ಚಿನ್ನದ ಮೇಲಿನ ಹೂಡಿಕೆ (Gold Investment) ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಅದರಲ್ಲೂ ಭಾರೀಯರು ಚಿನ್ನ ಪ್ರಿಯರು. ಆದ್ರೆ ಸದ್ಯಕ್ಕೆ ಬಂಗಾರ ಖರೀದಿಸುವ ಪ್ಲಾನ್‌ನಲ್ಲಿದ್ದರೆ ಸ್ವಲ್ಪ ಸಮಯ ಕಾಯಿರಿ. ಏಕೆಂದರೆ ದೊಡ್ಡ ಮಟ್ಟದ ಕುಸಿತ ಕಾಣಲಿದ್ದೇವೆ (Gold Rate Falls) ಎಂದು ತಜ್ಞರು ಹೇಳಿದ್ದಾರೆ. ಕೆಲವೇ ದಿನಗಳಲ್ಲಿ ಚಿನ್ನದ ಮಾರುಕಟ್ಟೆಯಲ್ಲಿ ಭಾರೀ ಕುಸಿತ ಸಂಭವಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತಜ್ಞರು ಹೇಳುವಂತೆ ಮುಂದಿನ ವಾರ ಚಿನ್ನದ ಬೆಲೆಯಲ್ಲಿ ಸ್ವಲ್ಪ ಸುಧಾರಣೆ ಕಾಣುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಕಾರಣ, ಹೂಡಿಕೆದಾರರು ಅಮೆರಿಕಾದ ಹಣದುಬ್ಬರ ವರದಿ, ಫೆಡರಲ್ ರಿಸರ್ವ್ ನೀತಿ ಮತ್ತು ಚೀನಾದ ಆರ್ಥಿಕ ದತ್ತಾಂಶಗಳನ್ನು ಗಮನಿಸುತ್ತಿರುವ ಈ ಹಿನ್ನೆಲೆ ಈ ಬದಲಾವಣೆಯಾಗುವ ಸಾಧ್ಯತೆ ಇದೆ.
ದುರಾದೃಷ್ಟವಶಾತ್ ಒಂದು ವೇಳೆ ಬಡ್ಡಿ ದರಗಳು ಕಡಿಮೆಯಾಗಿ ಡಾಲರ್ ದುರ್ಬಲಗೊಂಡರೆ ಚಿನ್ನದ ಬೆಲೆ ಮತ್ತೆ ಏರಿಕೆಯ ಹಾದಿ ಹಿಡಿಯಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕಾ ಮತ್ತು ಚೀನಾದ ಆರ್ಥಿಕ ದತ್ತಾಂಶಗಳ ಸದ್ಯ ಹೂಡಿಕೆದಾರರು ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ಯುಎಸ್ ಹಣದುಬ್ಬರ ಅಂಕಿಅಂಶಗಳು, ವ್ಯಾಪಾರ ಸುಂಕಗಳ ಕುರಿತ ಬೆಳವಣಿಗೆಗಳು ಮತ್ತು ಫೆಡರಲ್ ರಿಸರ್ವ್ ಅಧಿಕಾರಿಗಳ ಹೇಳಿಕೆಗಳು ಚಿನ್ನದ ಬೆಲೆಯ ಭವಿಷ್ಯವನ್ನು ನಿರ್ಧರಿಸಲಿವೆ ಎಂದು ತಜ್ಞರು ವಿವರಿಸಿದ್ದಾರೆ.
ಜೆಎಂ ಫೈನಾನ್ಷಿಯಲ್ ಸರ್ವಿಸಸ್ ಲಿಮಿಟೆಡ್‌ನ ಇಬಿಜಿ-ಕಮೋಡಿಟೀಸ್ ಮತ್ತು ಕರೆನ್ಸಿ ರಿಸರ್ಚ್‌ನ ಉಪಾಧ್ಯಕ್ಷ ಪ್ರಣವ್ ಮಿರೇ ಅವರ ಪ್ರಕಾರ, "ಚಿನ್ನದ ಬೆಲೆ ಮುಂದಿನ ದಿನಗಳಲ್ಲಿ ಕುಸಿತ ಕಾಣಬಹುದು ಅಥವಾ ಸೀಮಿತ ವ್ಯಾಪ್ತಿಯಲ್ಲಿ ಇರಬಹುದು" ಎಂದು ಹೇಳಿದ್ದಾರೆ. ಯುಎಸ್ ಹಣದುಬ್ಬರ ವರದಿ, ಸುಂಕ ವಿವಾದದ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆ, ಫೆಡ್ ಅಧಿಕಾರಿಗಳ ಹೇಳಿಕೆ ಮತ್ತು ಚೀನಾದ ಆರ್ಥಿಕ ದತ್ತಾಂಶಗಳ ಮೇಲೆ ಹೂಡಿಕೆದಾರರು ಕಣ್ಣಿಟ್ಟಿದ್ದಾರೆ. ಈ ಹಿನ್ನೆಲೆ ಚಿನ್ನದ ಬೆಲೆಯಲ್ಲಿ ಕುಸಿತ ಕಾಣುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ಕಳೆದ ವಾರ ಚಿನ್ನದ ಬೆಲೆ ಕೊಂಚ ಇಳಿಕೆ ಕಂಡಿದ್ದರೂ, ಸದ್ಯ ಚಿನ್ನವು ಮಾರುಕಟ್ಟೆಯಲ್ಲಿ ಒಂದು ನಿರ್ದಿಷ್ಟ ವ್ಯಾಪ್ತಿಯಲ್ಲಿ ವಹಿವಾಟು ನಡೆಸುತ್ತಿದೆ. ಬಲಿಷ್ಠ ಡಾಲರ್ ಮತ್ತು ದುರ್ಬಲ ಭೌತಿಕ ಬೇಡಿಕೆಯಿಂದಾಗಿ ಅದರ ಏರಿಕೆ ನಿಂತಿದೆ ಎನ್ನಲಾಗಿದೆ. ಆದರೆ ಚಿಲ್ಲರೆ ಖರೀದಿದಾರರು, ಹೂಡಿಕೆದಾರರು ಮತ್ತಷ್ಟು ಬೆಲೆ ಇಳಿಕೆಯ ನಿರೀಕ್ಷೆ ಇಟ್ಟುಕೊಂಡಿರುವ ಹಿನ್ನೆಲೆ ಸದ್ಯಕ್ಕೆ ಖರೀದಿಯಿಂದ ದೂರ ಉಳಿದಿದ್ದಾರೆ.
ಕಳೆದ ವಾರ ಮಲ್ಟಿ ಕಮೋಡಿಟಿ ಎಕ್ಸ್‌ಚೇಂಜ್ (MCX) ನಲ್ಲಿ ಡಿಸೆಂಬರ್ ಡೆಲಿವರಿಗಾಗಿ ಚಿನ್ನದ ಬೆಲೆ 165 ರೂಪಾಯಿ ಅಥವಾ ಶೇ.0.14 ರಷ್ಟು ಕುಸಿತ ಕಂಡಿತ್ತು. ಈ ಹಿನ್ನೆಲೆ 10 ಗ್ರಾಂ ಬೆಲೆ 1,21,067 ರೂಪಾಯಿಗೆ ತಲುಪಿತ್ತು.
ಯುಎಸ್ ಕಾರ್ಮಿಕ ಮಾರುಕಟ್ಟೆಯಲ್ಲಾದ ಕುಸಿತದ ವರದಿಗಳು, ಸುರಕ್ಷಿತ ಹೂಡಿಕೆಯ ಬೇಡಿಕೆ, ಬಡ್ಡಿ ದರ ಕಡಿತದ ನಿರೀಕ್ಷೆಗಳು ಮತ್ತು ಕೇಂದ್ರ ಬ್ಯಾಂಕಿನ ಖರೀದಿಗಳು ಭವಿಷ್ಯದಲ್ಲಿ ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಒಂದು ವೇಳೆ ಅಮೆರಿಕಾದಲ್ಲಿ ಫೆಡ್ ಬಡ್ಡಿ ದರಗಳ ಕಡಿತ ಮುಂದುವರಿದರೆ ಮತ್ತು ಡಾಲರ್ ದುರ್ಬಲಗೊಂಡರೆ ಚಿನ್ನದ ಬೆಲೆ ಮತ್ತೆ ಏರಿಕೆ ಕಾಣಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈಗಾಗಲೇ ಚಿನ್ನದ ಬೇಡಿಕೆ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಸುರಕ್ಷಿತ ಆಸ್ತಿಯಾಗಲಿದೆ ಎನ್ನಲಾಗಿದೆ.
ಮಾಲ್ಯಾ ಅವರ ಪ್ರಕಾರ, ಚಿನ್ನವು 1979 ರ ನಂತರ ತನ್ನ ವಾರ್ಷಿಕವಾಗಿ ಏರಿಕೆಯ ಹಾದಿಯನ್ನೇ ಹಿಡಿದಿದೆ. ಪ್ರಸ್ತುತ ಪರಿಸ್ಥಿತಿ ಮುಂದುವರಿದರೆ, ಶೀಘ್ರದಲ್ಲೇ ಹೊಸ ದಾಖಲೆ ಮಟ್ಟವನ್ನು ತಲುಪುವುದರಲ್ಲಿ ಯಾವುದೇ ಸಂದೇಹಗಳಿಲ್ಲ. ಹಬ್ಬಗಳು ಮತ್ತು ಮದುವೆಯ ಸೀಸನ್‌ನಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಮತ್ತಷ್ಟು ಹೆಚ್ಚಾಗಬಹುದು ಎಂದು ಬುಲಿಯನ್ ಮಾರುಕಟ್ಟೆ ತಜ್ಞರು ಹೇಳುತ್ತಾರೆ. ಇದು MCX ನಲ್ಲಿ ಚಿನ್ನದ ಬೆಲೆ 1,22,000 ರೂಪಾಯಿಗಳಿಗಿಂತಲೂ ಏರಿಕೆ ಕಾಣಬಹುದು ಎನ್ನಲಾಗಿದೆ.
ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತ ಎಂದು ಹೇಳಲಾಗುತ್ತದೆ. ಇತ್ತೀಚೆಗೆ ಚಿನ್ನದ ಬೆಲೆಯಲ್ಲಿ ಏರಿಳಿತಗಳು ಆಗುತ್ತಲೇ ಇದೆ. ಆದ್ದರಿಂದ ಚಿನ್ನದ ಮೇಲೆ ಹೂಡಿಕೆ ಮಾಡುವವರು ಮಾರುಕಟ್ಟೆ ಬೆಳವಣಿಗೆಗಳನ್ನು ಗಮನಿಸಿಕೊಂಡು ಹೂಡಿಕೆ ಮಾಡಿದ್ರೆ ಉತ್ತಮ ಎಂದು ಹೇಳಲಾಗಿದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited (ಒಟ್ಟಾರೆ "ನಾವು" ಎಂದು ಕರೆಯಲಾಗುತ್ತದೆ) ಅವರ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications