For Quick Alerts
ALLOW NOTIFICATIONS  
For Daily Alerts

ಕೋವಿಡ್19 ಚಿಕಿತ್ಸೆಗೆ ಕೊರೊನಾ ಕವಚ್, ಕೊರೊನಾ ರಕ್ಷಕ್: ಕ್ಲೈಮ್ ಪಡೆದುಕೊಳ್ಳುವುದು ಹೇಗೆ?

|

ಕೋವಿಡ್ 19 ಮಹಾಮಾರಿ ದಿನದಿಂದ ದಿನಕ್ಕೆ ದೇಶದಲ್ಲಿ ಅಟ್ಟಹಾಸ ಮೆರೆಯುತ್ತಿದೆ. ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳ ಕಂಡಿದೆ. ಕೊರೊನಾ ಸೋಂಕು ತಗುಲಿಸಿಕೊಂಡು ಆಸ್ಪತ್ರೆ ಸೇರುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.

 

ಪರಿಸ್ಥಿತಿ ಹೀಗಿರುವಾಗಿ ವಿಮಾ ನಿಯಂತ್ರಣ ಪ್ರಾಧಿಕಾರ ದೇಶಾದ್ಯಂತ ಎರಡು ವಿಮಾ ಪಾಲಿಸಿಗಳನ್ನು ಜಾರಿಗೊಳಿಸಿ ಅನುಕೂಲ ಮಾಡಿಕೊಟ್ಟಿದೆ. ಕೊರೊನಾ ಕವಚ್ ಹಾಗೂ ಕೊರೊನಾ ರಕ್ಷಕ್ ಎಂಬ ಎರಡು ಪಾಲಿಸಿಗಳು ಬಂದಿವೆ.

ಕೋವಿಡ್ ಲಾಕ್‌ಡೌನ್ ಸಮಯದಲ್ಲಿ 20 ಬಿಲಿಯನ್ ಡಾಲರ್ ಹೂಡಿಕೆಕೋವಿಡ್ ಲಾಕ್‌ಡೌನ್ ಸಮಯದಲ್ಲಿ 20 ಬಿಲಿಯನ್ ಡಾಲರ್ ಹೂಡಿಕೆ

ಅದಾಗ್ಯೂ ಈ ಎರಡು ಪಾಲಿಸಿಗಳ ಬಗ್ಗೆ ಜನಕ್ಕೆ ಜಾಗೃತಿ ಕಡಿಮೆಯಿದ್ದು, ಕ್ಲೈಮ್ ಸಲ್ಲಿಸುವುದು ಹೇಗೆ ಎಂಬುದು ಬಹಳಷ್ಟು ಜನಕ್ಕೆ ಗೊತ್ತಿರುವುದಿಲ್ಲ. ಈ ಹಿನ್ನೆಲೆಯಲ್ಲಿ, ಕೋವಿಡ್19 ಚಿಕಿತ್ಸೆ ವೇಳೆ ಕ್ಲೇಮ್ ಸಲ್ಲಿಸುವಾಗ ಗಮನಿಸಬೇಕಾದ ಅಂಶಗಳ ಬಗ್ಗೆ ಮಾಹಿತಿ ಇಲ್ಲಿದೆ.

ಪರೀಕ್ಷೆಯನ್ನು ಸರ್ಕಾರಿ ಲ್ಯಾಬ್‌ಗಳಲ್ಲೇ ಮಾಡಿಸಬೇಕು

ಪರೀಕ್ಷೆಯನ್ನು ಸರ್ಕಾರಿ ಲ್ಯಾಬ್‌ಗಳಲ್ಲೇ ಮಾಡಿಸಬೇಕು

ಕ್ಲೇಮ್ ಸಲ್ಲಿಸುವಾಗ, ಸರ್ಕಾರಿ ಲ್ಯಾಬ್‌ಗಳಲ್ಲಿ ಕೋವಿಡ್19 ಪರೀಕ್ಷೆ ಮಾಡಿಸಿದ ವರದಿಯನ್ನು ಒದಗಿಸಬೇಕಾಗುತ್ತದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಿಂದ (ಐಸಿಎಂಆರ್) ಗುರುತಿಸಲ್ಪಟ್ಟಿರುವ ಲ್ಯಾಬ್‌ಗಳಲ್ಲಿ ಮಾಡಿಸಿದ ಕೋವಿಡ್19 ಪರೀಕ್ಷೆಯ ವರದಿ ಮಾತ್ರ ಕ್ಲೇಮ್ ಸಂದರ್ಭದಲ್ಲಿ ಮಾನ್ಯವಾಗುತ್ತದೆ. ಕೋವಿಡ್19 ಪರೀಕ್ಷೆ ಮಾಡಿಸುವಂತೆ ವೈದ್ಯರು ನೀಡಿರುವ ಚೀಟಿಯನ್ನೂ ನೀಡಬೇಕಾಗುತ್ತದೆ.

ದಾಖಲೆಗಳು ಅವಶ್ಯಕ

ದಾಖಲೆಗಳು ಅವಶ್ಯಕ

ಬಹುತೇಕ ಪಾಲಿಸಿಗಳು ಚಿಕಿತ್ಸೆಯ ಮೊದಲಿನ ಮತ್ತು ಚಿಕಿತ್ಸೆಯ ನಂತರದ ವೆಚ್ಚಗಳನ್ನು ಪರಿಗಣಿಸುತ್ತವೆ. ಪಾಲಿಸಿಯ ಪ್ರಕಾರ ನೀವು ಆಂಬುಲೆನ್ಸ್ ವೆಚ್ಚ, ಐಸಿಯು (ತೀವ್ರ ನಿಗಾ ಘಟಕ) ವೆಚ್ಚ ಹಾಗೂ ಇನ್ನಿತರ ಚಿಕಿತ್ಸಾ ವೆಚ್ಚಗಳಿಗೆ ಸೂಕ್ತ ಬಿಲ್‌ಗಳನ್ನು ಒದಗಿಸಬೇಕಾಗುತ್ತದೆ. ಈ ಬಗ್ಗೆ ಇನ್ಶೂರೆನ್ಸ್ ಕಂಪನಿಯಿಂದ ಸರಿಯಾದ ಮಾಹಿತಿ ಪಡೆದು ಪೂರಕ ದಾಖಲೆಗಳನ್ನು ಇಟ್ಟುಕೊಳ್ಳಬೇಕು.

ಯಾವ ರೀತಿಯ ಚಿಕಿತ್ಸೆ?
 

ಯಾವ ರೀತಿಯ ಚಿಕಿತ್ಸೆ?

ಮನೆಯಲ್ಲಿ ಇದ್ದುಕೊಂಡೇ ಕೋವಿಡ್‌19 ಕಾಯಿಲೆಗೆ ಚಿಕಿತ್ಸೆ ಪಡೆದುಕೊಳ್ಳಲು ರೋಗಿಗೆ ಕೆಲವು ಖಾಸಗಿ ಆಸ್ಪತ್ರೆಗಳು ಅವಕಾಶ ಕಲ್ಪಿಸುತ್ತವೆ. ಈ ರೀತಿಯ ಚಿಕಿತ್ಸೆಯನ್ನು ನಿಮ್ಮ ಕುಟುಂಬದವರಿಗೆ ವೈದ್ಯರೇ ಶಿಫಾರಸು ಮಾಡಿದರೆ ಮನೆಯಲ್ಲಿನ ಚಿಕಿತ್ಸೆಗೆ ವಿಮಾ ಕ್ಲೇಮ್ ಸಿಗುವ ಬಗ್ಗೆ ಕಂಪನಿ ಕಡೆಯಿಂದ ಖಚಿತಪಡಿಸಿಕೊಳ್ಳಬೇಕು. ಸಾಮಾನ್ಯವಾಗಿ ಪರಿಹಾರ ಧನ ನೀಡುವ ವಿಮಾ ಪಾಲಿಸಿಗಳು, ಆಸ್ಪತ್ರೆ ವೆಚ್ಚಗಳು ಮತ್ತು ಪಟ್ಟಿ ಮಾಡಿರುವ ದಿನವಹಿ ವೆಚ್ಚಗಳನ್ನು ಪರಿಗಣಿಸುತ್ತವೆ. ಹಾಗಾಗಿ ಕೋವಿಡ್19ಕ್ಕೆ ಚಿಕಿತ್ಸೆ ಪಡೆಯುತ್ತಿರುವಾಗ ಅದು ಮನೆಯಲ್ಲಿ ಇದ್ದುಕೊಂಡು ಪಡೆಯುತ್ತಿರುವ ಚಿಕಿತ್ಸೆಯೋ ಅಥವಾ ಆಸ್ಪತ್ರೆಗೆ ದಾಖಲಾಗಿ ಪಡೆಯುತ್ತಿರುವ ಚಿಕಿತ್ಸೆಯೋ ಎನ್ನುವುದನ್ನು ವಿಮಾ ಕಂಪನಿಗೆ ತಿಳಿಸಬೇಕು.

