India-Europe Trade Deal: ಭಾರತ-ಯುರೋಪ್‌ ಮುಕ್ತ ವ್ಯಾಪಾರ ಒಪ್ಪಂದದ 10 ಮುಖ್ಯ ವಿಷಯಗಳಿವು!

ಇಂದು ಭಾರತ ಮತ್ತು ಯುರೋಪಿಯನ್ ಯೂನಿಯನ್ (India-EU) ನಡುವೆ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದ (FTA) ಘೋಷಣೆಯಾಗುವ ಸಾಧ್ಯತೆಯಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೀತಿಗಳಿಂದ ಸೃಷ್ಟಿಯಾದ ಆರ್ಥಿಕ ತೊಂದರೆಗಳನ್ನು ನಿಭಾಯಿಸುವ ಉದ್ದೇಶದಿಂದ ಉಭಯ ರಾಷ್ಟ್ರಗಳು ಮಹತ್ವದ ಒಪ್ಪಂದಕ್ಕೆ ಅಡಿಪಾಯ ಹಾಕಲಿದೆ. ಈ ಒಪ್ಪಂದವು ಎಲ್ಲಾ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿಸುವ ನಿರೀಕ್ಷೆಯಿದೆ.

ಭಾರತ-ಯುರೋಪ್‌ ಮುಕ್ತ ವ್ಯಾಪಾರ ಒಪ್ಪಂದದ 10 ಮುಖ್ಯ ವಿಷಯಗಳಿವು!

ಇಂದಿನ ಶೃಂಗಸಭೆಯು ವ್ಯಾಪಾರ, ರಕ್ಷಣೆ, ಭದ್ರತೆ, ಹೀಗೆ ಹಲವಾರು ಮಹತ್ವದ ನಿರ್ಣಯಗಳ ಮೇಲೆ ಕೇಂದ್ರೀಕೃತವಾಗಿದೆ. ಅಮೆರಿಕ-ಚೀನಾ ಮೇಲಿನ ಅವಲಂಬನೆ ತಗ್ಗಿಸಿ, ಯುರೋಪ್ ಇತರ ಪ್ರದೇಶಗಳೊಂದಿಗೆ ರಾಜತಾಂತ್ರಿಕ-ಆರ್ಥಿಕ ಸಂಬಂಧಗಳನ್ನು ಗಟ್ಟಿಗೊಳಿಸಲು ಪ್ರಯತ್ನಿಸುವ ಸಂದರ್ಭದಲ್ಲೇ ಭಾರತದ ಜೊತೆಗಿನ ಈ ಸಭೆ ಭಾರೀ ಕುತೂಹಲ ಸೃಷ್ಟಿಸಿದೆ..

ಪ್ರಧಾನಿ ನರೇಂದ್ರ ಮೋದಿ ಶೃಂಗಸಭೆಯಲ್ಲಿ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯನ್ ಮತ್ತು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಅವರನ್ನು ಆತಿಥ್ಯ ವಹಿಸಲಿದ್ದಾರೆ. ನಿನ್ನೆಯಷ್ಟೇ 77ನೇ ಗಣರಾಜ್ಯೋತ್ಸವ ಸಮಾರಂಭಕ್ಕೆ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಈ ಭೇಟಿ ಬೆನ್ನಲ್ಲೇ ದೆಹಲಿಯಲ್ಲಿ ಶೃಂಗಸಭೆ ಆಯೋಜಿಸಲಾಗಿದೆ.

ಭಾರತ-ಯುರೋಪಿಯನ್‌ ವ್ಯಾಪಾರ ಒಪ್ಪಂದದ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳಿವು:

  1. ಭಾರತ ಮತ್ತು ಯುರೋಪ್‌ನ ವಿವಿಧ ಕ್ಷೇತ್ರಗಳಲ್ಲಿ ಒಟ್ಟಾರೆಯಾಗಿ ದ್ವಿಪಕ್ಷೀಯ ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ಮುಕ್ತ ಮಾರುಕಟ್ಟೆ ಒಪ್ಪಂದ (FTA) ಭಾರೀ ಪ್ರಭಾವ ಬೀರಲಿದೆ. ಇಂದಿನ ಶೃಂಗಸಭೆಯ ಮುಖ್ಯ ಗುರು ವ್ಯಾಪಾರ, ರಕ್ಷಣೆ, ಭದ್ರತೆ, ನಿರ್ಣಾಯಕ ತಂತ್ರಜ್ಞಾನ ಮತ್ತು ಜಾಗತಿಕವಾಗಿ ನೀತಿ ಬಲಪಡಿಸವುದಾಗಿದೆ.
  2. ಉಭಯ ರಾಷ್ಟ್ರಗಳು ಇಂದು ರಕ್ಷಣಾ ಚೌಕಟ್ಟಿನ ಒಪ್ಪಂದ ಮತ್ತು ಕಾರ್ಯತಂತ್ರದ ಕಾರ್ಯಸೂಚಿಯನ್ನಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಯುರೋಪ್‌ ಅಮೆರಿಕಾ ಮತ್ತು ಚೀನಾ ಅವಲಂಬನೆಯನ್ನು ಕಡಿಮೆ ಮಾಡಲು ಬೇರೆ ದೇಶಗಳೊಂದಿಗೆ ಸಂಬಂಧಗಳನ್ನು ಗಟ್ಟಿಗೊಳಿಸುವ ಪ್ರಯತ್ನ ಮಾಡುತ್ತಿರುವ ನಡುವೆ ಈ ಬೆಳವಣಿಗೆ ಕಂಡು ಬಂದಿದೆ.
  3. ಪ್ರಧಾನಿ ನರೇಂದ್ರ ಮೋದಿಯವರು ಯುರೋಪಿಯನ್‌ ಕಮಿಷನ್‌ ಅಧ್ಯಕ್ಷೆ ಉರ್ಸುಲಾ ವಾನ್‌ ಡೆರ್‌ ಲೇಯೆನ್‌ ಮತ್ತು ಯುರೋಪಿಯನ್‌ ಕೌನ್ಸಿಲ್‌ ಅಧ್ಯಕ್ಷ ಆಂಟೋನಿಯಾ ಕೋಸ್ಟಾ ಅವರೊಂದಿಗೆ ಶೃಂಗಸಭೆಯಲ್ಲಿ ಮಾತುಕತೆ ನಡೆಸಲಿದ್ದಾರೆ.
  4. ವಾನ್ ಡೆರ್ ಲೇಯನ್ ಕಳೆದ ವಾರ, ಭಾರತ ಮತ್ತು ಯುರೋಪಿಯನ್‌ ಒಕ್ಕೂಟದ "ಐತಿಹಾಸಿಕ ವ್ಯಾಪಾರ ಒಪ್ಪಂದದ" ಅಂಚಿನಲ್ಲಿದೆ ಎಂದು ಹೇಳಿದ್ದರು. ಇದು ಎರಡು ಶತಕೋಟಿ ಜನರನ್ನು ಒಳಗೊಂಡಿರುವ ಮಾರುಕಟ್ಟೆ ಸೃಷ್ಟಿಸುತ್ತದೆ. ಅಂದರೆ ಜಾಗತಿಕವಾಗಿ GDP ಯ ಸುಮಾರು ಕಾಲು ಭಾಗದಷ್ಟು ಪಾಲು ಹೊಂದಲಿದೆ.
  5. ಭಾರತ ಮತ್ತು ಯುರೋಪಿಯನ್‌ ಒಕ್ಕೂಟಗಳು 2004 ರಿಂದಲೇ ಕಾರ್ಯತಂತ್ರದ ಪಾಲುದಾರರಾಗಿವೆ. ಭದ್ರತೆ ಮತ್ತು ರಕ್ಷಣಾ ಪಾಲುದಾರಿಕೆ (SDP) ಎರಡೂ ದೇಶಗಳ ನಡುವೆ ಭದ್ರತೆಯನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ.
  6. ಭದ್ರತೆ ಮತ್ತು ರಕ್ಷಣಾ ಪಾಲುದಾರಿಕೆ (SDP)ಯು ಎರಡೂ ಕಡೆಯವರ ನಡುವೆ ಆಳವಾದ ರಕ್ಷಣೆ ಮತ್ತು ಭದ್ರತಾ ಸಹಕಾರ ಹೆಚ್ಚಿಸಲಿದೆ. SDP ರಕ್ಷಣಾ ಕ್ಷೇತ್ರದಲ್ಲಿ ಪರಸ್ಪರ ಕಾರ್ಯಾಚರಣೆಗೆ ನೆರವಾಗುತ್ತದೆ. ಇದು ಭಾರತೀಯ ಸಂಸ್ಥೆಗಳಿಗೆ EU ನ SAFE (Security Action for Europe) ಕಾರ್ಯಕ್ರಮದಲ್ಲಿ ಭಾಗವಹಿಸಲು ಹೊಸ ಅವಕಾಶಗಳನ್ನು ಒದಗಿಸುತ್ತದೆ. SAFE, ಯುರೋಪಿಯನ್ ಒಕ್ಕೂಟದ 150 ಶತಕೋಟಿ ಯೂರೋಗಳ ಆರ್ಥಿಕ ನಿಧಿಯಾಗಿದ್ದು, ಸದಸ್ಯ ರಾಷ್ಟ್ರಗಳ ರಕ್ಷಣಾ ಸನ್ನದ್ಧತೆಯನ್ನು ಹೆಚ್ಚಿಸಲು, ಆರ್ಥಿಕ ಬೆಂಬಲ ನೀಡಲು ಇದನ್ನು ವಿನ್ಯಾಸಗೊಳಿಸಲಾಗಿದೆ.
  7. ಯುರೋಪಿಯನ್ ಒಕ್ಕೂಟ ಮತ್ತು ಭಾರತ 2007 ರಲ್ಲಿ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಗಳನ್ನು ಆರಂಭಿಸಿದ್ದವು. ಆದರೆ ಹಲವು ಕಾರಣಗಳಿಂದ 2013 ರಲ್ಲಿ ಸ್ಥಗಿತಗೊಂಡಿದ್ದ ಈ ಮಾತುಕತೆಗಳು 2022 ರ ಜೂನ್‌ನಲ್ಲಿ ಪುನರಾರಂಭಗೊಂಡವು.
  8. ಭಾರತೀಯ ಕಾರ್ಮಿಕರ ಯುರೋಪ್ ಸಂಚಾರಕ್ಕೆ ಅನುಕೂಲ ಕಲ್ಪಿಸುವ ತಿಳುವಳಿಕೆ ಒಪ್ಪಂದ (MoU) ಶೃಂಗಸಭೆಯಲ್ಲಿ ನಿರ್ಧಾರವಾಗಲಿದೆ. ಇದು ಭಾರತದೊಂದಿಗೆ EU ಸದಸ್ಯ ರಾಷ್ಟ್ರಗಳ ಸಂಚಾರ ಉಪಕ್ರಮಗಳಿಗೆ ಚೌಕಟ್ಟನ್ನು ನೀಡಲಿದೆ. ಫ್ರಾನ್ಸ್, ಜರ್ಮನಿ ಮತ್ತು ಇಟಲಿ ಭಾರತದೊಂದಿಗೆ ಈಗಾಗಲೇ ವಲಸೆ ಹಾಗೂ ಸಂಚಾರ ಪಾಲುದಾರಿಕೆಗಳನ್ನು ಹೊಂದಿವೆ.
  9. ರಷ್ಯಾ-ಉಕ್ರೇನ್ ಯುದ್ಧ ಸೇರಿದಂತೆ ಜಾಗತಿಕ ಸವಾಲುಗಳ ಕುರಿತು ಚರ್ಚಿಸುವ ಸಾಧ್ಯತೆಯಿದೆ. ಎಲ್ಲ ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ, ಹಲವು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
  10. ಕಳೆದ ಕೆಲವು ವರ್ಷಗಳಿಂದ ಭಾರತ-ಯುರೋಪ್‌ ಸಂಬಂಧಗಳು ಸುಧಾರಿಸಿವೆ. ಯುರೋಪ್‌ (EU), ಭಾರತದ ಅತಿದೊಡ್ಡ ಸರಕುಗಳ ವ್ಯಾಪಾರ ಪಾಲುದಾರ. 2024-25ರ ಆರ್ಥಿಕ ವರ್ಷದಲ್ಲಿ, EU ನೊಂದಿಗೆ ಭಾರತದ ಒಟ್ಟು ಸರಕು ವಹಿವಾಟು ಸುಮಾರು $136 ಶತಕೋಟಿ ಮೌಲ್ಯದ್ದಾಗಿದ್ದು, ರಫ್ತು $76 ಶತಕೋಟಿ ಮತ್ತು ಆಮದು $60 ಶತಕೋಟಿ ಆಗಿತ್ತು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+