ಚಿನ್ನ ಪ್ರಿಯರಿಗೆ ಇದು ನಿಜಕ್ಕೂ ಕಹಿಸುದ್ದಿ ಎನ್ನಬಹುದು. ಕಳೆದ ವಾರದಂತೆ ಈ ವಾರವೂ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆಯಾಗುತ್ತಿದೆ. ನಿನ್ನೆಯೇ ಬಿಸಿ ಮುಟ್ಟಿಸಿದ್ದ ಚಿನ್ನದ ಬೆಲೆ ಇಂದು ಮತ್ತಷ್ಟು ಕೆಂಡ ಸುರಿದಿದಂತಾಗಿದೆ. ಚಿನ್ನದ ಮೇಲಿನ ಬೆಲೆ ಬಿರುಗಾಳಿಗೆ ಚಿನ್ನಪ್ರಿಯರು ಕಂಗಾಲಾಗಿ ಹೋಗಿದ್ದಾರೆ. ಚಿನ್ನದ ಮೇಲೆ ಹೂಡಿಕೆ ಮಾಡಬೇಕು ಎಂದುಕೊಂಡಿರುವವರು, ಬೆಲೆ ಏರಿಕೆಯನ್ನು ಕಂಡು ಸುಸ್ತಾಗಿದ್ದಾರೆ. ಚಿನ್ನ ಕೊಳ್ಳುವುದೇ ಬೇಡ, ಬೆಲೆ ಕೇಳಿದರೆ ಸಾಕು ಮೈಯಲ್ಲಿ ಬೆವರಿಳಿಯುತ್ತದೆ.

ಹೂಡಿಕೆಗೆ ಆಸಕ್ತರಾಗಿರುವವರಿಗೆ ಈ ಪರಿಸ್ಥಿತಿ ಎರಡು ಬಗೆಯ ಪ್ರಭಾವ ಬೀರಬಹುದು. ಹೀಗಾಗಿ ಒಂದೆಡೆ ಬೆಲೆ ಇನ್ನಷ್ಟು ಏರಬಹುದು ಎಂಬ ನಿರೀಕ್ಷೆಯಿಂದ ಈಗಲೇ ಹೂಡಿಕೆ ಮಾಡೋದು ಸೂಕ್ತವೆಂಬ ಯೋಚನೆ, ಮತ್ತೊಂದೆಡೆ ಈಗ ತಕ್ಷಣ ಹೂಡಿಕೆಗೆ ಮುನ್ನುಡಿಯಿಟ್ಟರೆ ನಷ್ಟವೋ ಎಂಬ ಆತಂಕ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಒತ್ತಡ, ಜಿಯೋಪಾಲಿಟಿಕಲ್ ಅನಿಶ್ಚಿತತೆಗಳು ಹಾಗೂ ರೂಪಾಯಿಯ ಮೌಲ್ಯ ಕುಸಿತ ಈ ಬೆಲೆ ಏರಿಕೆಗೆ ಪ್ರಮುಖ ಕಾರಣಗಳಾಗಿ ಗುರುತಿಸಲಾಗಿದೆ. ಹಾಗಾದರೆ ಇಂದು ಯಾವ್ಯಾವ ಕ್ಯಾರಟ್ ಚಿನ್ನದ ಬೆಲೆ ಎಷ್ಟು ಏರಿಕೆಯಾಗಿದೆ ಎಂದು ತಿಳಿಯುವುದಾದರೆ.
ಭಾರತದಲ್ಲಿ ಇಂದಿನ ಚಿನ್ನದ ಬೆಲೆ:
22 ಕ್ಯಾರಟ್ ಚಿನ್ನದ ಬೆಲೆ:
ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿಇಂದಿನ ಚಿನ್ನದ ಬೆಲೆ ಏರಿಕೆಯಾಗಿದೆ. 22 ಕ್ಯಾರಟ್‌ನ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,920 ಇದೆ. ಅಂದರೆ ನಿನ್ನೆ ₹8,815 ಆಗಿದ್ದು ಇಂದು ₹105 ಹೆಚ್ಚಳವಾಗಿದೆ. 22 ಕ್ಯಾರಟ್‌ನ ಚಿನ್ನದ ಬೆಲೆ 10 ಗ್ರಾಂಗೆ 89 ಸಾವಿರದ 200ರೂ. ಇದೆ. ಅಂದರೆ ನಿನ್ನೆ 88 ಸಾವಿರದ 150 ರೂ. ಆಗಿದ್ದು ಇಂದು ₹1,050 ಹೆಚ್ಚಳವಾಗಿದೆ. ಹಾಗೆಯೇ 22 ಕ್ಯಾರಟ್‌ನ ಚಿನ್ನದ ಬೆಲೆ 100 ಗ್ರಾಂಗೆ 8 ಲಕ್ಷದ 92 ಸಾವಿರ ರೂ. ಆಗಿದೆ. ಅಂದರೆ ನಿನ್ನೆ 8 ಲಕ್ಷ 81 ಸಾವಿರದ 500 ರೂ. ಆಗಿದ್ದು ಇಂದು ₹10,500 ಹೆಚ್ಚಳವಾಗಿದೆ.
