2025ರ ಕೇಂದ್ರ ಬಜೆಟ್‌ನಲ್ಲಿ ಹೊಸ ಆದಾಯ ತೆರಿಗೆ ಮಸೂದೆ ಮಂಡನೆಯಾಗಿದ್ದು ತಿಳಿದೇ ಇದೆ. ಇದರ ಅನುಸಾದರ TDS ಮತ್ತು TCS ಸಂಬಂಧಿತ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳು ತರಲಾಗಿದ್ದು, ಈ ಹೊಸ ನಿಯಮಗಳು ಏಪ್ರಿಲ್ 1ರಿಂದ ಜಾರಿಗೆ ಬರಲಿವೆ ಎನ್ನಲಾಗುತ್ತಿದೆ. ಈ ಹೊಸದಾಗಿ ಬರಲಿರುವ ನಿಯಮಗಳ ಪ್ರಕಾರ, ಕೆಲವೊಂದು ವಹಿವಾಟು ಮೇಲೆ TDS ಅಥವಾ TCS ದರಗಳು ಹೆಚ್ಚಳ ಅಥವಾ ಪರಿಷ್ಕರಣೆ ಆಗಬಹುದಾಗಿದೆ.

ಹೊಸ ಬದಲಾವಣೆಯನ್ನು ತರುತ್ತಿರುವ ಸರ್ಕಾರದ ಈ ನಿರ್ಧಾರ ತೆರಿಗೆ ಸಂಗ್ರಹವನ್ನು ಸುಗಮಗೊಳಿಸುವ ಉದ್ದೇಶ ಹೊಂದಿದೆ. ಹಾಗೂ ಉದ್ಯಮಿಗಳ ಮತ್ತು ತೆರಿಗೆ ಪಾವತಿದಾರರ ಮೇಲಿನ ಅತಿರೇಕದ ನಿಯಂತ್ರಣಗಳನ್ನು ಕಡಿಮೆ ಮಾಡುವುದೂ ಕೂಡ ಒಂದು ಪ್ರಮುಖವಾದ ಉದ್ದೇಶವಾಗಿದ್ದು, ಇದರಿಂದ ಹೊಸ ತೆರಿಗೆ ನಿಯಮಗಳು ಸರಳವಾಗಿ ಅರ್ಥವಾಗುವಂತೆ ಮಾಡಲಾಗಿದೆ.
TDS & TCS ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳು:
1. ವಿದೇಶಿ ಹಣ ವರ್ಗಾವಣೆ ಮೇಲೆ TCS ಹೆಚ್ಚಳ:
LRSನ ಅಡಿಯಲ್ಲಿ ₹7 ಲಕ್ಷಕ್ಕಿಂತ ಹೆಚ್ಚಿನ ವಿದೇಶಿ ಹಣ ವರ್ಗಾವಣೆ ಮಾಡಿದರೆ, ಈಗ 22% TCS ವಿಧಿಸಲಾಗುತ್ತದೆ. ಇದಕ್ಕೂ ಮೊದಲು TCS 20% ಇದ್ದು, ಈಗ ಶೇ.2ರಷ್ಟು ಹೆಚ್ಚಾಗಿದೆ. ಈ ಬದಲಾವಣೆಯಿಂದ ವಿದೇಶಿ ಶಿಕ್ಷಣ, ಪ್ರವಾಸ ಮತ್ತು ಹೂಡಿಕೆ ಮಾಡುವವರು ಪ್ರಭಾವಿತರಾಗಬಹುದು.
2. ಕ್ರಿಪ್ಟೋಕರೆನ್ಸಿ ವಹಿವಾಟುಗಳ ಮೇಲಿನ 1% TDS:
ಭಾರತದ ವಾಸ್ತವಿಕ ಡಿಜಿಟಲ್ ನಿಯಮಾವಳಿಗೆ ಅನುಗುಣವಾಗಿ, ಕ್ರಿಪ್ಟೋಕರೆನ್ಸಿ ಮತ್ತು NFT ವಹಿವಾಟುಗಳ ಮೇಲೆ 1% TDS ವಿಧಿಸಲಾಗುವುದು ಎನ್ನಲಾಗಿದೆ.
3. ಫ್ರೀಲಾನ್ಸರ್‍ಗಳಿಗೆ TDS ನಿಯಮಗಳ ತಿದ್ದುಪಡಿ:
ಹೊಸ ನಿಯಮಗಳ ಪ್ರಕಾರ, ಈಗ ₹50,000 ಕ್ಕಿಂತ ಹೆಚ್ಚು ಆದಾಯ ಹೊಂದಿರುವ ಫ್ರೀಲಾನ್ಸರ್ ಮತ್ತು ಗಿಗ್ ಕೆಲಸಗಾರರು 5% TDS ಪಾವತಿಸಬೇಕಾಗುತ್ತದೆ.
4.ಆನ್‌ಲೈನ್ ಮಾರ್ಕೆಟ್ ಪ್ಲೇಸ್‌ಗಳ ಮೇಲಿನ TCS:
ಆನ್‌ಲೈನ್ ಮಾರ್ಕೆಟ್ ಪ್ಲೇಸ್, ಎಂದರೆ ಇ-ಕಾಮರ್ಸ್‌ಗಳಾದ Flipkart, Amazon ಮುಂತಾದ ಪ್ಲಾಟ್‌ಫಾರ್ಮ್‌ಗಳು ಈಗ ಪ್ರತಿ ಮಾರಾಟದ ವಹಿವಾಟಿನಲ್ಲಿ 1% ಟಿಸಿಎಸ್‌ನ ಹಿಂದಿರುಗಿಸಬೇಕಾಗುತ್ತದೆ. ಇದರಿಂದ ಸಣ್ಣ ವ್ಯಾಪಾರಿಗಳು ಮತ್ತು ಮಾರಾಟಗಾರರ ಪಾಲಿಗೆ ತೆರಿಗೆ ಪಾಲನೆಯ ವೆಚ್ಚ ಹೆಚ್ಚಿಸಲು ಸಾಧ್ಯವಿದೆ.
5. ಸಹಖಾತಾ ಆಸ್ತಿ ಖರೀದಿದಾರರಿಗೆ PAN ಮಾಹಿತಿ ಕಡ್ಡಾಯ:
ಒಟ್ಟಿಗೆ ಆಸ್ತಿ ಖರೀದಿಸುವ ಆಸ್ತಿದಾರರು ತಮ್ಮ ಪ್ಯಾನ್ ಕಾರ್ಡ್ ವಿವರಗಳನ್ನು ನೀಡಬೇಕು. ಇಲ್ಲದಿದ್ದರೆ ಅವರ ಮೇಲೆ 20% TDS ವಿಧಿಸಲಾಗುವುದು. ಇದು ಆಸ್ತಿ ವಹಿವಾಟುಗಳಲ್ಲಿ ತೆರಿಗೆ ನಿಯಮ ಪಾಲನೆಯ ಸುರಕ್ಷತೆ ಹೆಚ್ಚಿಸಲು ಸಹಾಯಕವಾಗುತ್ತದೆ
ಈ ರೀತಿಯ ಈ ಹೊಸ TDS ಮತ್ತು TCS ಮಾರ್ಪಾಡುಗಳು ಭಾರತದಲ್ಲಿ ತೆರಿಗೆ ಸಂಗ್ರಹದ ಪದ್ದತಿಯನ್ನು ಸುಧಾರಿಸಲು ಹೆಚ್ಚು ಸಹಾಯಕವಾಗುತ್ತದೆ. ಜೊತೆಗೆ ತೆರಿಗೆ ತಪ್ಪಿಸುವವರ ಮೇಲೆ ನಿಗಾ ಇಡಲು ಸಹಾಯಕವಾಗುತ್ತದೆ. ಉದ್ಯಮಿಗಳು, ಗಿಗ್ ಕೆಲಸಗಾರರು, ಇ-ಕಾಮರ್ಸ್ ಮಾರಾಟಗಾರರು ಮತ್ತು ವಿದೇಶಿ ಹಣ ವರ್ಗಾವಣೆ ಮಾಡುವವರು ಹೊಸ ನಿಯಮಗಳಿಗೆ ತಕ್ಕಂತೆ ತಯಾರಾಗಬೇಕಾಗಿದೆ.
ಹೊಸ TDS ಮತ್ತು TCS ನಿಯಮಗಳಿಂದಾಗುವ ಪರಿಣಾಮಗಳು:
1.ವಿದೇಶಿ ಶಿಕ್ಷಣ ಮತ್ತು ಪ್ರವಾಸ ಖರ್ಚಿನಲ್ಲಿ ಹೆಚ್ಚಳ:
ಒಂದು ಕುಟುಂಬ ವಿದೇಶಿ ಶಿಕ್ಷಣ ಅಥವಾ ಪ್ರವಾಸಕ್ಕೆಂದು ₹15 ಲಕ್ಷ ಖರ್ಚು ಮಾಡಿದರೆ, ₹33,000 TCS ಪಾವತಿಸಬೇಕಾಗುತ್ತದೆ. ಈ ಹಿಂದೆ ₹30,000 ಆಗಿದ್ದು, ಈಗ ಇನ್ನೂ ಹೆಚ್ಚಾಗಿದೆ. ಇದರಿಂದ ಹೂಡಿಕೆ ಮತ್ತು ದೈನಂದಿನ ಹಣಕಾಸಿನ ಯೋಜನೆಗಳಿಗೆ ಪ್ರಭಾವ ಬೀಳಬಹುದು.
2. ಕ್ರಿಪ್ಟೋಕರೆನ್ಸಿ ಹೂಡಿಕೆದಾರರ ಮೇಲೆ ಪರಿಣಾಮ:
ಒಬ್ಬ ವ್ಯಕ್ತಿ ₹2 ಲಕ್ಷ ಮೌಲ್ಯದ ಬಿಟ್‌ಕಾಯಿನ್ ಖರೀದಿಸಿದರೆ, 1% TDS ಆಗಿ ₹2,000 ಕಡಿತಗೊಳ್ಳಲಿದೆ. ಇದರಿಂದ ಹೂಡಿಕೆದಾರರಿಗೆ ಸಮಸ್ಯೆಯಾಗಬಹುದು. ಮತ್ತು ಹೂಡಿಕೆಯ ಮನಸ್ಸು ಕೂಡ ಬದಲಾಗಬಹುದು.
3.ಸಣ್ಣ ಇ-ಕಾಮರ್ಸ್ ಮಾರಾಟಗಾರರ ಮೇಲೆ ಪರಿಣಾಮ:
ಹೊಸ 1% TCS ನಿಯಮದಿಂದ ಇ-ಕಾಮರ್ಸ್ ಮಾರಾಟಗಾರರ ಮೇಲೆ ಪರಿಣಾಮ ಬೀರಲಿದೆ. ಇದು ಸಣ್ಣ ವ್ಯಾಪಾರಿಗಳಿಗೆ ಆರ್ಥಿಕ ಹೊರೆ ಹೆಚ್ಚಾಗುವ ಸಾಧ್ಯದೆ ಇದೆ.


Click it and Unblock the Notifications