ಕೋವಿಡ್ ಮುಗಿದ ಮೇಲಿನಿಂದ ಎಲ್ಲಾ ದರಗಳಲ್ಲೂ ಏರಿಕೆ ಕಂಡುಬರುತ್ತಿರುವುದು ಸಾಮಾನ್ಯವಾಗಿ ಹೋಗಿದೆ. ಅದರಂತೆ ಆರೋಗ್ಯ ವಿಮಾ ಪ್ರೀಮಿಯಂಗಳಲ್ಲೂ ಏರಿಕೆ ಕಂಡುಬರುತ್ತಿದ್ದು, ಇದಕ್ಕೆ ದೇಶದಲ್ಲಿರುವ ಆರೋಗ್ಯ ಸೇವೆ ಹಣದುಬ್ಬರವೇ ಕಾರಣ ಎನ್ನಲಾಗುತ್ತಿದೆ. 2024 ರಲ್ಲಿ ಸರಾಸರಿ ಆರೋಗ್ಯ ವಿಮಾ ನವೀಕರಣ ಪ್ರೀಮಿಯಂಗಳು ಶೇಕಡಾ 10-15 ರಷ್ಟು ಏರಿಕೆಯಾಗಿವೆ.

ಇನ್ನು Policybazaar.com ಅಧ್ಯಯನವೊಂದನ್ನು ನಡೆಸಿದ್ದು, ಅದರ ಅನುಸಾರ ಶೇಕಡ 53ರಷ್ಟು ಗ್ರಾಹಕರು ತಮ್ಮ ಆರೋಗ್ಯ ವಿಮಾ ಪ್ರೀಮಿಯಂನ, ಶೇಕಡಾ 10ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಹೆಚ್ಚಳವಾದುದನ್ನು ಕಂಡಿದ್ದಾರೆ. ಆದರೆ ಆದರೆ, 5% ಗ್ರಾಹಕರಿಗೆ ಪ್ರೀಮಿಯಂ ಶೇಕಡಾ 30 ಕ್ಕಿಂತಲೂ ಹೆಚ್ಚಾಗಿ ಕಾಣಿಸಿದೆ. ವಿಶೇಷವಾಗಿ ಕೆಲವೊಂದು ಪಾಲಿಸಿಗಳಲ್ಲಿ 2015 ರಿಂದ 2025 ರವರೆಗೆ ಪ್ರೀಮಿಯಂ 200ನಷ್ಟು ಏರಿಕೆಯಾಗಿದೆ. ಅಂದರೆ ಮೂರು ಪಟ್ಟು ಹೆಚ್ಚಾಗಿರುವುದನ್ನು ಕಾಣಬಹುದಾಗಿದೆ. ಈ ಪೈಕಿ ಹಿರಿಯ ನಾಗರಿಕರು ಪ್ರೀಮಿಯಂನದಲ್ಲಿ ಶೇಕಡ 100 ರಷ್ಟು ಏರಿಕೆ ಕಂಡಿದ್ದಾರೆ.
ಇದನ್ನು ಗಮನದಲ್ಲಿಟ್ಟುಕೊಂಡ ಭಾರತೀಯ ವಿಮಾ ನಿಯಂತರಣ ಮತ್ತು ಅಭಿವೃದ್ಧಿ ಪ್ರಾಧಿಕಾರ, 2025ರ ಜನವರಿಯಲ್ಲಿ ಹಿರಿಯ ನಾಗರಿಕರಿಗೆ ಬೃಹತ್ ಪ್ರೀಮಿಯಂ ಹೆಚ್ಚಳವಾಗದಂತೆ ನಿಯಮ ಜಾರಿಗೆ ತಂದಿದೆ. ಈ ನಿಯಮದ ಪ್ರಕಾರ ಹಿರಿಯ ನಾಗರಿಕರ ಆರೋಗ್ಯ ವಿಮಾ ಪ್ರೀಮಿಯಂ ವರ್ಷಕ್ಕೆ ಹೆಚ್ಚು ಅಂದರೆ, 10% ಮಾತ್ರ ಹೆಚ್ಚಿಸಬಹುದು ಎಂಬ ಸೂಚನೆ ನೀಡಿ ಸೀಮಿತಗೊಳಿಸಿದೆ. ಈ ಮೂಲಕ ಹಿರಿಯ ನಾಗರಿಕರ ಹಣ ಉಳಿಸಿದೆ.