24 ಕ್ಯಾರಟ್ ಚಿನ್ನದ ಬೆಲೆ:
ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿಇಂದಿನ ಚಿನ್ನದ ಬೆಲೆ ಏರಿಕೆಯಾಗಿದೆ. 24 ಕ್ಯಾರಟ್‌ನ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,731 ಇದೆ. ಅಂದರೆ ನಿನ್ನೆ ₹9,617 ಆಗಿದ್ದು ಇಂದು ₹114 ಹೆಚ್ಚಳವಾಗಿದೆ. 24 ಕ್ಯಾರಟ್‌ನ ಚಿನ್ನದ ಬೆಲೆ 10 ಗ್ರಾಂಗೆ 97 ಸಾವಿರದ 310 ರೂ. ಇದೆ. ಅಂದರೆ ನಿನ್ನೆ 96ಸಾವಿರದ 170 ರೂ. ಆಗಿದ್ದು ಇಂದು ₹1,140 ಹೆಚ್ಚಳವಾಗಿದೆ. ಹಾಗೆಯೇ 24 ಕ್ಯಾರಟ್‌ನ ಚಿನ್ನದ ಬೆಲೆ 100 ಗ್ರಾಂಗೆ 9 ಲಕ್ಷದ 73 ಸಾವಿರದ 100 ರೂ. ಆಗಿದೆ. ಅಂದರೆ ನಿನ್ನೆ 9 ಲಕ್ಷ 61 ಸಾವಿರದ 700 ರೂ. ಆಗಿದ್ದು ಇಂದು ₹11,400 ಹೆಚ್ಚಳವಾಗಿದೆ.
18 ಕ್ಯಾರಟ್ ಚಿನ್ನದ ಬೆಲೆ:
18 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,298 ಇದೆ. ಅಂದರೆ ನಿನ್ನೆಯ ಬೆಲೆ ₹7,213 ಆಗಿದ್ದು ಇಂದು ಪ್ರತಿ ಗ್ರಾಂಗೆ ₹85 ಏರಿಕೆಯಾಗಿದೆ. 18 ಕ್ಯಾರಟ್‌ನ ಚಿನ್ನದ ಬೆಲೆ 10 ಗ್ರಾಂಗೆ 72 ಸಾವಿರದ 980 ರೂ. ಇದೆ. ಅಂದರೆ ನಿನ್ನೆಯ ಬೆಲೆ 72 ಸಾವಿರದ 130 ರೂ. ಆಗಿದ್ದು ಇಂದು ಪ್ರತಿ ಗ್ರಾಂಗೆ ₹850 ಏರಿಕೆಯಾಗಿದೆ. ಹಾಗೆಯೇ ಕ್ಯಾರಟ್‌ನ ಚಿನ್ನದ ಬೆಲೆ 100 ಗ್ರಾಂಗೆ 7 ಲಕ್ಷ 29 ಸಾವಿರದ 800 ರೂ. ಆಗಿದೆ. ಅಂದರೆ ನಿನ್ನೆಯ ಬೆಲೆ 7 ಲಕ್ಷದ 21 ಸಾವಿರದ 300 ರೂ. ಆಗಿದ್ದು ಇಂದು ₹8,500 ಏರಿಕೆಯಾಗಿದೆ.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ (1 ಗ್ರಾಂ)
ಚೆನ್ನೈ: ಚೆನ್ನೈನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,920 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,731 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,390 ಆಗಿದೆ.
ಮುಂಬೈ: ಮುಂಬೈನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,920 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,731 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,299 ಆಗಿದೆ.
ದೆಹಲಿ: ದೆಹಲಿಯಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,935 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,746 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,311 ಆಗಿದೆ.
ಕೋಲ್ಕತಾ: ಕೋಲ್ಕತ್ತಾದಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,920 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,731 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,298 ಆಗಿದೆ.
ಬೆಂಗಳೂರು: ಬೆಂಗಳೂರಿನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,920 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,731 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,298 ಆಗಿದೆ.
ಹೈದರಾಬಾದ್: ಹೈದರಾಬಾದ್‌ನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,920 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,731 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,298 ಆಗಿದೆ.
ಕೇರಳ: ಕೇರಳದಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,920 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,731 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,298 ಆಗಿದೆ.
ಪುಣೆ: ಪುಣೆಯಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,920 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,731 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,298 ಆಗಿದೆ.
ಬರೋಡಾ: ಬರೋಡಾದಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,925 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,736 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,303 ಆಗಿದೆ.
ಅಹಮದಾಬಾದ್: ಅಹಮದಾಬಾದ್‌ನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,925 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,736 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,303 ಆಗಿದೆ.
