ಬೆಂಗಳೂರು: ಸರ್ಕಾರಿ ಸ್ವಾಮ್ಯದ ಸಂಸ್ಥೆಯಾದ ವಸತಿ ಮತ್ತು ನಗರಾಭಿವೃದ್ಧಿ ನಿಗಮ (ಹುಡ್ಕೊ) 9% ಬಡ್ಡಿದರದಲ್ಲಿ ಸಂಪೂರ್ಣ ಯೋಜನಾ ವೆಚ್ಚವನ್ನು ನೀಡಲು ಒಪ್ಪಿಕೊಂಡಿದೆ. ಅಂದರೆ, 27,000 ಕೋಟಿ ರೂ.ಗಳ ಸಂಪೂರ್ಣ ಯೋಜನಾ ವೆಚ್ಚವನ್ನು ದೀರ್ಘಾವಧಿಯ ಸಾಲದ ಮೂಲಕ ನೀಡುವುದಾಗಿ ಹುಡ್ಕೋ ಹೆಳಿಕೊಂಡಿದೆ. ಅಲ್ಲದೆ ಈ ಪ್ರಸ್ತಾಪವನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ ಎಂದು ವರದಿಯಾಗಿದೆ.
ಬೆಂಗಳೂರಿನ ಹೊರವಲಯದಲ್ಲಿ 73 ಕಿಲೋಮೀಟರ್‌ನಷ್ಟು ಭಾಗ ಬೆಂಗಳೂರು ಬಿಸಿನೆಸ್ ಕಾರಿಡಾರ್ (ಬಿಬಿಸಿ) ಇದೆ. ಈ ರಸ್ತೆಗೆ ಟೋಲ್‌ನ ಮೂಲಕ ಪ್ರತಿ ವರ್ಷಕ್ಕೆ ಕನಿಷ್ಠ 600 ಕೋಟಿ ರೂಪಾಯಿ ಆದಾಯ ಬರುತ್ತದೆಂಬ ನಿರೀಕ್ಷೆಯಿದ್ದ ಹಿನ್ನೆಲೆ ಅಧಿಕಾರಿಗಳು ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡುವ ಭರವಸೆಯನ್ನ ಹೊಂದಿದ್ದಾರೆ. ಈ ಯೋಜನೆಗಳ ಮೂಲಕ ಮತ್ತು ಎಂಟು ಮಾರ್ಗದ ರಸ್ತೆಗಳಿಗೆ ಅಗತ್ಯ ಬೀಳದ ಹೆಚ್ಚುವರಿ ಭೂಮಿಯನ್ನು ಹರಾಜು ಮಾಡುವ ಮೂಲಕ ಹಣವನ್ನು ಸಂಗ್ರಹಿಸಲು ನಿರ್ಧರಿಸಿದೆ. ಇದು 73 ಕಿಲೋಮೀಟರ್ ಇರಲಿದ್ದು, ಜೊತೆಗೆ 50 ಮೀಟರ್ ವ್ಯಾಪ್ತಿಯನ್ನ ಅಗಲವಾಗಿರುವ ಜಾಗವನ್ನ ಒಳಗೊಂಡಿರುತ್ತದೆ. ಆದ್ರೆ ಈ ಯೋಜನೆಗೆ ಹಣದ ಸಹಾಯ ಮಾಡುವ ಸಲುವಾಗಿ ಸರ್ಕಾರವು 100 ಮೀಟರ್ ಅಧಿಸೂಚಿತ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಿದೆ ಎನ್ನಲಾಗ್ತಿದೆ.

ಸುಮಾರು ಎರಡು ತಿಂಗಳ ನಂತರ ರಾಜ್ಯ ಸರ್ಕಾರವು ಯೋಜನೆಗೆ ಹಣ ನೀಡಲು ಒಪ್ಪಿಕೊಂಡಿದ್ದು, ಜೊತೆಗೆ ಈ ಯೋಜನೆಗೆ ಸರ್ಕಾರ ಬೆಂಬಲವಾಗಿ ನಿಲ್ಲುವ ಭರವಸೆಯನ್ನ ನೀಡಿದೆ. ಇನ್ನು ಬುಧವಾರ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಉನ್ನತ ಅಧಿಕಾರಿಗಳೊಂದಿಗೆ ಈ ಯೋಜನೆಯನ್ನು ಪರಿಶೀಲನೆ ಮಾಡಿದ್ರು.
ಇನ್ನು ಈ ಕುರಿತು ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಈ ಯೀಜನೆಗಾಗಿ 2,560 ಎಕರೆ ಸ್ವಾಧೀನಪಡಿಸಿಕೊಳ್ಳುತ್ತೇವೆ ಎಂದರು. ಇದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕಾಯ್ದೆಯನ್ನು ಆಧರಿಸಿದೆ ಆದರೆ ಇದರ ವೆಚ್ಚ ಮಾತ್ರ ಮಾರುಕಟ್ಟೆ ದರಗಳಿಗೆ ಸಮನಾಗಿರುತ್ತದೆ. ಜೊತೆಗೆ ಬಿಡಿಎ ಭೂಮಿ ಕಳೆದುಕೊಳ್ಳುವ ಸಾರ್ವಜನಿಕರೊಂದಿಗೆ ಪ್ರತ್ಯೇಕವಾಗಿ ಬೆಲೆಗಳ ಕುರಿತು ಮಾತುಕತೆ ನಡೆಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದ್ರೆ 2014ರ ಕಾಯಿದೆ ಪ್ರಕಾರ ಸರ್ಕಾರ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದರೂ ಕೂಡ, ಸರ್ಕಾರ ತನ್ನ ನಿರ್ಧಾರವನ್ನು ವಾಪಸ್ ಪಡೆಯಲು ಸುಪ್ರೀಂ ಕೋರ್ಟ್ ಆದೇಶವನ್ನು ಇಲ್ಲಿ ಉಲ್ಲೇಖಿಸಿದೆ.
ಕೇಂದ್ರದ ಕಾಯಿದೆಯನ್ನು ಅನುಸರಿಸದಿರುವುದು, ಪರಿಹಾರದ ಮೇಲಿರುವ ಆದಾಯ ತೆರಿಗೆಯನ್ನು ಆಕರ್ಷಿಸಲಿದೆ ಎನ್ನಲಾಗ್ತಿದೆ. ಹಾಗೆ ಈ ಯೋಜನೆಗಾಗಿ ಇತ್ತೀಚೆಗೆ ಅಧಿಸೂಚಿಸಲಾದ ಭೂಮಿಯ ಮಾರ್ಗಸೂಚಿ ಮೌಲ್ಯ ಇಳಿಕೆಯಾಗಿರುವುದರಿಂದ ಇದು ಎರಡು ಪಟ್ಟು ಹೆಚ್ಚಾಗಿದೆ.
ಎನಿದು "ಹುಡ್ಕೊ"?
"ಹುಡ್ಕೊ" ಇದು ವಸತಿ ಮತ್ತು ನಗರಾಭಿವೃದ್ಧಿ ನಿಗಮವಾಗಿದೆ. ಇದು ಭಾರತದಲ್ಲಿ ವಸತಿ ಮತ್ತು ಮೂಲಸೌಕರ್ಯಕ್ಕೆ ಹಣಕಾಸು ಒದಗಿಸುವ ಮತ್ತು ಅಭಿವೃದ್ಧಿಪಡಿಸುವಂತಹ ಕಂಪನಿ ಇದಾಗಿದೆ.
ಹಾಗೆ ಹುಡ್ಕೋ ಸರ್ಕಾರದ ಅಡಿಯಲ್ಲಿ ಬರುವ ಕಂಪನಿಯಾಗಿದ್ದು, ಅದು ವಸತಿ ಮತ್ತು ನಗರ ಯೋಜನೆಗಳಿಗೆ ಹಣಕಾಸು ಜೊತೆಗೆ ಅಭಿವೃದ್ಧಿಯನ್ನು ಒದಗಿಸುತ್ತದೆ.
ಈ ಹುಡ್ಕೋ ಕಂಪನಿಯು, 1956ರ ಕಂಪನಿಗಳ ಕಾಯಿದೆ ಅಡಿಯಲ್ಲಿ ಏಪ್ರಿಲ್ 25, 1970 ರಂದು ಸಂಯೋಜನೆಯಾಗಿದೆ. ಹಾಗ ಈ ಕಂಪನಿಯು ಹುಡ್ಕೋ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿದೆ (MoHUA) ಬರುತ್ತದೆ. ಹಾಗೆ ಆರ್ಥಿಕವಾಗಿ ದುರ್ಬಲ ವರ್ಗಗಳ(EWS) ಬಗ್ಗೆ ಮತ್ತು ಕಡಿಮೆ-ಆದಾಯದ ಗುಂಪುಗಳ (LIG) ವಸತಿ ಅಗತ್ಯಗಳ ಬಗ್ಗೆ ಹುಡ್ಕೋ ಹೇಳುತ್ತದೆ. ಇನ್ನು ಸಾಮಾಜಿಕ ನ್ಯಾಯದೊಂದಿಗೆ ಲಾಭವನ್ನ ಗಳಿಸುವುದು ಇದರ ದ್ಯೇಯ ವಾಕ್ಯವಾಗಿದೆ.


Click it and Unblock the Notifications