ಇದಿಷ್ಟೇ ಅಲ್ಲ ಆರೋಗ್ಯ ವಿಮೆ ಹೊಂದಿರುವವರ ಕ್ಲೈಮ್ ಇತ್ಯರ್ಥ ದಾಖಲೆಯ ಬಗ್ಗೆಯೂ ಸಾಕಷ್ಟು ಅಸಮಾಧಾನದ ಅಲೆ ಇದೆ. ಉದ್ಯಮದ ಕ್ಲೈಮ್ ಪಾವತಿ ದಾಖಲೆಯ ಕುರಿತು 2022-23ರ ಭಾರತೀಯ ವಿಮಾ ದಲ್ಲಾಳಿಗಳ ಸಂಘವೂ, ವರದಿಯ ಚಿನ್ನಣವನ್ನು ಸರಿಯಾಗಿ ಚಿತ್ರಿಸಿಲ್ಲ. 28 ಜೀವೇತರ ವಿಮಾ ಕಂಪನಿಗಳಲ್ಲಿ 11 ಕಂಪನಿಗಳು, 70% ಕ್ಕಿಂತ ಕಡಿಮೆ ಕ್ಲೈಮ್ ಪಾವತಿಸಿರುವುದು ಕಂಡು ಬಂದಿದೆ.
ಪ್ರೀಮಿಯಂ ಹೆಚ್ಚಳಕ್ಕೆ ಕಾರಣ ಏನು..?
ಮೆಟ್ರೋ ಸಿಟಿಗಳಲ್ಲಿನ ಕಾರ್ಪೋರೇಟ್ ಆಸ್ಪತ್ರೆಗಳು ಹೆಚ್ಚಿನ ಶುಲ್ಕ ವಿಧಿಸುತ್ತಿರುವುದು ಕೂಡ ಈ ಆರೋಗ್ಯ ವಿಮಾ ಪ್ರೀಮಿಯಂ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. COVID-19 ಸಮಯದಲ್ಲಿ ಪ್ರೀಮಿಯಂ ಹೆಚ್ಚಳವಾಗದೆ ಇರುವ ಪರಿಣಾಮ ಒಂದು ಕಾರಣವಾಗಿದೆ. ಆರೋಗ್ಯ ರಕ್ಷಣಾ ಹಣದುಬ್ಬರ % ಇದ್ದು, ವಿಮಾ ಕಂಪನಿಗಳು ವೆಚ್ಚ ಹೆಚ್ಚಿಸುತ್ತಿವೆ.
ಆರೋಗ್ಯ ವಿಮೆಯ ಕ್ಲೈಮ್‌ಗೆ ಸಮಸ್ಯೆ ಏಕಾಗುತ್ತಿದೆ..?
2022-23ರ ಅಧ್ಯಯನದ ಪ್ರಕಾರ 28 ಜೀವೇತರ ವಿಮಾ ಕಂಪನಿಗಳಲ್ಲಿ 11 ಕಂಪನಿಗಳು, 70% ಕ್ಕಿಂತ ಕಡಿಮೆ ಕ್ಲೈಮ್ ಪಾವತಿಸಿವೆ. ಹಿರಿಯ ನಾಗರಿಕರು ಹಾಗೂ ಚಿಕ್ಕ ಪಾಲಿಗಳನ್ನು ಹೊಂದಿರುವವರು ಹೆಚ್ಚಾಗಿ ತೊಂದರೆ ಅನುಭವಿಸುತ್ತಿದ್ದಾರೆ. ವಿಮಾ ಕಂಪನಿಗಳು ಸಣ್ಣ ಮೊತ್ತದ ಕ್ಲೈಮ್‌ಗಳನ್ನು ಸುಲಭವಾಗಿ ಪಾವತಿಸುತ್ತವೆ. ಆದರೆ ದೊಡ್ಡ ಮೊತ್ತದ ಕ್ಲೈಮ್ ಮಾಡಿಕೊಳ್ಳಲು ಸಮಯ ತೆಗೆದುಕೊಳ್ಳಲಾಗುತ್ತಿದೆ.
ಹಿರಿಯ ನಾಗರಿಕರಿಗೆ IRDAI ನೀಡಿದ ರಕ್ಷಣಾ ಕ್ರಮಗಳೇನು..?
ಆರೋಗ್ಯ ವಿಮಾ ಪ್ರೀಮಿಯಂ ಹೆಚ್ಚಳವು 10% ಮಿತಿಯೊಳಗೆ ಇರಬೇಕು. ಹಳೆಯ ಪಾಲಿಸಿಗಳನ್ನು ಹಿಂತೆಗೆದುಕೊಳ್ಳಲು ಅಥವಾ ದುಬಾರಿ ಹೊಸ ಪಾಲಿಸಿಗಳನ್ನು ಬಲವಂತವಾಗಿ ಆಯ್ಕೆ ಮಾಡಿಸುವುದನ್ನು ನಿಷೇಧ ಮಾಡಬೇಕು. ಅಲ್ಲದೇ ಹಿರಿಯ ನಾಗರಿಕರಿಗೆ ಹೆಚ್ಚು ಹಣಬಿಡುವಂತ ಹೊಸ ನಿಯಮ ಜಾರಿಗೆ ತರುವುದಕ್ಕೂ ಮೊದಲು, ನಿಯಂತ್ರಣ ಮಂಡಳಿಯಿಂದ ಅನುಮೋದನೆಯನ್ನು ಕಡ್ಡಾಯವಾಗಿ ಪಡೆಯಬೇಕು.
ಪ್ರೀಮಿಯಂ ಹೊರೆ ಕಡಿಮೆ ಮಾಡುವುದು ಹೇಗೆ?
ಅಗತ್ಯವಿಲ್ಲದ ಹೈ-ಪ್ರೀಮಿಯಂ ಪ್ಲಾನ್‌ನ ಬದಲಿಸಿಕೊಳ್ಳಬೇಕು. ಅದರ ಬದಲು ಕಡಿಮೆ ಪ್ರೀಮಿಯಂ ಇರುವ ಹೊಸ ಪಾಲಿಸಿಗೆ ಪೋರ್ಟ್ ಮಾಡಿಸಿಕೊಳ್ಳಬಹುದು. ಸ್ವಯಂಪ್ರೇರಿತ ಕಡಿತ ಆಯ್ಕೆ ಮಾಡುವುದು ಉತ್ತಮವಾಗಿದೆ. ಅಂದರೆ ಪಾಲಿಸಿಯಲ್ಲಿ ಎಷ್ಟು ಮೊತ್ತ ಇರುತ್ತದೇ ಅದನ್ನು, ನೀವು ನಿಮ್ಮ ಖರ್ಚಿನಿಂದ ಕವರ್ ಮಾಡಲು ಒಪ್ಪಿಕೊಂಡರೆ, ನಿಮ್ಮ ಪ್ರೀಮಿಯಂ ಶೇಕಡಾ 15% ಕಡಿಮೆಯಾಗಬಹುದು. ನಿರ್ದಿಷ್ಟ ಆಸ್ಪತ್ರೆ ಜಾಲ ಬಳಸಿದರೆ ಪ್ರೀಮಿಯಂನಲ್ಲಿ ಶೇಖಡ 15% ಕಡಿಮೆ ಮಾಡಬಹುದು. ಅಲ್ಲದೇ ಒಮ್ಮೆಲೇ ಎರಡ್ಮೂರು ವರ್ಷಗಳ ಪ್ರೀಮಿಯಂ ಪಾವತಿಸಿದರೆ, 7.5% - 15% ರಿಯಾಯಿತಿ ಪಡೆಯುವ ಅವಕಾಶವೂ ಇರುತ್ತದೆ.


Click it and Unblock the Notifications