Indian E-Passport: ಭಾರತೀಯ ಇ-ಪಾಸ್‌ಪೋರ್ಟ್‌ ಬಗ್ಗೆ ಮಹತ್ವದ ಮಾಹಿತಿ! ಅನಿವಾಸಿ ಭಾರತೀಯರು ಓದಲೇಬೇಕು

ಯುಎಇನಲ್ಲಿರುವ (UAE) ಭಾರತೀಯ ಅನಿವಾಸಿಗಳಿಗೆ ಗುಡ್‌ ನ್ಯೂಸ್‌ ಒಂದಿದೆ. ಭಾರತೀಯ ಇ-ಪಾಸ್‌ಪೋರ್ಟ್‌ ಈಗಾಗಲೇ ಜಾರಿಗೆ ಬಂದಿದೆ. ಆದ್ರೆ ಈ ಬಗ್ಗೆ ಹಲವು ಗೊಂದಲಗಳು ಸೃಷ್ಟಿಯಾಗಿದೆ. ಇದೀಗ 2025ರ ಅಕ್ಟೋಬರ್ 30ರಂದು ಅಬುಧಾಬಿಯ ಭಾರತೀಯ ರಾಯಭಾರ ಕಚೇರಿ ಮತ್ತು ದುಬೈನಲ್ಲಿರುವ ಭಾರತದ ಕಾನ್ಸುಲೇಟ್‌ ಜನರಲ್‌ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಇ-ಪಾಸ್‌ಪೋರ್ಟ್‌ ಸಂಬಂಧಿಸಿ ಮಹತ್ವದ ಮಾಹಿತಿಯೊಂದನ್ನು ಬಹಿರಂಗಪಡಿಸಿದೆ. ಭಾರತದ ಈ ಹೊಸ ಚಿಪ್ ಆಧಾರಿತ ಇ-ಪಾಸ್‌ಪೋರ್ಟ್ (Indian E-Passport) ಬಿಡುಗಡೆಯು ಯುಎಇಯಲ್ಲಿನ ಅರ್ಜಿದಾರರು, ಇನ್ಮುಂದೆ ಯಾವುದೇ ಹೆಚ್ಚುವರಿ ಬಯೋಮೆಟ್ರಿಕ್ಸ್, ಹೊಸ ಕಾರ್ಯವಿಧಾನಗಳು ಅಥವಾ ಶುಲ್ಕ ಬದಲಾವಣೆಗಳನ್ನು ಒಳಗೊಂಡಿರುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಪ್‌ಗ್ರೇಡ್ ಮಾಡಿದ ಪಾಸ್‌ಪೋರ್ಟ್ ಬಳಕೆಗೆ ಸಲ್ಲಿಸಬೇಕಾದ ದಾಖಲೆಗಳ ಬಗ್ಗೆ ಊಹಾಪೋಹಗಳು ಹರಿದಾಡುವ ಸಂದರ್ಭದಲ್ಲಿ ಅಧಿಕೃತವಾಗಿ ಈ ಪ್ರಕಟಣೆ ಹೊರಬಿದ್ದಿದೆ..

ಭಾರತೀಯ ಇ-ಪಾಸ್‌ಪೋರ್ಟ್‌ ಬಗ್ಗೆ ಮಹತ್ವದ ಮಾಹಿತಿ!

ಹೊಸ ಇ-ಪಾಸ್‌ಪೋರ್ಟ್ ಪ್ರಯೋಜನಗಳೇನು?
ಹೊಸ ಇ-ಪಾಸ್‌ಪೋರ್ಟ್ ಎಂದರೆ ಚಿಪ್ ಅಳವಡಿಸಿದ ಪಾಸ್‌ಪೋರ್ಟ್. ಈ ಅಪ್‌ಗ್ರೇಡ್ ಮಾಡಿದ ಪಾಸ್‌ಪೋರ್ಟ್ ಸಂಪೂರ್ಣವಾಗಿ ಡಿಜಿಟಲೀಕರಣವಾಗಿದೆ. ಇದು ವಲಸೆ ಮಾಹಿತಿಯನ್ನು ವೇಗಗೊಳಿಸುತ್ತದೆ ಮತ್ತು ಬಳಕೆದಾರರ ಭದ್ರತೆಯನ್ನು ಸುಧಾರಿಸುತ್ತದೆ. ಅರ್ಜಿದಾರರು ಹೊಸ ಪೋರ್ಟಲ್ ಮೂಲಕ ICAO ಮಾನದಂಡಗಳಿಗೆ ಅನುಗುಣವಾದ ಡಿಜಿಟಲ್ ಫೋಟೋ, ಸಹಿ ಮತ್ತು ಅಗತ್ಯ ದಾಖಲೆಗಳನ್ನು ಅಪ್ಲೋಡ್‌ ಮಾಡಬಹುದು.

ಹೆಚ್ಚುವರಿ ಬಯೋಮೆಟ್ರಿಕ್ಸ್‌, ಶುಲ್ಕಗಳಿಲ್ಲ: ಅಬುಧಾಬಿಯ ಭಾರತೀಯ ರಾಯಭಾರ ಕಚೇರಿ ಮತ್ತು ದುಬೈನಲ್ಲಿರುವ ಭಾರತದ ಕಾನ್ಸುಲೇಟ್‌ ಜನರಲ್‌ ಯುಎಇಯಲ್ಲಿನ ಅರ್ಜಿದಾರರಿಗೆ ಬಯೋಮೆಟ್ರಿಕ್‌ನಲ್ಲಿ ಮತ್ತು ಶುಲ್ಕದಲ್ಲಿ ಯಾವುದೇ ಪರಿಷ್ಕರಣೆಯಾಗಿದಲ್ಲ ಎಂದು ಸ್ಪಷ್ಟನೆ ನೀಡಿದೆ. ಪಾಸ್‌ಪೋರ್ಟ್‌ಗಾಗಿ ಒಮ್ಮೆ ನೀವು ಬಯೋಮೆಟ್ರಿಕ್ಸ್ ಅನ್ನು ನೀಡಿದ್ದರೆ, ಇ-ಪಾಸ್‌ಪೋರ್ಟ್ ಬಳಸುವಾಗ ಮತ್ತೆ ಕೇಳುವುದಿಲ್ಲ.

ಯಾರು ನೀಡುತ್ತಾರೆ?
ರಾಯಭಾರ ಕಚೇರಿ ಮತ್ತು ಭಾರತದ ಕಾನ್ಸುಲೇಟ್‌ ಜನರಲ್‌ ಪಾಸ್‌ಪೋರ್ಟ್ ಸೇವಾ ಪೋರ್ಟಲ್ (GPSP 2.0) ಮೂಲಕ ಅರ್ಜಿಗಳನ್ನು ವಿತರಿಸುವ ಪ್ರಕ್ರಿಯೆ ಕೈಗೊಳುತ್ತದೆ. ಅಲ್ಲದೇ ಯುಎಇಯಾದ್ಯಂತ ದಿನಕ್ಕೆ ಸುಮಾರು 1,600 ಪಾಸ್‌ಪೋರ್ಟ್‌ಗಳ ದೊಡ್ಡ ಪ್ರಮಾಣದ ಅರ್ಜಿಗಳನ್ನು ನಿರ್ವಹಿಸಲು ಹೊಸ ಮಿಷನ್‌ಗಳು ಸಿದ್ಧವಾಗಿವೆ ಎಂದು ಹೇಳಲಾಗಿದೆ.

ಭಾರತೀಯ ಇ-ಪಾಸ್‌ಪೋರ್ಟ್ ಎಂದರೇನು?
ಇ-ಪಾಸ್‌ಪೋರ್ಟ್ ಅಂದರೆ ನೋಡಲು ಸಾಮಾನ್ಯ ಪಾಸ್‌ಪೋರ್ಟ್‌ನಂತೆಯೇ ಇರುತ್ತದೆ. ಆದ್ರೆ ಅದರೊಳಗೊಂದು ಸಣ್ಣ ಚಿಪ್‌ ಇರುತ್ತದೆ. ಅದನ್ನೇ ಇ ಪಾಸ್‌ಪೋರ್ಟ್‌ ಎನ್ನಲಾಗಿದೆ. ಆದರೆ ಈ ಸಣ್ಣ ಚಿಪ್‌ ಮೂಲಕ ಪಾಸ್‌ಪೋರ್ಟ್‌ ಹೊಂದಿರುವವರ ವೈಯಕ್ತಿಕ ಮತ್ತು ಬಯೋಮೆಟ್ರಿಕ್ ಡೇಟಾ ಸುರಕ್ಷಿತವಾಗಿರುತ್ತದೆ. ಈ ಮೂಲಕ ಬಳಕೆದಾರರ ಸುರಕ್ಷತೆ ಜೊತೆಗೆ, ಪ್ರಯಾಣವನ್ನೂ ಸುಲಭಗೊಳಿಸುತ್ತದೆ.

ಅಬುಧಾಬಿಯ ಭಾರತೀಯ ರಾಯಭಾರ ಕಚೇರಿ ಮತ್ತು ದುಬೈನಲ್ಲಿರುವ ಭಾರತದ ಕಾನ್ಸುಲೇಟ್‌ ಜನರಲ್‌ ನೀಡಿದ ಸ್ಪಷ್ಟನೆ, ಯುಎಇನಲ್ಲಿ ವಾಸಿಸುತ್ತಿರುವ ಭಾರತೀಯರಿಗೆ ಹೊಸ ಭರವಸೆಯನ್ನು ಮೂಡಿಸಿದೆ. ಈ ಮೂಲಕ ಹೊಸ ಇ-ಪಾಸ್‌ಪೋರ್ಟ್‌ ಪಡೆಯಲು ಯಾವುದೇ ಹೆಚ್ಚುವರಿ ಶುಲ್ಕಗಳು, ಹೆಚ್ಚುವರಿ ಬಯೋಮೆಟ್ರಿಕ್ಸ್ ಅಗತ್ಯವಿಲ್ಲ ಎಂದು ಹೇಳುವ ಮೂಲಕ ಸುಲಭವಾಗಿ ಇದನ್ನು ಪಡೆಯಬಹುದು ಎಂದು ಹೇಳಿದೆ.

ಈ ಮಾಹಿತಿ ಯುಎಇನಲ್ಲಿರುವ 3.5 ಮಿಲಿಯನ್‌ ಭಾರತೀಯರಿಗೆ ಪ್ರಯೋಜನವಾಗಲಿದ್ದು, ಹೊಸ ಇ-ಪಾಸ್‌ಪೋರ್ಟ್‌ ಭಾರತೀಯರ ಭದ್ರತೆ ಮತ್ತು ಸುಗಮ ಪ್ರಯಾಣಕ್ಕೆ ಸಹಕಾರಿಯಾಗಲಿದೆ. ಅಲ್ಲದೇ ಹೆಚ್ಚಿನ ವಿವರಗಳಿಗಾಗಿ passportindia.gov.in ಅಥವಾ ಸ್ಥಳೀಯ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+