ಬೆಂಗಳೂರು, ಜುಲೈ 20: ಕೇಂದ್ರ ಬಜೆಟ್ ಮಂಡನೆಗೆ ದಿನಗಣನೆ ಆರಂಭವಾಗಿರುವಾಗಿರುವಾಗಲೆ ವಿದ್ಯುತ್ ಚಾಲಿತ ವಾಹನಗಳ ಅಂದರೆ ಇವಿ ವೆಹಿಕಲ್ ವಲಯದಿಂದಲೂ ನಿರೀಕ್ಷೆ ಭಾರ ಹೆಚ್ಚಾಗಿದೆ. Faster Adoption and Manufacturing of Electric and Hybrid Vehicles in India ಅಂದರೆ FAME ಯೋಜನೆಯನ್ನು ವಿಸ್ತರಿಸಬೇಕು ಎನ್ನುವ ಒತ್ತಾಯ ಸಹ ಕೇಳಿಬಂದಿದೆ. ವಿದ್ಯುತ್ ಚಾಲಿತ ವಾಹನಗಳಿಗೆ ಸಂಬಂಧಿಸಿ ನೀಡುತ್ತಿದ್ದ ಸಬ್ಸಿಡಿಯನ್ನು ವಿಸ್ತರಿಸಬೇಕು ಎನ್ನುವುದೇ ದೊಡ್ಡ ಬೇಡಿಕೆ. ಇದಲ್ಲದರೆ ಇನ್ನು ಹೆಚ್ಚಿನ ಪ್ರೋತ್ಸಾಹ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಳ್ಳಬೇಕು ಎನ್ನುವ ನಿರೀಕ್ಷೆ ಇದೆ.
ಯೂನಿಯನ್ ಬಜೆಟ್ 2024 EV ಉದ್ಯಮವನ್ನು ಉತ್ತೇಜಿಸಬಹುದು ಎನ್ನುವ ನಿರೀಕ್ಷೆ ಸಹ ಇದೆ. ಜನರು ಎಲೆಕ್ಟ್ರಿಕ್ ವಾಹಯನ ಖರೀದಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು, ಬ್ಯಾಟರಿಗೆ ಸಂಬಂದಧಿತ ಗೊಂದಲಗಳಿಗೆ ಪರಿಹಾರ, ಹೆದ್ದಾರಿಗಳಲ್ಲಿ ಚಾರ್ಜಿಂಗ್ ಸ್ಟೇಶನ್ ನಿರ್ಮಾಣಕ್ಕೆ ಸಂಬಂಧಿಸಿ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯವೂ ಇದೆ.

ಇದು ಅಲ್ಲದೇ ಇವಿ ಮತ್ತು ಇವಿ ಉದ್ಯಮಕ್ಕೆ ಸಂಬಂಧಿಸಿ ಪ್ರಚಾರ, ಸಂಶೋಧನೆ ಮತ್ತು ಅಭಿವೃದ್ಧಿಗೂ ಸಂಬಂಧಿಸಿ ಪರಿಹಾರ ಕ್ರಮಗಳ ನಿರೀಕ್ಷೆಯಲ್ಲಿ ಆಟೋಮೊಬೈಲ್ ವಲಯ ಇದೆ. ದೇಶದಲ್ಲಿಯೇ ಇನ್ನು ಹೆಚ್ಚಿನ ಪರಿಕರಗಳ ಉತ್ಪಾದನೆಗೂ ಕೈಗಾರಿಕೆಗ ಸ್ಥಾಪನೆಗೆ ಬಜೆಟ್ ನಲ್ಲಿ ಒತ್ತು ನೀಡುವ ಸಾಧ್ಯತೆ ಇದೆ.
FAME ಯೋಜನೆಯ ಮೂರನೇ ಹಂತವನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಆದರೆ ಮುಂಬರುವ ಬಜೆಟ್‌ನಲ್ಲಿ ಈ ಬಗ್ಗೆ ಉಲ್ಲೇಖ ಸಾಧ್ಯವಿಲ್ಲ ಎಂದು ಕೇಂದ್ರ ಭಾರೀ ಕೈಗಾರಿಕೆಗಳ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿರುವುದು ಒಂದಿಷ್ಟು ಪ್ರಶ್ನೆಗಳು ಏಳುವಂತೆ ಮಾಡಿದೆ. ಪರಿಸರ ಮಾಲಿನ್ಯ ನಿಯಂತ್ರಣ, ನವೀಕರಿಸಿಕೊಳ್ಳಬಹುದಾದ ಶಕ್ತಿಯ ಬಳಕೆ ಜತೆಗೆ ಕೈಗಾರಿಕೆಗಳ ಉತ್ತೇಜನಕ್ಕೆ ಬಜೆಟ್ ಮುಂದಾಗುವ ನಿರೀಕ್ಷೆ ಇದ್ದು ಸಹಜವಾಗಿಯೇ ಇವಿ ವಲಯವೂ ಬಜೆಟ್ ಎದುರು ನೋಡುತ್ತಿದೆ.


Click it and Unblock the Notifications