ಆದಾಯ ತೆರಿಗೆ ಇಲಾಖೆಯು ತೆರಿಗೆದಾರರು ತಮ್ಮ ಪ್ಯಾನ್ (ಪರ್ಮನೆಂಟ್ ಅಕೌಂಟ್ ನಂಬರ್) ಹಾಗೂ ಆಧಾರ್ ಕಾರ್ಡ್‌ನ್ನು ಡಿಸೆಂಬರ್ 31ರೊಳಗೆ ಲಿಂಕ್ ಮಾಡುವಂತೆ ಒತ್ತಾಯಿಸಿದೆ. ಒಂದು ವೇಳೆ ತೆರಗೆದಾರ ಈ ನಿಯಮವನ್ನು ಪಾಲಿಸುವಲ್ಲಿ ವಿಫಲವಾದಲ್ಲಿ ಅವರ ಪ್ಯಾನ್ ಕಾರ್ಡ್ ನಿಷ್ಕ್ರಿಯ ಗೊಳಿಸಬಹುದು ಎಂದು ಎಚ್ಚರಿಕೆ ನೀಡಿದೆ. ಹೀಗೆ ಮಾಡಿದ್ದೇ ಆದಲ್ಲಿ ಅದು ವಹಿವಾಟಿನ ಹಾಗೂ ಇತರೆ ಸಮಸ್ಯೆಗಳನ್ನು ತಂದ ಒಡ್ಡಬಹುದಾಗಿದೆ.
ದೇಶದಲ್ಲಿ ಹಣಕಾಸಿನ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದನ್ನು ಅರಿತಿರುವ ತೆರಿಗೆ ಇಲಾಖೆ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಹಲವು ಫಿನ್ ಟೆಕ್ ಸಂಸ್ಥೆಗಳು, ಬಳಕೆದಾರರ ಪರವಾನಿಗೆ ಇಲ್ಲದೆ, ಅವರ ವಿವರವನ್ನು ರಚಿಸಲು ಪ್ಯಾನ್ ಕಾರ್ಡ್ ಮಾಹಿತಿಯನ್ನು ಬಳಸುತ್ತಿವೆ ಎಂದು ತಿಳಿದು ಬಂದಿದೆ. ಈ ಅಂಶ ನಿಜಕ್ಕೂ ಎಲ್ಲರ ಚಿಂತೆಯನ್ನು ಹೆಚ್ಚಿಸಿದೆ. ಈ ನಿಟ್ಟಿನಲ್ಲಿ ತೆರಿಗೆದಾರರ ಗೌಪ್ಯತೆಯನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಕೇಂದ್ರ ಗೃಹ ಸಚಿವಾಲಯ, ತೆರಿಗೆ ಇಲಾಖೆಗೆ ಪ್ಯಾನ್ ಮೂಲಕ ವೈಯಕ್ತಿಕ ವಿವರಗಳನ್ನು ಪ್ರವೇಶವನ್ನು ಮಿತಿಗೊಳಿಸುವಂತೆ ನಿರ್ದೇಶಿಸಿದೆ.

ಆಧಾರ್, ಪ್ಯಾನ್ ಕಾರ್ಡ್ ಲಿಂಕ್ ಕಡ್ಡಾಯ
ತೆರಿಗೆ ಇಲಾಖೆ ತೆರಿಗೆ ಪಾವತಿಸುವವರ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಮಾಡುವುದನ್ನು ಕಡ್ಡಾಯವಾಗಿಸಿದೆ. ಇಲಾಖೆ ನೀಡಿದ ಗಡುವಿನ ಮೊದಲೇ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡುವಲ್ಲಿ ತೆರಿಗೆ ದಾರ ವಿಫಲರಾದಲ್ಲಿ, ಅಂತಹವರ ಪ್ಯಾನ್ ಕಾರ್ಡ್ ನಿಷ್ಕ್ರೀಯ ಗೊಳಿಸಲಾಗುವುದು. ಹೀಗೆ ಮಾಡುವುದರಿಂದ ತೆರಿಗೆದಾರರ ಹಣಕಾಸಿನ ವಹಿವಾಟಿಗೆ ಅಡಚಣೆ ಆಗುತ್ತದೆ.
ತೆರಿಗೆದಾರ ತಮ್ಮ ಪ್ಯಾನ್ ಕಾರ್ಡ್‌ನ ಲಿಂಕ್ ಸ್ಟೇಟಸ್ ಅರಿಯಲು ಈ ರೀತಿಯಾಗಿ ಮಾಡಿ.
ಮೊದಲು ತೆರೆಗೆ ಇಲಾಖೆಯ ಈ ಫಿಲಿಂಗ್ ವೆಬ್‌ಸೈಟ್‌ಗೆ ಬೇಟಿ ನೀಡಿ. www.incometax.gov.in.
ಬಳಿಕ ವೆಬ್‌ಸೈಟ್‌ನ ಹೋಮ್ ಪೇಜ್‌ಗೆ ಹೋಗಿ, ಅಲ್ಲಿ ಕ್ವಿಕ್ ಲಿಂಕ್ ಎನ್ನುವ ಆಕ್ಷನ್ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿ.
ಈ ಪೇಜ್‌ನಲ್ಲಿ ಲಿಂಕ್ ಆಧಾರ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ. ಮತ್ತೊಂದು ಪುಟ ತೆರೆಯುತ್ತದೆ. ಆ ಪುಟದಲ್ಲಿ ನಿಮ್ಮ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ನಂಬರ್ ನಮೂದಿಸಿ.
ಒಂದು ವೇಳೆ ನಿಮ್ಮ ಪ್ಯಾನ್ ಕಾರ್ಡ್‌ಗೆ ಆಧಾರ್ ಕಾರ್ಡ್ ಈ ಮೊದಲೇ ಲಿಂಕ್ ಆಗಿದಲ್ಲಿ ಒಂದು ಪಾಪ್ ಅಪ್ ಮೆಸೆಜ್ ಬರುತ್ತದೆ. ಈ ಸಂದೇಶದಲ್ಲಿ ನಿಮ್ಮ ಪ್ಯಾನ್ ಕಾರ್ಡ್ ಈಗಾಗಲೇ ಆಧಾರ್ ಜೊತೆ ಲಿಂಕ್ ಆಗಿರುವುದಾಗಿ ತಿಳಿಸುತ್ತದೆ.
ನಿಮ್ಮ ಖಾತೆಗೆ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಆಗಿರದೇ ಇದಲ್ಲೂ ಪಾಪ್ ಅಪ್ ಮೆಸೇಜ್ ತೋರಿಸುತ್ತದೆ. ವೆಬ್‌ಸೈಟ್‌ನ ಎಡಭಾಗದಲ್ಲಿ ಗೋಚರಿಸುವ ಲಿಂಕ್ ಆಧಾರ್ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಇರುವ ವಿವರವನ್ನು ಸಲ್ಲಿಸಬೇಕು. ಅಲ್ಲದೆ ಆಧಾರ್ ಕಾರ್ಡ್‌ನಲ್ಲಿರುವಂತೆ ನಿಮ್ಮ ಹೆಸರನ್ನು ನಮೂದಿಸಿ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications