ಆದಾಯ ತೆರಿಗೆ ಇಲಾಖೆಯು ಗುರುವಾರ ಮ್ಯಾನ್‌ಕೈಂಡ್ ಫಾರ್ಮಾಕ್ಕೆ ಸಂಬಂಧಿಸಿದ ಕಚೇರಿಗಳ ಮೇಲೆ ದಾಳಿಯನ್ನು ನಡೆಸಿದೆ. ತೆರಿಗೆ ವಂಚನೆ ಆರೋಪದ ಮೇಲೆ ಆದಾಯ ತೆರಿಗೆ ಇಲಾಖೆ ಗುರುವಾರ ಮ್ಯಾನ್‌ಕೈಂಡ್ ಫಾರ್ಮಾದ ಆವರಣದಲ್ಲಿ ಶೋಧ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇತ್ತೀಚಿಗಷ್ಟೆ ಮ್ಯಾನ್‌ಕೈಂಡ್ ಫಾರ್ಮಾ ಐಪಿಒ ಅನ್ನು ನಡೆಸಿದೆ.
ಪಿಟಿಐ ವರದಿಯ ಪ್ರಕಾರ, ಆದಾಯ ತೆರಿಗೆ ಇಲಾಖೆಯು ದೆಹಲಿ ಮತ್ತು ಹತ್ತಿರದ ಸ್ಥಳಗಳಲ್ಲಿ ಕಂಪನಿಯ ಆವರಣಗಳಲ್ಲಿ ಶೋಧ ಕಾರ್ಯಾಚರಣೆಯನ್ನು ನಡೆಸಿದೆ. ಹಾಗೆಯೇ ಫಾರ್ಮಾಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಜನರನ್ನು ಕೂಡಾ ಪ್ರಶ್ನೆ ಮಾಡಲಾಗುತ್ತಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಷೇರು ಪೇಟೆಯಲ್ಲಿ ಮ್ಯಾನ್‌ಕೈಂಡ್ ಫಾರ್ಮಾ ಕುಸಿತ
ಇದಕ್ಕೂ ಮುನ್ನ ಮ್ಯಾನ್‌ಕೈಂಡ್ ಫಾರ್ಮಾ ಮಂಗಳವಾರ ಷೇರು ಪೇಟೆಗೆ ಎಂಟ್ರಿ ನೀಡಿದೆ. ಹಾಗೆಯೇ ಈ ವರ್ಷದಲ್ಲಿ ಮ್ಯಾನ್‌ಕೈಂಡ್ ಫಾರ್ಮಾ ಐಪಿಒ ಅನ್ನು ಆರಂಭ ಮಾಡಿದೆ. ಇದಾದ ಬೆನ್ನಲ್ಲೇ ಮ್ಯಾನ್‌ಕೈಂಡ್ ಫಾರ್ಮಾದ ಷೇರುಗಳು ಎನ್‌ಎಸ್‌ಇಯಲ್ಲಿ ಶೇಕಡ 2.11ರಷ್ಟು ಕುಸಿತವನ್ನು ಕಂಡಿದೆ. ಪ್ರತಿ ಷೇರಿಗೆ 1353. 75 ರೂಪಾಯಿಗೆ ತಲುಪಿದೆ. ಬಿಎಸ್‌ಇಯಲ್ಲಿ ಮ್ಯಾನ್‌ಕೈಂಡ್ ಫಾರ್ಮಾ ಸ್ಟಾಕ್ ಶೇಕಡ 1.93ರಷ್ಟು ಕುಸಿದು 11:02 ಸಮಯಕ್ಕೆ 1355.15 ರೂಪಾಯಿಗೆ ತಲುಪಿದೆ.
ಮ್ಯಾನ್‌ಕೈಂಡ್ ಫಾರ್ಮಾ ಐಪಿಒ
ಗಾತ್ರದ ವಿಷಯದಲ್ಲಿ ಮೊದಲ ದೊಡ್ಡ ಐಪಿಒ ಆದ ಮ್ಯಾನ್‌ಕೈಂಡ್ ಫಾರ್ಮಾ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಏಪ್ರಿಲ್ 25 ರಂದು ಚಂದಾದಾರಿಕೆಗಾಗಿ ತೆರೆದುಕೊಂಡಿದೆ. ಈ ವರ್ಷದ ಎರಡನೇ ಆರಂಭಿಕ ಸಾರ್ವಜನಿಕ ಕೊಡುಗೆ ಇದಾಗಿದೆ. ಇದಕ್ಕೂ ಮುನ್ನ ಅವಲಾನ್ ಟೆಕ್ನಾಲಜೀಸ್ ಐಪಿಒ ನಡೆದಿದೆ. 4,326.36 ಕೋಟಿ ರೂಪಾಯಿ ಮೌಲ್ಯದ ಐಪಿಒ ಇದಾಗಿದ್ದು, 27 ಏಪ್ರಿಲ್ 2023 ರವರೆಗೆ ಬಿಡ್ಡಿಂಗ್ ನಡೆದಿದೆ.
ಇಂದು ವಹಿವಾಟಿನ ಆರಂಭದ ಬಳಿಕ ಆದಾಯ ತೆರಿಗೆ ಇಲಾಖೆ ದಾಳಿಯ ಸುದ್ದಿ ಬೆನ್ನಲ್ಲೇ ಮ್ಯಾನ್‌ಕೈಂಡ್ ಫಾರ್ಮಾ ಷೇರುಗಳು ಸುಮಾರು ಶೇಕಡ 5.5ರಷ್ಟು ಕುಸಿತ ಕಂಡಿದೆ. ಈ ವಿಷಯದಲ್ಲಿ ಪ್ರತಿಕ್ರಿಯೆಗಾಗಿ ಕಂಪನಿಗೆ ಕಳುಹಿಸಲಾದ ಇಮೇಲ್ ಯಾವುದೇ ಪ್ರತಿಕ್ರಿಯೆಯನ್ನು ಪಡೆದಿಲ್ಲ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿದೆ.
IQVIA ಡೇಟಾಸೆಟ್‌ನ ಪ್ರಕಾರ, ಮ್ಯಾನ್‌ಕೈಂಡ್ ಫಾರ್ಮಾ ದೇಶೀಯ ಮಾರಾಟದ ವಿಷಯದಲ್ಲಿ ಭಾರತದ ನಾಲ್ಕನೇ ಅತಿದೊಡ್ಡ ಔಷಧೀಯ ಕಂಪನಿಯಾಗಿದೆ. MAT ಅಡಿಯಲ್ಲಿ ಡಿಸೆಂಬರ್ 2022ರಲ್ಲಿ ಮಾರಾಟದ ಪ್ರಮಾಣ ನೋಡಿದಾಗ ಮ್ಯಾನ್‌ಕೈಂಡ್ ಫಾರ್ಮಾ ಮೂರನೇ-ಅತಿದೊಡ್ಡ ಕಂಪನಿಯಾಗಿದೆ. ಸಂಸ್ಥೆಯು ವಿವಿಧ ಔಷಧೀಯ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ತಯಾರಿಸುತ್ತದೆ.4
ಏಪ್ರಿಲ್ 25ರಂದು ಮ್ಯಾನ್‌ಕೈಂಡ್ ಫಾರ್ಮಾ ಐಪಿಒ ಆರಂಭವಾಗಿದೆ. ಒಟ್ಟು ಮೂರು ದಿನಗಳ ಕಾಲ ಅಂದರೆ ಏಪ್ರಿಲ್ 27ರವರೆಗೆ ಚಂದಾದಾರಿಕೆಗೆ ತೆರೆದುಕೊಂಡಿದೆ. ಕಂಪನಿಯು ಮ್ಯಾನ್‌ಕೈಂಡ್ ಫಾರ್ಮಾ ಐಪಿಒ ಬೆಲೆ ಪ್ರತಿ ಈಕ್ವಿಟಿ ಷೇರಿಗೆ 1026 ರೂಪಾಯಿಯಿಂದ 1080 ರೂಪಾಯಿಗೆ ನಿಗದಿಪಡಿಸಲಾಗಿತ್ತು. ಪ್ರವರ್ತಕರು ಮತ್ತು ಹೂಡಿಕೆದಾರರಿಂದ 4 ಕೋಟಿಗೂ ಹೆಚ್ಚು ಈಕ್ವಿಟಿ ಷೇರುಗಳನ್ನು ಮಾರಾಟ ಮಾಡಲು ಮೊದಲ ಸಾರ್ವಜನಿಕ ಕೊಡುಗೆಯನ್ನು ಆರಂಭ ಮಾಡಲಾಗಿದ್ದು, ಯಾವುದೇ ಹೊಸ ಇಶ್ಯು ಇಲ್ಲ.
ಮ್ಯಾನ್‌ಕೈಂಡ್ ಫಾರ್ಮಾ ಐಪಿಒನ ಮುಖ್ಯ ಉದ್ದೇಶಗಳು ಮಾರಾಟ ಮಾಡುವ ಷೇರುದಾರರಿಂದ ಮಾಡುವುದು ಮತ್ತು ಷೇರು ವಿನಿಮಯ ಕೇಂದ್ರಗಳಲ್ಲಿ ಈಕ್ವಿಟಿ ಷೇರುಗಳನ್ನು ಲೀಸ್ಟಿಂಗ್ ಮಾಡುವ ಪ್ರಯೋಜನವನ್ನು ಪಡೆಯುವುದು ಆಗಿದೆ. ಪಬ್ಲಿಕ್ ಇಶ್ಯೂವಿನಿಂದ ಮೂಲಕ ಸಂಗ್ರಹಿಸಿದ ಎಲ್ಲಾ ಹಣವು ಷೇರುದಾರರನ್ನು ಮಾರಾಟ ಮಾಡಲು ಬಳಸಲಾಗುತ್ತದೆ. ಕಂಪನಿಯು ಇದರಿಂದ ಹಣವನ್ನು ಪಡೆಯುವುದಿಲ್ಲ.


Click it and Unblock the Notifications