ಮುಂಬೈ, ಜೂನ್ 25: ಕೊರೊನಾವೈರಸ್ ದೇಶದ ವಸತಿ ಕ್ಷೇತ್ರವನ್ನು ಅಕ್ಷರಶಃ ಹೈರಾಣಾಗಿಸಿದೆ. ರಿಯಲ್ ಎಸ್ಟೇಟ್ ಸಂಪೂರ್ಣ ಕುಸಿದು ಬಿದ್ದಿದೆ. ಇನ್ನೊಂದೆಡೆ ಗೃಹ ಸಾಲದ ಮೇಲಿನ ಇಎಂಐ ಕಟ್ಟಲು ಸಾಲ ಪಡೆದವರು ಪರದಾಡುತ್ತಿದ್ದಾರೆ. ರಿಯಲ್ ಎಸ್ಟೇಟ್ ಬೇಡಿಕೆಯೂ ಕುಸಿದಿದೆ.
ಈ ಬೆಳವಣಿಗೆಯಲ್ಲೇ ರಿಯಲ್ ಎಸ್ಟೇಟ್ ಪರಿಸ್ಥಿತಿ ಕುರಿತು ವರದಿಯೊಂದು ಬಂದಿದ್ದು, ಆ ಕ್ಷೇತ್ರದ ಉದ್ಯಮಿಗಳನ್ನು ಆತಂಕಕ್ಕೆ ಈಡಾಗುವಂತೆ ಮಾಡಿದೆ.
ದೆಹಲಿ, ಮುಂಬೈ ಸೇರಿದಂತೆ ದೇಶದ ಅಗ್ರ ಏಳು ನಗರಗಳಲ್ಲಿನ ವಸತಿ ವಸತಿ ಮಾರಾಟವು ಜೂನ್ 30 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇ 81.46 ರಷ್ಟು ಕುಸಿದಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
12,720 ವಸತಿ ಯುನಿಟ್‌ಗಳ ಮಾರಾಟ
ದೇಶದ ಏಳು ಮಹಾನಗರಗಳಲ್ಲಿ ಕಳೆದ ವರ್ಷದ ಇದೇ ಅವಧಿಯಲ್ಲಿ 68,600 ಯುನಿಟ್ ವಸತಿ ಮಾರಾಟ ಕಂಡು ಬಂದಿತ್ತು. 2020 ರ ಎರಡನೇ ತ್ರೈಮಾಸಿಕದಲ್ಲಿ ವಸತಿ ಮಾರಾಟ 12,720 ಕ್ಕೆ ಇಳಿದಿದೆ. 2020 ರ ಮಾರ್ಚ್ 31 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 45,200 ಯುನಿಟ್ ಮಾರಾಟ ಕಡಿಮೆಯಾಗಿದೆ ಎಂದು ಎನ್‌ಡಿಟಿವಿ ತಿಳಿಸಿದೆ. ಕೊರೊನಾವೈರಸ್ ಕೊಳ್ಳುವವರು ಹಾಗೂ ಮಾರುವವರ ಮಧ್ಯೆ ಬಹುದೊಡ್ಡ ಕಂದಕ ಸೃಷ್ಟಿಸಿದೆ ಎಂದು ಹೇಳಿದೆ.
ರಿಯಲ್ ಎಸ್ಟೇಟ್ ಕ್ಷೇತ್ರ ನಿಧಾನವಾಗುತ್ತಿದೆ
ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲಗಳ ಮೇಲೆ ಹೆಚ್ಚು ಅವಲಂಬಿತವಾಗಿರುವ ರಿಯಲ್ ಎಸ್ಟೇಟ್ ಕ್ಷೇತ್ರ ಈಗಾಗಲೇ ನಿಧಾನವಾಗುತ್ತಿದೆ. ಕತ್ತಲೆಯಾದ ಚಿತ್ರಣವನ್ನು ರಿಯಲ್ ಎಸ್ಟೇಟ್ ಪ್ರಸ್ತುತ ಕಾಣುತ್ತಿದೆ. ವ್ಯವಸ್ಥೆಯಲ್ಲಿನ ಕ್ರೆಡಿಟ್ ಬಿಕ್ಕಟ್ಟಿನ ಮಧ್ಯೆ ಕಡಿಮೆ ಬೇಡಿಕೆಯು ದೀರ್ಘಾವಧಿಯಲ್ಲಿ ರಿಯಲ್ ಎಸ್ಟೆಟ್‌ನ್ನು ಕುಗ್ಗಿಸಲಿದೆ.
ಏಳು ನಗರಗಳ ಡೇಟಾ
ದೆಹಲಿ, ಮುಂಬೈ ಬೆಂಗಳೂರು ಮತ್ತು ಪುಣೆ ಒಟ್ಟಾಗಿ ಏಪ್ರಿಲ್-ಜೂನ್ ಅವಧಿಯಲ್ಲಿ ಒಟ್ಟು ಮಾರಾಟದ ಶೇಕಡಾ 85.32 ರಷ್ಟನ್ನು ಹೊಂದಿದ್ದರೆ, ಬೆಂಗಳೂರು ಮಾತ್ರ ಈ ಅವಧಿಯಲ್ಲಿ ಒಟ್ಟು ಮಾರಾಟದ ಶೇಕಡಾ 51.88 ರಷ್ಟನ್ನು ಹೊಂದಿದೆ ಎಂದು ದೆಹಲಿ, ಮುಂಬೈ, ಕೋಲ್ಕತಾ, ಚೆನ್ನೈ, ಬೆಂಗಳೂರು, ಹೈದರಾಬಾದ್ ಮತ್ತು ಪುಣೆಯಲ್ಲಿ ನಡೆಯುತ್ತಿರುವ ಯೋಜನೆಗಳ ಡೇಟಾವನ್ನು ಎನ್‌ಡಿಟಿವಿ ತೋರಿಸಿದೆ.
ಶೇಕಡಾ 98 ರಷ್ಟು ಕುಸಿದಿದ್ದು ಕಂಡು ಬಂದಿದೆ
ಏಳು ನಗರಗಳಲ್ಲಿ ಹೊಸ ಯೋಜನೆಗಳ ಪರಿಶೀಲನೆಯ ಅವಧಿಯಲ್ಲಿ ಶೇಕಡಾ 98 ರಷ್ಟು ಕುಸಿದಿದ್ದು ಕಂಡು ಬಂದಿದೆ. ಏಳು ನಗರಗಳಲ್ಲಿ, ಏಪ್ರಿಲ್-ಜೂನ್ ಅವಧಿಯಲ್ಲಿ ಸುಮಾರು 1,390 ಘಟಕಗಳನ್ನು ಹೊಂದಿರುವ ನಾಲ್ಕು ಯೋಜನೆಗಳನ್ನು ಮಾತ್ರ ಪ್ರಾರಂಭಿಸಲಾಗಿತ್ತು. ಬೆಂಗಳೂರಿನಲ್ಲಿ ಎರಡು ಮತ್ತು ಪುಣೆ ಮತ್ತು ಕೋಲ್ಕತ್ತಾದಲ್ಲಿ ತಲಾ ಒಂದನ್ನು ಪ್ರಾರಂಭಿಸಲಾಗಿದೆ. ಏಪ್ರಿಲ್-ಜೂನ್‌ನಲ್ಲಿ ದೆಹಲಿ, ಮುಂಬೈ, ಹೈದರಾಬಾದ್ ಮತ್ತು ಚೆನ್ನೈನಲ್ಲಿ ಯಾವುದೇ ಹೊಸ ವಸತಿ ಯೋಜನೆಗಳು ನಡೆದಿಲ್ಲ ಎಂದು ವರದಿ ತಿಳಿಸಿದೆ.


Click it and Unblock the Notifications