PM ಕುಸುಮ್ ಸೋಲಾರ್ ಸಬ್ಸಿಡಿ ಯೋಜನೆ 2024: ಅರ್ಜಿ ಸಲ್ಲಿಸುವುದು ಹೇಗೆ?

ದೂರದ ಪ್ರದೇಶಗಳಲ್ಲಿ ಭೂಮಿಯನ್ನ ಹೊಂದಿರುವವರಿಗೆ ಹಾಗೆ ಬಂಜರು ಭೂಮಿಯನ್ನ ಹೊಂದಿರುವವರಿಗಾಗಿ ಸರ್ಕಾರ ಒಂದು ಹೊಸ ಉಪಕ್ರಮವನ್ನು ಅನಾವರಣಗೊಳಿಸಿದೆ. ಈ ಮೂಲಕ ಪಾಳು ಬಿದ್ದಿರುವ ಭೂಮಿಯನ್ನ ಬಳಸಿಕೊಂಡು ರೈತರು M KUSUM ಯೋಜನೆಯ ಸದುಪಯೋಗ ಪಡೆಯಬಹುದು, ಅಲ್ಲದೆ ಆರ್ಥಿಕವಾಗಿ ಸವಾಲುಗಳನ್ನ ಎದುರಿಸುತ್ತಿರುವವರು ಕೂಡ ಈ ಯೋಜನೆಯ ಉಪಯೋಗವನ್ನ ಪಡೆಯಬಹುದು.

PM KUSUM ಯೋಜನೆಯು 2019ರಲ್ಲಿ ಆರಂಭವಾಗಿದೆ. ಭಾರತ ಸರ್ಕಾರವು ರೈತರಿಗೆ ಸೌರ ನೀರಾವರಿ ಪಂಪ್‌ಗಳು ಮತ್ತು ಸೌರ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು ಸಹಾಯ ಮಾಡುವ ಯೋಜನೆಯಾಗಿದೆ. ಇದರಿಂದ ಸಮಾನ್ಯ ರೈತರು ತಮ್ಮ ಕೃಷ್ಟಿ ಭೂಮಿಯಲ್ಲಿ ಸೌರಶಕ್ತಿ ಕೇಂದ್ರಗಳನ್ನ ಸ್ಥಾಪಿಸಬಹುದು ಇದರ ಜೊತೆಗೆ ಇದರಲ್ಲಿ ಉತ್ಪಾದಿಸಿದ ವಿದ್ಯೂತ್‌ಅನ್ನು ಡಿಸ್ಕಾಂಗಳಿಗೆ ಮಾರಾಟ ಮಾಡಬಹುದು. ಅಥವ ರೈತರು ಇದರಿಂದ ಬರುವ ಬಾಡಿಗೆಗಾಗಿ ತಮ್ಮ ಆಸ್ತಿಯನ್ನ ಸರ್ಕಾರಕ್ಕೆ ಗುತ್ತಿಗೆ ಕೊಡಬಹುದು. ಇನ್ನು ಇದಕ್ಕೆ ಪರ್ಯಾಯವಾಗಿ ಸರ್ಕಾರ ಸೌರಶಕ್ತಿ- ಚಾಲಿತ ಪಂಪ್‌ಗಳನ್ನ 60% ಸಬ್ಸಿಡಿಯಲ್ಲಿ ನೀಡುತ್ತದೆ. ವಿದ್ಯುತ್‌ ಅನ್ನು ದೇಶೀಯವಾಗಿ ಬಳಸಿಕೊಳ್ಳಲು ಅಥವಾ ಡಿಸ್ಕಾಂಗಳಿಗೆ ಮಾರಾಟ ಮಾಡುವ ಅವಕಾಶವಿರುತ್ತದೆ, ಈ ಯೋಜನೆಯಿಂದ ರೈತರು ಎರಡರ ಪ್ರಯೋಜನವನ್ನು ಪಡೆಯಬಹುದು.

PM ಕುಸುಮ್ ಸೋಲಾರ್ ಸಬ್ಸಿಡಿ ಯೋಜನೆಯ ಬಗ್ಗೆ ಇಲ್ಲಿ ತಿಳಿಯಿರಿ

ಸರ್ಕಾರ ನೀಡುತ್ತಿರುವ ಈ ಸೌರ ಸಬ್ಸಿಡಿ ಯೋಜನೆಯಿಂದಾಗಿ ಬಂಜರು ಭೂಮಿ, ಜೌಗು ಹಿಡಿದ ಭೂಮಿ ಅಥವಾ ದೂರದ ಭೂ ಮಾಲೀಕರು ಈ ಯೋಜನೆಯ ಉಪಯೋಗವನ್ನ ಬಳಸಿಕೊಳ್ಳಬಹುದು. ಅಥವಾ ಆಸಕ್ತ ಡೆವಲಪರ್‌ಗಳಿಗೆ ತಮ್ಮ ಭೂಮಿಯನ್ನು ಗುತ್ತಿಗೆಯನ್ನ ನೀಡಿ ಅದರ ಮೂಲಕ ಈ ಪ್ರಯೋಜನಗಳನ್ನು ಪಡೆಯಬಹುದು.

ಹಾಗೆ ಇದರ ಸದುಪಯೋಗ ಪಡೆದುಕೊಳ್ಳುವ ರೈತರು ಉತ್ಪಾದಿಸಿದ ವಿದ್ಯುತ್ ಅನ್ನು ಮಾರಾಟ ಮಾಡುವ ಮೂಲಕ 25 ವರ್ಷಗಳಲ್ಲಿ ಪ್ರತೀ ವರ್ಷ 60,000 ರಿಂದ 1 ಲಕ್ಷದವರೆಗೆ ಆದಾಯವನ್ನು ಪಡೆಯಬಹುದು. ಇದು ಪರಿಸರ ಸ್ನೇಹಿ ಕೂಡ ಆಗಿದ್ದು, ಡೀಸೆಲ್‌ ಜನರೇಟರ್‌ಗಳ ಬಳಕೆ ಹಾಗೂ ಇಂಧನಗಳ ವೆಚ್ಚವನ್ನು ಕಡಿತಗೊಳಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.

ಪ್ರಧಾನ ಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಯೋಜನೆ ಮಾಹಿತಿ

ನೋಡಲ್‌ ಏಜೆನ್ಸಿ- ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಭಾರತ ಸರ್ಕಾರ
ಯೋಜನೆಯ ಹೆಸರು- ಪ್ರಧಾನ ಮಂತ್ರಿ ಕಿಸಾನ್‌ ಊರ್ಜಾ ಸುರಕ್ಷಾ ಏವಂ ಉತ್ಥಾನ್‌ ಮಹಾಭಿಯಾನ್‌
ಸಬ್ಸಿಡಿ ರಚನೆ- ಕೇಂದ್ರ ಸರ್ಕಾರ:30%, ರಾಜ್ಯ ಸರ್ಕಾರ: 30%, ರೈತರು: 40%
ಸಾಲದ ಅವಧಿ- 30 ವರ್ಷಗಳು
ವಾರ್ಷಿಕ ಗಳಿಕೆಗಳು- ವರ್ಷಕ್ಕೆ 1,00,000 ರೂ
ಅಧಿಕೃತ ವೆಬ್‌ಸೈಟ್‌- pmkusum.mnre.gov.in

MNRE ಸೌರ ಸಬ್ಸಿಡಿ ಯೋಜನೆಯ ಪ್ರಯೋಜನಗಳು

PM-KUSUM ಯೋಜನೆಯು ಪರಿಸರ ಸ್ನೇಹಿ ಚಟುವಟಿಕೆಗಳನ್ನ ಉತ್ತೇಜಿಸುವ ಉದ್ದೇಶವನ್ನ ಹೊಂದಿದೆ. ಅಲ್ಲದೆ ಈ ಯೋಜನೆಯು ಕೃಷಿ ಮತ್ತು ದೇಶೀಯ ಅಗತ್ಯಗಳಿಗಾಗಿ ಈಯೋಜನೆಯನ್ನ ಸಮರ್ಥವಾಗಿ ಬಳಸಿಕೊಳ್ಳಬಹುದು. ಹಾಗೆ ಇದು ರೈತರ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಇನ್ನು ಈ PM KUSUM ಕಾರ್ಯಕ್ರಮವನ್ನು ಮೂರು ವಿಭಿನ್ನ ವಿಭಾಗಗಳಾಗಿ ರಚಿಸಲಾಗಿದೆ ಮತ್ತು ಈ ಎಲ್ಲಾ ವಿಭಾಗಗಳು ರೈತರ ಕೈಗೆಟಯಕುವ ರೀತಿಯಲ್ಲೇ ಇವೆ. ಹಾಗೆ ಇದು ಸರ್ಕಾರ ನೀಡಿದ ನಿರ್ದೇಶನಗಳಿಗೆ ಅನುಗುಣವಾಗಿದೆ.