ಭಾರತದಲ್ಲಿ ಇಂದು ಬೆಳ್ಳಿ ಬೆಲೆ:
ಚಿನ್ನದ ಬೆಲೆಯಲ್ಲಿ ಬದಲಾವಣೆ ನೋಡಿದ ಜನರು, ಬೆಳ್ಳಿ ಬೆಲೆಯಲ್ಲಿ ಸ್ವಲ್ಪ ಸಮಾಧಾನ ನೋಡಬಹುದು. ಏಕೆಂದರೆ ಇಂದು ಬೆಳ್ಳಿ ಬೆಲೆಯಲ್ಲಿ ಯಾವುದೇ ಏರಿಕೆ ಕಂಡು ಬಂದಿಲ್ಲ. ಹಾಗೆಯೇ ಇಳಿಕೆಯೂ ಕಂಡುಬಂದಿಲ್ಲ. ಇಂದು ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಗ್ರಾಂ ಬೆಳ್ಳಿ ಬೆಲೆ ₹100 ಆಗಿದೆ. ಹಾಗೆಯೇ ಹತ್ತು ಗ್ರಾಂ ಬೆಳ್ಳಿ ಬೆಲೆ ₹1000 ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ ₹10,000 ಆಗಿದ್ದರೆ, ಒಂದು ಕೆ.ಜಿ ಬೆಳ್ಳಿ ಬೆಲೆ 1,00,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ಇಂದು...ಅಂದರೆ ಏಪ್ರಿಲ್ 11ರಂದು ಸ್ಪಾಟ್ ಗೋಲ್ಡ್ ಬೆಲೆಯು ಕೂಡ ಭಾರಿ ಏರಿಕೆ ನೋಡಿದೆ ಎಂದು ರಾಯಿಟರ್ಸ್ ವರದಿ ತಿಳಿಸಿದೆ. ಅಂದರೆ ಸ್ಪಾಟ್ ಗೋಲ್ಡ್ ಬೆಲೆಯು ಏಕಾಏಕಿ ಪ್ರತಿ ಔನ್ಸ್‌ಗೆ $3,245.28 ತಲುಪಿದೆ ಎನ್ನಲಾಗಿದೆ. ಇದು ದಾಖಲೆಯ ಬೆಲೆ ಎನ್ನಬಹುದಾಗಿದೆ.
ಒಟ್ಟಿನಲ್ಲಿ ಚಿನ್ನದ ಬೆಲೆ ಭಾರತದಲ್ಲಿ ದಿನದಿಂದ ದಿನಕ್ಕೆ ಈ ಪರಿಯ ಏರಿಕೆ ನೋಡುತ್ತಿರುವುದು ಆತಂಕ ಎದುರಾಗಿಸುವ ಸಂಗತಿಯಾಗಿದೆ. ಟ್ರಂಪ್ ಅವರ ಈ ತೀರ್ಮಾನದಿಂದ ತಕ್ಷಣವೇ ಏಷ್ಯಾದ ಷೇರು ಮಾರುಕಟ್ಟೆಗಳಲ್ಲಿ ಧನಾತ್ಮಕ ಪ್ರತಿಕ್ರಿಯೆ ಕಂಡುಬಂದಿತು. ಇದರಿಂದ ಹೂಡಿಕೆದಾರರಲ್ಲಿ ಭೀತಿಯಿಂದಾಗಿ ಉಂಟಾಗಿದ್ದ ಒತ್ತಡ ಕಡಿಮೆಯಾಯಿತು.ಈ ನಿರ್ಧಾರವು ಜಾಗತಿಕ ಆರ್ಥಿಕ ಸ್ಥಿತಿಗೆ ತಾತ್ಕಾಲಿಕ ಉಸಿರಾಟ ನೀಡಿದರೂ, ಮುಂದಿನ ದಿನಗಳಲ್ಲಿ ಟ್ರಂಪ್ ಆಡಳಿತದ ವ್ಯಾಪಾರ ನೀತಿ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದರ ಬಗ್ಗೆ ಇನ್ನೂ ಅನಿಶ್ಚಿತತೆ ಇದೆ.
ಒಟ್ಟಿನಲ್ಲಿ, ಅಮೆರಿಕಾ-ಚೀನಾ ಸಂಘರ್ಷ, ಯುದ್ಧದ ಭೀತಿ, ರೂಪಾಯಿಯ ಮೌಲ್ಯ ಕುಸಿತ, ಜಾಗತಿಕ ಬ್ಯಾಂಕುಗಳ ಬಂಗಾರದ ಸಂಗ್ರಹ, ಹಾಗೂ ದೇಶೀಯ ಮದುವೆ ಅವಧಿಯ ಬೇಡಿಕೆಸೇರಿ ಎಲ್ಲ ಅಂಶಗಳ ಸಮೂಹ ಪರಿಣಾಮವಾಗಿ ಚಿನ್ನದ ದರ ಜಿಗಿತ ಕಂಡಿದೆ. ಹೀಗಾಗಿ ಹೂಡಿಕೆದಾರರು ಶೇರು ಮಾರುಕಟ್ಟೆ ಅಥವಾ ಕ್ರಿಪ್ಟೋ ಮಾರುಕಟ್ಟೆಯ ಬದಲು ಚಿನ್ನವನ್ನು ಭದ್ರ ಹೂಡಿಕೆ ಮಾಧ್ಯಮವೆಂದು ಆಯ್ಕೆ ಮಾಡುತ್ತಿದ್ದಾರೆ.


Click it and Unblock the Notifications