ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮಾರ್ಚ್ 31 ಕ್ಕೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ಮುನ್ಸೂಚನೆಯು ಶೇಕಡಾ 9 ಕ್ಕೆ ಕಡಿತಗೊಳಿಸಿದೆ. ಅಂದರೆ ಭಾರತದ ಜಿಡಿಪಿ ಶೇ.9ಕ್ಕೆ ಕುಸಿತವಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಇದು ಕೊರೊನಾವೈರಸ್‌ನ ಹೊಸ ರೂಪಾಂತರದ ಹರಡುವಿಕೆಯ ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಿದ ಹಲವಾರು ಏಜೆನ್ಸಿಗಳಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಕೂಡಾ ಒಂದಾಗಿದೆ.
ಮಂಗಳವಾರದ ವರ್ಲ್ಡ್ ಎಕನಾಮಿಕ್ ಔಟ್‌ಲುಕ್‌ನ ಇತ್ತೀಚಿನ ಅಪ್‌ಡೇಟ್ ಪ್ರಕಾರ, ಕಳೆದ ವರ್ಷ ಅಕ್ಟೋಬರ್‌ನಲ್ಲಿ ಭಾರತಕ್ಕೆ 9.5 ಪ್ರತಿಶತ ಜಿಡಿಪಿ ಬೆಳವಣಿಗೆಯನ್ನು ಯೋಜಿಸಿದ್ದ ವಾಷಿಂಗ್ಟನ್ ಮೂಲದ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯು ಮುಂದಿನ ಹಣಕಾಸು ವರ್ಷ 2023 (ಏಪ್ರಿಲ್ 2022 ರಿಂದ ಮಾರ್ಚ್ 2023) ಕ್ಕೆ ಮುನ್ಸೂಚನೆ ನೀಡಿದೆ. ಮುಂದಿನ ಹಣಕಾಸು ವರ್ಷ 2023ರಲ್ಲಿ ಶೇಕಡ 7.1ರಲ್ಲಿ ಇರಲಿದೆ ಎಂದು ಸೂಚನೆ ನೀಡಿದೆ.
2020-21 ರ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇಕಡಾ 7.3 ರಷ್ಟು ಕುಸಿದಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮುನ್ಸೂಚನೆಯ ಪ್ರಕಾಡ 9.2 ಶೇಕಡಾಕ್ಕಿಂತ ಕಡಿಮೆ ಜಿಡಿಪಿ ಆಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಅಂದಾಜಿಸಿರುವ ಪ್ರಕಾರ ಭಾರತದ ಜಿಡಿಪಿ ಶೇಕಡ 9.5 ಆಗಿರಲಿದೆ.

ಇನ್ನು ಕೆಲವೇ ದಿನದಲ್ಲಿ ಕೇಂದ್ರ ಸರ್ಕಾರ ಬಜೆಟ್ ಮಂಡನೆ ಮಾಡಲಿದೆ. ಈ ನಡುವೆ ಐಎಂಎಫ್ ಮುನ್ಸೂಚನೆ ಬಂದಿದೆ. ಬಜೆಟ್ ಅಧಿವೇಶನ ಜನವರಿ 31 ರಂದು ಆರಂಭವಾಗಲಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ವಾರ್ಷಿಕ ಬಜೆಟ್ ಮಂಡಿಸಲಿದ್ದಾರೆ. ಭಾರತದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1, 2022 ರಂದು ತಮ್ಮ ನಾಲ್ಕನೇ ಕೇಂದ್ರ ಬಜೆಟ್ ಅನ್ನು ಘೋಷಿಸಲಿದ್ದಾರೆ.
ಜಾಗತಿಕ ಬೆಳವಣಿಗೆಯು ಇಳಿಕೆ ನಿರೀಕ್ಷೆ
ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮುನ್ಸೂಚನೆ ಪ್ರಕಾರ 2023 ರ ಭಾರತದ ಭವಿಷ್ಯದಲ್ಲಿ ಸಾಲದ ಬೆಳವಣಿಗೆಯಲ್ಲಿ ಸುಧಾರಣೆ ಕಾಣಲಿದೆ. ಬಳಿಕ ಹೂಡಿಕೆ ಮತ್ತು ಬಳಕೆ, ಆರ್ಥಿಕ ವಲಯದಲ್ಲಿ ನಿರೀಕ್ಷಿತ ಉತ್ತಮ ಬೆಳವಣಿಗೆ ಉಂಟಾಗಲಿದೆ. ಜಾಗತಿಕ ಬೆಳವಣಿಗೆಯು 2021 ರಲ್ಲಿ 5.9 ರಿಂದ 2022 ರಲ್ಲಿ ಶೇಕಡಾ 4.4 ಕ್ಕೆ ಇಳಿಯುವ ನಿರೀಕ್ಷೆಯಿದೆ ಎಂದು ಐಎಂಎಫ್ ಹೇಳಿದೆ. ಎರಡು ದೊಡ್ಡ ಆರ್ಥಿಕತೆಗಳಾದ ಯುಎಸ್ ಹಾಗೂ ಚೀನಾದಲ್ಲಿಯೂ ಆರ್ಥಿಕ ಕುಸಿತವು ಕಂಡು ಬರುವ ಸಾಧ್ಯತೆ ಬಗ್ಗೆಯೂ ಮುನ್ಸೂಚನೆ ನೀಡಲಾಗಿದೆ.


Click it and Unblock the Notifications