ಬೆಂಗಳೂರು, ಮಾರ್ಚ್ 4: ಭಾರತ ದೇಶದಲ್ಲಿ ಆಧಾರ್ ಕಾರ್ಡ್ ಒಂದು ಪ್ರಮುಖ ದಾಖಲೆಯಾಗಿದೆ. ಹೀಗಿರುವಾಗ, ಆಧಾರ್ ಕಾರ್ಡ್ ಕಳೆದು ಹೋಗದಂತೆ ಎಚ್ಚರಿಕೆ ವಹಿಸಬೇಕು. ಏಕೆಂದರೆ, ನಿಮ್ಮ ಬಳಿಯಿರುವ ಕಳೆದು ಹೋದರೆ ಅಥವಾ ಹಾನಿಗೊಳಗಾದರೆ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಈ ನಡುವೆ ಪಿವಿಸಿ ಆಧಾರ್ ಕಾರ್ಡ್‌ನ್ನು ಪಡೆಯುವುದಕ್ಕೆ ಮನೆಯಲ್ಲೇ ಕುಳಿತು ಆನ್‌ಲೈನ್‌ನಲ್ಲಿ ಅಪ್ಲೈ ಮಾಡಬಹುದು. ಕೇವಲ 50ರೂ. ಪಾವತಿಸುವ ಮೂಲಕ ಯುಐಡಿಎಐ ವೆಬ್‌ಸೈಟ್‌ನಲ್ಲಿ ಆಧಾರ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು.

ಈ ಪಿವಿಸಿ ಕಾರ್ಡ್‌ಗಳನ್ನು ಪಾಲಿವಿನೈಲ್ ಕ್ಲೋರೈಡ್‌ನಿಂದ ತಯಾರಿಸಲಾಗಿರುತ್ತದೆ. ಈ ಕಾರಣಕ್ಕಾಗಿ ಇದನ್ನು ಪಿವಿಸಿ ಕಾರ್ಡ್‌ಗಳು ಎಂದು ಕರೆಯಲಾಗುತ್ತದೆ. ಇದು ಒಂದು ಮಾದರಿಯ ಪ್ಲಾಸ್ಟಿಕ್ ಕಾರ್ಡ್ ಆಗಿದ್ದು, ಅದರ ಮೇಲೆ ಆಧಾರ್ ಕಾರ್ಡ್ ಮಾಹಿತಿಯನ್ನು ಮುದ್ರಿಸಲಾಗುತ್ತದೆ. ಯುಐಡಿಎಐ ಪ್ರಕಾರ, ಈ ಕಾರ್ಡ್ ಸುರಕ್ಷಿತ ಕ್ಯೂಆರ್ ಕೋರ್ಡ್, ಹೊಲೊಗ್ರಾಮ್, ಮೈಕೋ ಟೆಕ್ಸ್ಟ್, ವಿತರಣೆ ದಿನಾಂಕ ಮತ್ತು ಕಾರ್ಡ್‌ನ ಮುದ್ರಣ ಮತ್ತು ಇತರೆ ಮಾಹಿತಿಯನ್ನು ಒಳಗೊಂಡಿರುತ್ತದೆ.
ಈ ಪಿವಿಸಿ ಆಧಾರ್ ಕಾರ್ಡ್ ಮನೆಗೆ ತಲುಪಿಸುವುದು ಹೇಗೆ?
1. ನೀವು ಯುಐಡಿಎಐ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.
2. ಬಳಿಕ ನೀವು ಈ ವೆಬ್‌ಸೈಟ್‌ನಲ್ಲಿ ನಿಮ್ಮ 12 ಅಂಕಿಯ ಆಧಾರ್ ಕಾರ್ಡ್ ಸಂಖ್ಯೆಯನ್ನು ನೀವು ನಮೂದಿಸಬೇಕಾಗುತ್ತದೆ.
