ಭಾರತ ಮತ್ತು ಭೂತಾನ್ ಜಂಟಿ ಜಲ ವಿದ್ಯುತ್ ಯೋಜನೆಗೆ ಸಹಿ

ನವದೆಹಲಿ: ಭೂತಾನ್‌ನಲ್ಲಿ ಭಾರತದ ಸಹಭಾಗಿತ್ವದೊಂದಿಗೆ ಆರಂಭವಾಗಿರುವ 600 ಮೆಗಾವ್ಯಾಟ್ ಸಾಮರ್ಥ್ಯದ ಖೊಲೊಂಗ್‌ಚು ಜಲವಿದ್ಯುತ್ ಯೋಜನೆಯ ನಿರ್ಮಾಣಕ್ಕೆ ಭಾರತ ಮತ್ತು ಭೂತಾನ್ ಸೋಮವಾರ ಸಹಿ ಹಾಕಿವೆ. ಐದು ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ.

ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಭೂತಾನ್ ಪ್ರತಿನಿಧಿ ತಾಂಡಿ ಡೋರ್ಜಿ ಅವರ ಸಮ್ಮುಖದಲ್ಲಿ ಯೋಜನೆಗೆ ಸಹಿ ಹಾಕಲಾಯಿತು. ವಿಡಿಯೋ ಕಾನ್ಪರೆನ್ಸ್ ಮೂಲಕ ಯೋಜನೆಗೆ ಸಹಿ ಹಾಕಲಾಯಿತು.

ಇದು ಭೂತಾನ್‌ನ ಡ್ರುಕ್ ಗ್ರೀನ್ ಪವರ್ ಕಾರ್ಪೊರೇಷನ್ ಮತ್ತು ಭಾರತದ ಸತ್ಲೇಜ್ ಜಲ್ ವಿದ್ಯುತ್ ನಿಗಮ್ ಲಿಮಿಟೆಡ್‌ನ ಜಂಟಿ ಉದ್ಯಮವಾಗಿದೆ. ಈ ಯೋಜನೆಯು 2025 ರ ದ್ವಿತೀಯಾರ್ಧದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ. ಈ ಸಂದರ್ಭದಲ್ಲಿ ವಿದೇಶಾಂಗ ಸಚಿವ ಜೈಶಂಕರ್ ಅವರು ಈ ಯೋಜನೆ ಭಾರತ-ಭೂತಾನ್ ಸಹಕಾರ ಕ್ಷೇತ್ರದೊಳಗಿನ ಜಲವಿದ್ಯುತ್ ಅಭಿವೃದ್ಧಿ ಪರಸ್ಪರ ಪ್ರಯೋಜನಕಾರಿ ಎಂದು ಬಣ್ಣಿಸಿದ್ದಾರೆ.

ಭಾರತ ಮತ್ತು ಭೂತಾನ್ ಜಂಟಿ ಜಲ ವಿದ್ಯುತ್ ಯೋಜನೆಗೆ ಸಹಿ

ಕಳೆದ ವರ್ಷ, ಪ್ರಧಾನಿ ನರೇಂದ್ರ ಮೋದಿ, ಭೂತಾನ್ ಭೇಟಿಯ ಸಂದರ್ಭದಲ್ಲಿ, 720 ಮೆಗಾವ್ಯಾಟ್ ಮಂಗ್ಡೆಚು ಜಲವಿದ್ಯುತ್ ಯೋಜನೆಯನ್ನು ಉದ್ಘಾಟಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+