ಕೊರೊನಾ ಸಂಕಷ್ಟದ ನಡುವೆ ದೇಶಕ್ಕೆ ಇದೊಂದು ಸಂತಸದ ಸುದ್ದಿ

ಪ್ರಸಕ್ತ ಹಂಗಾಮಿನಲ್ಲಿ ಉತ್ತಮ ಮುಂಗಾರು ಮಳೆಯಾಗುತ್ತಿದ್ದು ದೇಶಾದ್ಯಂತ ಕೃಷಿ ವಲಯದಲ್ಲಿ ಮಂದಹಾಸ ಮೂಡಿದೆ. ವಾಡಿಕೆಯಂತೆ ಮುಂಗಾರು ಮಳೆಯಾಗಿರುವುದರಿಂದ ಬಿತ್ತನೆ ಪ್ರಮಾಣದಲ್ಲಿ ನಿರೀಕ್ಷೆ ಮಾಡಿದ್ದಕಿಂತಲೂ ಹೆಚ್ಚು ಕಂಡು ಬಂದಿದೆ. ಈ ಹಿಂದಿನ ವರ್ಷಗಳಲ್ಲಿ ಬಿತ್ತನೆ ಸಮಯದಲ್ಲಿ ಕೈ ಕೊಡುತ್ತಿದ್ದ ಮಳೆಯಿಂದ ಕಡಿಮೆ ಪ್ರಮಾಣದ ಬಿತ್ತನೆಯಾಗುತ್ತಿತ್ತು.

ಭಾರತೀಯ ರೈತರು ಈ ವರ್ಷ ಮುಂಗಾರು ಹಂಗಾಮಿನಲ್ಲಿ 69.2 ದಶಲಕ್ಷ ಹೆಕ್ಟೇರ್ ಪ್ರದೇಶವನ್ನು ಬಿತ್ತನೆ ಮಾಡಿದ್ದಾರೆ. ಇದು ಕಳೆದ ವರ್ಷದಕ್ಕಿಂತ 21.2% ಹೆಚ್ಚಾಗಿದೆ ಎಂದು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಮಾನ್ಸೂನ್ ಮಳೆ ಸಾಮಾನ್ಯವಾಗಿ ಭಾರತವನ್ನು ತಲುಪಿದಾಗ ರೈತರು ಸಾಮಾನ್ಯವಾಗಿ ತಮ್ಮ ಮುಂಗಾರು-ಬಿತ್ತನೆ ಬೆಳೆಗಳನ್ನು ಬಿತ್ತಲು ಪ್ರಾರಂಭಿಸುತ್ತಾರೆ. ಬಿತ್ತನೆ ಸಾಮಾನ್ಯವಾಗಿ ಜುಲೈ ಅಂತ್ಯ ಅಥವಾ ಆಗಸ್ಟ್ ಆರಂಭದವರೆಗೆ ಮುಂದುವರಿಯುತ್ತದೆ.

ಭತ್ತದ ನಾಟಿ 6.8 ದಶಲಕ್ಷ ಹೆಕ್ಟೇರ್

ಭತ್ತದ ನಾಟಿ 6.8 ದಶಲಕ್ಷ ಹೆಕ್ಟೇರ್

ಮುಂಗಾರಿನ ಪ್ರಮುಖ ಬೆಳೆಯಾದ ಭತ್ತದ ನಾಟಿ ಜುಲೈ 17 ರ ವೇಳೆಗೆ 16.8 ದಶಲಕ್ಷ ಹೆಕ್ಟೇರ್ ಆಗಿದ್ದು, ಹಿಂದಿನ ವರ್ಷದಲ್ಲಿ 14.2 ದಶಲಕ್ಷ ಹೆಕ್ಟೇರ್ ಪ್ರದೇಶವಾಗಿತ್ತು. ಹತ್ತಿ ಬಿತ್ತನೆ ಪ್ರದೇಶವು ಈ ವರ್ಷ 11.3 ಮಿಲಿಯನ್ ಹೆಕ್ಟೇರ್ ಮತ್ತು ಹಿಂದಿನ ವರ್ಷ 9.6 ಮಿಲಿಯನ್ ಹೆಕ್ಟೇರ್ ಆಗಿತ್ತು.

ಎಣ್ಣೆಕಾಳುಗಳ ಬಿತ್ತನೆ 15.5 ದಶಲಕ್ಷ ಹೆಕ್ಟೇರ್

ಎಣ್ಣೆಕಾಳುಗಳ ಬಿತ್ತನೆ 15.5 ದಶಲಕ್ಷ ಹೆಕ್ಟೇರ್

ಈ ವರ್ಷ ಮುಂಗಾರಿನ ಮುಖ್ಯ ಎಣ್ಣೆಕಾಳು ಬೆಳೆ ಸೋಯಾಬೀನ್ ಸೇರಿದಂತೆ ಒಟ್ಟಾರೆ ಎಣ್ಣೆಕಾಳುಗಳ ಬಿತ್ತನೆ 15.5 ದಶಲಕ್ಷ ಹೆಕ್ಟೇರ್ ಆಗಿದ್ದು, ಹಿಂದಿನ ವರ್ಷ 11 ದಶಲಕ್ಷ ಹೆಕ್ಟೇರ್ ಪ್ರದೇಶವಾಗಿತ್ತು. ವಿಶ್ವದ ಅತಿದೊಡ್ಡ ಸಕ್ಕರೆ ಉತ್ಪಾದಕ ರಾಷ್ಟ್ರದಲ್ಲಿ ಭಾರತವೂ ಒಂದಾಗಿದೆ. ಈ ವರ್ಷ ಕಬ್ಬು ಬಿತ್ತನೆ 5.1 ದಶಲಕ್ಷ ಹೆಕ್ಟೇರ್ ತಲುಪಿದ್ದು, ಕಳೆದ ವರ್ಷ 5 ದಶಲಕ್ಷ ಹೆಕ್ಟೇರ್‌ನಷ್ಟಿತ್ತು.

ಈ ವರ್ಷ ಉತ್ತಮ ಮಳೆ

ಈ ವರ್ಷ ಉತ್ತಮ ಮಳೆ

ಭಾರತೀಯ ಹವಾಮಾನ ಇಲಾಖೆಯು ಸರಾಸರಿ ನಾಲ್ಕು ತಿಂಗಳ ಅವಧಿಗೆ ಸರಾಸರಿ ಅಥವಾ ಸಾಮಾನ್ಯ ಮಳೆಯ ಪ್ರಮಾಣವನ್ನು ಪ್ರಸಕ್ತ ಸಾಲಿನಲ್ಲಿ ಆಗುತ್ತದೆ ಎಂದು ಹೇಳಿದೆ.

ಜಲಾಶಯಗಳಲ್ಲಿ ನೀರಿನ ಮಟ್ಟ

ಜಲಾಶಯಗಳಲ್ಲಿ ನೀರಿನ ಮಟ್ಟ

ಸರ್ಕಾರದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಹೆಚ್ಚಿನ ಮಳೆಯಿಂದಾಗಿ ಭಾರತದ ಮುಖ್ಯ ಜಲಾಶಯಗಳಲ್ಲಿನ ನೀರಿನ ಮಟ್ಟವು ಪ್ರಸಕ್ತ ಋತುವಿನಲ್ಲಿ ಇಲ್ಲಿಯವರೆಗೆ ಗಣನೀಯವಾಗಿ ಹೆಚ್ಚಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+