ಬಿಡುಗಡೆ ವಿವರ ಇಟ್ಟುಕೊಳ್ಳಬೇಕು

ಬಿಡುಗಡೆ ವಿವರ ಇಟ್ಟುಕೊಳ್ಳಬೇಕು

ಇತ್ತೀಚಿನ ದಿನಗಳಲ್ಲಿ ಜನರು ಸಾಮಾನ್ಯ ಆರೋಗ್ಯ ವಿಮೆಯ ಜತೆಗೆ ಕೋವಿಡ್19 ಕಾಯಿಲೆಯ ಚಿಕಿತ್ಸೆಗೆ ಸಂಬಂಧಿಸಿದ ‘ಕೊರೊನಾ ಕವಚ್' ಮತ್ತು ‘ಕೊರೊನಾ ರಕ್ಷಕ್' ಎಂಬ ಪಾಲಿಸಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಈ ರೀತಿಯ ಪಾಲಿಸಿಗಳು ಇರುವಾಗ ಪಾಲಿಸಿದಾರ ಒಂದಕ್ಕಿಂತ ಹೆಚ್ಚು ಕ್ಲೇಮ್‌ಗಳನ್ನು ಮಾಡಲು ಅವಕಾಶವಿದೆ. ಐಸಿಯು ಚಿಕಿತ್ಸೆಗೆ ಹೆಚ್ಚು ಅನುಕೂಲಗಳನ್ನು ಕೊಡುವ ಪಾಲಿಸಿಯನ್ನು ನೀವು ಹೊಂದಿದ್ದರೆ ಡಿಸ್ಚಾರ್ಜ್ ವಿವರದಲ್ಲಿ ಐಸಿಯುನಲ್ಲಿ ಮತ್ತು ಸಾಮಾನ್ಯ ವಾರ್ಡ್‌ನಲ್ಲಿ ಎಷ್ಟೆಷ್ಟು ದಿನ ಚಿಕಿತ್ಸೆ ನೀಡಲಾಗಿದೆ ಎನ್ನುವ ವಿವರವನ್ನು ಬರೆಯುವಂತೆ ಹೇಳಬೇಕು. ನೀವು ಸಾಮಾನ್ಯ ಆರೋಗ್ಯ ವಿಮೆ ಅಥವಾ ಕೋವಿಡ್19ಕ್ಕೆ ಚಿಕಿತ್ಸೆಗೆ ಸಂಬಂಧಿಸಿದ ಪಾಲಿಸಿ ಹೊಂದಿದ್ದು ಕೊರೊನಾ ಪಾಸಿಟಿವ್ ಎಂದಾದರೆ ಕೂಡಲೇ ನಿಮ್ಮ ಇನ್ಶೂರೆನ್ಸ್ ಕಂಪನಿಗೆ ತಿಳಿಸಿ.

(ಆಧಾರ: ಪ್ರಜಾವಾಣಿ)

Read more about: insurance ವಿಮೆ
English summary

How To Claim For Corona Kavach And Corona Rakshak Policies

How To Claim For Corona Kavach And Corona Rakshak Policies
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X