ಬೆಂಗಳೂರು, ಜುಲೈ 31: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ದಿನಾಂಕ ಹತ್ತಿರವಾಗುತ್ತಿದ್ದಂತೆ ನೂರಾರು ವಿಚಾರಗಳನ್ನು ನಾವು ತಿಳಿದುಕೊಂಡಿರಬೇಕು. ಕೇಂದ್ರ ಸರ್ಕಾರ ಹೊಸ ತೆರಿಗೆ ಪದ್ಧತಿಯನ್ನು ಪ್ರಚುರ ಪಡಿಸಲು ಈ ಬಜೆಟ್ನಲ್ಲಿಯೂ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ. ಹಾಗಿದ್ದರೆ ಈಗಾಗಲೆ ಹೊಸ ತೆರಿಗೆ ಪದ್ಧತಿ ಆರಿಸಿಕೊಂಡವರು ಹಳೆ ತೆರಿಗೆ ಪದ್ಧತಿಗೆ ಮರಳಲು ಸಾಧ್ಯವಿದೆಯೇ? ಖಂಡಿತ ಸಾಧ್ಯವಿದೆ! ಹಣಕಾಸು ವರ್ಷದಲ್ಲಿ ಸಾಕಷ್ಟು ಹೂಡಿಕೆ ಮಾಡಿದ್ದೀರಿ ಎಂದಾದರೆ ಮತ್ತೆ ನೀವು ಹಳೆ ತೆರಿಗೆ ಪದ್ಧತಿ ಕಡೆಗೆ ಮುಖ ಮಾಡಬಹುದು. ಹಾಗಿದ್ದರೆ ಈ ಪ್ರಕ್ರಿಯೆ ಹೇಗೆ ಇರುತ್ತದೆ ಎನ್ನುವುದನ್ನು ತಿಳಿದುಕೊಂಡು ಬರೋಣ.
2021ರ ಹಣಕಾಸು ವರ್ಷಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಹೊಸ ತೆರಿಗೆ ಪದ್ಧತಿಯನ್ನು ಜಾರಿಗೆ ತಂದಿತು. ಅಲ್ಲಿಂದ ಕೇಂದ್ರ ಹೊಸ ತೆರಿಗೆ ಪದ್ಧತಿಯನ್ನೇ ಉತ್ತೇಜಿಸಿಕೊಂಡು ಬಂದಿದ್ದು 7 ಲಕ್ಷ ಆದಾಯದವರೆಗೆ ಯಾವುದೆ ತೆರಿಗೆ ಕಟ್ಟಬೇಕಿಲ್ಲ ಎಂದು ಹೇಳಿತ್ತು. ಈ ಸಾರಿಯ ಬಜೆಟ್ನಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿದೆ. ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಳ್ಳುವ ವೇಳೆ ಹಳೆಯದೋ..ಅಥವಾ ಹೊಸದೋ ನೀವು ಆಯ್ಕೆ ಮಾಡಿಕೊಳ್ಳದಿದ್ದರೆ ಅದು ಆಟೋಮ್ಯಾಟಿಕ್ ಆಗಿ ಹೊಸ ತೆರಿಗೆ ಪದ್ಧತಿಯೇ ಆಗುತ್ತದೆ ಎಂದೂ ತಿಳಿಸಿದೆ.

ಯಾರಿಗೆ ಹಳೆ ತೆರಿಗೆ ಪದ್ಧತಿ ಸೂಕ್ತ?
ಒಂದೆರಡು ವರ್ಷದ ಹಿಂದೆ ಹೊಸ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಂಡವರು ಈಗ ಹಳೆಯ ತೆರಿಗೆ ಪದ್ಧತಿಯೇ ಉತ್ತಮವಾಗಿತ್ತು ಎನ್ನುತ್ತಿದ್ದಾರೆ. ಆರೋಗ್ಯ ವಿಮೆ, ಪಿಪಿಎಫ್, ಇಎಲ್ ಎಸ್ ಎಸ್, ಎನ್ ಪಿಸ್ ಗಳಲ್ಲಿ ಸಾಕಷ್ಟು ಹೂಡಿಕೆ ಮಾಡಿರುವವರಿಗೆ ಹಳೆಯ ತೆರಿಗೆ ಪದ್ಧತಿಯೇ ಬೇಕು ಎಂದೆನಿಸುತ್ತದೆ. ಯಾಕೆಂದರೆ ಹಳೆಯ ತೆರಿಗೆ ಪದ್ಧತಿಯಲ್ಲಿ ತೆರಿಗೆ ವಿನಾಯಿತಿ ಪಡೆದುಕೊಳ್ಳಲು ಅವಕಾಶ ಇದೆ. ಹೌಸ್ ರೆಂಟ್ ಅಲೋವೆನ್ಸ್, ಟ್ರಾವೆಲ್ ಅಲೋವೆನ್ಸ್ ಲಾಭ ಪಡೆದುಕೊಳ್ಳಲು ಅವಕಾಶ ಇದೆ.
ಹಳೆ ತೆರಿಗೆ ಪದ್ಧತಿಗೆ ಮರಳುವುದು ಹೇಗೆ?
ಹಳೆಯ ತೆರಿಗೆ ಪದ್ಧತಿಗೆ ಮರಳಬೇಕು ಎಂದಾದರೆ ತೆರಿಗೆದಾರ ಫಾರ್ಮ್ 10 ಐಇ ಯನ್ನು ಸಬ್ ಮಿಟ್ ಮಾಡಬೇಕಾಗುತ್ತದೆ. ಇನ್ ಕಂ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಕೆ ವೇಳೆ ಇದನ್ನು ಸಬ್ ಮಿಟ್ ಮಾಡಬೇಕಾಗುತ್ತದೆ. ಪರಿಣಿತರು ಹೇಳುವಂತೆ ಇದನ್ನು ಇನ್ ಕಂ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಕೆ ಡೆಡ್ ಲೈನ್ ಒಳಗೆ ನೀಡಿದರೆ ಉತ್ತಮ.
ಫಾರ್ಮ್ 10 IE ಸಮ್ ಮಿಟ್ ಮಾಡಿದ ತಕ್ಷಣ ತೆರಿಗೆದಾರನಿಗೆ ಅಕ್ ನಾಲೆಜ್ ಮೆಂಟ್ ರೀತಿ 15 ಅಂಕಿಗಳ ಕೋಡ್ ನೀಡಲಾಗುತ್ತದೆ. ಇನ್ ಕಂ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಕೆ ವೇಳೆ ತೆರಿಗೆದಾರ ಈ ಅಂಕಿಯನ್ನು ಉಲ್ಲೇಖ ಮಾಡಬೇಕಾಗುತ್ತದೆ.
ಗಮನಿಸಬೇಕಾಗಿದ್ದೇನು?
ಎಲ್ಲದಕ್ಕಿಂತ ಮುಖ್ಯವಾಗಿ ನಾವು ಗಮನಿಸಬೇಕಾದ ವಿಚಾರ ಇಲ್ಲಿದೆ. ಹಳೆ ತೆರಿಗೆ ಪದ್ಧತಿ ಹಾಗೆ ಇದೆ ಅಲ್ಲಿ ಯಾವ ಬದಲಾವಣೆಯನ್ನು ಮಾಡಲಾಗಿಲ್ಲ. ಆದಾಯ ತೆರಿಗೆ ಮಿತಿ 2.5 ಲಕ್ಷ ರೂ. ಇದೆ. 2.5 ಲಕ್ಷದಿಂದ 5 ಲಕ್ಷದವರೆಗೆ ಶೇ. 5 ರಷ್ಟು ತೆರಿಗೆ, 5 ರಿಂದ 10 ಲಕ್ಷ ಕ್ಕೆ ಶೇ. 20 ರಷ್ಟು ತೆರಿಗೆ ನಿಮ್ಮ ಆದಾಯ 10 ಲಕ್ಷ ಮೇಲ್ಪಟ್ಟಿದ್ದರೆ ಶೇ. 30 ರಷ್ಟು ತೆರಿಗೆ.. ಈ ಪೊದ್ಧತಿಯಲ್ಲಿ ನೀವು ಎಚ್ಆರ್ ಎ, ಹೂಡಿಕೆಗೆ ಸಂಬಂಧಿಸಿ ತೆರಿಗೆ ವಿನಾಯಿತಿ ಪಡೆದುಕೊಳ್ಳಲು ಈಗಲೂ ಸಾಧ್ಯವಿದೆ.
ಈ ಬಾರಿಯ ಬಜೆಟ್ ನಲ್ಲಿ 3 ರಿಂದ 6 ಲಕ್ಷಕ್ಕೆ ಇದ್ದ ಶೇ. 5 ರ ತೆರಿಗೆಯನ್ನು 3 ರಿಂದ 7 ಲಕ್ಷಕ್ಕೆ ಅಂದರೆ ಒಂದು ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಇದರ ಜತೆಗೆ 6 ರಿಂದ 9 ಲಕ್ಷಕ್ಕೆ ಇದ್ದ ಶೇ. 10 ರಷ್ಟು ತೆರಿಗೆಯನ್ನು 7 ರಿಂದ 10 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. 9 ರಿಂದ 12 ಲಕ್ಷಕ್ಕೆ ಇದ್ದ ಏ. 15 ರಷ್ಟು ತೆರಿಗೆಯನ್ನು 10 ರಿಂದ 12 ಲಕ್ಷಕ್ಕೆ ಸೀಮಿತ ಮಾಡಲಾಗಿದೆ.


Click it and Unblock the Notifications