ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಮಂಡಿಸುವ ಸಂದರ್ಭದಲ್ಲಿ ಸ್ವಿಗ್ಗಿ, ಜೊಮಾಟೊ, ಝೆಪ್ಟೊ, ಬಿಗ್‌ಬಾಸ್ಕೆಟ್ ಮತ್ತು ಹಲವಾರು ಇತರ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಕಾರ್ಯನಿರ್ವಹಿಸುವ ಒಟ್ಟು ಒಂದು ಕೋಟಿ ಗಿಗ್ ಕಾರ್ಮಿಕರಿಗೆ ಗುರುತಿನ (ಐಡಿ) ಕಾರ್ಡ್‌ಗಳನ್ನು ನೀಡಲಾಗುವುದು ಎಂದು ಘೋಷಿಸಿದ್ದಾರೆ.
ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯಡಿಯಲ್ಲಿ 1 ಕೋಟಿ ಗಿಗ್ ಕಾರ್ಮಿಕರಿಗೆ ಆರೋಗ್ಯ ರಕ್ಷಣಾ ಸೌಲಭ್ಯಗಳನ್ನು ಸರ್ಕಾರ ನೀಡಲಿದ್ದು, ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಅಂದಹಾಗೆ E-Shram ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವುದರಿಂದ ಸುಮಾರು 1 ಕೋಟಿ 'ಗಿಗ್ ಕಾರ್ಮಿಕರಿಗೆ' ವಿವಿಧ ರೀತಿಯ ಸೌಲಭ್ಯಗಳು ದೊರೆಯುತ್ತವೆ. ಆದರೆ, ಈ ಸೌಲಭ್ಯಗಳನ್ನು ಪಡೆಯಲು 'ಗಿಗ್ ಕಾರ್ಮಿಕರು' ತಮ್ಮನ್ನು ತಾವು ಗಿಗ್ ಕೆಲಸಗಾರರು ಎಂದು ನೋಂದಾಯಿಸಿಕೊಳ್ಳಬೇಕು. ಆದರೆ ಇದರ ನೋಂದಣಿ ಬಗ್ಗೆ ಬಹಳ ಜನರಿಗೆ ಅನುಮಾನಗಳಿರುತ್ತದೆ. ಹೀಗಾಗಿ ಇಲ್ಲಿ ಒಂದಷ್ಟು ವಿವರಗಳು ನೀಡಿದ್ದೇವೆ. ಮೊದಲನೆಯದಾಗಿ E-Shram ಪೋರ್ಟಲ್‌ನಲ್ಲಿ ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ವಿಧಾನಗಳಲ್ಲಿ ನೋಂದಣಿ ಮಾಡಬಹುದು.
'ಗಿಗ್ ಕೆಲಸಗಾರರು' ಯಾರು ಮತ್ತು ನೋಂದಣಿ ಎಲ್ಲಿ ನಡೆಯುತ್ತದೆ?s
ನೀತಿ ಆಯೋಗವು ಗಿಗ್ ಕಾರ್ಮಿಕರನ್ನು "ಸಾಂಪ್ರದಾಯಿಕ ಉದ್ಯೋಗದಾತ-ಉದ್ಯೋಗಿ ವ್ಯವಸ್ಥೆಯ ಹೊರಗೆ" ಉದ್ಯೋಗದಲ್ಲಿರುವವರು ಎಂದು ವ್ಯಾಖ್ಯಾನಿಸುತ್ತದೆ. ಈ ಕಾರ್ಮಿಕರು ಸಾಮಾನ್ಯವಾಗಿ ಎರಡು ವಿಭಾಗಗಳಲ್ಲಿ ಬರುತ್ತಾರೆ: ವೇದಿಕೆ ಆಧಾರಿತ (ಪ್ಲಾಟ್‌ಫಾರ್ಮ್) ಮತ್ತು ವೇದಿಕೆ ಆಧಾರಿತವಲ್ಲದ ಕಾರ್ಮಿಕರು.

ಗಿಗ್ ಕಾರ್ಮಿಕರು ಎಂದರೆ ತಾತ್ಕಾಲಿಕ ಕೆಲಸ ಮಾಡುವ ಕಾರ್ಮಿಕರು. ಬೇರೆ ರೀತಿಯಲ್ಲಿ ಹೇಳುವುದಾದರೆ, ಅವರು ಒಂದು ಕೆಲಸವನ್ನು ತಾತ್ಕಾಲಿಕವಾಗಿ ಮಾಡುತ್ತಾರೆ ಮತ್ತು ಉತ್ತಮ ಅವಕಾಶಗಳು ಸಿಕ್ಕಾಗ ತಮ್ಮ ಕೆಲಸವನ್ನು ಬದಲಾಯಿಸುತ್ತಾರೆ. ಸ್ವಿಗ್ಗಿ, ಜೊಮಾಟೊ, ಉಬರ್‌ನಂತಹ ಅಪ್ಲಿಕೇಶನ್‌ಗಳ ಮೂಲಕ ವಸ್ತುಗಳನ್ನು ತಲುಪಿಸುವ ಕಾರ್ಮಿಕರು ಇದಕ್ಕೆ ಉದಾಹರಣೆ. ಅಧಿಕೃತ ವೆಬ್‌ಸೈಟ್ https://eshram.gov.in/ ಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದು. ನೋಂದಣಿ ನಂತರ, ಗಿಗ್ ಕಾರ್ಮಿಕರಿಗೆ ಕಾರ್ಡ್ ನೀಡಲಾಗುತ್ತದೆ.
ಆನ್‌ಲೈನ್‌ನಲ್ಲಿ ನೋಂದಣಿ ಮಾಡುವುದು ಹೇಗೆ?
1. ಮೊದಲಿಗೆ https://eshram.gov.in/ ವೆಬ್‌ಸೈಟ್‌ಗೆ ಭೇಟಿ ನೀಡಿ.
2. ಮುಖಪುಟದಲ್ಲಿ 'Register on eshram' ಮೇಲೆ ಕ್ಲಿಕ್ ಮಾಡಿ.
3. ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.
4. ನೀವು EPFO ಮತ್ತು ESIC ಸದಸ್ಯರಾಗಿದ್ದೀರಾ ಅಥವಾ ಇಲ್ಲವೇ ಎಂದು ಉತ್ತರಿಸಿ.
5. 'Send OTP' ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಮೊಬೈಲ್‌ಗೆ ಬಂದ OTP ಅನ್ನು ನಮೂದಿಸಿ.
6. 14 ಅಂಕಿಗಳ ಆಧಾರ್ ಸಂಖ್ಯೆಯನ್ನು ನಮೂದಿಸಿ, ನಿಯಮಗಳು ಮತ್ತು ಷರತ್ತುಗಳನ್ನು ಟಿಕ್ ಮಾಡಿ ಮತ್ತು 'Submit' ಮೇಲೆ ಕ್ಲಿಕ್ ಮಾಡಿ.
7. ಹೊಸ ಪುಟದಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯಾದ ಜನ್ಮ ದಿನಾಂಕ, ವಿಳಾಸ, ಶಿಕ್ಷಣ ಮತ್ತು ಬ್ಯಾಂಕ್ ವಿವರಗಳನ್ನು ಭರ್ತಿ ಮಾಡಿ.
8. ಎಲ್ಲಾ ಮಾಹಿತಿಯನ್ನು ಎಚ್ಚರಿಕೆಯಿಂದ ಓದಿ, ಸಮ್ಮತಿ ಮೇಲೆ ಟಿಕ್ ಮಾಡಿ ಮತ್ತು 'Submit' ಮೇಲೆ ಕ್ಲಿಕ್ ಮಾಡಿ.
9. ನಿಮ್ಮ ನೋಂದಣಿ ಪೂರ್ಣಗೊಳ್ಳುತ್ತದೆ. ನೀವು ಅದನ್ನು ಡೌನ್‌ಲೋಡ್ ಮಾಡಿಕೊಂಡು ಪ್ರಿಂಟ್‌ಔಟ್ ತೆಗೆದುಕೊಳ್ಳಬಹುದು.
ಆಫ್‌ಲೈನ್‌ನಲ್ಲಿ ನೋಂದಣಿ ಮಾಡುವುದು ಹೇಗೆ
ಇ-ಶ್ರಮ್ ಕಾರ್ಡ್‌ನ ಪ್ರಯೋಜನಗಳು
ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಾಯಿತ ಕಾರ್ಮಿಕರು ಹಲವಾರು ಪ್ರಯೋಜನಗಳನ್ನು ಪಡೆಯುತ್ತಾರೆ.
ಇ-ಶ್ರಮ್ ಕಾರ್ಡ್ ಹೊಂದಿರುವವರು ಯಾವುದೇ ಕಾರಣದಿಂದಾಗಿ ಮರಣ ಹೊಂದಿದಲ್ಲಿ, ಅವರ ಕುಟುಂಬಕ್ಕೆ 2 ಲಕ್ಷ ರೂ.ಗಳವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ. ಅಂಗವೈಕಲ್ಯ ಉಂಟಾದರೆ 1 ಲಕ್ಷ ರೂ. ನೀಡಲಾಗುತ್ತದೆ. ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆಯಡಿ, 60 ವರ್ಷ ವಯಸ್ಸಿನ ನಂತರ ಅವರಿಗೆ ಮಾಸಿಕ 3,000 ರೂ. ಪಿಂಚಣಿ ನೀಡಲಾಗುತ್ತದೆ. ಇದಲ್ಲದೆ, ಸರ್ಕಾರವು ಅವರನ್ನು ಉದ್ಯೋಗಾವಕಾಶಗಳು ಮತ್ತು ಅವರ ಕೌಶಲ್ಯಗಳಿಗೆ ಹೊಂದಿಕೆಯಾಗುವ ತರಬೇತಿ ಕಾರ್ಯಕ್ರಮಗಳಿಗೆ ಸಂಪರ್ಕಿಸುತ್ತದೆ.


Click it and Unblock the Notifications