ಜುಬಿಲಿ ಹಿಲ್ಸ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ (Jubilee Hills By Election) ಯಾರು ಗೆಲುವು ಸಾಧಿಸುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ, ಈಗಾಗಲೇ ಬಿಗಿಭದ್ರತೆಯೊಂದಿಗೆ ಕೋಟ್ಲಾ ವಿಜಯ ಭಾಸ್ಕರ ರೆಡ್ಡಿ ಒಳಾಂಗಣ ಕ್ರೀಡಾಂಗಣದಲ್ಲಿ ಮತ ಎಣಿಕೆ ಕಾರ್ಯ (Vote Counting) ಶುರುವಾಗಿದೆ. ಇಂದು (ನ.14) ಬೆಳಿಗ್ಗೆ 8 ಗಂಟೆಗೆಗ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಇದೀಗ ಚುನಾವಣಾ ಅಧಿಕಾರಿಗಳು ಅಂಚೆ ಮತ ಎಣಿಕೆ ಪ್ರಕ್ರಿಯೆ ಚಾಲನೆಯಾಗಿದೆ. 2023ರ ಚುನಾವಣೆಯಲ್ಲಿ ಭಾರತ ರಾಷ್ಟ್ರ ಸಮಿತಿಯಿಂದ (BRS) ಶಾಸಕರಾಗಿ ಆಯ್ಕೆಯಾಗಿದ್ದ ಶಾಸಕ ಮಗಂತಿ ಗೋಪಿನಾಥ್ (Maganti Gopinath) ಅವರು 2025ರಲ್ಲಿ ನಿಧನರಾದರು. ಈ ಹಿನ್ನೆಲೆ ಉಪಚುನಾವಣೆ ಅನಿವಾರ್ಯವಾಗಿತ್ತು.

ಇನ್ನು ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಮತ್ತು ಬಿಆರ್‌ಎಸ್ ಪಕ್ಷಗಳೆರಡಕ್ಕೂ ಈ ಉಪಚುನಾವಣೆ ಭಾರೀ ಮಹತ್ವದ್ದಾಗಿದೆ. ಇದೇ ನವೆಂಬರ್ 11, ಮಂಗಳವಾರ ಜುಬಿಲಿ ಹಿಲ್ಸ್‌ನ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮತದಾನ ನಡೆದಿತ್ತು. ಇಂದು (ಶುಕ್ರವಾರ) ಮಧ್ಯಾಹ್ನದ ವೇಳೆಗೆ ಫಲಿತಾಂಶ ಪ್ರಕಟವಾಗುವ ನಿರೀಕ್ಷೆಯಿದೆ.
407 ಮತಗಟ್ಟೆಗಳಲ್ಲಿ ಮತದಾನ, 10 ಸುತ್ತು!
ರಿಟರ್ನಿಂಗ್ ಆಫೀಸರ್ ಕರ್ಣನ್ ಅವರು ಹೇಳಿದಂತೆ, ಮೊದಲು ಅಂಚೆ ಮತ ಎಣಿಕೆಗಳನ್ನು ನಡೆಸಲಾಗುತ್ತದೆ. ಆ ನಂತರ ಇವಿಎಂ ಮತಗಳ ಎಣಿಕೆ ನಡೆಯುತ್ತದೆ ಎಂದು ಹೇಳಿದರು. ಒಟ್ಟು 407 ಮತಗಟ್ಟೆಗಳಲ್ಲಿ ಚಲಾವಣೆಯಾದ ಮತವನ್ನು ಒಟ್ಟು 10 ಸುತ್ತುಗಳಲ್ಲಿ ಎಣಿಸಲಾಗುತ್ತದೆ ಎಂದು ಹೇಳಲಾಗಿದೆ.
ಉಪಚುನಾವಣೆಗೆ ಕಾರಣವೇನು?