3. ಇದಾದ ಬಳಿಕ ನೀವು ಭದ್ರತಾ ಕೋಡ್ ಅಥವಾ ಕ್ಯಾಪ್ಚಿಕಾ ನಮೂದಿಸಬೇಕು.
4. ನಂತರ ಒಟಿಪಿ ಆಯ್ಕೆ ಸೆಲೆಕ್ಟ್ ಮಾಡಬೇಕು.
5. ಅದಾದ ನಂತರ ನಿಮ್ಮ ನೋಂದಾಯಿತ ಮೊಬೈಲ್‌ಗೆ ಬರುವ ಒಟಿಪಿಯನ್ನು ನಮೂದಿಸುವ ಮೂಲಕ ಸಬ್ಮಿಟ್ ಮಾಡಬೇಕು.
6. ನಂತರ ನೀವು ನನ್ನ ಆಧಾರ್ ವಿಭಾಗಕ್ಕೆ ಹೋಗಿ ಆಧಾರ್ ಪಿವಿಸಿ ಕಾರ್ಡ್ ಅನ್ನು ಆರ್ಡರ್ ಮಾಡಿ ಎನ್ನುವುದನ್ನು ಕ್ಲಿಕ್ ಮಾಡಬೇಕು.
7. ಮುಂದೆ ನೀವು ನಿಮ್ಮ ಆಧಾರ್ ಮಾಹಿತಿಯನ್ನು ಇಲ್ಲಿ ನೋಡಬಹುದು.
8. ಬಳಿಕ ಮುಂದಿನ ಆಯ್ಕೆಯನ್ನು ಕ್ಲಿಕ್ ಮಾಡಿ.
9. ಇದಾದ ನಂತರ ನೀವು ನೀಡಿದ ಪಾವತಿ ಆಯ್ಕೆಗಳ ಮೇಲೆ ಕ್ಲಿಕ್ ಮಾಡಬೇಕು.
10. ಇದರ ನಂತರ ಶುಲ್ಕ ಪಾವತಿಗಾಗಿ ಕ್ರೆಡಿಟ್/ಡೆಬಿಟ್, ನೆಟ್ ಬ್ಯಾಂಕಿಂಗ್ ಹಾಗೂ ಯುಪಿಐ ಆಯ್ಕೆಗೆ ಆಪ್ಶನ್‌ನ್ನು ನೋಡಬಹುದು.
11. ಇದಾದ ನಂತರ ಪೇಮೆಂಟ್ ಪುಟಕ್ಕೆ ಹೋಗಿ 50 ರೂ. ಶುಲ್ಕವನ್ನು ಠೇವಣಿ ಮಾಡಬೇಕು.
12. ಪಾವತಿಯನ್ನು ಪೂರ್ಣಗೊಳಿಸಿದ ನಂತರ ನಿಮ್ಮ ಆಧಾರ್ ಪಿವಿಸಿ ಕಾರ್ಡ್‌ಗಾಗಿ ಆರ್ಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.
13. ಈ ಎಲ್ಲ ವಿಧಾನ ಪೂರ್ಣಗೊಂಡ ಬಳಿಕ ಯುಐಡಿಎಐ ಆಧಾರ್ ಮುದ್ರಿಸಲಾಗುತ್ತದೆ. ಮುಂದೆ ಐದು ದಿನದೊಳಗೆ ಭಾರತೀಯ ಅಂಚೆ ಇಲಾಖೆಗೆ ರವಾನಿಸಲಾಗುತ್ತದೆ.
14. ಕೊನೆಯದಾಗಿ ಅಂಚೆ ಇಲಾಖೆಯು ಸ್ಪೀಡ್ ಪೋಸ್ಟ್ ಮೂಲಕ ನಿಮ್ಮ ಮನೆಗೆ ಆಧಾರ್ ಕಾರ್ಡ್‌ನ್ನು ತಲುಪಿಸುತ್ತದೆ.


Click it and Unblock the Notifications