ನವದೆಹಲಿ, ಆಗಸ್ಟ್ 16: ನೀವು ಮನೆ ಕಟ್ಟೋ ಪ್ಲ್ಯಾನ್ನಲ್ಲಿದ್ದೀರಾ..? ಹಾಗಾದ್ರೆ ನಿಮ್ಮ ಮನೆ ಹೇಗಿರಬೇಕು..? ಮನೆ ನಿರ್ಮಾಣ ಮಾಡುವಾಗ ಏನೆಲ್ಲಾ ಅಂಶಗಳನ್ನ ಗಮನಹರಿಸಬೇಕು ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು. ಕಟ್ಟುವಾಗ ದೀರ್ಘಕಾಲ ಬಾಳಿಕೆ ಬರುವ ಮನೆಯನ್ನು ಕಟ್ಟಬೇಕು ಅಂತ ಪ್ರತಿಯೊಬ್ಬರು ಬಯಸುತ್ತಾರೆ. ನಿಮ್ಮ ಮನೆ ಗಟ್ಟಿಮುಟ್ಟಾಗಿರಬೇಕು ಅಂದರೆ ನೀವು ಎರಡು ವಿಷಯಗಳ ಬಗ್ಗೆ ಮುಖ್ಯವಾಗಿ ಗಮನಹರಿಸಬೇಕು.
ಮೊದಲನೆಯದಾಗಿ ಇಟ್ಟಿಗೆ, ಸಿಮೆಂಟ್, ಸ್ಟೀಲ್, ಮರಳು ಹೀಗೆ ಎಲ್ಲಾ ಉತ್ತಮ ಗುಣಮಟ್ಟದ ವಸ್ತುಗಳಿರಬೇಕು ಮತ್ತು ಎರಡನೆಯದು ಈ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಬಲ್ಲ ಅನುಭವಿ ಮೇಸ್ತ್ರಿ. ಎರಡೂ ಲಭ್ಯವಾದರೆ ಮಾತ್ರ, ಮನೆ ದೀರ್ಘ ಕಾಲ ಬಾಳಿಕೆ ಬರುತ್ತದೆ.

ನೀವು ನಿಮ್ಮ ಮನೆ ಕಟ್ಟಡಕ್ಕೆ ಇಟ್ಟಿಗೆ ಖರೀದಿ ಮಾಡೋಕೆ ಹೋದಾಗ, ಮಾರುಕಟ್ಟೆಯಲ್ಲಿ ಮೂರರಿಂದ ನಾಲ್ಕು ತರಹದ ಗುಣಮಟ್ಟದ ಇಟ್ಟಿಗೆ ನೋಡಬಹುದು. ಫಸ್ಟ್ ಗ್ರೇಡ್ ಇಟ್ಟಿಗೆಗಳು ಉತ್ತಮ ಇಟ್ಟಿಗೆಗಳು. ಅವು ಸರಿಯಾದ ಆಕಾರ, ಗಾತ್ರ ಹೊಂದಿರುವುದುರ ಜೊತೆಗೆ ಸರಿಯಾಗಿ ಸುಟ್ಟಿರುವ ಇಟ್ಟಿಗೆಗಳು. ಅದರ ಸಂಕುಚಿತ ಬಲ ಅಂದ್ರೆ ತೂಕ ತಡೆಯೋ ಶಕ್ತಿ, ಪ್ರತಿ ಚದರ ಸೆಂಟಿಮೀಟರ್ಗೆ 105 ಕಿಲೋಗ್ರಾಂನಷ್ಟಿರುತ್ತೆ. ಇಟ್ಟಿಗೆಗಳ ಗುಣಮಟ್ಟ ತಿಳಿಯಯುವುದಕ್ಕೆ ನೀವು ಎರಡು ಇಟ್ಟಿಗೆಗಳನ್ನ ಒಂದಕ್ಕೊಂದು ಹೊಡೆದಾಗ ಮೆಟಲ್ ಹೊಡೆದ ರೀತಿ ಶಬ್ದ ಕೇಳಿಸಿದ್ದರೆ, ಜೊತೆಗೆ ಒಡೆಯಲಿಲ್ಲ ಅಂದ್ರೆ ಅದು ಉತ್ತಮ ಗುಣಮಟ್ಟದ ಇಟ್ಟಿಗೆ ಅಂತ ಅರ್ಥ. ಈ ರೀತಿಯ ಸಣ್ಣ ಪ್ರಯೋಗ ನಿಮಗೆ ದೊಡ್ಡ ನೆರವು ನೀಡಬಹುದು.
