ಮುಸ್ಲಿಮರು (Muslim) ಜೀವನದಲ್ಲಿ ಒಮ್ಮೆಯಾದ್ರೂ ಮಾಡಬೇಕೆನ್ನುವ ಪವಿತ್ರ ಯಾತ್ರೆಯೇ ಅದು ಹಜ್ ಯಾತ್ರೆ. ಇದೀಗ ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ ಸಚಿವಾಲಯ (Ministry Of Hajj and Umrah) ಇಂದು ಮಹತ್ವದ ಘೋಷಣೆಯೊಂದನ್ನು ಮಾಡಿದೆ. ಹಜ್ 2026ರ ಯಾತ್ರೆಗಾಗಿ (Huj Yatra 2026) ವೀಸಾಗಳ ವಿತರಣೆಯನ್ನು ಫೆಬ್ರವರಿ 8, 2026, ಭಾನುವಾರ ಆರಂಭಿಸಲಾಗುತ್ತದೆ ಎಂದು ಹೇಳಲಾಗಿದೆ. ನಿರೀಕ್ಷೆಗೂ ಮೊದಲೇ ಈ ಬಾರಿ ಹಜ್ ವೀಸಾ ಪ್ರಕ್ರಿಯೆ ಆರಂಭವಾಗುತ್ತಿದೆ. ಯಾತ್ರೆಗೆ ಇನ್ನೂ 4 ತಿಂಗಳು ಸಮಯವಿದೆ. ಅದಕ್ಕೂ ಮುನ್ನವೇ ಈ ಸೇವೆಗೆ ಮುಂದಾಗಿದೆ.

ಕಾರಣವೇನು?
ಸೌದಿ ಅರೇಬಿಯಾ 2026ರ ಹಜ್ ಯಾತ್ರೆಗೆ ಸಿದ್ಧತೆಗಳನ್ನು ಮೊದಲೇ ಆರಂಭಿಸಿದೆ. ಯಾತ್ರಾ ಅವಧಿಯ ಒತ್ತಡ ತಗ್ಗಿಸಲು, ಯಾತ್ರಾರ್ಥಿಗಳ ಪ್ರಯಾಣಕ್ಕೆ ಇನ್ನೂ ನಾಲ್ಕು ತಿಂಗಳು ಮೊದಲೇ ವೀಸಾ ಪ್ರಕ್ರಿಯೆ ಶುರುಮಾಡಿದೆ.
ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯದ ಘೋಷಣೆಯ ಪ್ರಕಾರ, 1447 AH (2026ರ ಹಜ್) ಗಾಗಿ ವೀಸಾ ವಿತರಣೆಯು ಫೆಬ್ರವರಿ 8, ಭಾನುವಾರದಂದು ಆರಂಭಗೊಂಡಿದೆ. ಯಾತ್ರಾ ವಿಧಿಗಳಿಗೆ ಸುಮಾರು 4 ತಿಂಗಳು ಮುಂಚಿತವಾಗಿ ಶುರುವಾದ ಈ ಪ್ರಕ್ರಿಯೆ, ಹೆಚ್ಚು ಕ್ರಮಬದ್ಧ ಮತ್ತು ಊಹಿಸಬಹುದಾದ ಯಾತ್ರಾ ಕಾಲಕ್ಕೆ ದಾರಿ ಮಾಡಿಕೊಟ್ಟಿದೆ.
ಅಧಿಕಾರಿಗಳ ಪ್ರಕಾರ, ಈ ನಿರ್ಧಾರದಿಂದ, ಯಾತ್ರೆಯ ಸೇವಾ ಸಿದ್ಧತೆ ಮತ್ತು ಯಾತ್ರಾರ್ಥಿಗಳ ಸೌಕರ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಇದು 'ಸೌದಿ ವಿಷನ್ 2030' ರ ಚೌಕಟ್ಟಿಗೆ ಹೊಂದಿದ್ದು, ಹಜ್ ಮತ್ತು ಉಮ್ರಾ ವ್ಯವಸ್ಥೆಯಾದ್ಯಂತ ದಕ್ಷತೆ, ಸೇವಾ ಗುಣಮಟ್ಟ ಹಾಗೂ ಜನಸಂದಣಿ ನಿರ್ವಹಣೆಗೆ ಆದ್ಯತೆ ನೀಡುತ್ತದೆ.
ವೀಸಾ ಪ್ರಕ್ರಿಯೆಯ ಮುಖ್ಯ ವಿಷಯಗಳು:
- ಆರಂಭದ ದಿನಾಂಕ: ಫೆಬ್ರವರಿ 8, 2026 (ಭಾನುವಾರ)
- ಉದ್ದೇಶ: ಯಾತ್ರಿಗಳಿಗೆ ಹೆಚ್ಚಿನ ಸಮಯ ನೀಡಿ ದಾಖಲಾತಿ, ಲಾಜಿಸ್ಟಿಕ್ಸ್, ಆರೋಗ್ಯ ಪರೀಕ್ಷೆಗಳು ಮತ್ತು ವಸತಿ ವ್ಯವಸ್ಥೆಯನ್ನು ಸರಿಯಾಗಿ ಪೂರ್ಣಗೊಳಿಸಲು ಇದು ಸಹಕಾರಿಯಾಗಲಿದೆ. ಅಲ್ಲದೇ ಸೌದಿ ಸರ್ಕಾರದ ವಿಷನ್ 2030 ರ ಯೋಜನೆಯಡಿ ಸೇವೆಗಳನ್ನು ಆಧುನೀಕರಿಸಿ, ಯಾತ್ರಿಗಳ ಸುರಕ್ಷತೆ ಮತ್ತು ಸೌಕರ್ಯ ಹೆಚ್ಚಿಸುವ ಭಾಗವಾಗಿ ಮೊದಲೇ ಆರಂಭಿಸಲಾಗಿದೆ.
- ಈಗಾಗಲೇ ಸುಮಾರು 7.5 ಲಕ್ಷ ಯಾತ್ರಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. 30,000ಕ್ಕೂ ಅಧಿಕ ಯಾತ್ರಿಗಳುಗೆ ಪ್ಯಾಕೇಜ್‌ಗಳು ಸಹ ಬುಕ್ ಆಗಿವೆ.
ವೀಸಾ ವಿತರಣೆಯೊಂದಿಗೆ ಪವಿತ್ರ ಸ್ಥಳಗಳಲ್ಲಿ ಸಿದ್ಧತೆಗಳು ಕೂಡಾ ಭರದಿಂದ ಸಾಗುತ್ತಿವೆ. ಅಂತಾರಾಷ್ಟ್ರೀಯ ಯಾತ್ರಾರ್ಥಿಗಳಿಗಾಗಿ ಸುಮಾರು 485 ಶಿಬಿರಗಳನ್ನು ನಿಗದಿಪಡಿಸಲಾಗಿದೆ. ಇದಲ್ಲದೆ, 73 ಹಜ್ ವ್ಯವಹಾರಗಳ ಕಚೇರಿಗಳು ತಮ್ಮ ಮೂಲಭೂತ ಒಪ್ಪಂದದ ಏರ್ಪಾಡುಗಳನ್ನು ಮುಗಿಸಿವೆ.
ಭಾರತೀಯ ಯಾತ್ರಿಗಳಿಗೆ ಏನು ಪ್ರಯೋಜನ?
ಭಾರತ-ಸೌದಿ ದ್ವಿಪಕ್ಷೀಯ ಒಪ್ಪಂದದಡಿ 1,75,025 ಕ್ಕೂ ಹೆಚ್ಚು ಕೋಟಾ ದೊರಕಿದೆ. ಭಾರತದ ಹಜ್ ಕಮಿಟಿ ಮತ್ತು ಖಾಸಗಿ ಏಜೆನ್ಸಿಗಳ ಮೂಲಕ ಅರ್ಜಿ ಸಲ್ಲಿಸಬಹುದು. ಇನ್ನು ಅಧಿಕೃತ ವೆಬ್‌ಸೈಟ್‌ಗಳನ್ನು ಬಳಸಿ ನೋಂದಣಿ ಮಾಡಿಕೊಳ್ಳುವಂತೆ ಸಲಹೆ ನೀಡಲಾಗಿದೆ. ಈಗಾಲೇ ಆರೋಗ್ಯ ತಪಾಸಣೆ, ಇತರ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳಿ ಎಂದು ಸಲಹೆ ನೀಡಲಾಗಿದೆ.


Click it and Unblock the Notifications