2021ರ ಮಾರ್ಚ್ ಹೊತ್ತಿಗೆ ಗ್ರಾಸ್ ಎನ್ ಪಿಎ 10.1ರಿಂದ 10.6 ಪರ್ಸೆಂಟ್: ICRA

ಬ್ಯಾಂಕ್ ಗಳ ಗ್ರಾಸ್ ನಾನ್ ಪರ್ಫಾರ್ಮಿಂಗ್ ಅಸೆಟ್ಸ್ (ಎನ್ ಪಿಎ) ಮತ್ತು ನೆಟ್ ಪರ್ಫಾರ್ಮಿಂಗ್ ಅಸೆಟ್ಸ್ 2021ರ ಮಾರ್ಚ್ ಹೊತ್ತಿಗೆ ಕ್ರಮವಾಗಿ 10.1- 10.6 ಪರ್ಸೆಂಟ್ ಮತ್ತು 3.1- 3.2 ಪರ್ಸೆಂಟ್ ಏರಿಕೆ ಆಗಬಹುದು ಎಂದು ಸೋಮವಾರ ಇಕ್ರಾ (ICRA) ಹೇಳಿದೆ. ಇನ್ನು 2022ರ ಮಾರ್ಚ್ ವೇಳೆಗೆ ನಿವ್ವಳ ಎನ್ ಪಿಎ 2.4ರಿಂದ 2.6 ಪರ್ಸೆಂಟ್ ಆಗಬಹುದು ಎಂದು ತಿಳಿಸಿದೆ.

"ಈಗ ಸಾಲ ವಿನಾಯಿತಿ ಅವಧಿ ಮುಕ್ತಾಯವಾಗಿದೆ ಮತ್ತು ಆಸ್ತಿ ವರ್ಗೀಕರಣದ ಮೇಲೆ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಕಾಯುತ್ತಿದ್ದು, 2021ರ ಮಾರ್ಚ್ ಹೊತ್ತಿಗೆ ಗ್ರಾಸ್ ಎನ್ ಪಿಎ ಹಾಗೂ ನೆಟ್ ಎನ್ ಪಿಎ ಕ್ರಮವಾಗಿ 10.1- 10.6% ಮತ್ತು 3.1- 3.2% ಆಗಬಹುದು. 2020ರ ಸೆಪ್ಟೆಂಬರ್ ನಲ್ಲಿ ಕ್ರಮವಾಗಿ 7.9% ಮತ್ತು 2.2% ಇತ್ತು," ಎಂದು ರೇಟಿಂಗ್ ಏಜೆನ್ಸಿ ಇಕ್ರಾ ಹೇಳಿದೆ.

ಬಹಳಷ್ಟು ಬ್ಯಾಂಕ್ ಗಳ ಸಾಲ ವಸೂಲಿಯು 90 ಪರ್ಸೆಂಟ್ ಗೂ ಹೆಚ್ಚಾಗಿದೆ. ಆದ್ದರಿಂದ 2021- 22ನೇ ಸಾಲಿನಲ್ಲಿ ನಿವ್ವಳ ಎನ್ ಪಿಎ ಹಾಗೂ ಕ್ರೆಡಿಟ್ ಪ್ರಾವಿಷನ್ಸ್ ಕಡಿಮೆ ಆಗಬಹುದು ಎನ್ನಲಾಗಿದೆ.

2021ರ ಮಾರ್ಚ್ ಹೊತ್ತಿಗೆ ಗ್ರಾಸ್ NPA 10.1- 10.6 ಪರ್ಸೆಂಟ್:  ICRA

ಇನ್ನು ವರದಿಯಲ್ಲಿ ಹೇಳಿರುವಂತೆ, ಸಾಲ ಮರುಹೊಂದಾಣಿಕೆ ಮನವಿಯು ಈ ಹಿಂದೆ ನಿರೀಕ್ಷೆ ಮಾಡಿದ್ದಕ್ಕಿಂತ ಕಡಿಮೆ ಬಂದಿದೆ. ಆರ್ಥಿಕ ಚಟುವಟಿಕೆಯಲ್ಲಿ ತೀಕ್ಷ್ಣ ಚಟುವಟಿಕೆ ಕಂಡುಬಂದಿರುವುದು ಸಹ ಬೆಂಬಲಕ್ಕೆ ಬಂದಿದೆ. ಇದರ ಜತೆಗೆ ಸರ್ಕಾರದ ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ ನೆರವು ಸಿಕ್ಕಿದೆ.

ಇನ್ನು ಇಕ್ರಾದಿಂದ ಸಾಲ ಮರುಹೊಂದಾಣಿಕೆ ಅಂದಾಜನ್ನು ಮೊದಲಿಗೆ 5- 8% ಮಾಡಲಾಗಿತ್ತು. ಆ ನಂತರ ಅದನ್ನು 2.5ರಿಂದ 4.5 ಪರ್ಸೆಂಟ್ ಗೆ ಇಳಿಕೆ ಮಾಡಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+