ಇನ್ನು ಎರಡನೇ ದರ್ಜೆಯ ಗುಣಮಟ್ಟದ ಇಟ್ಟಿಗೆಗಳು ಮೊದಲ ದರ್ಜೆಯ ಇಟ್ಟಿಗೆಗಳಿಗಿಂತ ಕಡಿಮೆ ಸುಡಲ್ಪಟ್ಟಿರುತ್ತೆ, ಅಂದ್ರೆ ಇವುಗಳ ಸದೃಢತೆ ಅಥವಾ ತೂಕ ತಡೆಯೋ ಶಕ್ತಿ , ಮೊದಲ ದರ್ಜೆಯ ಇಟ್ಟಿಗೆಗಳಿಗಿಂತ ಸ್ವಲ್ಪ ಕಡಿಮೆ ಇರುತ್ತದೆ. ಇದನ್ನ ಲಾಲ್ ಪೇಟಿ ಇಟ್ಟಿಗೆ, ನರಮ್ ಅವ್ವಲ್ ಇಟ್ಟಿಗೆ ಅಥವಾ ದೋಯಮ್ ಇಟ್ಟಿಗೆ ಅಂತಾನೂ ಕರೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಬೀಮ್ ಮತ್ತು ಕಾಲಂಗಳ ಮೇಲೇನೇ ಅನೇಕ ಮನೆಗಳು ನಿರ್ಮಾಣವಾಗುತ್ತಿವೆ. ಇದು ಗೋಡೆಯ ಮೇಲಿನ ಭಾರವನ್ನು ಕಡಿಮೆ ಮಾಡುತ್ತದೆ. ಅಂತಹ ನಿರ್ಮಾಣಗಳಲ್ಲಿ ಈ ಲಾಲ್ ಪೇಟಿ ಇಟ್ಟಿಗೆಗಳನ್ನು ಬಳಸಬಹುದು.
ಈಗ ಮೂರನೇ ದರ್ಜೆಯ ಇಟ್ಟಿಗೆಗಳ ಬಗ್ಗೆ ನೋಡೋಣ. ಇವುಗಳನ್ನು ಯೆಲ್ಲೋ ಬ್ರಿಕ್ಸ್ ಅಥವಾ ಹಳದಿ ಇಟ್ಟಿಗೆ ಎಂದು ಕರೆಯುತ್ತಾರೆ. ಇವುಗಳನ್ನ ಅಷ್ಟೇನೂ ಸುಟ್ಟಿರಲ್ಲ, ಹೀಗಾಗಿ ಇವುಗಳಲ್ಲಿ ಭಾರ ತಡೆಯೋ ಶಕ್ತಿ ಇರಲ್ಲ. ಇವು ಮನೆ ನಿರ್ಮಾಣಕ್ಕೆ ಯೋಗ್ಯ ಅಲ್ಲ. ಆದಾಗ್ಯೂ, ಇವುಗಳನ್ನು ತಾತ್ಕಾಲಿಕ ಅಥವಾ ಕಡಿಮೆ ದರ್ಜೆಯ ಕೆಲಸಗಳಿಗೆ ಬಳಸಬಹುದು. ಇನ್ನು ನಾಲ್ಕನೇ ದರ್ಜೆಯ ಇಟ್ಟಿಗೆ ಕೂಡ ಇದೆ. ಅವುಗಳನ್ನ ಚಟ್ಕಾ ಇಟ್ಟಿಗೆ ಅಂತಾ ಕರೆಯುತ್ತಾರೆ.ಇಟ್ಟಿಗೆ ತಯಾರಿ ವೇಳೆ ಹೆಚ್ಚು ಸುಟ್ಟಿದ್ದರೆ, ಆಗ ಅದರ ಆಕಾರ ಬದಲಾಗುತ್ತೆದೆ ಅಲ್ಲದೇ ಅದು ಕಪ್ಪು ಬಣ್ಣಕ್ಕೆ ತಿರುಗುತ್ತೆ. ಇಂತಹ ಇಟ್ಟಿಗೆ ಬಳಸಿದರೆ ಗೋಡೆಗಳಲ್ಲಿ ಬಿರುಕು ಬೀಳುತ್ತೆ. ನಿರ್ಮಾಣ ಕಾರ್ಯ ಕೂಡ ಕಷ್ಟವಾಗುತ್ತದೆ. ಆದರೆ ಇಂತಹ ಇಟ್ಟಿಗೆಗಳನ್ನ ಪಾಯದ ಕೆಲಸಗಳಿಗೆ ಮತ್ತು ನೆಲಕ್ಕೆ/ ಫ್ಲೋರಿಂಗ್ಗೆ ಬಳಸಬಹುದು. ಇದು ಸದೃಢವಾಗಿರುತ್ತದೆ. ಇವು ಕಡಿಮೆ ದರಕ್ಕೆ ಸಿಗುತ್ತವೆ.
