ಗೋದಿ ಸಂಗ್ರಹದಲ್ಲಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ ಭಾರತ

ನವದೆಹಲಿ: ದೇಶದಲ್ಲಿ ಗೋಧಿ ಸಂಗ್ರಹ ಈ ವರ್ಷ ಸಾರ್ವಕಾಲಿಕ ದಾಖಲೆಯಾಗಿದೆ ಎಂದು ಪುಡ್ ಕಾರ್ಪೊರೇಷನ್ ಆಫ್ ಇಂಡಿಯಾ (FCI) ಹೇಳಿದೆ.

ಮಂಗಳವಾರದ ಅಂಕಿ ಅಂಶಗಳ ಪ್ರಕಾರ ಈ ವರ್ಷ ಗೋದಿಯ ಒಟ್ಟು ಸಂಗ್ರಹವು ದೇಶದಲ್ಲಿ 382 ಲಕ್ಷ ಮೆಟ್ರಿಕ್ ಟನ್‌ಗೆ ತಲುಪಿದೆ. ಕೊರೊನಾವೈರಸ್ ಲಾಕ್‌ಡೌನ್ ಹೊರತಾಗಿಯೂ ಖರೀದಿ ಕೇಂದ್ರಗಳ ಮೂಲಕ ಖರೀದಿಯಾದ ಗೋದಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸಂಗ್ರಹವಾಗಿರುವುದು ಇದೇ ಮೊದಲ ಬಾರಿಗೆ ಎನ್ನಲಾಗಿದೆ.

ಈ ಸಂಗ್ರಹವು 2012-13ರ ಅವಧಿಯಲ್ಲಿ ಸಾಧಿಸಿದ 381.48 ಲಕ್ಷ ಮೆಟ್ರಿಕ್ ಟನ್ ದಾಖಲೆಯನ್ನು ಮೀರಿದೆ. ಈ ವರ್ಷ ಎಫ್‌ಸಿಐ 14,838 ಗೋದಿ ಖರೀದಿ ಕೇಂದ್ರಗಳನ್ನು ತೆರದಿತ್ತು. ಲಾಕ್‌ಡೌನ್ ನಿಂದ 17 ದಿನ ವಿಳಂಬವಾಗಿ ಖರೀದಿ ಕೇಂದ್ರಗಳು ತೆರದಿದ್ದವು. ಅದಾಗ್ಯೂ ಗೋದಿ ಸಂಗ್ರಹ ಈ ವರ್ಷ ದಾಖಲೆ ನಿರ್ಮಿಸಿದೆ ಎಂದು ಎಫ್‌ಸಿಐ ಹೇಳಿದೆ.

ಗೋದಿ ಸಂಗ್ರಹದಲ್ಲಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ ಭಾರತ

ರಾಜ್ಯ ಸರ್ಕಾರಗಳು ಮತ್ತು ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಫ್‌ಸಿಐ) ನೇತೃತ್ವದ ಎಲ್ಲಾ ಸರ್ಕಾರಿ ಖರೀದಿ ಸಂಸ್ಥೆಗಳು ಯಾವುದೇ ವಿಳಂಬವಿಲ್ಲದೆ ಮತ್ತು ಸುರಕ್ಷಿತ ರೀತಿಯಲ್ಲಿ ರೈತರಿಂದ ಗೋಧಿ ಸಂಗ್ರಹವಾಗುವಂತೆ ನೋಡಿಕೊಳ್ಳಲು ನಿರಂತರ ಪ್ರಯತ್ನಗಳನ್ನು ನಡೆಸಿದ್ದವು. ಗೋದಿ ಬೆಳೆದ 42 ಲಕ್ಷ ರೈತರಿಗೆ 73,500 ಕೋಟಿ ರುಪಾಯಿಯನ್ನು ಕನಿಷ್ಠ ಬೆಂಬಲ ಬೆಲೆಯಡಿ ಒದಗಿಸಲಾಗಿದೆ ಎಂದು ಎಫ್‌ಸಿಐ ಹೇಳಿದೆ. ಮಧ್ಯಪ್ರದೇಶ 129 ಲಕ್ಷ ಮೆಟ್ರಿಕ್ ಟನ್ ಸಂಗ್ರಹಿಸುವ ಮೂಲಕ ಅತಿ ಹೆಚ್ಚು ಗೋದಿ ಸಂಗ್ರಹಿಸಿದ ರಾಜ್ಯವಾಗಿ ಹೊರಹೊಮ್ಮಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+