ಭಾರತ ಮತ್ತು ಈಜಿಪ್ಟ್ ಎರಡು ಸರಕುಗಳ ಕೊರತೆಯನ್ನು ನಿಭಾಯಿಸಲು ರಸಗೊಬ್ಬರ-ಗೋಧಿ (wheat-for-fertilisers) ಒಪ್ಪಂದವನ್ನು ಚರ್ಚಿಸುತ್ತಿವೆ. ಉಭಯ ರಾಷ್ಟ್ರಗಳು ದ್ವಿಪಕ್ಷೀಯ ವ್ಯಾಪಾರವನ್ನು ಹೆಚ್ಚಿಸಲು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇದರ ಭಾಗವಾಗಿ ಈ ಡೀಲ್ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ವರದಿಯು ಉಲ್ಲೇಖ ಮಾಡಿದೆ.
ಜೂನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಈಜಿಪ್ಟ್‌ಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಉಭಯ ದೇಶಗಳು ತಮ್ಮ ಸಂಬಂಧವನ್ನು ಪಾಲುದಾರಿಕೆಗೆ ವಿಸ್ತರಣೆ ಮಾಡಿದೆ. 2027 ರ ವೇಳೆಗೆ ದ್ವಿಮುಖ ವ್ಯಾಪಾರವನ್ನು 12 ಬಿಲಿಯನ್ ಡಾಲರ್ ಹೆಚ್ಚಿಸುವ ಗುರಿಯನ್ನು ಹೊಂದಿದೆ. ನವೀಕರಿಸಬಹುದಾದ ಶಕ್ತಿ, ವಿಶೇಷವಾಗಿ ಹಸಿರು ಹೈಡ್ರೋಜನ್ ಮೇಲೆ ಅಧಿಕ ಗಮನ ಹರಿಸಲಾಗಿದೆ.

ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ, ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೊತೆಗೆ ಸಭೆಯನ್ನು ನಡೆಸಿದ ಸಮಯದಲ್ಲಿ ತಮ್ಮ ದೇಶದಲ್ಲಿ ಧಾನ್ಯದ ಅಗತ್ಯವನ್ನು ಪ್ರಸ್ತಾಪಿಸಿದಾಗ ಗೋಧಿ-ರಸಗೊಬ್ಬರಗಳ ಒಪ್ಪಂದದ ಕುರಿತು ಚರ್ಚೆಗಳು ಪ್ರಾರಂಭವಾದವು ಎಂದು ವರದಿ ಉಲ್ಲೇಖಿಸಿದೆ. ಪ್ರಧಾನಿ ಭಾರತದಲ್ಲಿ ರಸಗೊಬ್ಬರಗಳ ಅಗತ್ಯವನ್ನು ಒತ್ತಿ ಹೇಳಿದ್ದಾರೆ ಎಂದು ವರದಿಯಾಗಿದೆ.
ಪ್ರಮಾಣೀಕೃತ ಗೋಧಿ ಪೂರೈಕೆದಾರ ದೇಶ ಭಾರತ
"ಈ ಒಪ್ಪಂದವನ್ನು ಈಗ ಚರ್ಚಿಸಲಾಗುತ್ತಿದೆ ಏಕೆಂದರೆ ಇದು ಎರಡೂ ದೇಶಗಳಿಗೆ ಆಹಾರ ಭದ್ರತೆಯನ್ನು ಖಚಿತಪಡಿಸುತ್ತದೆ," ಎಂದು ವರದಿ ಹೇಳಿದೆ. ಈಜಿಪ್ಟ್ ಏಪ್ರಿಲ್ 2022 ರಲ್ಲಿ ಭಾರತವನ್ನು ಪ್ರಮಾಣೀಕೃತ ಗೋಧಿ ಪೂರೈಕೆದಾರ ಎಂದು ಅನುಮೋದಿಸಿದೆ. ಮೇ 2022 ರಲ್ಲಿ ಭಾರತ ಸರ್ಕಾರವು ಗೋಧಿ ರಫ್ತು ನಿಷೇಧಿಸುವ ಮೊದಲು ಈಜಿಪ್ಟ್ 63,500 ಟನ್ ಗೋಧಿಗೆ ಮನವಿ ಮಾಡಿತ್ತು.
ಅತೀ ಹೆಚ್ಚು ರಸಗೊಬ್ಬರ ರಫ್ತು ಮಾಡುವ ದೇಶ ಈಜಿಪ್ಟ್
ಭಾರತವು ಅಕ್ಕಿ ಮತ್ತು ಗೋಧಿ ಆಹಾರ ಧಾನ್ಯಗಳ ಅತಿದೊಡ್ಡ ಉತ್ಪಾದಕ ದೇಶವಾಗಿದೆ. ಆದರೆ ಇದಕ್ಕೆ ಆರ್ಥಿಕ ದರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರಗಳ ಅಗತ್ಯವಿದೆ. 2022 ರಲ್ಲಿ ಈಜಿಪ್ಟ್‌ನ ರಫ್ತುಗಳಲ್ಲಿ ರಸಗೊಬ್ಬರ ರಫ್ತು ಎರಡನೇ ಸ್ಥಾನದಲ್ಲಿದೆ.
2022ರಲ್ಲಿ ಸುಮಾರು 2.7 ಬಿಲಿಯನ್ ಡಾಲರ್ ರಸಗೊಬ್ಬರ ಮಾರಾಟವನ್ನು ಈಜಿಪ್ಟ್ ಮಾಡಿದೆ. ಈಜಿಪ್ಟ್ ವಿಶ್ವದ ಐದನೇ ಅತಿದೊಡ್ಡ ರಸಗೊಬ್ಬರ ರಫ್ತುದಾರ ದೇಶವಾಗಿದೆ. ಈಜಿಪ್ಟ್ ವಾರ್ಷಿಕವಾಗಿ 7.8 ಮಿಲಿಯನ್ ಟನ್ ಸಾರಜನಕ ಗೊಬ್ಬರಗಳು ಮತ್ತು ನಾಲ್ಕು ಮಿಲಿಯನ್ ಟನ್ ಫಾಸ್ಫೇಟ್ ರಸಗೊಬ್ಬರಗಳನ್ನು ಉತ್ಪಾದಿಸುತ್ತದೆ.
ರಷ್ಯಾ ಮತ್ತು ಉಕ್ರೇನ್‌ನಿಂದ ಗೋಧಿ ಆಮದುಗಳ ಮೇಲೆ ಹೆಚ್ಚಾಗಿ ಅವಲಂಬಿತವಾಗಿದ್ದ ಈಜಿಪ್ಟ್, ನಡೆಯುತ್ತಿರುವ ಯುದ್ಧದಿಂದಾಗಿ ಪೂರೈಕೆಯ ಕೊರತೆಯನ್ನು ಅನುಭವಿಸಿದೆ. ಗೋಧಿ ಅಗತ್ಯವಿರುವಷ್ಟು ಪೂರೈಕೆ ಇಲ್ಲದೆ ಸಂಕಷ್ಟದಲ್ಲಿದೆ. ಈ ನಡುವೆ ಭಾರತದ ಮೇಲೆ ಈಜಿಪ್ಟ್ ಈಗ ಹೆಚ್ಚು ಅವಲಂಭಿತವಾಗಿದೆ.
2021 ರಲ್ಲಿ, ಈಜಿಪ್ಟ್ ತನ್ನ ಗೋಧಿ ಅಗತ್ಯತೆಯ ಶೇಕಡ 80 ಕ್ಕಿಂತ ಹೆಚ್ಚು (ಸುಮಾರು 2 ಬಿಲಿಯನ್ ಡಾಲರ್ ಮೌಲ್ಯ) ರಷ್ಯಾ ಮತ್ತು ಉಕ್ರೇನ್‌ನಿಂದ ಆಮದು ಮಾಡಿಕೊಂಡಿತು. ಈ ಆಮದುಗಳು ಈಗ ಯುದ್ಧದಿಂದಾಗಿ ಅಡ್ಡಿಯಾಗಿದೆ. ಇನ್ನು ಈಜಿಪ್ಟ್ ಈಗಾಗಲೇ ಏಪ್ರಿಲ್ 2022 ರಲ್ಲಿ ಭಾರತವನ್ನು ಪ್ರಮಾಣೀಕೃತ ಗೋಧಿ ಪೂರೈಕೆದಾರ ದೇಶ ಎಂದು ಗುರುತಿಸಿದಾಗಲೇ ಸುಂಕಗಳನ್ನು ತೆಗೆದುಹಾಕಿದೆ.
"ಭಾರತವು ಯಾವಾಗಲೂ ಇತರೆ ದೇಶಗಳಿಗೆ ಅಗತ್ಯದ ಸಮಯದಲ್ಲಿ ಸಹಾಯ ಮಾಡುತ್ತದೆ. ಇದು ಸಾಂಕ್ರಾಮಿಕ ಸಮಯದಲ್ಲಿ ಹಲವಾರು ದೇಶಗಳಿಗೆ ಆಹಾರ ಮತ್ತು ಕೋವಿಡ್ -19 ಲಸಿಕೆಗಳನ್ನು ಪೂರೈಸಿದೆ. ತನ್ನ ಸ್ವಂತ ಜನರ ಆಹಾರ ಭದ್ರತೆಯನ್ನು ಖಾತ್ರಿಪಡಿಸಿದ ನಂತರ, ಪರಸ್ಪರ ಲಾಭಕ್ಕಾಗಿ ಆಹಾರ ಧಾನ್ಯಗಳು ಮತ್ತು ಇತರ ವಸ್ತುಗಳನ್ನು ಪೂರೈಸಲು ಮುಂದಾಗಿದೆ," ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿ ಹೇಳಿದೆ.
More From GoodReturns

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ

iPhone EMI: ಐಫೋನ್ EMIನಲ್ಲಿ ತಗೊಳೋದು ಎಷ್ಟು ಸೇಫ್? ಮಾಸಿಕ ಪಾವತಿ ಸುಲಭ, ಆದರೆ ನಿಮ್ಮ ಹಣಕಾಸು ಸುರಕ್ಷಿತವೇ?



Click it and Unblock the Notifications