ಈ ವರ್ಷದ ಜೂನ್‌ನಲ್ಲಿ ಬಿಆರ್‌ಎಸ್ ಶಾಸಕರಾಗಿ ಆಯ್ಕೆಯಾಗಿದ್ದ ಮಗಂತಿ ಗೋಪಿನಾಥ್ ಅವರ ನಿಧನದಿಂದಾಗಿ ಈ ಉಪಚುನಾವಣೆ ನಡೆಸಬೇಕಾಯಿತು. ಇದೀಗ ಬಿಜೆಪಿ ಪರವಾಗಿ ಎಲ್ ದೀಪಕ್ ರೆಡ್ಡಿ ಸ್ಪರ್ಧಿಸಿದ್ದು, ಬಿಆರ್‌ಎಸ್ ಪಕ್ಷದಿಂದ ಮೃತ ಗೋಪಿನಾಥ್ ಅವರ ಪತ್ನಿ ಸುನಿತಾ ಅವರೇ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಇನ್ನು ಆಡಳಿತಾರೂಢ ಕಾಂಗ್ರೆಸ್‌ನಿಂದ ನವೀನ್ ಯಾದವ್ ಅವರನ್ನು ಕಣಕ್ಕಿಳಿಸಿದೆ. ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಸಹ ಕಾಂಗ್ರೆಸ್‌ಗೆ ಬಲ ನೀಡಿದೆ. ಈ ಮೂಲಕ ಸದ್ಯ ಜುಬಿಲಿ ಹಿಲ್ಸ್‌ನಲ್ಲಿ ಬಿಜೆಪಿ, ಬಿಆರ್‌ಎಸ್, ಆಡಳಿತಾರೂಢ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ ನಡೆಯಲಿದೆ.
ಎಣಿಕೆ ಪ್ರಕ್ರಿಯೆಯನ್ನು ವೇಗಗೊಳಿಸುವ ಉದ್ದೇಶದಿಂದ, ಈ ಬಾರಿ ಚುನಾವಣಾ ಆಯೋಗವು ಮತ ಎಣಿಕೆ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಿದ್ದು, 14 ರಿಂದ 42 ಕ್ಕೆ ಹೆಚ್ಚಿಸಿದೆ. ಈ ಉಪಚುನಾವಣೆಯಲ್ಲಿ 58 ಅಭ್ಯರ್ಥಿಗಳು (ನೋಟಾ ಹೊರತುಪಡಿಸಿ) ಕಣಕ್ಕಿಳಿದಿದ್ದಾರೆ. ಒಟ್ಟು 1,94,631 ಮತಗಳು ಚಲಾವಣೆಯಾಗಿದ್ದು, ಇದು ಒಟ್ಟು ಶೇ. 48.49% ರಷ್ಟು ಮತದಾನವಾಗಿದೆ.
ಮತ ಎಣಿಕೆ ಸುಗಮವಾಗುವ ದೃಷ್ಟಿಯಿಂದ 186 ಅಧಿಕಾರಿಗಳನ್ನ ನಿಯೋಜಿಸಲಾಗಿದೆ. ಅದರಲ್ಲಿ ಮೇಲ್ವಿಚಾರಕರು, ಸಹಾಯಕರು ಮತ್ತು ಸೂಕ್ಷ್ಮ ವೀಕ್ಷಕರು ಸೇರಿದ್ದಾರೆ. ಇನ್ನು ಈ ಮತ ಎಣಿಕೆ ಪ್ರಕ್ರಿಯೆಯ ಸಂಪೂರ್ಣ ಜವಾಬ್ದಾರಿಯನ್ನು ಚುನಾವಣಾಧಿಕಾರಿ ವಹಿಸಿಕೊಂಡಿರುತ್ತಾರೆ. ಸದ್ಯದ ಮತ ಎಣಿಕೆ ಪ್ರಕಾರ ಬಿಜೆಪಿ ಮತ್ತು ಬಿಆರ್‌ಎಸ್ ಪಕ್ಷ ಹಿನ್ನಡೆಯಿದ್ದು, ಕಾಂಗ್ರೆಸ್ ಪಕ್ಷ ಮುನ್ನಡೆ ಸಾಧಿಸಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications