ಆದಾಯ ತೆರಿಗೆ ಲೆಕ್ಕಾಚಾರ: ನಿಮಗೆ ಹಳೆಯ ತೆರಿಗೆ ಪದ್ದತಿ ಉತ್ತಮವೋ..ಹೊಸ ಪದ್ದತಿ ಉತ್ತಮವೋ..? ಇಲ್ಲಿ ತಿಳಿಯಿರಿ

ನಾವು ನಮಗೆ ಬರುವ ಆದಾಯದ ಬಗ್ಗೆ ಎಷ್ಟು ಗಮನ ನೀಡುತ್ತೇವೋ, ಅಷ್ಟೇ ಗಮ ಆದಾಯ ತೆರಿಗೆ ಮೇಲೂ ನೀಡಬೇಕಿರುತ್ತದೆ. ಅಂದರೆ ಪ್ರತಿಯೊಬ್ಬ ಆದಾಯ ತೆರಿಗೆ ಪಾವತಿದಾರ, ಆದಾಯ ರಿಟರ್ನ್ ಸಲ್ಲಿಸುವ ಮೊದಲು ತಮ್ಮ ಹಳೆಯ ಮತ್ತು ಹೊಸ ತೆರಿಗೆ ಪದ್ದತಿಗಳ ಬಗ್ಗೆ ಲೆಕ್ಕಾಚಾರ ಹೋಲಿಸುವುದು ನಿಜಕ್ಕೂ ಅಗತ್ಯವಾದ ಅಂಶ. ಅಲ್ಲದೇ ಕಡಿಮೆ ತೆರಿಗೆಯ ಹೊರ ಹೋಗುವ ಪದ್ದತಿಯನ್ನೂ ಆಯ್ಕೆ ಮಾಡಬೇಕಿರುವಾಗ, ತೆರಿಗೆ ರಿಟರ್ನ್ ಸಲ್ಲಿಸುವ ಮೊದಲು ಯೋಚಿಸಲೇಬೇಕಾಗಿರುತ್ತದೆ.

ಹೊಸ ಆದಾಯ ಪದ್ದತಿ ಉತ್ತಮವೋ..ಹಳೆಯ ಪದ್ದತಿಯೋ..?

ಏಕೆಂದರೆ ಹಳೆಯ ತೆರಿಗೆ ಪದ್ದತಿಯಲ್ಲಿ ವಿವಿಧ ರೀತಿಯ ಕಡಿತಗಳು ಮತ್ತು ವಿನಾಯಿತಿಗಳನ್ನು ಬಳಸಬಹುದಾಗಿದೆ. ಅಂದರೆ ತಮ್ಮ ಆದಾಯವನ್ನು ಕಡಿಮೆಗೊಳಿಸಲು ಹಲವು ವಿನಾಯಿತಿಗಳನ್ನ ಬಳಸಬಹುದಾದರೂ, ಹಳೆಯ ತೆರಿಗೆ ಪದ್ದತಿ ದರ ಹೊಸ ಪದ್ದತಿಗಿಂತ ಹೆಚ್ಚು ಇರುತ್ತದೆ. ಆದರೆ ಈ ಹೊಸ ತೆರಿಗೆ ಪದ್ದತಿಯಲ್ಲಿ ಕಡಿತಗಳು ಮತ್ತು ಯಾವುದೇ ವಿನಾಯಿತಿಗಳು ಇರುವುದಿಲ್ಲ. ಆದರೆ ಒಂದು ಸರಳವಾದದ್ದೇನೆಂದರೆ, ನೇರವಾಗಿ ಕಡಿಮೆ ದರಗಳನ್ನು ನೀಡಬಹುದು. ಅಲ್ಲದೇ ಈ ಹೊಸ ತೆರಿಗೆ ಪದ್ದತಿಯಲ್ಲಿ ಕಡಿತಗಳ ಜಟಿಲತೆಗಳನ್ನು ತಪ್ಪಿಸಿ ತೆರಿಗೆದಾರರು ಸುಲಭವಾಗಿ ತೆರಿಗೆ ಪಾವತಿಸಬಹುದು.

2020ನೇ ವರ್ಷದಲ್ಲಿ ಪರಿಚಯಿಸಲಾದ ಈ ಹೊಸ ತೆರಿಗೆ ಪದ್ದತಿಯನ್ನು, 2023ರ ಹಣಕಾಸು ಕಾಯ್ದೆ ಪ್ರಕಾರ ಡೀಫಾಲ್ಟ್ ತೆರಿಗೆ ಪದ್ಧತಿ ಎನ್ನಲಾಗಿದೆ. ಇದರಿಂದಾಗಿ ತೆರಿಗೆದಾರರು ತಮ್ಮ ಆದಾಯ ತೆರಿಗೆ ರಿಟರ್ನ್ ಭರಿಸುವಾಗ ಹೊಸ ಪದ್ದತಿಯ್ನೇ ಅನುಸರಿಸುತ್ತಾರೆ ಎನ್ನಲಾಗಿದೆ. ಆದರೆ 2023ಕ್ಕೂ ಮೊದಲು ತೆರಿಗೆದಾರರು ಹಳೆಯ ಅಥವಾ ಹೊಸ ತೆರಿಗೆ ಪದ್ದತಿಯನ್ನು ಆಯ್ಕೆ ಮಾಡಿಕೊಳ್ಳಬೇಕಾಗಿತ್ತು. ಆದರೆ 2023ರಿಂದ ಹೊಸ ತೆರಿಗೆ ಪದ್ದತಿ ಡೀಫಾಲ್ಟ್ ಆಗಿರುವುದರಿಂದ, ಹಳೆಯ ಪದ್ಧತಿಗೆ ಬದಲಾಯಿಸಲು ತೆರಿಗೆದಾರರು ಅಭ್ಯರ್ಥನೆ ಸಲ್ಲಿಸಬೇಕು ಎನ್ನಲಾಗಿದೆ.

ಇನ್ನು ತೆರಿಗೆದಾರರು ಸೆಕ್ಷನ್‌ 115BAC ಪ್ರಕಾರ ಹೊಸ ತೆರಿಗೆ ಪದ್ದತಿಯನ್ನು ಆರಿಸಿಕೊಳ್ಳಬಹುದಾದರೆ, ಒಟ್ಟು ಆದಾಯದ ಬಗ್ಗೆ ಲೆಕ್ಕಾಚಾರ ಮಾಡುವ ಮುನ್ನ ವಿನಾಯಿತಿಗಳು ಹಾಗೂ ಕಡಿತಗಳ ಬಗ್ಗೆ ಯೋಚಿಸಲೇ ಹೋಗಬಾರದು. ಏಕೆಂದರೆ ಈ ಪದ್ದತಿಯಲ್ಲಿ ಅವೆರಡೂ ಸಿಗುವುದಿಲ್ಲ.

ಸಾಮಾನ್ಯ ತೆರಿಗೆ ಪದ್ದತಿಯ ಅಡಿಯಲ್ಲಿ ವಿನಾಯಿತಿಗಳು ಅಥವಾ ಕಡಿತಗಳನ್ನು ಪಡೆಯುತ್ತಿದ್ದರೆ, ವಿನಾಯಿತಿಗಳು ಹಾಗೂ ಕಡಿತಗಳ ಮೊತ್ತವು ಗಣನೀಯವಾಗಿರುತ್ತವೆ. ಹಾಗಿದ್ದಾಗ ಹೊಸ ತೆರಿಗೆ ಪದ್ದತಿಯಲ್ಲಿ ತೆರಿಗೆದಾರರು ಹೆಚ್ಚಿನ ತೆರಿಗೆ ಪಾವತಿಸಬೇಕಾಗುತ್ತದೆ. ಹೀಗಾಗಿಯೇ ಸೆಕ್ಷನ್ 80C, ಸೆಕ್ಷನ್ 80D ಮತ್ತು ಸೆಕ್ಷನ್ 24 ರ ಅಡಿಯಲ್ಲಿ ವಸತಿ ಸಾಲದ ಮೇಲೆ ಬರುವ ಬಡ್ಡಿಯ ಅನುಸಾರ ಕಡಿತಗಳ ಮೊತ್ತ ಗಣನೀಯವಾಗಿದೆ ಎಂದ ಸಂದರ್ಭದಲ್ಲಿ, ತೆರಿಗೆದಾರರು ಹೊಸ ತೆರಿಗೆ ಪದ್ಧತಿಯ ಬದಲು ಹಳೆಯ ತೆರಿಗೆ ಪದ್ಧತಿಯನ್ನು ಆರಿಸಿಕೊಳ್ಳುವುದು ಸೂಕ್ತ ಎನ್ನಬಹುದು.

ಯಾವ ತೆರಿಗೆ ಪದ್ದತಿ ಉತ್ತಮ ಆಯ್ಕೆ ಮಾಡುವುದು ಹೇಗೆ..?

  • ತೆರಿಗೆದಾರರು ತೆರಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ತೆರಿಗೆ ಪರಿಕರಗಳನ್ನು ಹುಡುಕಬೇಕು
  • ಪೇಜ್ ಓಪನ್ ಆದ ಕೂಡಲೇ Tax calculator: Old vs New regime ಮೇಲೆ ಕ್ಲಿಕ್ ಮಾಡಿ
  • ಕ್ಲಿಕ್ ಮಾಡಿದ ಲಿಂಕ್ ನಿಮ್ಮನ್ನು ತೆರಿಗೆ ಕ್ಯಾಲ್ಕುಲೇಟರ್‍‌ಗೆ ಕರೆದೊಯ್ಯುತ್ತದೆ
  • ಅಲ್ಲಿಂದ ನೀವು ನಿಜವಾದ ಲೆಕ್ಕಾಚಾರವನ್ನು ಪ್ರಾರಂಭಿಸಬಹುದು
  • ಅದಕ್ಕೂ ಮೊದಲು ಮೂರು ವಿಷಯಗಳನ್ನು ಆರಿಸಿಕೊಳ್ಳಬೇಕು
  • ವ್ಯಕ್ತಿ, ವಯಸ್ಸಿನ ವರ್ಗ ಮತ್ತು ವಸತಿ ಸ್ಥಿತಿಯನ್ನು ಆರಿಸಿಕೊಳ್ಳಬೇಕು
  • ಹೀಗೆ ಎಲ್ಲದರಲ್ಲೂ ನೀವು ವಿವಿಧ ವರ್ಗಗಳಲ್ಲಿ ನಿಮ್ಮ ಆದಾಯ ನಮೂದಿಸಬೇಕು
  • ಅಂದರೆ ಸಂಬಳ, ಅದನ್ನು ಹೊರತುಪಡಿಸಿ ಇತರ ಆದಾಯ ಮತ್ತು ಮನೆ ಆಸ್ತಿಯಿಂದ ಬರುವ ಆದಾಯ
  • ಮುಂದಿನ ಕಾಲಂನಲ್ಲಿ ಹಳೆಯ/ಹೊಸ ತೆರಿಗೆ ಪದ್ದತಿಯಡಿ ನೀಡಲಾದ ಕಡಿತಗಳು/ವಿನಾಯಿತಿಗಳನ್ನು ನಮೂದಿಸಬೇಕು
  • ಕೊನೆಗೆ ತೆರಿಗೆ ಕ್ಯಾಲ್ಕುಲೇಟರ್ ಎರಡೂ ಪದ್ದತಿಗಳಡಿ ಆದಾಯ ತೆರಿಗೆ ಲೆಕ್ಕಾಚಾರ ಮಾಡುತ್ತದೆ.
  • ಆ ಮೂಲಕ ಕಡಿಮೆ ಆದಾಯ ತೆರಿಗೆಯ ವಿಷಯದಲ್ಲಿ ತೆರಿಗೆ ಲೆಕ್ಕಾಚಾರ ಮಾಡುತ್ತದೆ
  • ಬಳಿಕ ಕಡಿಮೆ ಆದಾಯ ತೆರಿಗೆಯ ವಿಷಯದಲ್ಲಿ ಯಾವ ಪದ್ಧತಿಯು ಉತ್ತಮ ಡೀಲ್ ನೀಡುತ್ತಿದೆ ಎಂಬುದನ್ನು ನೀವು ಕಂಡುಹಿಡಿಯಬಹುದು.

ಇನ್ನು ಹಳೆಯ ಅಥವಾ ಹೊಸ ತರಿಗೆ ಪದ್ದತಿಗಳನ್ನು ಆಯ್ಕೆ ಮಾಡುವುದು ತೆರಿಗೆದಾರರಿಗೆ ಕೊಂಚ ಗೊಂದಲದ ವಿಚಾರವೇ. ಆದರೂ ಆದಾಯ ತೆರಿಗೆ ಕ್ಯಾಲ್ಕುಲೇಟರ್ ತೆರಿಗೆ ಮೌಲ್ಯಗಳನ್ನ ವಿಭಿನ್ನ ತೆರಿಗೆ ಸ್ಲ್ಯಾಬ್‌ಗಳು ಮತ್ತು ಲಭ್ಯವಿರುವ ಕಡಿತಗಳನ್ನು ಹೋಲಿಸುತ್ತದೆ. ಈ ಮೂಲಕ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+