತ್ತಾ?
ದಾಖಲೆ ಜೊತೆಗೆ ಕೋಟಿಗಟ್ಟಲೆ ಬಹುಮಾನ:
ಭಾರತ ಕ್ರಿಕೆಟ್ ತಂಡದ ವನಿತೆಯರು ಚೊಚ್ಚಲ ಏಕದಿನ ವಿಶ್ವಕಪ್ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಲ್ಲದೇ, USD 4.48 ಮಿಲಿಯನ್‌ನಷ್ಟು (39.55 ಕೋಟಿ) ದಾಖಲೆಯ ಬಹುಮಾನ ಮೊತ್ತವನ್ನು ಪಡೆದುಕೊಂಡಿದೆ. ಇಷ್ಟು ಬಹುಮಾನದ ಮೊತ್ತ ಇದುವರೆಗೆ ಮಹಿಳಾ ಕ್ರಿಕೆಟ್ ಇತಿಹಾಸದಲ್ಲೇ ಕೊಟ್ಟಿರಲಿಲ್ಲ. ಆದ್ರೆ ಈ ಬಾರಿಯ ಭಾರತೀಯ ಮಹಿಳೆಯರು ಈ ಬಹುಮಾನ ಗಿಟ್ಟಿಸಿಕೊಂಡಿದ್ದಾರೆ.
ಒಟ್ಟು ಎಷ್ಟು ಬಹುಮಾನ?
ಐಸಿಸಿ ಒಟ್ಟು USD 13.88 ಮಿಲಿಯನ್ ಅಂದರೆ ₹122.5 ಕೋಟಿ ರೂ.ನಷ್ಟು ಬಹುಮಾನ ಮೊತ್ತವನ್ನು ಘೋಷಿಸಿದೆ. ಅಂದರೆ ಇದು ಎಲ್ಲಾ ತಂಡಗಳಿಗೆ ಕೊಡಮಾಡುವ ಬಹುಮಾನದ ಮೊತ್ತಗಳಾಗಿದೆ. ಈ ಮೂಲಕ ಕ್ರಿಕೆಟ್‌ಗೆ ಮತ್ತಷ್ಟು ಉತ್ತೇಜನ ನೀಡುವುದಾಗಿದೆ.
ಇನ್ನು ಐಸಿಸಿಯ ಈ ನಿರ್ಧಾರ ಮಹಿಳಾ ಕ್ರೀಡಾಭಿಮಾನಿಗಳಲ್ಲಿ ಕ್ರಿಕೆಟ್ ಬಗ್ಗೆ ಆಸಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೇ ಹಲವು ಯುವಸಮುದಾಯಕ್ಕೂ ಇದು ಸ್ಫೂರ್ತಿ ನೀಡಲಿದೆ. ಐಸಿಸಿ ಈ ಬಾರಿ ನೀಡಿದ ಬಹುಮಾನ ಮೊತ್ತದಿಂದ ಭಾರತ ಹೊಸ ಮೈಲಿಗಲ್ಲು ಸೃಷ್ಟಿಸಿದೆ ಅಂತಾನೇ ಹೇಳಬಹುದು.
ಐಸಿಸಿ ಈ ಬಾರಿ ಏಕದಿನ ವಿಶ್ವಕಪ್‌ಗೆ ಘೋಷಿಸಿದ ಒಟ್ಟು ಹಣ, ಹಿಂದಿನ ಆವೃತ್ತಿಗಿಂತ ಸುಮಾರು ಮೂರು ಪಟ್ಟು ಹೆಚ್ಚಾಗಿದೆ ಎಂದು ವರದಿಯಾಗಿದೆ. ಅಂದರೆ ಈ ಹಿಂದೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಘೋಷಿಸಿಲ್ಲ. ಅಲ್ಲದೇ ಭಾರತ ಕೂಡಾ ತನ್ನ ಮೊದಲ ಮಹಿಳಾ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿದು USD 4.48 ಮಿಲಿಯನ್ (₹39.55 ಕೋಟಿ) ಬಹುಮಾನವನ್ನು ಗಿಟ್ಟಿಸಿಕೊಂಡಿದೆ.
ಸೌತ್ ಆಫ್ರಿಕಾ ತಂಡಕ್ಕೆ ಸಿಕ್ಕ ಹಣವೆಷ್ಟು?
ಇನ್ನು ಫೈನಲ್‌ನಲ್ಲಿ ಭಾರತ ವಿರುದ್ಧ ದಕ್ಷಿಣ ಆಫ್ರಿಕಾ ಸೋತರೂ, ಬಹುಮಾನದ ಮೊತ್ತ ಮಾತ್ರ ಭರ್ಜರಿಯಾಗಿದೆ. ಈ ಮೂಲಕ ಐಸಿಸಿ ದಕ್ಷಿಣ ಆಫ್ರಿಕಾ ತಂಡಕ್ಕೆ USD 2.24 ಮಿಲಿಯನ್ ಅಂದರೆ ಭಾರತದಲ್ಲಿ 19.77 ಕೋಟಿ ರೂಪಾಯಿ ಪಡೆದುಕೊಂಡಿದೆ. ಹಿಂದಿನ ವಿಶ್ವಕಪ್ ರನ್ನರ್-ಅಪ್ ಬಹುಮಾನ ಮೊತ್ತಕ್ಕೆ ಹೋಲಿಸಿದ್ರೆ, ಈ ಬಾರಿ 273% ಪ್ರತಿಶತದಷ್ಟು ಏರಿಕೆಯಾಗಿದೆ.
ಇನ್ನು ಸೆಮಿಫೈನಲಿಸ್ಟ್‌ಗಳಾದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಲಾ USD 1.12 ಮಿಲಿಯನ್ ಅಂದರೆ 9.89 ಕೋಟಿ ರೂ. ಗಳಿಸಿದೆ.
ಇನ್ನು ಪ್ರತಿ ತಂಡವು ಭಾಗವಹಿಸಿದ ಶುಲ್ಕವೆಂದು ಕನಿಷ್ಠ USD 250,000 (₹2.20 ಕೋಟಿ) ಗಳಿಸಿದೆ. ಈ ಮೂಲಕ ಎಲ್ಲಾ ರಾಷ್ಟ್ರಗಳಿಗೆ ಆರ್ಥಿಕವಾಗಿ ಉತ್ತೇಜನ ನೀಡುವುದಾಗಿದೆ.
ಇನ್ನು ಪಾಕಿಸ್ತಾನ 8ನೇ ಸ್ಥಾನ ಮತ್ತು ಬಾಂಗ್ಲಾದೇಶ 7ನೇ ಸ್ಥಾನದಲ್ಲಿದ್ದರೂ, ಕ್ರಮವಾಗಿ ₹4.67 ಕೋಟಿ ರೂ. ಮತ್ತು ₹4.97 ಕೋಟಿ ರೂ. ಪಡೆದುಕೊಂಡಿದೆ. ಈ ಮೂಲಕ ಇನ್ನೂ ಹಲವಾರು ಬಹುಮಾನಗಳ ಜೊತೆಗೆ ಎಲ್ಲಾ ತಂಡಗಳಿಗೂ 122.5 ಕೋಟಿ ರೂ. ಬಹುಮಾನ ಮೊತ್ತವನ್ನು ಹಂಚಿಕೆ ಮಾಡಿದೆ.


Click it and Unblock the Notifications