ಇಂದು (ಫೆಬ್ರವರಿ 28) ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ ಕಂಡುಬಂದಿದೆ. ಇಂದು ಬೆಳಗ್ಗೆ ವಹಿವಾಟು ಆರಂಭವಾದ ಮೊದಲ 45 ನಿಮಿಷಗಳಲ್ಲಿ, ಬಾಂಬೆ ಷೇರು ವಿನಿಮಯ ಕೇಂದ್ರ (BSE) ₹6 ಲಕ್ಷ ಕೋಟಿ ಮೌಲ್ಯವನ್ನು ಕಳೆದುಕೊಂಡಿದೆ. ಬೆಳಿಗ್ಗೆ 11:30 ರ ವೇಳೆಗೆ ನಷ್ಟ ನೋಡುತ್ತಿದ್ದ ಸೂಚ್ಯಂಕಗಳು, ಮಧ್ಯಾಹ್ನದ ಹೊತ್ತಿಗೆ ಮಾರಾಟದ ಒತ್ತಡ ಹೆಚ್ಚಾದ ಕುಸಿತ ಕಂಡಿವೆ. ವಿದೇಶಿ ಹೂಡಿಕೆದಾರರು 2024ರ ಸೆಪ್ಟೆಂಬರ್‍ನಿಂದ ಭಾರತದ ಮಾರುಕಟ್ಟೆಯಿಂದ ನಿರ್ಗಮಿಸುತ್ತಿರುವುದೇ ಈ ನಿರಂತರ ಕುಸಿತಕ್ಕೆ ಪ್ರಮುಖ ಕಾರಣ ಎಂಬ ಅಭಿಪ್ರಾಯ ಹೊರಬಿದ್ದಿದೆ. ಈಗ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತವಾಗಿರುವುದರಿಂದ, ಸಣ್ಣ ಮಟ್ಟದ ಷೇರುಗಳಿಗೆ ಭಾರಿ ನಷ್ಟವಾಗಿದೆ. ತಮ್ಮ ಇತ್ತೀಚಿನ ಗರಿಷ್ಠ ಮಟ್ಟದಿಂದ ನಿಫ್ಟಿ50 ಮತ್ತು ಸೆನ್ಸೆಕ್ಸ್ ತಮ್ಮ 15%ಕ್ಕಿಂತ ಹೆಚ್ಚು ಕುಸಿತ ಕಂಡಿದೆ. ಹೀಗಾಗಿ ಮಧ್ಯಮ ಮತ್ತು ಸಣ್ಣಕಾಪ್ ಷೇರುಗಳು ಇದಕ್ಕೂ ಹೆಚ್ಚಿನ ನಷ್ಟವನ್ನು ಅನುಭವಿಸಿವೆ ಎಂದು ಹೇಳಲಾಗುತ್ತಿದೆ.
ಅಲ್ಲದೇ ಮೋತೀಲಾಲ್ ಓಸ್ವಾಲ್‌ನ ಗೌತಮ್ ದುಗ್ಗಡ್ ಎಂಬುವರ ಪ್ರಕಾರ, ನಿನ್ನೆ ( ಫೆಬ್ರವರಿ 27) ವೇಳೆಗೆ ಭಾರತದ ಟಾಪ್ 500 ಷೇರುಗಳ ಸೂಚ್ಯಂಕ ಮಾರುಕಟ್ಟೆ ಮೌಲ್ಯ, ಸರಿಯಾಗಿ ಒಂದು ವರ್ಷದ ಹಿಂದಿನ ಮಟ್ಟಕ್ಕೆ ಸರಿದಿದೆ. ಈ ಬೆಳವಣಿಗೆಯು ಮಾರುಕಟ್ಟೆಯ ಸ್ಥಗಿತ ಸ್ಥಿತಿಯನ್ನು ತೋರಿಸುತ್ತಿದೆ. ಅಲ್ಲದೇ ಮುಂದಿನ ಹೂಡಿಕೆ ತಂತ್ರಗಳನ್ನು ಮೌಲ್ಯಮಾಪನ ಮಾಡುವುದು ಕೂಡ ಮುಖ್ಯ ಎನ್ನಲಾಗಿದೆ. ಇನ್ನು ಈ ಬೆಳವಣಿಗೆಯು ಮಾರುಕಟ್ಟೆಯ ಸ್ಥಗಿತ ಸ್ಥಿತಿಯನ್ನು ತೋರಿಸುತ್ತಿದೆ. ಅಲ್ಲದೇ ಮುಂದಿನ ಹೂಡಿಕೆ ತಂತ್ರಗಳನ್ನು ಕೂಡ ಮೌಲ್ಯಮಾಪನ ಮಾಡುವುದು ಬಹುಮುಖ್ಯವಾಗಿದೆ.

ಆಗಲೇ ಹೇಳಿದಂತೆ ವಿದೇಶಿ ಹೂಡಿಕೆದರರ ನಿರ್ಗಮನವೂ ಕೂಡ ಷೇರು ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿದೆ. ಅಂದರೆ 25 ಬಿಲಿಯನ್ ಡಾಲರ್‍ಗಳಷ್ಟು ಷೇರುಗಳ ಮಾರಾಟವಾಗಿದ್ದು ಮುಂಬರುವ IPO ಲಾಕ್-ಇನ್ ಅವಧಿ ಎಫೆಕ್ಟ್ ಆಗಲಿದೆ. ಸದ್ಯ ವಿದೇಶಿ ಹೂಡಿಕೆದಾರರು ಭಾರತೀಯ ಷೇರು ಮಾರುಕಟ್ಟೆಯಲ್ಲಿ 16% ಹಂಚಿಕೆಯನ್ನು ಹೊಂದಿದ್ದಾರೆ. ಮತ್ತು ಅವರ ಲಾಭವು ನಿಗಮಗಳ ಲಾಭಾಂಶದ ಪುನಶ್ಚೇತನ ಮತ್ತು ಅಮೆರಿಕಾದ ಬಾಂಡ್ ಇಳಿಕೆಗೆ ಅವಲಂಬಿತವಾಗಿದೆ. ಇನ್ನು ಇತ್ತೀಚಿನ ಐಪಿಒಗಳ ಮೂಲಕ 26 ಬಿಲಿಯನ್ ಡಾಲರ್‍ಗಳಷ್ಟು ಮೌಲ್ಯದ ಷೇರುಗಳು ಬಿಡುಗಡೆಯಾಗಲಿವೆ.
ಇನ್ನು ಲಾಕ್-ಇನ್ ಅವಧಿಯ ಮುಕ್ತಾಯದಿಂದ ಪರಿಣಾಮ ಹಲವು ಷೇರುಗಳ ಮೇಲೆ ಪರಿಣಾಮ ಬೀರಲಿದೆ. ಅವು ಯಾವುವೆಂದರೆ ಹೆಕ್ಸಾವೇರ್ ಟೆಕ್, ಡಾ. ಅಗರ್ವಾಲ್ ಹೆಲ್ತ್ ಕೇರ್, ಅಜಾಕ್ಸ್ ಇಂಜಿನಿಯರಿಂಗ್, ಪ್ರೀಮಿಯರ್ ಎನರ್ಜೀಸ್, ವಾರೀ ಎನರ್ಜೀಸ್ ಆಗಿವೆ. ಇನ್ನು ನಿಫ್ಟಿ ಮತ್ತು ಸೆನ್ಸೆಕ್ಸ್‌ನಲ್ಲಿ ಈಗಾಗಲೇ 15% ಕುಸಿತ ಕಂಡಿರುವುದರಿಂದ, ಈ ಬೆಳವಣಿಗೆಯು ಮಾರುಕಟ್ಟೆ ಮೇಲೆ ಇನ್ನಷ್ಟು ಒತ್ತಡ ತರುವ ಸಾಧ್ಯತೆ ಇದೆ.
ಇನ್ನು ಮಾರುಕಟ್ಟೆಯಲ್ಲಿ ಮೌಲ್ಯಮಾಪನದ ಹೆಚ್ಚಳ ಮತ್ತು ಆರ್ಥಿಕ ಬೆಳವಣಿಗೆ ನಿಧಾನಗತಿ ಹೊಂದಿದ್ದೇ ಹೂಡಿಕೆದಾರರ ಭಯಕ್ಕೆ ಕಾರಣವಾಗಿದೆ. ಅಂದರೆ ಇತ್ತೀಚಿಗೆ ಅಮೆರಿಕಾದ ಬಾಂಡ್ ಇಳುವರಿ ಹಾಗೂ ಬಲವಾದ ಯುಎಸ್ ಡಾಲರ್ ಮಧ್ಯೆ ಈ ಏರಿಳಿತ ತೀವ್ರಗೊಂಡಿದೆ. ಇತ್ತೀಚೆಗೆ ಷೇರು ಕುಸಿತದ ನಂತರವೂ, 19 ಪಟ್ಟು ಪ್ರೀಮಿಯಂ ಮೌಲ್ಯಮಾಪನದಲ್ಲಿ ವಹಿವಾಟು ನಡೆಯುತ್ತಿದೆ. ಈ ವಹಿವಾಟಿಗೆ ಹೋಲಿಕೆಯಾದರೆ, ದಕ್ಷಿಣ ಕೊರಿಯಾದ ಕೋಸ್ಪಿ 9.2 ಪಟ್ಟು ಮುಂದಕ್ಕೆ ಹೋಗಿ ವಹಿವಾಟು ನಡೆಸುತ್ತಿದೆ. ಚೀನಾದ ಶಾಂಘೈ ಕಾಂಪೋಸಿಟ್ 12 ಪಟ್ಟು ವಹಿವಾಟು ನಡೆಸುತ್ತದೆ. ಭಾರತೀಯ ಷೇರುಗಳು ಏಷ್ಯಾದ ಬೇರೆ ಮಾರುಕಟ್ಟೆಗಳಿಗಿಂತ ಹೆಚ್ಚು ದುಬಾರಿಯಾಗಿದೆ. ಇದು ಹೂಡಿಕೆದಾರರಿಗೆ ಆತಂಕಕಾರಿ ವಿಷಯವಾಗಿದೆ.
ಇನ್ನು ಅಮೆರಿಕದ ಬಾಂಡ್ ಇಳುವರಿ ಏರಿಕೆಯಾಗಿರುವುದೇ ಭಾರತೀಯ ಹೂಡಿಕೆಗಳಿಗೆ ಹೊಸ ಸವಾಲಾಗಿದೆ. ಅಂದರೆ 10 ವರ್ಷಗಳ ಬಾಂಡ್ ಇಳುವರಿ 4% ಕ್ಕಿಂತ ಹೆಚ್ಚಾಗಿದೆ. ಇದರಿಂದ ಹೂಡಿಕೆದಾರರಿಗೆಗೆ ಅಪಾಯ-ಮುಕ್ತ ಆದಾಯದ ಆಕರ್ಷಣೆಯನ್ನು ಹೆಚ್ಚಿಸಿದೆ. ಹಾಗೆಯೇ ಭಾರತೀಯ ರೂಪಾಯಿ ಮೌಲ್ಯ ಕೂಡ ಈ ವರ್ಷ 5% ಕುಸಿಯುವ ನಿರೀಕ್ಷೆಯಿದೆ. ವಿದೇಶಿ ಹೂಡಿಕೆದಾರರಿಗೆ ಈ ಹೂಡಿಕೆ ಮೇಲಿನ ನಷ್ಟದ ಸಾಧ್ಯತೆ ಹೆಚ್ಚಾಗುತ್ತದೆ.ಇನ್ನು ಸದ್ಯ ಜಾಗತಿಕ ಹೂಡಿಕೆದಾರರು ಸುಮಾರು 9% ರಿಟರ್ನ್ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.


Click it and Unblock the Notifications