ಕನ್ನಡದ ಬಹುನಿರೀಕ್ಷಿತ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 12 ಈಗಾಗಲೇ ಆರಂಭವಾಗಿದೆ. ಆರಂಭದಿಂದಲೂ ಬಿಗ್‌ಬಾಸ್ ಕನ್ನಡ ಸೀಸನ್ 12 ಹೊಸ ಹೊಸ ಟ್ವಿಸ್ಟ್ ಕೊಡುತ್ತಲೇ ಇದೆ. ಅಲ್ಲದೇ ಕಾರ್ಯಕ್ರಮ ನಿರೂಪಕ ಕಿಚ್ಚ ಸುದೀಪ್ (Kichcha Sudeep) ಕೂಡಾ 'ಈ ಬಾರಿಯ ಬಿಗ್‌ಬಾಸ್ ಹಿಂದಿನಂತಲ್ಲ' ಎಂದು ಹಿಂಟ್ ಕೊಟ್ಟಿದ್ದರು. ಅದೇ ರೀತಿ ಇದೀಗ ಯಾರೂ ಊಹೆಯೂ ಮಾಡದ ಟ್ವಿಸ್ಟ್ ಒಂದು ವೀಕ್ಷಕರಿಗೆ ಕೊಟ್ಟಿದ್ದಾರೆ. ಬಿಗ್ ಬಾಸ್ ಇತಿಹಾಸದಲ್ಲಿ ಇದೇ ಮೊದಲು ಈ ರೀತಿಯ ನಿರ್ಧಾರ ಕೈಗೊಂಡಿದ್ದು, ಇನ್ನೆರಡು ದಿನದಲ್ಲಿ ಬಿಗ್ ಬಾಸ್ ಸೀಸನ್ 12ರ (Bigg Boss 12) ಮಿಡ್ ಸೀಸನ್ ಫಿನಾಲೆ (Finale) ನಡೆಯಲಿದೆ.

ಹೌದು, 100 ದಿನಗಳ ನಂತರ ಬಿಗ್‌ಬಾಸ್ ಫಿನಾಲೆ ನಡೆಯುತ್ತಿತ್ತು. ಆದ್ರೆ ಈ ಬಾರಿ ಬಿಗ್‌ಬಾಸ್ ಶುರುವಾದ ಮೂರೇ ವಾರದಲ್ಲಿ ಬಿಗ್‌ಬಾಸ್ ಫಿನಾಲೆ ನಡೆಯಲಿದೆ. ಈಗಾಗಲೇ ಫೈನಲಿಸ್ಟ್ ಸ್ಪರ್ಧಿಗಳನ್ನು ಸಹ ಆಯ್ಕೆ ಮಾಡಲಾಗಿದೆ. ಹಾಗಿದ್ರೆ ಮೂರನೇ ವಾರದ ಬಿಗ್‌ಬಾಸ್ ಫಿನಾಲೆಯಲ್ಲಿ ಗೆದ್ದವರಿಗೆ ಎಷ್ಟು ಹಣ ಸಿಗಬಹುದು ಗೊತ್ತಾ?
ಬಿಗ್‌ಬಾಸ್ ವಿನ್ನರ್‌ಗೆ ಎಷ್ಟು ಹಣ ಸಿಗುತ್ತೆ?
ಬಿಗ್‌ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಇದೇ ಅಕ್ಟೋಬರ್ 18 ಮತ್ತು 19 ರಂದು ನಡೆಯಲಿದೆ. ಈಗಾಗಲೇ ಬಿಗ್‌ಬಾಸ್ ಮನೆಯಲ್ಲಿ ಅಶ್ವಿನಿ , ಕಾಕ್ರೋಚ್ ಸ್ಪಂದನಾ, ಮಾಳು ಫೈನಲಿಸ್ಟ್ ಆಗಿದ್ದಾರೆ. ರೂಲ್ಸ್ ಪ್ರಕಾರ ಇನ್ನುಳಿದವರು ಎಲಿಮಿನೇಟ್ ಆಗುತ್ತಾರೆ ಎಂದು ಹೇಳಲಾಗುತ್ತಿದೆ. ಇನ್ನು ಪ್ರತಿ ಸೀಸನ್ ಬಿಗ್‌ಬಾಸ್ ಫೈನಲ್ ವಿನ್ನರ್‌ಗೆ 50 ಲಕ್ಷ ರೂಪಾಯಿ ಮತ್ತು ಟ್ರೋಫಿಯನ್ನು ನೀಡಲಾಗುತ್ತಿತ್ತು. ಆದ್ರೆ ಈ ಬಾರಿ ಮೂರೇ ವಾರಕ್ಕೆ ಬಿಗ್‌ಬಾಸ್ ಕನ್ನಡ ಸೀಸನ್ 12 ಫೈನಲ್ ನಡೆಯಲಿದ್ದು, ಈ ಬಾರಿ ವಿನ್ನರ್‌ಗೆ ಎಷ್ಟು ಹಣ ಸಿಗಬಹುದು ಎಂದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಕೆಲವರು 50 ಲಕ್ಷ ಹಣ ನೀಡಬಹುದು ಎಂದು ಹೇಳಿದರೆ, ಇನ್ನೂ ಕೆಲವರು ಬಿಗ್‌ಬಾಸ್ ಒಟಿಟಿ ವಿನ್ನರ್‌ನಂತೆ ಬಹುಮಾನ ಘೋಷಿಸಬಹುದು ಎಂದು ನಿರೀಕ್ಷಿಸಿದ್ದಾರೆ.
ಯಾವಾಗ ಬಿಗ್‌ಬಾಸ್ ಸೀಸನ್ 12 ಫಿನಾಲೆ?
ಬಿಗ್‌ಬಾಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬಿಗ್‌ಬಾಸ್ ಸೀಸನ್ 12ರ ಫಿನಾಲೆ ನಡೆಯುತ್ತಿದೆ. ಇದೇ ಅಕ್ಟೋಬರ್ 18 ಮತ್ತು 19ರಂದು, ರಾತ್ರಿ 8 ರಿಂದ 11 ಗಂಟೆಗಳವರೆಗೆ ಬಿಗ್‌ಬಾಸ್ ಕನ್ನಡ ಸೀಸನ್ 12 ನಡೆಯಲಿದೆ. ಇನ್ನು ಈ ಫಿನಾಲೆ ಬಳಿಕ ಹಲವರು ಎಲಿಮಿನೇಟ್ ಆಗಲಿದ್ದು, ಇನ್ನೂ ಕೆಲವು ಸೆಲೆಬ್ರಿಟಿಗಳು ಬಿಗ್‌ಬಾಸ್ ಮನೆಯೊಳಗೆ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಎಂಟ್ರಿ ಕೊಡಲಿದ್ದಾರೆ ಎಂದು ವರದಿಯಾಗಿದೆ.
ರಾತ್ರಿ 8 ಗಂಟೆಯಿಂದ 11 ಗಂಟೆಗಳವರೆಗೆ ಅಕ್ಟೋಬರ್ 18 ಮತ್ತು 19 ರಂದು ಒಟ್ಟು 6 ಗಂಟೆಗಳ ಕಾಲ ಕಲರ್ಸ್ ಕನ್ನಡ ವಾಹಿನಿಯಲ್ಲಿ ಅದ್ಧೂರಿಯಾಗಿ ಬಿಗ್‌ಬಾಸ್ ಕನ್ನಡ ಸೀಸನ್ 12 ಪ್ರಸಾರವಾಗಲಿದೆ. ಇನ್ನು ಈ ಹೊಸ ಟ್ವಿಸ್ಟ್ ಬಗ್ಗೆ ಬಿಗ್‌ಬಾಸ್ ಅಭಿಮಾನಿಗಳೂ ಕೂಡಾ ಕುತೂಹಲದಿಂದ ಕಾಯುತ್ತಿದ್ದು, ಈ ಮಿಡ್‌ವೀಕ್ ಫಿನಾಲೆಯ ವಿನ್ನರ್‌ಗೆ ಏನು ಬಹುಮಾನ ಕೊಡುತ್ತಾರೆ ಎಂದು ಕಾದು ಕುಳಿತಿದ್ದಾರೆ.


Click it and Unblock the Notifications