ನೀವು ರೆಡ್ ಕ್ಲೇ-ಇಟ್ಟಿಗೆಯಿಂದ ಮನೆ ಕಟ್ಟೋದಾದ್ರೆ, ಆಗ ನೀವು ಮೊದಲ ದರ್ಜೆಯ ಇಟ್ಟಿಗೆ ಅಥವಾ ಲಾಲ್ಪೇಟಿ ಇಟ್ಟಿಗೆಗಳನ್ನೇ ಬಳಸಬೇಕು. ಇಟ್ಟಿಗೆಗಳ ಗುಣಮಟ್ಟ ಪರೀಕ್ಷಿಸಲು, ನೀವು ಅವುಗಳನ್ನ ನೆಲದಿಂದ ಒಂದೂವರೆ ಮೀಟರ್ ಎತ್ತರದಿಂದ ಬೀಳಿಸಬಹುದು.. ಇಟ್ಟಿಗೆ ಒಡೆಯದೇ ಹೋದರೆ ಅವು ನಿರ್ಮಾಣಕ್ಕೆ ಯೋಗ್ಯ. ರೆಡ್ ಇಟ್ಟಿಗೆ ಅಲ್ಲದೇ ನೀವು ಫ್ಲೈ-ಆಷ್ ಇಟ್ಟಿಗೆ ಅಥವಾ ಎಎಸಿ ಬ್ಲಾಕ್ಗಳನ್ನೂ ಬಳಸಬಹುದು.
ಫ್ಲೈ ಆಷ್ ಇಟ್ಟಿಗೆಯನ್ನು ಬೂದಿ ಧೂಳು, ಸುಣ್ಣ, ಜಿಪ್ಸಂ ಮತ್ತು ಸಿಮೆಂಟ್ನಿಂದ ಮಾಡಲಾಗಿರುತ್ತದೆ. ಅದರ ಸಂಕುಚಿತ ಬಲ ಪ್ರತಿ ಚದರ ಸೆಂಟಿಮೀಟರ್ಗೆ 75 ರಿಂದ 100 ಕಿಲೋಗ್ರಾಂನಷ್ಟು. ಇದರ ಗಾತ್ರ ಸಮವಾಗಿರುತ್ತೆ ಅಥವಾ ಏಕರೂಪದ ಗಾತ್ರ ಹೊಂದಿರುತ್ತದೆ. ಕೆಂಪು ಇಟ್ಟಿಗೆಗೆ ಹೋಲಿಸಿದರೆ, ಇದಕ್ಕೆ ಬೇಕಾಗೋ ಗಾರೆ (ಸಿಮೆಂಟ್ ಮತ್ತು ಮರಳಿನ ಮಿಶ್ರಣ) ಕಡಿಮೆ.
ಅದರ ಫಿನಿಶಿಂಗ್ ಚೆನ್ನಾಗಿರೋದ್ರಿಂದ, ಗೋಡೆ ಮೇಲೆ ಪ್ಲಾಸ್ಟರ್ ಹಾಕದೇ ಕೂಡ ಪಟ್ಟಿ ಹಾಕಬಹುದು, ಪೇಂಟ್ ಮಾಡಬಹುದು. ಕೆಂಪು ಇಟ್ಟಿಗೆಗೆ ಹೋಲಿಸಿದರೆ ಇದರ ತೂಕ ಕಡಿಮೆ. ಇದು ಸುಮಾರು 2 ಕೆಜಿ 600 ಗ್ರಾಂ ನಷ್ಟಿದ್ದರೆ, ಕೆಂಪು ಇಟ್ಟಿಗೆ ಮೂರು ಕೆಜಿ ತೂಕ ಇರುತ್ತದೆ. ಇದರ ಕಚ್ಚಾ ವಸ್ತು, ಫ್ಲೈ ಆಷ್ಗಳು ಉಷ್ಣ ವಿದ್ಯುತ್ ಸ್ಥಾವರಗಳ ತ್ಯಾಜ್ಯ ವಸ್ತುಗಳಾದ್ದರಿಂದ ಪರಿಸರ ಸ್ನೇಹಿ ಆಗಿದೆ. ಮನೆ ಕಟ್ಟುವ ಮುನ್ನ ನೀವು ಬಳಸುವ ಇಟ್ಟಿಗೆ ಮತ್ತು ಸಿಮೆಂಟ್ ಗುಣಮಟ್ಟ, ಕಟ್ಟಡಸ ಕ್ಯೂರಿಂಗ್ ಸಹ ಅಷಟೇ ಮುಖ್ಯವಾಗುತ್ತದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications