ಬೆಂಗಳೂರು, ಜೂನ್ 18: ತುರ್ತಾಗಿ ಹಣದ ಅಗತ್ಯ ಬಿದ್ದಾಗ ನಮ್ಮೆಲ್ಲರ ಕಣ್ಣಿಗೆ ಕಾಣಿಸುವುದು ಪರ್ಸನಲ್ ಲೋನ್ . ಆನ್ ಲೈನ್ ಅಪ್ಲಿಕೇಶನ್ ಗಳು ಸುಲಭಕ್ಕೆ ಸಾಲ ಕೊಡುತ್ತವೆ ಎಂದು ತೆಗೆದುಕೊಳ್ಳುವ ಮೊದಲು ಒಂದಿಷ್ಟು ಅಂಶಗಳು ನಿಮ್ಮ ತಲೆಯಲ್ಲಿ ಇರಬೇಕು. ಇಂಥ ಇನ್ ಸ್ಟಂಟ್ ಲೋನ್ ಪಡೆಯುವ ಮುನ್ನ ಕೆಲವೊಂದು ವಿಚಾರಗಳ ಬಗ್ಗೆ ನೀವು ಗಮನ ಹರಿಸದೇ ಇದ್ದರೆ ನಂತರ ಸಂಕಷ್ಟ ಪಡೆಬೇಕಾಗುತ್ತದೆ.
ಇನ್ ಸ್ಟಂಟ್ ಲೋನ್ ಪಡೆದುಕೊಳ್ಳಲು ಹೆಜ್ಜೆ ಇಡುವ ಮುನ್ನ ಅವುಗಳಿಗೆ ಸಂಬಂಧಿಸಿದ ನಿಯಮಗಳು ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕು. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುವ ಸಾಲಗಳ ಬಡ್ಡಿ ದರ, ಸಂಸ್ಕರಣಾ ಶುಲ್ಕಗಳು ಮತ್ತು ಇತರ ಶುಲ್ಕಗಳಿಗೆ ಗಮನ ಕೊಡಿ. ಇದರಲ್ಲಿ ಯಾವುದೇ ಗೊಂದಲ ಇರಬಾರದು. ಸಾಲ ಮರುಪಾವತಿ ನಿಯಮ ಮತ್ತು ಸಾಲದ ಸಂಪೂರ್ಣ ಕಾಸ್ಟ್ ನಿಮಗೆ ಗೊತ್ತಿರಬೇಕು.

ಎಲ್ಲಾ ಆನ್‌ಲೈನ್ ಲೋನ್ ಪ್ಲಾಟ್‌ಫಾರ್ಮ್‌ಗಳು ಒಂದೇ ಸಮಾನವಾಗಿ ಇರೋದಿಲ್ಲ. ನೀವು ಸಾಲ ಪಡೆಯಲು ಮುಂದಾಗಿರುವ ಪ್ಲಾಟ್‌ಫಾರ್ಮ್ ಎಷ್ಟು ವಿಶ್ವಾಸಾರ್ಹವಾಗಿದೆ ಮತ್ತು ರಿಸರ್ವ್ ಬ್ಯಾಂಕ್‌ನ ಮಾರ್ಗಸೂಚಿ ಪ್ರಕಾರ ಕಾರ್ಯನಿರ್ವಹಿಸುತ್ತಾ ಇದೆಯೇ? ಇಲ್ಲವೋ? ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ನೀವು ರಿಸರ್ವ್ ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿ ರೆಗ್ಯೂಲೇಟೇಡ್ ಘಟಕಗಳ ಲಿಸ್ಟ್ ಕಾಣಬಹುದು. ನೀವು ಲೋನ್ ಅಪ್ಲಿಕೇಶನ್‌ಗಳಿಂದ ಸಾಲವನ್ನು ತೆಗೆದುಕೊಳ್ಳುತ್ತಿದ್ದರೆ, ಅವರು ಯಾವ ನಿಯಂತ್ರಕ ಘಟಕದೊಂದಿಕೆ ಪಾಲುದಾರಿಕೆಯಲ್ಲಿದ್ದಾರೆ ಎನ್ನುವುದನ್ನು ಪರಿಶೀಲಿಸಿಕೊಳ್ಳಬೇಕು. ಗ್ರಾಹಕರ ವಿಮರ್ಶೆ ಮತ್ತು ರೇಟಿಂಗ್‌ಗಳನ್ನು ಪರಿಶೀಲಿಸುವ ಮೂಲಕವೂ ನೀವು ಸಾಲ ನೀಡಿಕೆಯ ಪ್ಲಾಟ್‌ಫಾರ್ಮ್‌ನ ರೆಪ್ಯೂಟೇಶನ್ ಲೆಕ್ಕ ಹಾಕಬಹುದು.
ಎಲ್ಲ ಬಗೆಯಿಂದಲೂ ಯೋಚನೆ ಮಾಡಿ ನಿರ್ಧಾರ ತೆಗೆದುಕೊಂಡರೆ ಮಾತ್ರ ಈ ಇನ್ ಸ್ಟಂಟ್ ಲೋನ್ ಗಳು ನಿಮ್ಮ ತುರ್ತು ಹಣಕಾಸು ಅಗತ್ಯತೆ ಪೂರೈಸಬಲ್ಲದು. ಏಕಾಏಕಿ ತ್ವರಿತ ಸಾಲಗಳನ್ನು ತೆಗೆದುಕೊಳ್ಳುವುದು ಹೆಚ್ಚಿನ ಬಡ್ಡಿದರದ ಸುಳಿಗೆ ನೀವು ಬೀಳಬಹುದು. ಈ ಸಾಲವನ್ನು ತೀರಿಸಲು ನೀವು ಇನ್ನೊಂದು ಕಡೆ ಸಾಲ ಮಾಡುವ ಪರಿಸ್ಥಿತಿ ಎದುರಾಗಬಹುದು. ಸಾಲ ಮರುಪಾವತಿಯಲ್ಲಿ ಸ್ವಲ್ಪ ಎಡವಟ್ಟಾದರೂ ಅದು ನಿಮ್ಮ ಕ್ರೆಡಿಟ್ ಸ್ಕೋರ್ ಗೆ ಹಾನಿ ಉಂಟುಮಾಡಬಹುದು.
ಈ ಇನ್ ಸ್ಟಂಟ್ ಸಾಲ ತೆಗೆದುಕೊಳ್ಳುವ ಬದಲು ಕುಟುಂಬ ಅಥವಾ ಸ್ನೇಹಿತರಿಂದ ಸಾಧ್ಯವಾದರೆ ಸಾಲ ಪಡೆದುಕೊಳ್ಳುವುದು ಉತ್ತಮ. ಸಾಲ ತೀರಿಸಲು ಸಾಧ್ಯ ಎಂದು ನಿಮಗೆ ನಿಮ್ಮ ಮೇಲೆ ಖಾತ್ರಿ ಇದ್ದಾಗ ಮಾತ್ರ ತ್ವರಿತ ಸಾಲಗಳನ್ನು ತೆಗೆದುಕೊಳ್ಳಿ. ಹೆಚ್ಚಿನ ಬಡ್ಡಿದರಗಳ ಕಾರಣ, ಈ ಸಾಲಗಳನ್ನು ಆದಷ್ಟು ಬೇಗ ಮರುಪಾವತಿಸಲು ಪ್ರಯತ್ನಿಸುವುದು ಒಳಿತು.


Click it and Unblock the Notifications