ಘಟಕ ಎ

ಇದರಲ್ಲಿ ರೈತರು, ಡೆವೆಲಪರ್‌ಗಳು, ಸಹಕಾರಿಗಳು, ಪಂಚಾಯತ್‌ಗಳು ಮತ್ತು ರೈತ ಉತ್ಪಾದಕರಂತಹ ಘಟಕಗಳು 10,000 MW ಸಾಮರ್ಥ್ಯದ ಸೌರ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸಬಹದು. ಈ ಅನುಸ್ಥಾಪನೆಯನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರಗಳಿಂದ ಯಾವುದೇ ಹಣಕಾಸಿನ ನೆರವಿಲ್ಲದೆ ನೆಲದ ಮೇಲೆ ಅಥವಾ ಸ್ಟಿಲ್ಟ್‌ಗಳ ಮೇಲೆ ಇದನ್ನ ಜೋಡಿಸಬಹುದು. ಬಂಜರು, ಪಾಳು, ಹುಲ್ಲುಗಾವಲು, ಜವುಗು ಅಥವಾ ರೈತರಿಗೆ ಸೇರಿದ ಭೂಮಿಗಳಲ್ಲಿ 500 KW ಮತ್ತು 2 MW ವರೆಗಿನ ನವೀಕರಿಸಬಹುದಾದ ಪವರ್ ಜನರೇಟರ್‌ಗಳನ್ನು ನಿರ್ಮಿಸಲು ಅವಕಾಶವಿದೆ.

ಘಟಕ ಬಿ

ಸ್ವತಂತ್ರ ಸೌರಶಕ್ತಿ ಚಾಲಿತ ಕೃಷಿ ಪಂಪ್‌ಗಳನ್ನ ಸ್ಥಾಪಿಸಲು ವೈಯಕ್ತಿಕ ರೈತರಿಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಈ ಉಪಕ್ರಮವು ಸಜ್ಜಾಗಿದೆ. ಈ ಪರಿವರ್ತನೆಯನ್ನು ಬೆಂಬಲಿಸಲು, ವೆಚ್ಚದ 30% ರಷ್ಟು ಸಹಾಯಧನವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒದಗಿಸುತ್ತವೆ, ಉಳಿದ 40% ಹಣವನ್ನು ರೈತರಿಗೆ ನೀಡುತ್ತವೆ. ಹೆಚ್ಚಿನ ಅಶ್ವಶಕ್ತಿಯ ಪಂಪ್‌ಗಳನ್ನು ಅಳವಡಿಸಬಹುದಾದರೂ, 7.5 hp ವರೆಗಿನ ಪಂಪ್‌ಗಳಿಗೆ ಸರ್ಕಾರ ಹಣಕಾಸಿನ ನೆರವನ್ನುಸಹ ನೀಡುತ್ತಿದೆ.

ಘಟಕ ಸಿ

35ಲಕ್ಷ ಗ್ರಿಡ್-ಸಂಪರ್ಕಿತ ಕೃಷಿ ಪಂಪ್‌ಗಳನ್ನು ಸೋಲಾರೈಸ್‌ ಮಾಡುವುದರ ಮೇಲೆ ಇದು ಕೇಂಧ್ರಿಕರಿಸುತ್ತದೆ. ಇದರಲ್ಲಿ ಹಣಕಾಸು ಆಯ್ಕೆಯ ಅವಕಾಶವಿದ್ದು, ಅನುಸ್ಥಾಪನಾ ವೆಚ್ಚದ 70% ವರೆಗೆ ಸಾಲಗಳಿಗೆ ಅವಕಾಶ ಮಾಡಿಕೊಡುತ್ತದೆ. ಹಾಘೆ ರೈತರ ಮೇಲಿನ ಆರ್ಥಿಕ ಹೊರೆಯನ್ನ ಕಡಿಮೆ ಮಾಡಲು ಹೆಚ್ಚುವರಿ ಸಬ್ಸಿಡಿಗಳನ್ನ ನೀಡುವ ಗುರಿಯನ್ನ ರಾಜ್ಯಗಳು ಹೊಂದಿವೆ. ಹಾಗೆ ಉತ್ಪಾದಿಸಿದ ಸೌರಶಕ್ತಿಯ ಮೂಲಕ ರೈತರು ಅವರ ನೀರಾವರಿ ಅಗತ್ಯಗಳನ್ನ ಅವರು ಪೂರೈಸಿಕೊಳ್ಳಬಹುದು. ಹಾಗೆ ಹೆಚ್ಚುವರಿ ವಿದ್ಯುತ್‌ಅನ್ನು ಡೆಸ್ಕಾಂಗೆ ಮಾರಾಟ ಮಾಡುವ ಅವಕಾಶವಿರುತ್ತದೆ.

