ಬೆಂಗಳೂರಿನ ನಮ್ಮ ಮೆಟ್ರೋ ಬೆಲೆ ಏರಿಕೆಯ ಪರಿಣಾಮ ಪ್ರಯಾಣಿಕರಿಗೆ ಈಗಾಗಲೇ ಸಾಕಷ್ಟು ರೀತಿಯಲ್ಲಿ ಹೊಡೆತ ತಂದಿದೆ. ಬೆಲೆ ಏರಿಕೆಯ ಆರಂಭದಲ್ಲಿ ಪ್ರಯಾಣಿಕರು ಮೆಟ್ರೋ ಹತ್ತುವುದನ್ನು ಸ್ವಲ್ಪ ದಿನ ನಿಲ್ಲಿಸಿಬಿಟ್ಟಿದ್ದರು. ಏಕೆಂದರೆ ಒನ್ ಟು ಡಬಲ್ ಮೆಟ್ರೋ ಟಿಕೆಟ್ ಚಾರ್ಜ್ ತಲೆ ಬಿಸಿ ಮಾಡಿತ್ತು. ಆದ್ರೆ ಈಗ ತಿಳಿದುಬಂದಿರುವ ಮತ್ತೊಂದು ವಿಚಾರ ಏನಂದ್ರೆ, ಮೆಟ್ರೋ ಟಿಕೆಟ್ ದರ ಕೇವಲ ಪ್ರಯಾಣಿಕರಿಗಷ್ಟೇ ಅಲ್ಲ. ಚಿಲ್ಲರೆ ವ್ಯಾಪಾರಿಗಳ ಬದುಕಿನ ಮೇಲೂ ಹೊಡೆತ ಉಂಟುಮಾಡಿದೆ ಅನ್ನೋದು.

ಹೌದು, ಇದಕ್ಕೆ ಕಾರಣ ಪ್ರಯಾಣಿಕರ ಸಂಖ್ಯೆ ಕುಸಿದಿದ್ದು. ಪ್ರಯಾಣಿಕರ ಸಂಖ್ಯೆ ಕುಸಿದರೆ ಅಂಹಡಿಗಳ ಮಾರಾಟ ಸಾಮಾನ್ಯವಾಗಿ ಇಳಿಕೆಯಾಗುತ್ತದೆ. ಇದರಿಂದ ವ್ಯಾಪಾರಿಗಳಿಗೆ ತಮ್ಮ ಬಾಡಿಗೆ ಭರಿಸುವುದು ಕೂಡ ಕಷ್ಟಸಾಧ್ಯವಾಗಿದೆ. ನುಂಗಲಾರದ ಬಿಸಿ ತುಪ್ಪವಾಗಿದೆ. ಅದರಲ್ಲೂ ಇಂದಿರಾನಗರ, ಮೆಜೆಸ್ಟಿಕ್ ಸೇರಿದಂತೆ ಬೆಂಗಳೂರಿನ ಪ್ರಮುಖ ಮೆಟ್ರೋ ನಿಲ್ದಾಣಗಳಲ್ಲಿ ಸ್ಥಾಪಿತವಾಗಿರುವ, ಹಲವು ಚಿಕ್ಕಮಟ್ಟದ ವ್ಯಾಪಾರಗಳು ಈಗ ನಷ್ಟದ ಬಲೆಯಲ್ಲಿ ಸಿಲುಕಿವೆ.
ಇನ್ನು ಅದರಲ್ಲೂ 'GO DESI' ಎಂಬ ಕೈತಯಾರಿಕೆಯಿಂದ ಸಿದ್ಧಗೊಳಿಸಿದ ತಿಂಡಿ ಉತ್ಪನ್ನಗಳ ಬ್ರಾಂಡ್ ಇದರಿಂದ ಅತ್ಯಂತ ತೀವ್ರವಾಗಿ ಬಾಧಿತವಾಗಿದೆ. ಈ ಕಂಪನಿಯ ಕಾರ್ಯಾಚರಣೆ ವ್ಯವಸ್ಥಾಪಕ ಶರತ್ ಜಿ ಅವರು ಕಳೆದ ಎರಡು ತಿಂಗಳ ಅವಧಿಯಲ್ಲಿ ನಾವು ಶೇಕಡಾ 15-20 ರಷ್ಟು ಮಾರಾಟ ಕುಸಿತವನ್ನು ಅನುಭವಿಸಿದ್ದೇವೆ ಎಂದು ತಿಳಿಸಿದ್ದಾರೆ. ಇಷ್ಟೇ ಅಲ್ಲ, ನಾಗಸಂದ್ರ ನಿಲ್ದಾಣದಲ್ಲಿರುವ ಅವರ ಶಾಖೆಯು ಶೇಕಡಾ 40 ರಷ್ಟು ಆದಾಯ ಕುಸಿತದಿಂದಾಗಿ ಮುಚ್ಚಬೇಕಾದ ಅನಿವಾರ್ಯತೆ ಎದುರಾಗಿದೆ.
ಬಾಡಿಗೆಯ ಬರೆ:
ಎಂಜಿ ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಆಭರಣ ಅಂಗಡಿ ನಡೆಸುತ್ತಿರುವ ನವೀನ್ ಗೌಡ ಅವರು ತಮ್ಮ ಪರಿಸ್ಥಿತಿಯನ್ನು ಹಂಚಿಕೊಂಡರು. ಇಲ್ಲಿನ ಬಾಡಿಗೆ ನನ್ನ ಸಂಪೂರ್ಣ ಆದಾಯದ ಶೇಕಡಾ 70 ರಷ್ಟು ಹೀರಿಕೊಳ್ಳುತ್ತಿದೆ. ತೆರಿಗೆಗಳನ್ನೂ ಪಾವತಿಸಿದ ನಂತರ ನಮ್ಮ ಹತ್ತಿರ ಶೂನ್ಯವೇ ಉಳಿಯುತ್ತದೆ. ದರ ಏರಿಕೆಯಿಂದಾಗಿ, ವ್ಯಾಪಾರ ಶೇಕಡಾ 20 ರಷ್ಟು ಕುಸಿದಿದೆ ಎಂದು ಅವರು ದುಃಖಭರಿತವಾಗಿ ಹೇಳಿದರು. ಬಾಡಿಗೆಯ ಗರಿಮೆ ಮತ್ತು ಕಡಿಮೆಯಾದ ಗ್ರಾಹಕರ ಸಂಖ್ಯೆಯ ನಡುವೆ ಸಂಕಷ್ಟಕ್ಕೆ ಸಿಲುಕಿರುವ ಚಿಲ್ಲರೆ ವ್ಯಾಪಾರಿಗಳು, ತಮ್ಮ ಅಂಗಡಿಗಳನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ.
ಹಳೆಯ ಗ್ರಾಹಕರಿಂದಾಗಿ ಇಂದಿನ ಸಂಕಷ್ಟ:
ಬನಶಂಕರಿ ಮತ್ತು ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಸಿದ್ಧ ಮದ್ರಾಸ್ ಕಾಫಿ ಹೌಸ್ ಕೂಡ ಇದರ ಪರಿಣಾಮವನ್ನು ಅನುಭವಿಸುತ್ತಿದೆ. ಅವರ ವ್ಯವಸ್ಥಾಪಕ ಬಾಲು ಎಂ ಅವರು ಹೇಳಿದ್ದಾರೆ, "ನಮ್ಮ ಮುಖ್ಯ ಗ್ರಾಹಕರು ಪ್ರತಿದಿನ ಪ್ರಯಾಣ ಮಾಡುವ ಮೆಟ್ರೋ ಪ್ರಯಾಣಿಕರು. ಆದರೆ ದರ ಏರಿಕೆಯ ನಂತರ, ಹಲವರು ಇತರ ಸಾರಿಗೆ ಆಯ್ಕೆಗಳಿಗೆ ತಿರುಗಿದಿದ್ದಾರೆ. ಇದರಿಂದಾಗಿ ನಾವು ಶೇಕಡಾ 30ರಷ್ಟು ಮಾರಾಟ ಕಳೆದುಕೊಂಡಿದ್ದೇವೆ. ನಿಯಮಿತ ಗ್ರಾಹಕರ ಕೊರತೆಯಿಂದಾಗಿ, ಇಂತಹ ವ್ಯಾಪಾರಿಗಳಿಗೆ ದಿನದ ವ್ಯವಹಾರ ನಡೆಸುವುದು ತೀವ್ರವಾಗಿ ಕಷ್ಟಕರವಾಗಿದೆ.
ಚಿಲ್ಲರೆ ವ್ಯಾಪಾರಿಗಳ ಆಕ್ರೋಶ:
ಇದರ ಜೊತೆಗೆ, ಬಿಎಂಆರ್‌ಸಿಎಲ್ (BMRCL) ವಿರುದ್ಧ ಚಿಲ್ಲರೆ ವ್ಯಾಪಾರಿಗಳ ಆಕ್ರೋಶವೂ ಹೆಚ್ಚಾಗಿದೆ. ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕುಂದಿದರೂ ಬಾಡಿಗೆ ದರಗಳಲ್ಲಿ ಯಾವುದೇ ಸಡಿಲಿಕೆ ನೀಡಲಾಗಿಲ್ಲ ಎಂಬುದು ಅವರ ಅಹವಾಲು. ಬಾಡಿಗೆಯ ಭಾರದಿಂದಾಗಿ ಸಣ್ಣ ಅಂಗಡಿಗಳು ತಮ್ಮ ಬಿಸಿನೆಸ್ ಮುಚ್ಚಬೇಕಾದ ಸ್ಥಿತಿಗೆ ತಲುಪಿವೆ. ಬಿಎಂಆರ್‌ಸಿಎಲ್ ಅಧಿಕಾರಿಗಳು ಪರಿಸ್ಥಿತಿಯನ್ನು ಗಮನಿಸಿ ಕ್ರಮವಹಿಸಬೇಕೆಂಬ ಒತ್ತಾಯವನ್ನು ವ್ಯಾಪಾರಿಗಳು ಮುಂದಿಟ್ಟಿದ್ದಾರೆ.
ವ್ಯಾಪಾರಿಗಳು ತಮ್ಮ ದುಃಖವನ್ನು ಹಂಚಿಕೊಳ್ಳುತ್ತಾ, ವ್ಯಾಪಾರ ಕಡಿಮೆಯಾಗುತ್ತಿದ್ದರೂ ಬಾಡಿಗೆ ಸಮಾನ ಪ್ರಮಾಣದಲ್ಲಿಯೇ ಉಳಿದಿದೆ. ಬದಲಾಗದ ಹಿನ್ನಡೆ ನಮ್ಮನ್ನು ಒತ್ತಡಕ್ಕೆ ತಳ್ಳುತ್ತಿದೆ, ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಬಿಎಂಆರ್‌ಸಿಎಲ್ ನ ದೃಷ್ಟಿಕೋನ:
ಇದೇ ಸಂದರ್ಭದಲ್ಲಿ ಬಿಎಂಆರ್‌ಸಿಎಲ್ ಅಧಿಕಾರಿಗಳು ಈ ತಾತ್ಕಾಲಿಕ ಸಮಸ್ಯೆ ಎಂದು ವಿವರಣೆ ನೀಡುತ್ತಿದ್ದಾರೆ. ಕಾರ್ಯನಿರ್ವಾಹಕ ನಿರ್ದೇಶಕ ಶಂಕರ್ ಎಎಸ್ ಅವರ ಅಭಿಪ್ರಾಯದಂತೆ, "ಹೌದು, ಆರಂಭಿಕ ದಿನಗಳಲ್ಲಿ ಕೆಲವು ಕುಸಿತ ಕಂಡುಬಂದಿತ್ತು. ಆದರೆ ಈಗ ಪರಿಸ್ಥಿತಿ ಸ್ಥಿರಗೊಳ್ಳುತ್ತಿದೆ. ವ್ಯಾಪಾರಿಗಳಿಗೆ ಸ್ಪರ್ಧಾತ್ಮಕವಾಗಿ ಉಳಿಯಲು ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳಬೇಕಿದೆ. ತಮ್ಮನ್ನು ತಾವು ಬದಲಿ ಮಾಡಿಕೊಂಡರೆ, ಆರ್ಥಿಕ ಸಂಕಷ್ಟದಿಂದ ಪಾರಾಗಬಹುದು," ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ಇತ್ತೀಚಿನ ಮೆಟ್ರೋ ದರ ಏರಿಕೆಯಿಂದಾಗಿ, ಸಣ್ಣ ವ್ಯಾಪಾರಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಬಾಡಿಗೆಯ ಭಾರ, ಗ್ರಾಹಕರ ಕೊರತೆ ಮತ್ತು ಕಡಿದಾದ ಆದಾಯ ಈ ವ್ಯಾಪಾರಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇಂತಹ ಸಂದರ್ಭದಲ್ಲಿ, ಬಿಎಂಆರ್‌ಸಿಎಲ್ ಮತ್ತು ಚಿಲ್ಲರೆ ವ್ಯಾಪಾರಿಗಳು ಪರಸ್ಪರ ಸಂವಾದ ನಡೆಸಿ, ಪರಿಸ್ಥಿತಿಯನ್ನು ಸಮಾಧಾನಕರವಾಗಿ ನಿರ್ವಹಿಸುವ ಅಗತ್ಯವಿದೆ. ಇಲ್ಲದೆ, ಸಣ್ಣ ವ್ಯಾಪಾರಿಗಳು ತಮ್ಮ ತಂತ್ರಗಳನ್ನು ಬದಲಾಯಿಸಿ, ಗ್ರಾಹಕರಿಗೆ ಇನ್ನಷ್ಟು ಆಕರ್ಷಕ ಸೇವೆಗಳನ್ನು ನೀಡಲು ಮುಂದಾಗಬೇಕಿದೆ. ಈ ಸಂಕಷ್ಟದ ದಿನಗಳು ತಾತ್ಕಾಲಿಕವಾಗಿರಲಿ ಎಂಬುದು ಎಲ್ಲಾ ಚಿಲ್ಲರೆ ವ್ಯಾಪಾರಿಗಳ ಹಂಬಲವಾಗಿದೆ.
More From GoodReturns

Hosur railway line: ಬೈಯಪ್ಪನಹಳ್ಳಿ-ಹೊಸೂರು ಮಾರ್ಗದ ರೈಲು ಆದಷ್ಟು ಬೇಗ ಆರಂಭ-ಯಾವಾಗೆಂದು ತಿಳಿಯಿರಿ

Hotel Bandh: ಬೆಂಗಳೂರಿಗೂ ತಟ್ಟಿದ ಯುದ್ಧದ ಬಿಸಿ; ಇಂದಿನಿಂದ ಹಲವು ಹೋಟೆಲ್ ಬಂದ್

Bengaluru Traffic: ಬೆಂಗಳೂರಿಗರೇ ಇಲ್ಲಿ ಗಮನಿಸಿ; ಇಂದು ಇಲ್ಲೆಲ್ಲಾ ಸಂಚಾರ ಬಂದ್!

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru - Stock Market: ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ; ಮನನೊಂದು ಬೆಂಗಳೂರಿನ ವ್ಯಕ್ತಿ ಆತ್ಮಹತ್ಯೆ

Bengaluru: ಮಳೆಗಾಲಕ್ಕೂ ಮುನ್ನ ಫೀಲ್ಡ್ಗೆ ಇಳಿದ ಶಾಸಕ ಗೋಪಾಲಯ್ಯ...ಮಹಾಲಕ್ಷ್ಮಿ ಲೇಔಟ್ನಲ್ಲಿ ಕಾಮಗಾರಿಗಳ ಪರಿಶೀಲನೆ!

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru: ಬೆಂಗಳೂರು ಮೂಲಸೌಕರ್ಯ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ 7000 ಕೋಟಿ ರೂ. ಹೂಡಿಕೆ!

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!



Click it and Unblock the Notifications