ಹೈದರಾಬಾದ್‌ನಲ್ಲಿ ಓಲಾ, ಉಬರ್ ಹಾಗೂ ರ್‍ಯಾಪಿಡೋ ಕ್ಯಾಬ್ ಚಾಲಕರು, ಸ್ಥಿರ ದರವನ್ನು ನಿಗದಿಪಡಿಸಿರುವುದರ ವಿರುದ್ಧ ಸಿಡಿದೆದ್ದಿದ್ದಾರೆ. ಅನ್ಯಾಯದ ದರಗಟ್ಟುವ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಇಂದು (ಮಾರ್ಚ್ ಮಾರ್ಚ್ 24) ರಿಂದ ನೋ ಎಸಿ ಅಭಿಯಾನ ಆರಂಭಿಸಿದ್ದಾರೆ. ಈ ಅಭಿಯಾನದಡಿ ಚಾಲಕರು ಪ್ರಯಾಣದ ವೇಳೆ ಹವಾನಿಯಂತ್ರಣವನ್ನು ಆಫ್ ಮಾಡುವ ಮೂಲಕ, ತಮ್ಮ ಆರ್ಥಿಕ ಸಂಕಷ್ಟವನ್ನು ಜನತೆ ಮತ್ತು ಸರ್ಕಾರದ ಗಮನಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ.

ಇನ್ನು ಹೈದರಾಬಾದ್‌ನಲ್ಲಿ ಈ ಪ್ರತಿಭಟನೆಯಿಂದ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಅದಲ್ಲದೇ ಈಗ ಬೇಸಿಗೆ ಇರುವುದರಿಂದ ಉಷ್ಣಾಂಶದ ಅನುಭವ ಹೆಚ್ಚಾಗಿರುತ್ತದೆ. ಪ್ರಯಾಣಿಕರು AC ಇಲ್ಲದ ಕ್ಯಾಬ್‌ಗಳಲ್ಲಿ ಪ್ರಯಾಣಿಸಲು ಹೇಗಾಗಲಿದೆ ಎಂಬ ಚರ್ಚೆ ಆರಂಭವಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಈ ಅಭಿಯಾನ ರೈಡ್ ಹೈಲಿಂಗ್ ಕಂಪನಿಗಳ ನೀತಿಗಳನ್ನು ಬದಲಿಸಲು ಪ್ರೇರೇಪಣೆ ಮಾಡುತ್ತದೆ. ಅಥವಾ ಪ್ರಯಾಣಿಕರಿಗೆ ಹೊಸ ಸಮಸ್ಯೆಗಳನ್ನು ಉಂಟುಮಾಡುತ್ತದೆಯೋ ಎಂಬುದನ್ನು ನೋಡಬೇಕಾಗಿದೆ.
ಅಂದಹಾಗೆ ಕಳೆದ ಕೆಲವು ವರ್ಷಗಳಿಂದ ರೈಡ್ ಹೈಲಿಂಗ್ ಕಂಪನಿಗಳು ದರ ಕಡಿಮೆ ಮಾಡುತ್ತಿದ್ದವು. ಇದರ ಪರಿಣಾಮ ಕ್ಯಾಬ್ ಚಾಲಕರಿಗೆ ಭಾರಿ ನಷ್ಟ ಎದುರಾಗಿತ್ತು. ಹೀಗಾಗಿ ಪ್ರತಿಭಟನೆ ಬಿಸಿ ಮುಟ್ಟಿಸಲು ಬೀದಿಗಿಳಿದಿದ್ದಾರೆ. ಈ ಪ್ರತಿಭಟನೆ ತೆಲಂಗಾಣ ಗಿಗ್ ಮತ್ತು ಪ್ಲಾಟ್‌ಫಾರ್ಮ್ ವರ್ಕರ್ಸ್ ಯೂನಿಯನ್ ವೇದಿಕೆಯಿಂದ ಅಧಿಕೃತವಾಗಿ ಘೋಷಿಸಲ್ಪಟ್ಟಿದೆ. ಈ ಪ್ರತಿಭಟನೆಯ ಪ್ರಮುಖ ಭಾಗವಾಗಿರುವುದೇನೆಂದರೆ, , ಈ ಬಾರಿ ಚಾಲಕರು ಪ್ಯಾಸೆಂಜರ್‌ಗಳಿಗೆ ಯಾವುದೇ ಮುನ್ಸೂಚನೆ ನೀಡದೆ, ಪ್ರಯಾಣದ ವೇಳೆಯೇ ಹವಾನಿಯಂತ್ರಣವನ್ನು ಆಫ್ ಮಾಡಲಿದ್ದಾರೆ ಎಂಬುದಾಗಿದೆ. ಇದರಿಂದಾಗಿ, ಪ್ರಯಾಣಿಕರು ಕಂಪನಿಗಳ ದರ ನೀತಿಯ ಬಗ್ಗೆ ಗಮನ ಹರಿಸಲು ಒತ್ತಾಯಿಸಲ್ಪಡುವ ಸಾಧ್ಯತೆ ಇದೆ.
ಸದ್ಯ ಹೈದರಾಬಾದ್ ಸಿಟಿಯಲ್ಲಿ ಉಬರ್,ಓಲಾ ಮತ್ತು ರ್‍ಯಾಪಿಡೋ ಸೇರಿ ಮುಂತಾದ ರೈಡಿಂಗ್ ಸಂಸ್ಥೆಗಳು, ತಮ್ಮದೇ ಆದ ದರಗಳನ್ನು ಅಳವಡಿಸಿಕೊಂಡಿವೆ. ಸರ್ಕಾರ ನಿಗದಿಪಡಿಸಿದ ದರಗಳಂತೆ ಅವುಗಳು ಕಾರ್ಯನಿರ್ವಹಿಸುತ್ತಿಲ್ಲ. ಪ್ರತಿ ಕಿಲೋಮೀಟರ್‌ಗಾಗಿ ಒಬ್ಬ ಕ್ಯಾಬ್ ಚಾಲಕ ₹10-₹12 ಗಳಿಸುತ್ತಿದ್ದರೂ, ಎಸಿ ಆನ್ ಮಾಡಿದಾಗ ಅವರಿಗಾಗುವ ಖರ್ಚು ₹16-₹18 ಆಗುತ್ತದೆ. ಇದರ ಅರ್ಥ, ಕ್ಯಾಬ್ ಓಡಿಸಿದ ಪ್ರತಿಯೊಂದು ಪ್ರಯಾಣಕ್ಕೂ ಅವರು ನಷ್ಟ ಅನುಭವಿಸುತ್ತಿದ್ದಾರೆ. ಇದರ ಜೊತೆಗೆ, ಕಂಪನಿಗಳು ಚಾಲಕರ ಆದಾಯದಲ್ಲಿ ಶೇಕಡಾ 30% ಕಮಿಷನ್ ಕಡಿತ ಮಾಡುತ್ತಿದ್ದರಿಂದ, ಚಾಲಕರ ಸಂಪೂರ್ಣ ಆದಾಯವನ್ನು ಗಣನೀಯವಾಗಿ ಕಡಿಮೆ ಮಾಡಿದೆ.
ಇನ್ನು ಈ ರೀತಿಯ ಪ್ರತಿಭಟನೆ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ ಕೂಡ ಹೈದರಾಬಾದ್‌ನಲ್ಲಿ ನೋ ಎಸಿ ಅಭಿಯಾನವನ್ನು ಪ್ರಾರಂಭಿಸಿದ್ದರು. ಆದರೆ ಕಂಪನಿಗಳು ಯಾವುದೇ ಸಕಾರಾತ್ಮಕ ಉತ್ತರ ನೀಡಲಿಲ್ಲ. ಪ್ರತಿಭಟನೆಗೆ ಕಿಮ್ಮತ್ತುಉ ದರಗಟ್ಟುವ ನೀತಿಗಳನ್ನು ಬದಲಾಯಿಸದೆ ಮುಂದುವರೆದವು. ಇದೇ ಕಾರಣದಿಂದ ಈ ಬಾರಿ ಪ್ರತಿಭಟನೆಯನ್ನು ಇನ್ನಷ್ಟು ಗಂಭೀರವಾಗಿ ತೆಗೆದುಕೊಳ್ಳಲು ಚಾಲಕರು ನಿರ್ಧರಿಸಿದ್ದಾರೆ. ಕೆಲವಾರು ಕ್ಯಾಬ್ ಚಾಲಕರು ತಮ್ಮ ವಾಹನಗಳನ್ನು ರಸ್ತೆ ಸಾರಿಗೆ ಪ್ರಾಧಿಕಾರಕ್ಕೆ ಒಪ್ಪಿಸಲು ಸಿದ್ಧರಾಗಿದ್ದಾರೆ. ಇದು ಕಂಪನಿಗಳ ವಿರುದ್ಧ ಒತ್ತಡವನ್ನು ಹೆಚ್ಚಿಸಲಿದೆ ಎನ್ನಬಹುದಾಗಿದೆ.
ಆದರೆ ಈ ಪ್ರತಿಭಟನೆಯಿಂದ ಕಂಪನಿಗಳಿಗಿಂತ ಹೆಚ್ಚಾಗಿ ಪ್ರಯಾಣಿಕರ ಮೇಲೆ ಪರಿಣಾಮ ಬೀಡುತ್ತದೆ. ಬಿಸಿಲಿನ ವಾತಾವರಣದಲ್ಲಿ ಟ್ಯಾಕ್ಸಿ ಸೇವೆಯಲ್ಲಿ ತೊಂದರೆಯಾಗುತ್ತದೆ. ಹೈದರಾಬಾದ್ ಉಷ್ಣ ಹವಾಮಾನವನ್ನು ಅನುಭವಿಸುತ್ತಿದ್ದು, ತಾಪಮಾನ 22.73°C ರಿಂದ 33.28°C ಒಳಗಿದೆ. ಮಂಗಳವಾರದಿಂದ ಶುಕ್ರವಾರದವರೆಗೆ ತಾಪಮಾನವು ಮತ್ತಷ್ಟು ಹೆಚ್ಚಾಗಬಹುದು. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸುವ ಸಾಧ್ಯತೆ ಇದೆ ಎನ್ನಬಹುದಾಗಿದೆ.
ಇದರ ಜೊತೆಗೆ ಹೈದರಾಬಾದ್ ಏರ್ ಪೋರ್ಟ್ನಿಂದ ಸಿಟಿಗೆ ಹಿಂತಿರುಗುವ ಪ್ರಯಾಣಿಕರು, AC ಇಲ್ಲದ ಟ್ಯಾಕ್ಸಿಗಳ ವಿರುದ್ಧ ದೂರು ಕೂಡ ನೀಡಬಹುದು. ಆದರೂ ಇದು ಚಾಲಕರು ಮಾಡುತ್ತಿರುವ ಕಟ್ಟುನಿಟ್ಟಿನ ಪ್ರತಿಭಟನೆಯಾಗಿದೆ. ತಮ್ಮ ಹಕ್ಕುಗಳಿಗಾಗಿ ಈ ಕ್ರಮವನ್ನು ಅವರು ಕೈಗೊಂಡಿರುವುದರಿಂದ, ಈ ಅಭಿಯಾನವನ್ನು ಅವರು ನಿಲ್ಲಿಸುವ ಲಕ್ಷಣ ಕಂಡುಬರುವುದಿಲ್ಲ. ಕೆಲವೊಬ್ಬರು ಎಸಿ ಚಾಲಿತ ಪ್ರೀಮಿಯಂ ಸೇವೆಗಳನ್ನು ಆಯ್ಕೆ ಮಾಡಬಹುದು, ಆದರೆ ಸಾಮಾನ್ಯ ಕ್ಯಾಬ್ ಸೇವೆಗಳು ಗರಿಷ್ಠ 80% ಪ್ರಯಾಣಿಕರು ಬಳಸುವ ಪ್ರಮುಖ ಸೇವೆಯಾದ್ದರಿಂದ, ಹಲವರಿಗೆ ಈ ಸಮಸ್ಯೆ ಎದುರಾಗಲಿದೆ.
ಇನ್ನು ಹಲವಾರು ಚಾಲಕರು ತಮ್ಮ ವಾಹನಗಳನ್ನು RTAಗೆ ಹಿಂತಿರುಗಿಸಲು ಸಿದ್ಧರಾಗಿದ್ದಾರೆ. ಇದರಿಂದ, ಹೈದರಾಬಾದ್‌ನಲ್ಲಿ ಕ್ಯಾಬ್ ಗಳ ಲಭ್ಯತೆ ಕಡಿಮೆಯಾಗಬಹುದು, ಪ್ರಯಾಣಿಕರು ಪರ್ಯಾಯ ಸಾರಿಗೆ ಮಾರ್ಗಗಳನ್ನು ಹುಡುಕಬೇಕಾಗಬಹುದು. ತೆಲಂಗಾಣ ಸರ್ಕಾರ ಈ ಸಮಸ್ಯೆಗೆ ಮಧ್ಯಸ್ಥಿಕೆ ಹಸ್ತಕ್ಷೇಪ ಮಾಡಬಹುದೆಂಬ ನಿರೀಕ್ಷೆ ಇದೆ. ರಾಜ್ಯ ಸರ್ಕಾರವೇ ನಿಗದಿಪಡಿಸಿದ ದರಗಳನ್ನು ಅನುಸರಿಸಲು ಒತ್ತಾಯಿಸಿದರೆ, ಕಂಪನಿಗಳು ದರಗಳನ್ನು ಪರಿಷ್ಕರಿಸಬೇಕಾಗಬಹುದು.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications