ಇಂದು ಜಿಡಿಪಿ ದರದ ಸೂಚ್ಯಂಕ ಹೊರಬಿದ್ದಿದೆ. 2024-25ನೇ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಜಿಡಿಪಿ ದರ 6.2%ನಷ್ಟು ಬೆಳವಣಿಗೆ ಸಾಧಿಸಿದೆ. ಜಾಗತಿಕ ಆರ್ಥಿಕ ಕುಸಿತ, ವಿದೇಶಿ ಹೂಡಿಕೆದಾರರ ನಿರ್ಗಮನ, ಮತ್ತು ಬಾಂಡ್ ಇಳುವರಿ ಹೆಚ್ಚಳದ ನಡುವೆಯೂ ಭಾರತ ತನ್ನ ಬೆಳವಣಿಗೆಯನ್ನು ಸುಧಾರಿಸಿಕೊಂಡಿದೆ. ಇದು ಮಾರುಕಟ್ಟೆ ನಿರೀಕ್ಷೆಗೆ ಬಹುತೇಕ ಸಮಾನವಾಗಿದೆ.
ಭಾರತ ಸರ್ಕಾರ ಸಂಪೂರ್ಣ ಆರ್ಥಿಕ ವರ್ಷ (FY25) GDP ವೃದ್ಧಿದರವನ್ನು 6.5% ಎಂದು ಊಹಿಸಿತ್ತು. ಅದರಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 6.5% ಎಂದು ಊಹಿಸಿತ್ತು. ಆದರೆ ಈಗ 6.2%ನಷ್ಟು ಬೆಳವಣಿಗೆ ಸಾಧಿಸಿದ್ದು, ಇದನ್ನು ಧನಾತ್ಮಕವಾಗಿ ನೋಡಿದರೆ ಮಾರುಕಟ್ಟೆ ನಿರೀಕ್ಷೆಗೆ ತಕ್ಕುದಾಗಿದೆ.ಇನ್ನು ಇದರಿಂದ ಭಾರತದ ಆರ್ಥಿಕತೆಯ ಸ್ಥಿರತೆ ಮತ್ತು ಪ್ರತಿಸ್ಪಂದನಾಶೀಲತೆ ದೃಢವಾಗುತ್ತದೆ. ಅಲ್ಲದೇ ಇದರಿಂದ ನೀತಿ ಪ್ರೋತ್ಸಾಹ, ಆಂತರಿಕ ಖರೀದಿ ಶಕ್ತಿ, ಮತ್ತು ಬಂಡವಾಳ ಹೂಡಿಕೆಗಳ ಪರಿಣಾಮದಿಂದ ಆರ್ಥಿಕತೆ ಮುಂದುವರಿಯುವ ನಿರೀಕ್ಷೆಯಿದೆ.
ಆದರೆ ಇದರಲ್ಲೂ ಒಂದಷ್ಟು ಸವಾಲುಗಳಿವೆ. ಅಂದುಕೊಂಡಂತೆ 6.5% GDP ಗುರಿ ಸಾಧಿಸಲು ಸ್ವಲ್ಪ ಕಷ್ಟವಾಗಬಹುದು. ಅಲ್ಲದೇ ನಿರೀಕ್ಷೆಯ ಬೆಳವಣಿಗೆಗೆ ರೂಪಾಯಿ ಮೌಲ್ಯದ ಕುಸಿತವಾಗಬಹುದು, ತೈಲ ಬೆಲೆ ಏರಿಕೆ, ಮತ್ತು ಮುಂದಿನ ಹಣದುಬ್ಬರದ ಬಿಕ್ಕಟ್ಟುಗಳು ಪ್ರಮುಖ ಅಡ್ಡಿಗಳೂ ಆಗಬಹುದು. ಇದರೊಂದಿಗೆ ವಿದೇಶಿ ಹೂಡಿಕೆದಾರರು ಷೇರು ಮಾರಾಟವನ್ನು ಭಾರಿ ಪ್ರಮಾಣದಲ್ಲಿ ಮಾರಾಟ ಮಾಡುತ್ತಿರುವುದು, ಮುಂಬರುವ ಚುನಾವಣೆಗಳು ಹೇಗೆ ಜಾಗತಿಕ ಆರ್ಥಿಕತೆಗೆ ಒಗ್ಗಿಕೊಳ್ಳುತ್ತೆ ಎಂಬುದರ ಆಧಾರದ ಮೇಲೆ ಭಾರತೀಯ ಆರ್ಥಿಕತೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ವಾರ್ಷಿಕ ಅಂದಾಜು ಮತ್ತು ಬೆಳವಣಿಗೆ ದರಗಳು:
ಎನ್‌ಎಸ್‌ಒ ನೀಡಿರುವ ದತ್ತಾಂಶದ ಪ್ರಕಾರ 2024-25ರ ಹಣಕಾಸು ವರ್ಷದಲ್ಲಿ ನೈಜ GDP ₹187.95 ಲಕ್ಷ ಕೋಟಿ ಮಟ್ಟವನ್ನು ತಲುಪಿದೆ ಎಂದು ಅಂದಾಜಿಸಲಾಗಿದೆ. ಇದು 2023-24ರ ಮೊದಲ ಪರಿಷ್ಕೃತ GDP ಅಂದಾಜಿನ ಪ್ರಕಾರ ₹176.51 ಲಕ್ಷ ಕೋಟಿಗಳಷ್ಟಿತ್ತು. ಆದರೆ 2023-24ರಲ್ಲಿ 9.2% ರಷ್ಟಿದ್ದ ನೈಜ GDP ಬೆಳವಣಿಗೆಯ ದರವು 2024-25ರಲ್ಲಿ 6.5% ಎಂದು ಅಂದಾಜಿಸಲಾಗಿತ್ತು. ನಿರೀಕ್ಷೆಯ ಪ್ರಕಾರ ಅಂದಾಜಿಸಿದಷ್ಟು ಮಟ್ಟಕ್ಕೆ ಜಿಡಿಪಿ ದರ ಬೆಳವಣಿಗೆ ಕಂಡಿಲ್ಲ ಎನ್ನಲಾಗುತ್ತಿದೆ.
ಇನ್ನು ಪ್ರಸ್ತುತ ಬೆಲೆಗಳಲ್ಲಿರುವ ಜಿಡಿಪಿಯು, ₹331.03 ಲಕ್ಷ ಕೋಟಿ ಮಟ್ಟವನ್ನು ತಲುಪುವ ಸಾಧ್ಯತೆ ಇದೆ ಎಂದು 2024-25ರಲ್ಲಿ ಅಂದಾಜಿಸಲಾಗಿತ್ತು. ಆದರೆ ಇದು ಇದು 2023-24ರಲ್ಲಿ ₹301.23 ಲಕ್ಷ ಕೋಟಿಗಳಾಗಿದ್ದು ಶೇ. 9.9 ರಷ್ಟು ಬೆಳವಣಿಗೆಯ ದರವನ್ನು ತೋರಿಸುತ್ತದೆ. ಜೊತೆಗೆ 2024-25ನೇ ಸಾಲಿನಲ್ಲಿ ನೈಜ ಜಿಡಿಪಿಯನ್ನು ₹171.80 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ.

ಅಂದಹಾಗೆ ನಿರ್ಮಾಣ ವಲಯವು 2024-25ನೇ ಸಾಲಿನಲ್ಲಿ ಜಿಡಿಪಿ ದರವನ್ನು, ಶೇ. 8.6 ರಷ್ಟು ನಿರೀಕ್ಷೆ ಮಾಡಿತ್ತು. ಬಳಿಕ ಹಣಕಾಸು, ರಿಯಲ್ ಎಸ್ಟೇಟ್ ಮತ್ತು ವೃತ್ತಿಪರ ಸೇವೆಗಳ ವಲಯ 7.2%ಯಷ್ಟು ಬೆಳವಣಿಗೆ ದರವನ್ನು ನಿರೀಕ್ಷೆ ಮಾಡಿತ್ತು. ಹಾಗೆಯೇ ಹೋಟೆಲ್‌ಗಳು, ಸಾರಿಗೆ, ಸಂವಹನ ಮತ್ತು ಪ್ರಸಾರ ವಲಯಕ್ಕೆ ಸೇರಿದ ಸೇವೆಗಳು 6.4% ಬೆಳವಣಿಗೆ ದರವನ್ನು ನಿರೀಕ್ಷೆ ಮಾಡಿತ್ತು.
ಇನ್ನು ಈ ಜಿಡಿಪಿ ಎಂದರೆ ಸ್ಥೂಲ ದೇಶಿಯ ಉತ್ಪನ್ನ (Gross Domestic Product - GDP). ಇದು ಒಂದು ನಿರ್ದಿಷ್ಟ ಅವಧಿಯಲ್ಲಿ ದೇಶದಲ್ಲಾಗುವ ಒಟ್ಟು ಉತ್ಪಾದಿತ ಸರಕು ಸೇವೆಗಳ ಮೌಲ್ಯವನ್ನು ಅಳೆಯುವ ಆರ್ಥಿಕ ಸೂಚ್ಯಂಕ. ಇದು ದೇಶ ಆರ್ಥಿಕತೆಯ ಬೆಳವಣಿಗೆ ಅಥವಾ ಕುಸಿತವನ್ನು ನಿರ್ಧರಿಸುವ ಮೂಲ. ಇದರ ಅಗತ್ಯತೆ ಏನೆಂದರೆ ಆರ್ಥಿಕ ಬಲದ ಸೂಚನೆ, ಹೂಡಿಕೆದಾರರಿಗೆ ಮಾರ್ಗದರ್ಶಿ ಹಾಗೂ ನೀತಿ ತೀರ್ಮಾನಗಳ ಮೇಲೆ ಪ್ರಭಾವ ಬೀರುತ್ತದೆ.


Click it and Unblock the Notifications