KUSUM ಯೋಜನೆಗೆ ಅಗತ್ಯವಿರುವ ಅರ್ಹತೆ ಮತ್ತು ದಾಖಲೆಗಳು

ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಬಯಸುವವರು ಮುಖ್ಯವಾಗಿ ಭೂಮಾಲೀಕರಾಗಿರಬೇಕು, ಗ್ರಾಮೀಣ ಅಥವಾ ಆಫ್-ಗ್ರಿಡ್ ಸ್ಥಳಗಳಲ್ಲಿ ಭೂಮಿಯನ್ನು ಹೊಂದಿರುವವರಿಗೆ ಹೆಚ್ಚಿನ ಆದ್ಯತೆ. ಇದಲ್ಲದೆ, ಆಸ್ತಿಯು ವಿದ್ಯುತ್ ಸಬ್‌ಸ್ಟೇಷನ್‌ನ 5-ಕಿಲೋಮೀಟರ್‌ನೊಳಗೆ ಇರಬೇಕು. ಅಗತ್ಯ ದಾಖಲೆಗಳಿಗೆ ಸಂಬಂಧಿಸಿದಂತೆ, ಅರ್ಜಿ ಸಲ್ಲಿಸಲು ಬಯಸುವ ವ್ಯಕ್ತಿಗಳು ಭೂ ಮಾಲೀಕತ್ವದ ಪುರಾವೆ, ಅಸ್ತಿತ್ವದಲ್ಲಿರುವ ಯಾವುದೇ ಗುತ್ತಿಗೆ ಒಪ್ಪಂದಗಳು, ಬ್ಯಾಂಕ್ ಖಾತೆಯ ವಿವರಗಳು, ಕಾನೂನು ಭೂ ದಾಖಲೆಯಾಗಿರುವ ಖಾಸ್ರಾ ಖಾತೌನಿ ಸಂಖ್ಯೆ, ವಿಳಾಸದ ಪುರಾವೆ, ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋ, ಸ್ವಯಂ ಘೋಷಣೆಯ ಹೇಳಿಕೆ, ಪುರಾವೆಗಳು ಸೇರಿವೆ. GST ನೋಂದಣಿ, ಮತ್ತು ಆಧಾರ್ ಕಾರ್ಡ್, ವೋಟರ್ ಐಡಿ, ಪ್ಯಾನ್ ಕಾರ್ಡ್ ಮತ್ತು ಡ್ರೈವರ್ ಲೈಸೆನ್ಸ್ ಸೇರಿದಂತೆ ಕೆಲವೊಂದಿಷ್ಟು ದಾಖಲೆಗಳನ್ನ ಇಟ್ಟುಕೊಂಡಿರಬೇಕು.

PM ಕುಸುಮ್ ಸೋಲಾರ್ ಸಬ್ಸಿಡಿಗೆ ಅರ್ಜಿ ಸಲ್ಲಿಸುವುದು ಹೇಗೆ?

1.ಪ್ರಧಾನ ಮಂತ್ರಿ ಕುಸುಮ್ ಯೋಜನೆಯಲ್ಲಿ ಭಾಗವಹಿಸಲು ಬಯಸುವ ರೈತರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

2. ಸೈಟ್‌ನಲ್ಲಿ PM KUSUM ಸ್ಕೀಮ್‌ಗಾಗಿ ರಾಜ್ಯದ ಪ್ರಕಾರ ವರ್ಗೀಕರಿಸಲಾದ ಅಪ್ಲಿಕೇಶನ್ ಲಿಂಕ್ ಅನ್ನು ನೀವು ಕಾಣಬಹುದು. ಸೈಟ್ ಅನ್ನು ಪ್ರವೇಶಿಸಿದ ನಂತರ, ಅರ್ಜಿದಾರರು ತಮ್ಮ ಆದ್ಯತೆಯ ಆಯ್ಕೆಯನ್ನು ಆರಿಸಬೇಕು.

3. ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ನಮೂದಿಸುವ ಮೂಲಕ ಅರ್ಜಿಯನ್ನು ಪೂರ್ಣಗೊಳಿಸಿ ಮತ್ತು ಅಗತ್ಯ ದಾಖಲೆಗಳನ್ನು ಲಗತ್ತಿಸಿ.

4. ನಿಮ್ಮಅರ್ಜಿ ಸಲ್ಲಿಕೆಯನ್ನು ಅಂತಿಮಗೊಳಿಸುವ ಮೊದಲು ಅಪ್ಲಿಕೇಶನ್ ಅನ್ನು ಸಂಪೂರ್ಣವಾಗಿ ಪರಿಶೀಲಿಸುವುದು ಮುಖ್ಯ.

5. ಒಮ್ಮೆ ಸಲ್ಲಿಸಿದ ನಂತರ, ನೋಂದಣಿ ಸಂಖ್ಯೆ ಸೇರಿದಂತೆ ಸ್ವೀಕೃತಿ ಸಂದೇಶವನ್ನು ಕಳುಹಿಸಲಾಗುತ್ತದೆ, ಯಶಸ್ವಿ ದಾಖಲಾತಿಯನ್ನು ದೃಢೀಕರಿಸುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+